ಪೂ. ಭಾರ್ಗವರಾಮ ಪ್ರಭು ಇವರ ಭೇಟಿಯ ಸಮಯದಲ್ಲಿ ಸದ್ಗುರು ಡಾ. ಚಾರುದತ್ತ ಪಿಂಗಳೆ ಇವರಿಂದ ಕಲಿಯಲು ಸಿಕ್ಕಿದ ಅಂಶಗಳು

ಸದ್ಗುರು (ಡಾ.) ಚಾರುದತ್ತ ಪಿಂಗಳೆ

‘೨೩.೫.೨೦೨೩ ರಂದು ಸನಾತನದ ಮೊದಲನೇ ಬಾಲಸಂತರಾದ ಪೂ. ಭಾರ್ಗವರಾಮ ಪ್ರಭು ಇವರು ದೆಹಲಿ ಸೇವಾಕೇಂದ್ರದಲ್ಲಿನ ಎಲ್ಲ ಸಾಧಕರು ಹಾಗೂ ಸದ್ಗುರು ಪಿಂಗಳೆಕಾಕಾ ಇವರ ಜೊತೆ ‘ವಿಡಿಯೋ ಕಾಲ್‌’ನ ಮೂಲಕ ಆಶ್ರಮ ದರ್ಶನ ಮಾಡಿ, ಮಾತನಾಡಿದರು. ಆಗ ಸದ್ಗುರು ಪಿಂಗಳೆಕಾಕಾ ಅವರಿಂದ ಕಲಿತ ಅಂಶಗಳನ್ನು ಇಲ್ಲಿ ನೀಡಲಾಗಿದೆ.

ಪೂ. ಭಾರ್ಗವರಾಮ ಭರತ ಪ್ರಭು

೧. ಸದ್ಗುರು ಡಾ. ಪಿಂಗಳೆಕಾಕಾರವರಿಗೆ ಪೂ. ಭಾರ್ಗವರಾಮ ಇವರ ಬಗ್ಗೆ ಇರುವ ಪರಾಕಾಷ್ಠೆಯ ಭಾವ ಮತ್ತು ಪೂ. ಭಾರ್ಗವರಾಮ ಇವರಿಗೆ ಸದ್ಗುರು ಡಾ. ಪಿಂಗಳೆಕಾಕಾರವರ ಬಗ್ಗೆ ಇರುವ ಉಚ್ಚಸ್ತರದ ಭಾವ ! :

‘ಸದ್ಗುರು ಡಾ. ಪಿಂಗಳೆಕಾಕಾರವರು ಸ್ವತಃ ಒಂದೊಂದು ಕೋಣೆಯನ್ನು ತೆರೆದು ಪೂ. ಭಾರ್ಗವರಾಮ ಇವರಿಗೆ ತೋರಿಸುತ್ತಿದ್ದರು. ಆಗ ಸದ್ಗುರು ಕಾಕಾರವರು ಎಂದಿಗಿಂತಲೂ ಹೆಚ್ಚು ಬಾಗಿದ್ದರು. ಆಗ ನನಗೆ, ಅವರು ಸಾಕ್ಷಾತ್‌ ಶ್ರೀಸತ್‌ಶಕ್ತಿ (ಸೌ.) ಬಿಂದಾ ನಿಲೇಶ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರಿಗೂ ಸೇವಾಕೇಂದ್ರವನ್ನು ತೋರಿಸುತ್ತಿದ್ದಾರೆ ಎಂದೆನಿಸಿತು. ಪೂ. ಭಾರ್ಗವರಾಮ ಇವರು ‘ವಿಡಿಯೋಕಾಲ್‌’ನಿಂದ ಇದೆಲ್ಲವನ್ನು ನೋಡುತ್ತಿದ್ದರು. ಅವರು ಸದ್ಗುರು ಕಾಕಾರವರಿಗೆ, ”ಸದ್ಗುರು ಕಾಕಾ, ತಾವು ಅಷ್ಟು ಓಡಾಡಬೇಡಿ. ನೀವು ಒಂದು ಜಾಗದಲ್ಲಿ ಕುಳಿತುಕೊಳ್ಳಿ’’ ಎಂದು ಹೇಳಿದರು. ಸದ್ಗುರು ಡಾ. ಪಿಂಗಳೆಕಾಕಾರಿಗೆ ಪೂ. ಭಾರ್ಗವರಾಮ ಇವರ ಬಗ್ಗೆ ಪರಾಕಾಷ್ಠೆಯ ಭಾವವಿತ್ತು ಮತ್ತು ಪೂ. ಭಾರ್ಗವರಾಮ ಇವರಿಗೆ ಸದ್ಗುರು ಡಾ. ಪಿಂಗಳೆ ಕಾಕಾರ ಬಗ್ಗೆ ಇರುವ ಉಚ್ಚಸ್ತರದ ಭಾವವನ್ನು ನೋಡಿ ಶ್ರೀ ಗುರುಗಳ ಪಾವನ ಶ್ರೀಚರಣಗಳಲ್ಲಿ ಕೃತಜ್ಞತೆ ವ್ಯಕ್ತವಾಯಿತು. ನಮಗೆ ಗುರುದೇವರೇ ಇಬ್ಬರ ಸಂತರಲ್ಲಿನ ಈ ಅಪಾರ ಭಾವವನ್ನು ನೋಡುವ ಸಾಕ್ಷಿದಾರರನ್ನಾಗಿ ಮಾಡಿದರು. ಅದಕ್ಕಾಗಿ ಕೋಟಿ ಕೋಟಿ ಕೃತಜ್ಞತೆಗಳನ್ನು ವ್ಯಕ್ತ ಮಾಡುತ್ತೇನೆ.

೨. ಸದ್ಗುರು ಡಾ. ಪಿಂಗಳೆಕಾಕಾರವರು ಮೊದಲಿಗೆ ಇರುತ್ತಿದ್ದ ಕೋಣೆಯ ಬಗ್ಗೆ ಏನು ಗೊತ್ತಿಲ್ಲದಿದ್ದರೂ, ಹಾಗೆಯೇ ಆ ಕೋಣೆಯಲ್ಲಿ ಇತರ ಕೋಣೆಗಳಿಗಿಂತ ಕಡಿಮೆ ಬೆಳಕಿದ್ದರೂ ಪೂ. ಭಾರ್ಗವರಾಮ ಇವರಿಗೆ ಆ ಕೋಣೆಯಲ್ಲಿ ಅತ್ಯಧಿಕ ಬೆಳಕು ಕಾಣಿಸುವುದು :

ಸದ್ಗುರು ಡಾ. ಪಿಂಗಳೆಕಾಕಾರವರು ಮೊದಲು ಇರುತ್ತಿದ್ದ ಕೋಣೆಯನ್ನು ನೋಡಿದ ಕೂಡಲೇ ಪೂ. ಭಾರ್ಗವರಾಮ ಇವರು, ”ಈ ಕೋಣೆಯಲ್ಲಿ ಅಪಾರ ಬೆಳಕು ಇದೆ’’ ಎಂದರು. ಅವರಿಗೆ ‘ಸದ್ಗುರು ಕಾಕಾರವರು ಈ ಮೊದಲು ಆ ಕೋಣೆಯಲ್ಲಿ ಇರುತ್ತಿದ್ದರು’, ಎಂದು ಹೇಳಿರಲಿಲ್ಲ. ಪ್ರತ್ಯಕ್ಷದಲ್ಲಿ ಎಲ್ಲ ಕೋಣೆಗಳಲ್ಲಿ ನಾವು ಹೆಚ್ಚು ದೀಪಗಳನ್ನು ಹಚ್ಚಿದ್ದೆವು ಮತ್ತು ಆ ಕೋಣೆಯಲ್ಲಿ ಬೆಳಕು ಕಡಿಮೆಯಿತ್ತು. ನಾವು ಅವರಿಗೆ, ‘ಸದ್ಗುರು ಕಾಕಾರವರು ಈ ಮೊದಲು ಈ ಕೋಣೆಯಲ್ಲಿರುತ್ತಿದ್ದರು. ಈಗ ಅವರು ಬೇರೆ ಕೋಣೆಯಲ್ಲಿರುತ್ತಾರೆ’ ಎಂದು ಹೇಳಿದೆವು ಆಗ ಪೂ. ಭಾರ್ಗವರಾಮ ಇವರು, ”ನನಗೆ ಪುನಃ ಒಮ್ಮೆ ಸದ್ಗುರು ಕಾಕಾರವರ ಕೋಣೆಯನ್ನು ತೋರಿಸಿ’’ ಎಂದು ಹೇಳಿದರು.

ಈ ಬಗ್ಗೆ ಸದ್ಗುರುಕಾಕಾರವರಿಗೆ ಹೇಳಿದಾಗ ಅವರು, ”ಮೊದಲಿನ ಕೋಣೆಯು ಈಶಾನ್ಯದ ದಿಕ್ಕಿಗೆ ಇತ್ತು. ಈಶಾನ್ಯ ದಿಕ್ಕಿನಲ್ಲಿ ದೇವತೆಗಳ ವಾಸವಿರುತ್ತದೆ. ಅಲ್ಲಿ ಸಾಕ್ಷಾತ್‌ ಪರಾತ್ಪರ ಗುರುದೇವರ ವಾಸವಿದೆ’’ ಎಂದು ಹೇಳಿದರು.

೩. ತಮ್ಮ ಪ್ರತಿಯೊಂದು ಕೃತಿಯಿಂದ ಗುರುಚರಣಗಳಲ್ಲಿ ಸರ್ವಸ್ವವನ್ನು ಅರ್ಪಿಸಲು ಕಲಿಸುವ ಸದ್ಗುರು ಡಾ. ಪಿಂಗಳೆಕಾಕಾ ! :

ಪರಾತ್ಪರ ಗುರುದೇವರ ಸಗುಣ ರೂಪವಿರುವ ಸದ್ಗುರು ಕಾಕಾರವರ ಪ್ರತಿಯೊಂದು ಕೃತಿ ಮತ್ತು ಪ್ರತಿಯೊಂದು ವಿಚಾರದಲ್ಲಿ ನಮ್ಮೆಲ್ಲ ಸಾಧಕರಿಗೆ ‘ನಮ್ಮ ಸರ್ವಸ್ವವೆಲ್ಲವೂ ಶ್ರೀಗುರುಗಳದ್ದಾಗಿದೆ ಮತ್ತು ಅದೆಲ್ಲವನ್ನು ಅವರಿಗೇ ಸಮರ್ಪಿಸಬೇಕಾಗಿರುತ್ತದೆ’, ಎಂಬುದು ಕಲಿಯಲು ಸಿಕ್ಕಿತು. ‘ಗುರುದೇವಾ, ನಮ್ಮೆಲ್ಲ ಸಾಧಕರಲ್ಲಿ ಈ ದೃಷ್ಟಿಕೋನ, ಈ ಭಾವ ಮತ್ತು ಈ ರೀತಿಯ ಭಕ್ತಿಯನ್ನು ಮೂಡಿಸಿರಿ’, ಇದೇ ತಮ್ಮ ಶ್ರೀಚರಣಗಳಲ್ಲಿ ಪ್ರಾರ್ಥನೆ.

೪. ಛಾಯಾಚಿತ್ರಗಳಲ್ಲಿ ಸದ್ಗುರು ಡಾ. ಪಿಂಗಳೆಕಾಕಾರವರು ಪೂ. ಭಾರ್ಗವರಾಮ ಇವರಂತೆಯೇ ಚಿಕ್ಕವರು ಮತ್ತು ಪೂ. ಭಾರ್ಗವರಾಮ ಇವರು ಸದ್ಗುರುಕಾಕಾ ಇವರಂತೆ ದೊಡ್ಡವರಾಗಿದ್ದಾರೆ ಅನಿಸುವುದು :

ಪೂ. ಭಾರ್ಗವರಾಮ ಮತ್ತು ಸದ್ಗುರು ಕಾಕಾರವರ ‘ಸೆಲ್ಫಿ’ ಛಾಯಾಚಿತ್ರಗಳನ್ನು ತೆಗೆದೆವು. ಆ ಎರಡೂ ಛಾಯಾಚಿತ್ರಗಳಲ್ಲಿ ಸದ್ಗುರುಕಾಕಾರವರು ಪೂ. ಭಾರ್ಗವರಾಮ ಇವರಂತೆಯೇ ಚಿಕ್ಕವರು ಮತ್ತು ಪೂ. ಭಾರ್ಗವರಾಮ ಇವರು ಸದ್ಗುರು ಕಾಕಾರಂತೆ ದೊಡ್ಡವರಾಗಿದ್ದಾರೆ ಅನಿಸುತ್ತಿತ್ತು. ಸದ್ಗುರು ಕಾಕಾರವರನ್ನು ನೋಡಿ ‘ಅವರು ಬಾಲಸಂತರಾಗಿದ್ದಾರೆ’, ಎಂದು ಅನಿಸುತ್ತಿತ್ತು ಛಾಯಾಚಿತ್ರ ತೋರಿಸಿದ ನಂತರ ಸದ್ಗುರು ಕಾಕಾರವರಿಗೆ ಈ ಬಗ್ಗೆ ಕೇಳಿದೆನು. ಆಗ ಅವರು ಹಾಗೆ ಬರೆಯಲು ಹೇಳಿದರು. (‘ಸೆಲ್ಫಿ’ ಛಾಯಾಚಿತ್ರ, ಅಂದರೆ ಸಂಚಾರ ವಾಣಿಯಿಂದ ತನ್ನ ಹಾಗೂ ಜೊತೆಗಿರುವವರನ್ನು ಸೇರಿಸಿ ಸ್ವತಃ ಛಾಯಾಚಿತ್ರ ತೆಗೆಯುವುದು.)

– ಕು. ಪೂನಮ ಚೌಧರಿ

ಪೂ. ಭಾರ್ಗವರಾಮ ಪ್ರಭು ಇವರು ‘ವೀಡಿಯೋ ಕಾಲ್’ ಮೂಲಕ ದೆಹಲಿ ಸೇವಾಕೇಂದ್ರವನ್ನು ನೋಡುವಾಗ ಮತ್ತು ಅಲ್ಲಿನ ಸಾಧಕರೊಂದಿಗೆ ಮಾತನಾಡುವಾಗ ಸಾಧಕಿಗೆ ಅರಿವಾದ ಅಂಶಗಳು

ಸುಶ್ರೀ (ಕು.) ಪೂನಂ ಚೌಧರಿ

೧. ಪೂ. ಭಾರ್ಗವರಾಮರ ಸಂತತ್ವದ ಬಗ್ಗೆ ಬಂದ ಅನುಭವ

ಪೂ. ಭಾರ್ಗವರಾಮ ಇವರ ಕೃಪೆಯಿಂದ ಕಲಿಯಲು ಸಿಕ್ಕಿದ ಅಂಶಗಳನ್ನು ಶ್ರೀ ಗುರುಗಳ ಪಾವನ ಶ್ರೀಚರಣಗಳಿಗೆ ಅರ್ಪಿಸುತ್ತೇನೆ.

೧ ಅ. ಪೂ. ಭಾರ್ಗವರಾಮ ಇವರ ಮಾಧ್ಯಮದಿಂದ ದೇವರು ವರ್ತಮಾನಕಾಲದಲ್ಲಿರಲು ಕಲಿಸುವುದು : ‘ಪೂ. ಭಾರ್ಗವರಾಮ ಇವರಿಗೆ ಸಂಚಾರವಾಣಿ ಕರೆ ಮಾಡುವ ಮೊದಲು ನಾವು ‘ಮೊದಲಿಗೆ ಅವರಿಗೆ ಎಲ್ಲ ಸಾಧಕರ ಪರಿಚಯ ಮಾಡಿಕೊಡಬೇಕು ಮತ್ತು ನಂತರ ಸಂಪೂರ್ಣ ದೆಹಲಿ ಸೇವಾಕೇಂದ್ರವನ್ನು ತೋರಿಸಬೇಕು’, ಎಂಬ ಆಯೋಜನೆಯನ್ನು ಮಾಡಿದ್ದೆವು. ‘ಪೂ. ಭಾರ್ಗವರಾಮ ಇವರು ಸದ್ಗುರು ಪಿಂಗಳೆ ಕಾಕಾರೊಂದಿಗೆ ಮಾತನಾಡಿದ ನಂತರ ತಕ್ಷಣ, ‘ನಾನು ದೆಹಲಿ ಸೇವಾಕೇಂದ್ರವನ್ನು ನೋಡಬೇಕು’ ಎಂದು ಹೇಳಿದರು ಅದಕ್ಕೆ ನಾವು ಅವರಿಗೆ ಸೇವಾಕೇಂದ್ರವನ್ನು ತೋರಿಸಲು ಪ್ರಾರಂಭಿಸಿದೆವು. ಪರಾತ್ಪರ ಗುರುದೇವ ಡಾ. ಆಠವಲೆಯವರು ನಮಗೆ ಯಾವಾಗಲೂ ವರ್ತಮಾನಕಾಲದಲ್ಲಿರಲು ಕಲಿಸಿದ್ದಾರೆ.

೧ ಆ. ಪೂ. ಭಾರ್ಗವರಾಮ ಮತ್ತು ಅವರ ತಾಯಿ-ತಂದೆಯವರಿಗೆ ಸದ್ಗುರು ಪಿಂಗಳೆಕಾಕಾರವರ ಜಾಗದಲ್ಲಿ ಸಾಕ್ಷಾತ್‌ ಪರಾತ್ಪರ ಗುರುದೇವರ ದರ್ಶನವಾಗುವುದು : ನಾವು ಪೂ. ಭಾರ್ಗವರಾಮ ಇವರಿಗೆ ಮೊದಲು ದೆಹಲಿ ಸೇವಾಕೇಂದ್ರದ ಹೊರಗಿನ ಪರಿಸರವನ್ನು ತೋರಿಸುತ್ತಿದ್ದೆವು. ಅದೇ ಸಮಯದಲ್ಲಿ ಸದ್ಗುರು ಪಿಂಗಳೆ ಕಾಕಾರವರು ಸೇವಾಕೇಂದ್ರದ ಬಾಗಿಲಿನಿಂದ ಹೊರಗೆ ಬಂದರು.

ಆಗ ಪೂ. ಭಾರ್ಗವರಾಮ ಇವರು, ‘ಕೆಲವು ಕ್ಷಣಗಳ ವರೆಗೆ ‘ವೀಡಿಯೋ’ ಮಸುಕಾಯಿತು ಮತ್ತು ಸದ್ಗುರು ಕಾಕಾರವರ ಜಾಗದಲ್ಲಿ ನನಗೆ ಸಾಕ್ಷಾತ್‌ ಪರಾತ್ಪರ ಗುರುದೇವರೇ (ಪರಾತ್ಪರಗುರು ಡಾ. ಆಠವಲೆಯವರೇ) ಕಾಣಿಸುತ್ತಿದ್ದಾರೆ’ ಎಂದು ಹೇಳಿದರು. ಶ್ರೀ. ಭರತ ಪ್ರಭು ಮತ್ತು ಸೌ. ಭವಾನಿ ಪ್ರಭು (ಪೂ. ಭಾರ್ಗವರಾಮ ಇವರ ತಂದೆ ಮತ್ತು ತಾಯಿ) ಇವರಿಗೂ ಹಾಗೆಯೇ ಅರಿವಾಯಿತು.

೧ ಇ. ‘ಪೂ. ಭಾರ್ಗವರಾಮ ಇವರ ದಿವ್ಯ ದೃಷ್ಟಿಯಿಂದ ಪ್ರತಿಯೊಂದು ಕೋಣೆಯಲ್ಲಿನ ಅನಿಷ್ಟ ಶಕ್ತಿಗಳ ಆವರಣ ದೂರವಾಗಿದೆ’, ಎಂದು ಅರಿವಾಗುವುದು : ನಾವು ಪೂ. ಭಾರ್ಗವರಾಮ ಇವರಿಗೆ ಸೇವಾಕೇಂದ್ರವನ್ನು ತೋರಿಸುತ್ತಿದ್ದೆವು. ಆಗ ಅವರು, ”ಪ್ರತಿಯೊಂದು ಕೋಣೆಯ ಒಳಗೆ ಹೋಗಿ ನನಗೆ ಆ ಕೋಣೆಯನ್ನು ತೋರಿಸಿ’’ ಎಂದು ಹೇಳಿದರು. ಆಗ ‘ಪರಾತ್ಪರ ಗುರುದೇವರ ಕೃಪೆಯಿಂದ ಪೂ. ಭಾರ್ಗವರಾಮ ಇವರ ದಿವ್ಯದೃಷ್ಟಿಯಿಂದ ಪ್ರತಿಯೊಂದು ಕೋಣೆಯಲ್ಲಿನ ಅನಿಷ್ಟ ಶಕ್ತಿಗಳ ಆವರಣವು ದೂರವಾಯಿತು’, ಎಂದು ನನಗೆ ಅನಿಸಿತು.

೧ ಈ. ಪ್ರಸಾರ ಮಾಡುವ ಇಬ್ಬರು ಸಾಧಕಿಯರು ದೆಹಲಿ ಸೇವಾಕೇಂದ್ರಕ್ಕೆ ಬರುವುದು, ಇದು ಪರಾತ್ಪರ ಗುರುದೇವರ ಆಯೋಜನೆಯಾಗಿದೆ ಎಂದು ಪೂ. ಭಾರ್ಗವರಾಮ ಇವರು ಹೇಳುವುದು : ಎಲ್ಲ ಸಾಧಕರ ಪರಿಚಯವನ್ನು ಮಾಡಿಕೊಡಲಾಗುತ್ತಿತ್ತು. ಅದೇ ಸಮಯದಲ್ಲಿ ಪ್ರಸಾರದಿಂದ ಇಬ್ಬರು ಸಾಧಕಿಯರು ಸೇವೆಯನ್ನು ಮಾಡಲು ಸೇವಾಕೇಂದ್ರಕ್ಕೆ ಬಂದಿದ್ದರು. ಅವರಿಗೂ ಪೂ. ಭಾರ್ಗವರಾಮ ಇವರ ದರ್ಶನದ ಲಾಭವಾಯಿತು, ಅದಕ್ಕಾಗಿ ಅವರು ಕೃತಜ್ಞತೆಯನ್ನು ವ್ಯಕ್ತಪಡಿಸಿದರು. ಆಗ ಪೂ. ಭಾರ್ಗವರಾಮ ಇವರು, ”ಇಂದು ನೀವು ಇಲ್ಲಿಗೆ ಬರುವುದು ಪರಾತ್ಪರ ಗುರುದೇವರ ಇಚ್ಛೆ ಆಗಿದೆ’’ ಎಂದು ಹೇಳಿದರು.

೧ ಉ. ಪೂ. ಭಾರ್ಗವರಾಮ ಇವರಿಗೆ ದೆಹಲಿ ಸೇವಾಕೇಂದ್ರದಲ್ಲಿನ ಕೋಣೆಗಳನ್ನು ತೋರಿಸುತ್ತಿದ್ದೆವು. ಆಗ ಅವರು, ”ಬ್ರಹ್ಮೋತ್ಸವದ ನಂತರ ಸದ್ಗುರು ಡಾ. ಪಿಂಗಳೆಕಾಕಾ, ಪರಾತ್ಪರ ಗುರುದೇವರ ಛಾಯಾಚಿತ್ರ ಮತ್ತು ಸಂಪೂರ್ಣ ಆಶ್ರಮ ಹಳದಿ ಬಣ್ಣ ಕಾಣಿಸುತ್ತಿದೆ’’ ಎಂದು ಹೇಳಿದರು.

೧ ಊ. ‘ಸಂತರು ಹೇಗೆ ಎಲ್ಲ ಕಡೆ ಸೂಕ್ಷ್ಮವಾಗಿ ಗಮನವಿಡುತ್ತಾರೆ’, ಎಂಬುದು ಕಲಿಯಲು ಸಿಗುವುದು : ಪೂ. ಭಾರ್ಗವರಾಮ ಇವರೊಂದಿಗೆ ಮಾತನಾಡಲು ಎಲ್ಲ ಸಾಧಕರು ಒಂದು ಸ್ಥಳದಲ್ಲಿ ಒಟ್ಟಿಗೆ ಸೇರಿದ್ದರು; ಆದರೆ ಮಹಾಪ್ರಸಾದವನ್ನು ತಯಾರಿಸುವ ಸಾಧಕಿಯರಿಗೆ ಬರಲು ಸಾಧ್ಯವಾಗಲಿಲ್ಲ. ಪೂ. ಭಾರ್ಗವರಾಮ ಇವರು ಸೇವಾಕೇಂದ್ರವನ್ನು ನೋಡುತ್ತಿರುವಾಗ, ”ಅಡುಗೆ ಮನೆಯಲ್ಲಿ ಕಾಣಿಸುತ್ತಿರುವ ಸಾಧಕಿಯರು ಪರಿಚಯವಾಗಲಿಲ್ಲ’’ ಎಂದು ಹೇಳಿದರು. ಈ ಪ್ರಸಂಗದಲ್ಲಿ ‘ಸಂತರ ಕೃಪೆ ಹೇಗಿರುತ್ತದೆ ? ಅವರ ಗಮನ ಎಷ್ಟು ಸೂಕ್ಷ್ಮವಾಗಿರುತ್ತದೆ ?’, ಈ ವಿಷಯಗಳನ್ನು ಪರಾತ್ಪರ ಗುರುದೇವರು ಸೂಕ್ಷ್ಮದಿಂದ ಗಮನಕ್ಕೆ ತಂದುಕೊಟ್ಟರು.

೧ ಎ. ‘ಸಂತರು ಸೂಕ್ಷ್ಮದಿಂದ ಸಂಚರಿಸುತ್ತಾರೆ’, ಎಂಬುದರ ಅನುಭವ ಬರುವುದು : ಪೂ. ಭಾರ್ಗವರಾಮ ಇವರಿಗೆ ಸೇವಾಕೇಂದ್ರದ ಮೇಲ್ಛಾವಣಿಯಿಂದ ಹಿಂದಿನ ಪರಿಸರವನ್ನು ತೋರಿಸುವಾಗ ಅವರು, ”ನಾನು ಮೊದಲು ಇಲ್ಲಿಗೆ ಬಂದಿದ್ದೆನು’’ಎಂದು ಹೇಳಿದರು. (‘ಪ್ರತ್ಯಕ್ಷದಲ್ಲಿ ಪೂ. ಭಾರ್ಗವರಾಮ ಇವರು ದೆಹಲಿಗೆ ಯಾವತ್ತೂ ಬಂದಿಲ್ಲ’, ಎಂದು ಅವರ ತಂದೆ ಹೇಳಿದರು.) ಅವರು, ”ಈಗ ವಾತಾವರಣದಲ್ಲಿಯೂ ಬದಲಾಗಿದೆ. ಆಕಾಶದಲ್ಲಿಯೂ ಬದಲಾಗಿರುವುದು ಅರಿವಾಗುತ್ತಿದೆ’’ ಎಂದರು.

೧ ಐ. ಆಕಾಶದಲ್ಲಿ ಗರುಡನ ದರ್ಶನವಾದ ನಂತರ ಪೂ. ಭಾರ್ಗವರಾಮ ಇವರು ಗರುಡನು ಸೇವಾಕೇಂದ್ರಕ್ಕೆ ಪ್ರದಕ್ಷಿಣೆ ಹಾಕುತ್ತಿದ್ದಾನೆ ಎಂದು ಹೇಳುವುದು : ಪೂ. ಭಾರ್ಗವರಾಮ ಇವರಿಗೆ ಸೇವಾಕೇಂದ್ರದ ಮೇಲ್ಛಾವಣೆಯ ಭಾಗವನ್ನು ತೋರಿಸುತ್ತಿರುವಾಗ ಛಾಯಾಗ್ರಾಹಕ (ಕ್ಯಾಮೆರಾ) ವನ್ನು ಆಕಾಶದ ಕಡೆಗೆ ಮಾಡಿದಾಗ ಅಲ್ಲಿ ಒಂದು ಗರುಡ ಬಂದಿರುವುದು ಕಾಣಿಸಿತು. ಅದನ್ನು ನಾವು ಈ ಮೊದಲು ಎಂದಿಗೂ ನೋಡಿರಲಿಲ್ಲ. ಆ ಗರುಡ ೧೫ ನಿಮಿಷಗಳ ನಂತರ ದೂರ ಹೋಯಿತು. ಆಗ ಪೂ. ಭಾರ್ಗವರಾಮ ಇವರು, ”ಗರುಡ ಸೇವಾಕೇಂದ್ರಕ್ಕೆ ಪ್ರದಕ್ಷಿಣೆಗಳನ್ನು ಹಾಕುತ್ತಿದ್ದಾನೆ’’ ಎಂದು ಹೇಳಿದರು.

೧ ಓ. ದೆಹಲಿ ಸೇವಾಕೇಂದ್ರದಲ್ಲಿ ಇಟ್ಟಿರುವ ಸೈಕಲ್‌ನ್ನು ನೋಡಿ ಪೂ. ಭಾರ್ಗವರಾಮ ಇವರು, ”ಸಾಧಕರು ಆಪತ್ಕಾಲಕ್ಕಾಗಿ ಎಷ್ಟು ಸಿದ್ಧತೆಯನ್ನು ಮಾಡಿಟ್ಟಿದ್ದಾರೆ !’’ ಎಂದರು.

೧ ಔ. ಪೂ. ಭಾರ್ಗವರಾಮ ಇವರಿಗೆ ಪರಾತ್ಪರ ಗುರುದೇವರ ಬಗ್ಗೆ ಕೃತಜ್ಞತೆ ಅನಿಸುವುದು : ದೆಹಲಿ ಸೇವಾಕೇಂದ್ರವನ್ನು ನೋಡಿ ಪೂ. ಭಾರ್ಗವರಾಮ ಇವರು, ”ಪರಾತ್ಪರ ಗುರುದೇವರು ಸಾಧಕರ ಮೇಲೆ ಅದೆಷ್ಟು ಪ್ರೀತಿ ಮಾಡುತ್ತಾರೆ ! ಪರಾತ್ಪರ ಗುರುದೇವರು ಸಾಧಕರಿಗಾಗಿ ಅದೆಷ್ಟು ಒಳ್ಳೆಯ ಸೌಲಭ್ಯಗಳನ್ನು ಕೊಟ್ಟಿದ್ದಾರೆ !’’ ಎಂದು ಅವರಿಗೆ ಕೃತಜ್ಞತೆ ಅನಿಸಿತು.

೨. ಪೂ. ಭಾರ್ಗವರಾಮ ಇವರ ತಾಯಿ ಸೌ. ಭವಾನಿ ಪ್ರಭು ಇವರು ಹೇಳಿದ ಇತರ ಅಂಶಗಳು

೨ ಅ. ಉತ್ತಮ ನಿರೀಕ್ಷಣಾಕ್ಷಮತೆ : ‘ದೆಹಲಿ ಸೇವಾಕೇಂದ್ರದ ದರ್ಶನವಾದ ನಂತರ ಪೂ. ಭಾರ್ಗವರಾಮ ಇವರು ಮಂಗಳೂರಿನ ಬಾಲಸಾಧಕರನ್ನು ತಮ್ಮ ಮನೆಗೆ ಕರೆದುಕೊಂಡು ಬಂದರು ಮತ್ತು ಶ್ರೀ. ಶ್ರೀರಾಮ ಲುಕತುಕೆ ಅಣ್ಣನವರು ಅವರಿಗೆ ದೆಹಲಿ ಸೇವಾಕೇಂದ್ರವನ್ನು ತೋರಿಸಿದಂತೆಯೇ ಪೂ. ಭಾರ್ಗವರಾಮ ಇವರು ಬಾಲಸಾಧಕರಿಗೆ ತಮ್ಮ ಮನೆ ತೋರಿಸಿದರು.

೨ ಆ. ಸದ್ಗುರು ಡಾ. ಪಿಂಗಳೆಕಾಕಾರವರ ಬಗ್ಗೆ ಪೂ. ಭಾರ್ಗವರಾಮರ ಭಾವ : ಸದ್ಗುರು ಕಾಕಾರವರು ‘ವೀಡಿಯೋ ಕಾಲ್‌’ನಲ್ಲಿ ಮಾತನಾಡಲಿದ್ದಾರೆ, ಎಂದು ತಿಳಿದ ಕೂಡಲೇ ಪೂ. ಭಾರ್ಗವರಾಮ ಇವರು ೫ ನಿಮಿಷಗಳಲ್ಲಿ ತಿಂಡಿಯನ್ನು ತಿಂದರು. ಇಲ್ಲದಿದ್ದರೆ ಪ್ರತಿದಿನ ಅವರಿಗೆ ತಿಂಡಿ ತಿನ್ನಲು ೨೦ ನಿಮಿಷಗಳು ಬೇಕಾಗುತ್ತವೆ.

೨ ಇ. ಸದ್ಗುರು ಕಾಕಾರೊಂದಿಗೆ ಮಾತನಾಡಿದ ನಂತರ ಪೂ. ಭಾರ್ಗವರಾಮ ಇವರ ಮುಖದ ಮೇಲೆ ‘ಓಂ’ ಕಾಣಿಸಿತು.

೨ ಈ. ಪ್ರಗತಿ ಮಾಡಿಕೊಳ್ಳುವ ತೀವ್ರ ತಳಮಳ : ನಾವು ತಯಾರಾಗಿ ಕೆಳಗೆ ಬಂದೆವು. ಆಗ ಪೂ. ಭಾರ್ಗವರಾಮ ಇವರು ನನಗೆ, ”ಸದ್ಗುರು ಇದರ ಅರ್ಥ ಏನು ? ಮತ್ತು ನನಗೆ ಸದ್ಗುರು ಆಗಬೇಕಾದರೆ ನಾನು ಏನು ಮಾಡಬೇಕು ? ‘ಮುಂದೆ ಹೇಗೆ ಪ್ರಗತಿ ಮಾಡಿಕೊಳ್ಳಬೇಕು ?’, ಇದೆಲ್ಲವನ್ನು ಸದ್ಗುರುಗಳು ನನಗೆ ಕಲಿಸಬಹುದೇ ?’’ ಎಂದು ಕೇಳಿದರು. ಇದಕ್ಕೆ ಸದ್ಗುರು ಪಿಂಗಳೆಕಾಕಾರವರು, ”ಸಚ್ಚಿದಾನಂದ ಪರಬ್ರಹ್ಮ ಗುರುದೇವರೇ ನಿಮ್ಮನ್ನು ಸದ್ಗುರು ಮಾಡುವರು. ನೀವು ರಾಮನಾಥಿ ಆಶ್ರಮಕ್ಕೆ ಹೋದರೆ, ಸದ್ಗುರು ಸ್ವಾತಿ ಖಾಡ್ಯೆ ಅಥವಾ ಇತರ ಸದ್ಗುರುಗಳ ಜೀವನ ಚರಿತ್ರೆಯ ವಿಡಿಯೋ(ಸಿ.ಡಿ.)ಗಳಿವೆ, ಅವುಗಳನ್ನು ನೋಡಬಹುದು’’ ಎಂದು ಹೇಳಿದರು.

– ಕು. ಪೂನಮ ಚೌಧರಿ, ದೆಹಲಿ ಸೇವಾಕೇಂದ್ರ, ದೆಹಲಿ. (೫.೮.೨೦೨೩)