‘ಆಯುರ್ವೇದಕ್ಕೆ ಸ್ವಾದ ಮತ್ತು ರುಚಿಕರ ಪದಾರ್ಥಗಳಿಗೆ ಅಪಥ್ಯವಿದೆಯೇ ? ಇಲ್ಲವೇ ಇಲ್ಲ. ಬದಲಾಗಿ ರುಚಿಯಿಂದ ಊಟ ಮಾಡಿದರೆ ಸಮಾಧಾನ ಸಿಗುತ್ತದೆ. ಆದುದರಿಂದ ಪದಾರ್ಥಗಳ ರುಚಿಯಲ್ಲಿ ವೈವಿಧ್ಯತೆ ಇರಲೇ ಬೇಕು; ಆದರೆ ಯಾವುದಾದರೊಂದು ಪದಾರ್ಥವು ಎಷ್ಟೇ ಇಷ್ಟವಾಗುತ್ತಿದ್ದರೂ, ಅದು ಯೋಗ್ಯ ಸಮಯದಲ್ಲಿ ಮತ್ತು ಯೋಗ್ಯ ಪ್ರಮಾಣದಲ್ಲಿ ಸೇವಿಸುವುದು ತುಂಬ ಮಹತ್ವದ್ದಾಗಿದೆ. ಹೀಗೆ ಮಾಡದಿದ್ದರೆ, ಇಂದಲ್ಲ ನಾಳೆ ಅದರ ತೊಂದರೆಯಾಗುವುದು.
‘ಇಷ್ಟವಾಗುವ ಯಾವುದೇ ಪದಾರ್ಥಗಳು ಪಚನವಾಗುತ್ತಿದ್ದರೆ, ಸೇವಿಸಲು ಯಾವುದೇ ಅಡಚಣೆಯಿಲ್ಲ; ಆದರೆ ಆ ಪದಾರ್ಥಗಳು ಊಟದ ಸಮಯದಲ್ಲಿಯೇ ತಿನ್ನಬೇಕು. ಅವೇಳೆಯಲ್ಲಿ ತಿನ್ನಬಾರದು.’ ಈ ನಿಯಮವನ್ನು ಪಾಲಿಸಿದರೆ ಶರೀರ ಆರೋಗ್ಯವಂತವಾಗಿರಲು ಸಹಾಯವಾಗುತ್ತದೆ ಮತ್ತು ಸಾಧನೆಯೂ ಒಳ್ಳೆಯದಾಗುತ್ತದೆ.’
– ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (೨೬.೯.೨೦೨೨)