ಶೌರ್ಯಕ್ಕಿಂತ ಶ್ರೇಷ್ಠ ಬೇರೊಂದಿಲ್ಲ !

ಛತ್ರಪತಿ ಶಿವಾಜಿ ಮಹಾರಾಜರು

ಮಹಾಭಾರತದಲ್ಲಿ ಮುಂದಿನಂತೆ ಹೇಳಲಾಗಿದೆ, `ಶೌರ್ಯಕ್ಕಿಂತ ಶ್ರೇಷ್ಠ ಬೇರೊಂದಿಲ್ಲ. ನಮ್ಮ ಪ್ರತಿಯೊಂದು ಅವತಾರವು ಶೌರ್ಯದಿಂದ ಯುದ್ಧ ಮಾಡಿ ಆ ಕಾಲದ ರಾವಣ-ಕಂಸರಂತಹ ಸಮಾಜದ ಸಂಕಷ್ಟಗಳನ್ನು ದೂರಗೊಳಿಸಿದ್ದಾರೆ. ಸಮರ್ಥ ರಾಮದಾಸ ಸ್ವಾಮಿಯವರು ಬಲೋ ಪಾಸನೆಯನ್ನು ಹೇಳಿದ್ದಾರೆ, ಅದು ಹಿಂದೂಗಳು ಶೌರ್ಯ ಮೆರೆಯುವುದಕ್ಕಾಗಿಯೇ. ಯಾವಾಗ ಬಲೋಪಾಸನೆಯಿಂದ ಹಿಂದೂ ಮಾವಳೆಯವರು ಜಾಗೃತವಾದರೋ ಆಗ ಅವರು ಛತ್ರಪತಿ ಶಿವಾಜಿ ಮಹಾರಾಜರ ನೇತೃತ್ವದಲ್ಲಿ ಐದು ಬಾದಶಾಹರನ್ನು, ಅಂದರೆ ಇಂದಿನ `ಇಸ್ಲಾಮಿಕ್ ಸ್ಟೇಟ’ನ್ನು ಮೆಟ್ಟಿನಿಂತು ಹಿಂದವಿ ಸ್ವರಾಜ್ಯದ ಧ್ವಜವನ್ನು ಹೆಮ್ಮೆಯಿಂದ ಹಾರಿಸಿದರು. ಯಾವಾಗ ಹಿಂದೂಗಳು ಜಾಗೃತವಾದರೋ ಆಗ ತನ್ನನ್ನು ತಾನು ಜಗದೇಕವೀರನು ಎಂದುಕೊಳ್ಳುವ ಸಿಕಂದರನಿಗೆ ಸಿಂಧೂ ನದಿ ದಾಟಲಾಗಲಿಲ್ಲ ! ಇಂತಹ ಎಷ್ಟು ಶೌರ್ಯ ಕಥೆಗಳನ್ನು ಹಿಂದೂಗಳಿಗೆ ಹೇಳಬೇಕು. ಆದರೆ ಈ ಹಿಂದೂಗಳ ಶೌರ್ಯದ ಪರಂಪರೆ ಕಲಿಸಲಾಗುವುದಿಲ್ಲ; ಏಕೆಂದರೆ ಹಿಂದೂಗಳು ಶೌರ್ಯವನ್ನು ಮೆರೆಯುವುದು ಮತ್ತು ಶಕ್ತಿಶಾಲಿಗಳಾಗುವುದು ರಾಷ್ಟ್ರದ್ರೋಹಿಗಳಿಗೆ ಬೇಕಾಗಿಲ್ಲ.