Canada Hindu Priest Suspended : ಬ್ರ್ಯಾಂಪ್ಟನ್ (ಕೆನಡಾ)ನಲ್ಲಿ ಹಿಂದೂ ಸಭಾ ದೇವಸ್ಥಾನದ ಅರ್ಚಕರು ತಥಾಕಥಿತ ಪ್ರಚೋದನಾಕಾರಿ ಹೇಳಿಕೆ ನೆಪವೊಡ್ಡಿ ಉಚ್ಛಾಟನೆ

ಬ್ರಂಪ್ಟನ್ (ಕೆನಡಾ) – ಇಲ್ಲಿನ ಹಿಂದೂ ಸಭಾ ಮಂದಿರದಲ್ಲಿ ಖಲಿಸ್ತಾನಿಗಳು ಹಿಂದೂ ಭಕ್ತರನ್ನು ಥಳಿಸಿದ ಘಟನೆ ನವೆಂಬರ್ 3 ರಂದು ನಡೆದಿತ್ತು. ಈ ಘಟನೆಯ ಸಮಯದಲ್ಲಿ ತಥಾಕಥಿತ ಪ್ರಚೋದನಾಕಾರಿ ಹೇಳಿಕೆ ನೀಡಿದ್ದಾರೆಂದು ಆರೋಪಿಸಿ ದೇವಸ್ಥಾನದ ಅರ್ಚಕನನ್ನು ಉಚ್ಛಾಟಿಸಲಾಗಿದೆ. ಈ ಅರ್ಚಕರ ಒಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗಿತ್ತು. ಅದರಲ್ಲಿ ಅವರು ದಾಳಿಯ ವಿರುದ್ಧ ಸಂಘಟಿತರಾಗಿ ಹೋರಾಡುವುದು ಅಗತ್ಯ ಎಂದು ಹೇಳಿದ್ದರು.

ಬ್ರಂಪ್ಟನ್ ನಗರದ ಮಹಾಪೌರ ಪ್ಯಾಟ್ರಿಕ್ ಬ್ರೌನ್ ಅವರು ಹಿಂಸಾಚಾರವನ್ನು ನಿಷೇಧಿಸಿದ್ದರು. ಅಲ್ಲದೇ ಯಾವುದೇ ಧಾರ್ಮಿಕ ಮುಖಂಡರು ಹಿಂಸಾತ್ಮಕ ಹೇಳಿಕೆ ಅಥವಾ ಸಮುದಾಯದಲ್ಲಿ ಹಿಂಸೆ ಮತ್ತು ದ್ವೇಷವನ್ನು ಹೆಚ್ಚಿಸುವ ಹೇಳಿಕೆಯನ್ನು ನೀಡಬಾರದು ಎಂದು ಹೇಳಿದ್ದರು. ಈ ಸ್ಥಳದಲ್ಲಿ ಬಹುಸಂಖ್ಯಾತ ಸಿಖ್ಖರು ಮತ್ತು ಹಿಂದೂಗಳು ಸಾಮರಸ್ಯದಿಂದ ಬದುಕುತ್ತಿದ್ದಾರೆ. ಅವರು ಯಾವುದೇ ರೀತಿಯ ಹಿಂಸೆಯನ್ನು ಸಹಿಸುವುದಿಲ್ಲ.

ಮಹಾಪೌರ ಬ್ರೌನ್ ಅವರ ಈ ಹೇಳಿಕೆಯ ಬಳಿಕ ಹಿಂದೂ ಸಭಾ ಮಂದಿರದ ಅಧ್ಯಕ್ಷ ಮಧುಸೂದನ ಲಾಮಾ ಅವರು ಅರ್ಚಕರನ್ನು ಉಚ್ಛಾಟಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನದಿಂದ ಒಂದು ಮನವಿಯನ್ನು ಪ್ರಕಟಿಸಲಾಗಿದೆ.

ಸಂಪಾದಕೀಯ ನಿಲುವು

ಹಿಂದೂಗಳ ರಕ್ಷಣೆಗಾಗಿ ಹೇಳಿಕೆಗಳನ್ನು ನೀಡಿದರೆ, ಅದು ಪ್ರಚೋದನಾಕಾರಿ ಹೇಳಿಕೆಯಾಗಿರುತ್ತದೆ, ಈ ಮಾನಸಿಕತೆ ಕೆನಡಾದಲ್ಲಿರುವ ಜನರಲ್ಲಿಯೂ ಇರುವುದು ಹಿಂದೂಗಳಿಗೆ ದೌರ್ಭಾಗ್ಯವೇ ಆಗಿದೆ !