New Department JNU: ದೆಹಲಿಯ ಜೆ.ಎನ್.ಯು. ನಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಹೆಸರಿನ ಕೇಂದ್ರ ಪ್ರಾರಂಭವಾಗಲಿದೆ!

ಗೆರಿಲ್ಲಾ ಯುದ್ಧತಂತ್ರ ಮತ್ತು ಆಡಳಿತ ಕೌಶಲ್ಯ ಇವುಗಳ ಕುರಿತು ಸಂಶೋಧನೆ ನಡೆಸಲಾಗುವುದು!

ನವ ದೆಹಲಿ – ಇಲ್ಲಿನ ಜವಾಹರಲಾಲ ನೆಹರು ವಿಶ್ವವಿದ್ಯಾಲಯದಲ್ಲಿ ಅಂದರೆ ಜೆ.ಎನ್.ಯುನಲ್ಲಿ ಮುಂದಿನ ವರ್ಷದಿಂದ ಛತ್ರಪತಿ ಶಿವಾಜಿ ಮಹಾರಾಜರ ಹೆಸರಿನ ‘ಸೆಂಟರ್ ಆಫ್ ಎಕ್ಸಲೆನ್ಸ್’ ಕೇಂದ್ರ ಪ್ರಾರಂಭವಾಗಲಿದೆ. ಭಾರತೀಯ ಜ್ಞಾನ ವ್ಯವಸ್ಥೆಯಲ್ಲಿ ಆದರ್ಶ ಬದಲಾವಣೆಯನ್ನು ತರುವುದು ಈ ಕೇಂದ್ರದ ಉದ್ದೇಶವಾಗಿದೆ. ಈ ಕೇಂದ್ರ `ಜೆ.ಎನ್.ಯು’ ನಲ್ಲಿರುವ `ಸೆಂಟರ್ ಆಫ್ ಇಂಟರ್ನ್ಯಾಶನಲ್ ಸ್ಟಡೀಸ್’ ಅಡಿಯಲ್ಲಿ ಕಾರ್ಯನಿರ್ವಹಿಸಲಿದೆ. ಈ ಉಪಕ್ರಮಗಳಿಗಾಗಿ ಮಹಾರಾಷ್ಟ್ರ ಸರಕಾರವು 10 ಕೋಟಿ ರೂಪಾಯಿ ಅನುದಾನ ನೀಡಿದೆ. `ಜೆ.ಎನ್.ಯು’ ಉಪಕುಲಪತಿ ಪ್ರಾ. ಶಾಂತಿಶ್ರೀ ಧೂಲಿಪುಡಿ ಪಂಡಿತ ಇವರು ಮಾತನಾಡಿ, “ಛತ್ರಪತಿ ಶಿವಾಜಿ ಮಹಾರಾಜರ ನೌಕಾಪಡೆ, ಯುದ್ಧನೀತಿ ಮತ್ತು ಹಿಂದವಿ ಸ್ವರಾಜ್ಯದ ಸಂಕಲ್ಪನೆ,ಯ ವಿಷಯದ ಬಗ್ಗೆ ಇದುವರೆಗೂ ಸರಿಯಾಗಿ ಅಧ್ಯಯನ ಮಾಡಿಲ್ಲ. ಅದಕ್ಕಾಗಿಯೇ ನಾವು ಈ ವಿಷಯವನ್ನು ಕಲಿಸಲು ನಿರ್ಧರಿಸಿದ್ದೇವೆ.” ಎಂದು ಹೇಳಿದರು.

ಕೇಂದ್ರದ ಸಂಯೋಜನೆ ಮತ್ತು ಪಠ್ಯಕ್ರಮ !

ಈ ಕೇಂದ್ರದಲ್ಲಿ ಒಟ್ಟು 14 ಹುದ್ದೆಗಳಿರುತ್ತವೆ. ಇವರಲ್ಲಿ 1 ಪ್ರಾಧ್ಯಾಪಕರು, 2 ಸಹ ಪ್ರಾಧ್ಯಾಪಕರು ಮತ್ತು 4 ಸಹಾಯಕ ಪ್ರಾಧ್ಯಾಪಕರು ಇರಲಿದ್ದಾರೆ. ಇದರೊಂದಿಗೆ ಇತರೆ ಹುದ್ದೆಗಳನ್ನೂ ನೇಮಿಸಲಾಗುತ್ತದೆ. ಇದಲ್ಲದೇ, ಈ ಕೇಂದ್ರದಲ್ಲಿ ‘ಐಟಿ ಮೂಲಸೌಕರ್ಯ ಪ್ರಯೋಗಾಲಯ’, ವಾಚನಾಲಯ, ಸ್ಟಡಿ ಹಾಲ್ ಇತ್ಯಾದಿ ಸೌಲಭ್ಯಗಳು ಲಭ್ಯವಿರುತ್ತವೆ. ಈ ಕೇಂದ್ರದ ಪಠ್ಯಕ್ರಮದಲ್ಲಿ ‘ಮರಾಠಾ ಗ್ರ್ಯಾಂಡ್ ಸ್ಟ್ರಾಟಜಿ’, ‘ಗೆರಿಲ್ಲಾ ಡಿಪ್ಲೊಮಸಿ’, ‘ಸ್ಟ್ರಾಟೆಜಿಕ್ ಅಪ್ರೋಚ್ ಟು ಅಸಿಮೆಟ್ರಿಕ್ ವಾರಫೇರ್’ ಮುಂತಾದ ವಿಷಯಗಳನ್ನು ಸೇರಿಸಲಾಗುವುದು. ವಿದ್ಯಾರ್ಥಿಗಳಿಗೆ ಈ ವಿಷಯಗಳ ಕುರಿತು ಸಂಶೋಧನೆ ಮಾಡುವ ಅವಕಾಶ ನೀಡಲಾಗುವುದು. ಈ ಕೇಂದ್ರದ ಸ್ಥಾಪನೆಗಾಗಿ ‘ಈಸ್ಟ ಏಶಿಯನ ಸ್ಟಡೀಸ ಸೆಂಟರ’ನ ಪ್ರಾ. ಅರವಿಂದ ವೆಲ್ಲಾರಿ ಮತ್ತು ‘ಯುರೋಪಿಯನ್ ಸ್ಟಡೀಸ್’ ಸೆಂಟರ್‍ನ ಡಾ. ಜಗನ್ನಾಥನ್ ಅವರಂತಹ ತಜ್ಞರಿಂದ ಸಹಾಯವನ್ನು ತೆಗೆದುಕೊಳ್ಳಲಾಗುವುದು. ಇದರೊಂದಿಗೆ ಛತ್ರಪತಿ ಶಿವಾಜಿ ಮಹಾರಾಜರ ಆಳ್ವಿಕೆಯ ದರ್ಶನ ಮಾಡಿಸುವ ಆಧುನಿಕ ವಸ್ತುಸಂಗ್ರಹಾಲಯವನ್ನು ನಿರ್ಮಿಸಲಾಗುವುದು.