ಸಾಯಂಕಾಲದ ಚಹಾ-ತಿಂಡಿತಿನಿಸು ಬಿಡಿ !

ವೈದ್ಯ ಮೇಘರಾಜ ಮಾಧವ ಪರಾಡಕರ

೧. ‘ಸಾಯಂಕಾಲದ ಸಮಯದಲ್ಲಿ ಚಹಾ-ತಿಂಡಿತಿನಿಸನ್ನು ತಿನ್ನುವ ಇಚ್ಛೆಯಾಗುವುದು’ ಇದು ಸುಳ್ಳು ಹಸಿವಿನ ಲಕ್ಷಣ

‘ಸಾಯಂಕಾಲದ ಚಹಾ-ತಿಂಡಿತಿನಿಸುಗಳು ಆರೋಗ್ಯದ ದೃಷ್ಟಿಯಿಂದ ನಿಜವಾಗಿಯೂ ಏನು ಅಗತ್ಯವಿರುವುದಿಲ್ಲ. ಪ್ರತಿದಿನ ಸೇವು, ಚಿವಡಾ ಇತ್ಯಾದಿ ಕರಿದ ಪದಾರ್ಥಗಳನ್ನು ತಿಂದು ನಾವು ಹೃದ್ರೋಗದ ಸಾಧ್ಯತೆಯನ್ನು ಹೆಚ್ಚಿಸುತ್ತೇವೆ. ಯಾವಾಗಲೂ ಸಾಯಂಕಾಲ ಚಹಾ-ತಿಂಡಿತಿನಿಸುಗಳನ್ನು ಸೇವಿಸುವ ಅಭ್ಯಾಸವಾದರೆ, ಅದನ್ನು ಬಿಡಲು ಸಾಧ್ಯವಾಗುವುದಿಲ್ಲ. ಆ ಸಮಯದಲ್ಲಿ ಶರೀರಕ್ಕೆ ಅಗತ್ಯವಿಲ್ಲದಿದ್ದರೂ ಹಸಿವಾಗುತ್ತದೆ ಮತ್ತು ಇಲ್ಲಿಯೇ ನಾವು ಮೋಸ ಹೋಗುತ್ತೇವೆ. ‘ಇದು ಸುಳ್ಳು ಹಸಿವಾಗಿದೆ’, ಎಂಬುದನ್ನು ನಾವು ಗಮನದಲ್ಲಿಡಬೇಕು.

೨. ೪ ಬಾರಿ ತಿನ್ನುವ ಅಭ್ಯಾಸವನ್ನು ಬಿಟ್ಟು ೨ ಬಾರಿಯೇ ಆಹಾರವನ್ನು ಸೇವಿಸುವ ಆರೋಗ್ಯಕರ ಅಭ್ಯಾಸವನ್ನು ಮಾಡಲು ಚಹಾ-ತಿಂಡಿತಿನಿಸುಗಳನ್ನು ಬಿಡುವುದು ಅಗತ್ಯ ಈ ಶರೀರವು ಈಶ್ವರನು ರೂಪಿಸಿದ ಒಂದು ಅದ್ಭುತ ವ್ಯವಸ್ಥೆಯಾಗಿದೆ. ನಾವು ಶರೀರಕ್ಕೆ ಹೇಗೆ ರೂಢಿ ಮಾಡಿಸುತ್ತೇವೆಯೋ, ಹಾಗೆಯೇ ಮಾಡುತ್ತದೆ. ದಿನಕ್ಕೆ ೪ ಬಾರಿ ತಿನ್ನುವ ರೂಢಿಯನ್ನು ಮಾಡಿಸಿದರೆ, ಶರೀರವು ದಿನಕ್ಕೆ ೪ ಬಾರಿ ತಿನ್ನಲು ಕೇಳುತ್ತದೆ. ೨ ಬಾರಿಯೇ ತಿನ್ನುವ ರೂಢಿ ಮಾಡಿಸಿದರೆ, ಅದು ೨ ಬಾರಿಯೇ ಕೇಳುತ್ತದೆ; ಆದರೆ ೪ ಬಾರಿ ತಿನ್ನುವ ರೂಢಿಯನ್ನು ಮಾಡಿಸಿದರೆ ಅದನ್ನು ಬಿಡಲು ಕಷ್ಟವಾಗುತ್ತದೆ. ಇಂತಹ ಸಮಯದಲ್ಲಿ ಮೊದಲು ಸಾಯಂಕಾಲದ ಚಹಾ-ತಿಂಡಿತಿನಿಸುಗಳನ್ನು ತಿನ್ನುವುದನ್ನು ಬಿಡಬೇಕು, ಅಂದರೆ ೪ ಕ್ಕಿಂತ ೩ ಬಾರಿ ಆಹಾರ ಸೇವಿಸುವಂತಾಗುವುದು.

೩. ‘ಚಹಾ-ತಿಂಡಿತಿನಿಸುಗಳನ್ನು ಬಿಡುವಾಗ ಶರೀರಕ್ಕೆ ಪಿತ್ತದ ತೊಂದರೆಯಾಗಬಾರದು’ ಎಂಬುದಕ್ಕಾಗಿ ಜಠರದಲ್ಲಿ ಚಟುವಟಿಕೆಗಳು ಗಮನಕ್ಕೆ ಬಂದರೆ ೧ ಚಮಚದಷ್ಟು ತುಪ್ಪವನ್ನು ಸೇವಿಸಿ !

ಸಾಯಂಕಾಲದ ಚಹಾ-ತಿಂಡಿತಿನಿಸುಗಳನ್ನು ಬಿಡುವಾಗ ಮನಸ್ಸಿನ ನಿರ್ಧಾರವನ್ನು ಮಾಡಬೇಕು. ನಮ್ಮಿಂದಾಗುವ ತಪ್ಪುಗಳಿಗಾಗಿ ಪ್ರಾಯಶ್ಚಿತ್ತವೆಂದು ಸಾಯಂಕಾಲದ ಚಹಾ-ತಿಂಡಿತಿನಿಸುಗಳನ್ನು ಬಿಡಬಹುದು. ದಿನನಿತ್ಯದ ರೂಢಿಗನುಸಾರ ಸಾಯಂಕಾಲದ ತಿಂಡಿತಿನಿಸುಗಳ ಸಮಯವಾದಾಗ, ಹಸಿವಾಗಬಹುದು. ಆ ಸಮಯದಲ್ಲಿ ಶಾರೀರಿಕ ಸೇವೆಯನ್ನು ಮಾಡಬೇಕು, ಏಕೆಂದರೆ ಹಸಿವಿನ ವಿಚಾರವು ಹೊರಟು ಹೋಗುತ್ತದೆ. ಆದರೂ ಹಸಿವಾದರೆ, ಸ್ವಲ್ಪ ನೀರು ಕುಡಿಯಬೇಕು. ಇದರಿಂದ ಹಸಿವು ಇಂಗುತ್ತದೆ. ಆದರೂ ಹಸಿವು ಕಡಿಮೆಯಾಗದಿದ್ದರೆ. ಹೊಟ್ಟೆಯಲ್ಲಿ ಜಠರದ ಚಟುವಟಿಕೆ ಅರಿವಾಗುತ್ತದೆ ಮತ್ತು ತುಂಬಾ ಹಸಿವಾಗುತ್ತದೆ. ಅಂತಹ ಸಮಯದಲ್ಲಿ ಚಹಾದ ೧-೨ ಚಮಚದಷ್ಟು (೫ ರಿಂದ ೧೦ ಮಿ.ಲೀ.) ತುಪ್ಪವನ್ನು ಜಗಿದು ತಿನ್ನಬೇಕು ಮತ್ತು ಸಾಧ್ಯವಾದರೆ ಆ ಮೇಲೆ ಸ್ವಲ್ಪ ಬಿಸಿ ನೀರನ್ನು ಕುಡಿಯಬೇಕು. ಕೇವಲ ತುಪ್ಪವನ್ನು ತಿನ್ನಲು ಕಠಿಣವೆನಿಸಿದರೆ, ತುಪ್ಪದಲ್ಲಿ ಸ್ವಲ್ಪ ಸಕ್ಕರೆ ಅಥವಾ ಬೆಲ್ಲವನ್ನು ಹಾಕಬೇಕು. ತುಪ್ಪವನ್ನು ಕುಡಿಯುವುದರಿಂದ ಹೊಟ್ಟೆಯಲ್ಲಿನ ಉರಿ ಕಡಿಮೆಯಾಗುತ್ತದೆ. ತುಪ್ಪದ ಮೇಲೆ ಬಿಸಿ ನೀರು ಕುಡಿಯುವುದರಿಂದ ತುಪ್ಪವು ಪಚನವಾಗಲು ಸಹಾಯವಾಗುತ್ತದೆ. ಇದಕ್ಕಾಗಿ ತಮ್ಮ ಬಳಿ ತುಪ್ಪದ ಡಬ್ಬಿಯನ್ನಿಡಿ ಮತ್ತು ಅವೇಳೆ ಬಹಳಷ್ಟು ಹಸಿವಾಗಿ ಜಠರದಲ್ಲಿ ಚಟುವಟಿಕೆಗಳು ಅರಿವಾದಾಗ ಚಮಚದಷ್ಟು ತುಪ್ಪವನ್ನು ತಿನ್ನಿರಿ !’

– ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (೩೦.೯.೨೦೨೨)