‘ವ್ಯಷ್ಟಿ ಸಾಧನೆಯನ್ನು ಚೆನ್ನಾಗಿ ಮಾಡಿದಾಗಲೇ ಸಮಷ್ಟಿ ಸಾಧನೆ ಚೆನ್ನಾಗಿ ಆಗಿ ಶೀಘ್ರ ಆಧ್ಯಾತ್ಮಿಕ ಉನ್ನತಿಯಾಗುತ್ತದೆ’, ಎಂದು ಕಲಿಸಿ ಆ ರೀತಿ ಪ್ರಯತ್ನ ಮಾಡಿಸಿಕೊಳ್ಳುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

‘ಸಂಚಿಕೆ ೨೫/೪೫ ರಲ್ಲಿ ಪ್ರಕಟಿಸಲಾದ ಭಾಗದಲ್ಲಿ ‘ಪರಾತ್ಪರ ಗುರು ಡಾ. ಆಠವಲೆಯವರು ಸಾಧಕರಿಗೆ ಕಾರ್ಯದ ಬಗ್ಗೆ ಕೇಳದೇ ಅವರ ಸಾಧನೆಯಲ್ಲಿನ ಅಡಚಣೆಗಳನ್ನು ಕೇಳಿ ಅದನ್ನು ಬಿಡಿಸಲು ಮತ್ತು ಸಾಧನೆಗಾಗಿ ಮಾರ್ಗದರ್ಶನ ಮಾಡಿದರು’, ಈ ವಿಷಯವನ್ನು ನೋಡಿದೆವು. ಅವರು ‘ಕಾರ್ಯವು ಶೀಘ್ರ ಗತಿಯಿಂದ ಸಾಧನೆಯಾಗಲು ಹೇಗೆ ಮಾಧ್ಯಮವಾಗಿದೆ ?’, ಎಂಬುದನ್ನು ಸಾಧಕರ ಗಮನಕ್ಕೆ ತಂದು ಕೊಟ್ಟು ‘ವ್ಯಷ್ಟಿ ಸಾಧನೆ ಮತ್ತು ಸಮಷ್ಟಿ ಸೇವೆಗಳ ಸಮನ್ವಯ ಸಾಧಿಸಲು ಹೇಗೆ ಕಲಿಸಿದರು’, ಎಂಬುದನ್ನು ಈ ವಾರದ ಲೇಖನದಲ್ಲಿ ಕೊಡಲಾಗಿದೆ.     

ಹಿಂದಿನ ಸಂಚಿಕೆ ಓದಲು ಇಲ್ಲಿ ಕ್ಲಿಕ್ ಮಾಡಿ: https://sanatanprabhat.org/kannada/121462.html

(ಭಾಗ ೧೨)

(ಸದ್ಗುರು) ಶ್ರೀ. ರಾಜೇಂದ್ರ ಶಿಂದೆ

೫. ಶೀಘ್ರ ಆಧ್ಯಾತ್ಮಿಕ ಉನ್ನತಿಗಾಗಿ ಸಮಷ್ಟಿ ಸಾಧನೆಯ (ಸೇವೆಯ) ಮಹತ್ವ !

ವ್ಯಷ್ಟಿ ಸಾಧನೆಯ ಕಡೆಗೆ ಸಾಧಕರ ದುರ್ಲಕ್ಷವಾದಾಗ ಪರಾತ್ಪರ ಗುರು ಡಾಕ್ಟರರು ಅವರ ಸೇವೆಯನ್ನು ನಿಲ್ಲಿಸಿದರು. ಹೀಗಿದ್ದರೂ ‘ಶೀಘ್ರ ಆಧ್ಯಾತ್ಮಿಕ ಉನ್ನತಿಗಾಗಿ ಸಮಷ್ಟಿ ಸಾಧನೆ (ಸೇವೆ) (ಟಿಪ್ಪಣಿ ೩) ಮಾಡುವುದು ಹೇಗೆ ಮಹತ್ವದ್ದಾಗಿದೆ ?’, ಎಂದು ಪರಾತ್ಪರ ಗುರು ಡಾಕ್ಟರರು ಹೇಳಿದ ಮುಂದಿನ ಕೆಲವು ಅಂಶಗಳಿಂದ ಗಮನಕ್ಕೆ ಬರುತ್ತದೆ.

(ಟಿಪ್ಪಣಿ ೩ : ಸಮಾಜದಲ್ಲಿ ಸಾಧನೆಯ ಪ್ರಚಾರ ಮಾಡುವುದು, ಧರ್ಮಜಾಗೃತಿ ಮಾಡುವುದು ಇತ್ಯಾದಿ.)

೫ ಅ. ಪರಾತ್ಪರ ಗುರು ಡಾ. ಆಠವಲೆಯವರು ಸಾಧಕರನ್ನು ಅಂತರ್ಮುಖರನ್ನಾಗಿಸಲು ಸೇವೆಯ ಬಗ್ಗೆ ಕೇಳಿದ ಕೆಲವು ಪ್ರಶ್ನೆಗಳು : ಪರಾತ್ಪರ ಗುರು ಡಾಕ್ಟರರು ಮುಂದಿನಂತೆ ಪ್ರಶ್ನೆ ಕೇಳಿ ‘ಸೇವೆಯನ್ನು ಸಾಧನೆಯೆಂದು ಹೇಗೆ ಮಾಡಬೇಕು ?’, ಎಂದು ಗಮನಕ್ಕೆ ತಂದು ಕೊಟ್ಟು ಸಾಧಕರನ್ನು ಅಂತರ್ಮುಖಗೊಳಿಸುತ್ತಿದ್ದರು.

ಅ. ಸೇವೆಯಿಂದ ಆನಂದ ಸಿಗುತ್ತದೆಯೇ ?

ಆ. ಸೇವೆಯಲ್ಲಾಗುವ ತಪ್ಪುಗಳನ್ನು ಪಟ್ಟಿಯಲ್ಲಿ ಬರೆಯುತ್ತೀರಾ ?

ಇ. ಸೇವೆಯಲ್ಲಾದ ತಪ್ಪುಗಳನ್ನು ಸತ್ಸಂಗದಲ್ಲಿ ಹೇಳುತ್ತೀರಾ ?

ಈ. ‘ಅಂತಹ ತಪ್ಪುಗಳು ಪುನಃ ಆಗಬಾರದು’, ಎಂಬುದಕ್ಕಾಗಿ ಪ್ರಯತ್ನ ಮಾಡುತ್ತಿರಾ ?

ಉ. ತಪ್ಪುಗಳಿಗಾಗಿ ಪ್ರಾಯಶ್ಚಿತ್ತ ತೆಗೆದುಕೊಳ್ಳುವಿರಾ ?

ಊ. ಸೇವೆಯಿಂದ ಕಲಿತ ಅಂಶಗಳನ್ನು ಬರೆದಿಡುವಿರಾ ?

ಎ. ಕಲಿಯಲು ಸಿಕ್ಕಿದ ಅಂಶಗಳಲ್ಲಿ ಸಮಷ್ಟಿಗೆ ಉಪಯುಕ್ತವಾಗಿರುವ ಅಂಶಗಳನ್ನು ಬರೆದು ‘ಸನಾತನ ಪ್ರಭಾತ’ದಲ್ಲಿ ಮುದ್ರಿಸಲು ಕಳುಹಿಸುವಿರಾ ?

೫ ಆ. ಸಾಧಕರ ಸಾಧನೆ ಶೀಘ್ರವಾಗಲು ಕಾರ್ಯವು ಒಂದು ಮಾಧ್ಯಮವಾಗಿರುವುದು : ಸಾಧಕರು ಸಾಧನೆಯೆಂದು ಗುರುಕಾರ್ಯವನ್ನು ಮಾಡುವುದು ಅಪೇಕ್ಷಿತವಿದೆ. ಕಾರ್ಯವೆಂದರೆ ಸೇವೆಯ ಮೂಲಕ ಸಾಧಕರಿಗೆ ತಮ್ಮಲ್ಲಿರುವ ಸ್ವಭಾವದೋಷ ಮತ್ತು ಅಹಂನ ಲಕ್ಷಣಗಳು ಬೇಗನೆ ಗಮನಕ್ಕೆ ಬರುತ್ತವೆ. ಸಾಮಾನ್ಯವಾಗಿ ಕೇವಲ ವ್ಯಷ್ಟಿ ಸಾಧನೆಯನ್ನು ಮಾಡುವಾಗ ಅವು ಅಷ್ಟು ಗಮನಕ್ಕೆ ಬರುವುದಿಲ್ಲ. ಸ್ವಭಾವದೋಷಗಳನ್ನು ದೂರ ಮಾಡಲು ಪ್ರಯತ್ನಿಸಿದಾಗ ಸಾಧಕರಲ್ಲಿ ಗುಣಸಂವರ್ಧನೆಯಾಗುತ್ತದೆ. ಈಶ್ವರನೊಂದಿಗೆ ಅನುಸಂಧಾನವನ್ನಿಟ್ಟುಕೊಂಡು ಸೇವೆಯನ್ನು ಮಾಡಿದರೆ ಅನುಭೂತಿಗಳು ಬರುತ್ತವೆ. ಅದರಿಂದ ಶ್ರದ್ಧೆ ಮತ್ತು ಭಾವ ಹೆಚ್ಚಾಗಲು ಸಹಾಯವಾಗಿ ಸಾಧನೆ ವೇಗದಿಂದಾಗುತ್ತದೆ.

೬. ಶೀಘ್ರ ಆಧ್ಯಾತ್ಮಿಕ ಉನ್ನತಿಯಾಗಲು ಸಮಷ್ಟಿ ಸಾಧನೆ, ಅಂದರೆ ಸೇವೆ ಮಾಡುವುದು ಆವಶ್ಯಕವಾಗಿರುವುದು; ಆದರೆ ‘ಸೇವೆಯಲ್ಲಿ ತಪ್ಪುಗಳಾಗಿ ಅಧೋಗತಿಯಾಗಬಾರದು’, ಇದಕ್ಕಾಗಿ ವ್ಯಷ್ಟಿ ಸಾಧನೆಯೂ ಆವಶ್ಯಕವಾಗಿರುವುದು 

ಸಾಧನೆಯಲ್ಲಿ ಶೀಘ್ರ ಆಧ್ಯಾತ್ಮಿಕ ಉನ್ನತಿಯಾಗಲು ಸಮಷ್ಟಿ ಸಾಧನೆ ಮಾಡುವುದು ಆವಶ್ಯಕವಾಗಿದೆ. ಸಮಷ್ಟಿ ಸಾಧನೆಯ ಅಂತರ್ಗತ ಸಮಾಜಕ್ಕೆ ಹೋಗಿ ‘ಧರ್ಮಪ್ರಸಾರ ಮಾಡುವುದು’ ಸಹ ಬರುತ್ತದೆ, ಅಂದರೆ ಸಮಷ್ಟಿ ಸಾಧನೆಯಾಗಲು ಸೇವೆಯನ್ನು ಮಾಡುವುದು ಬಹಳ ಆವಶ್ಯಕವಾಗಿದೆ. ಸಮಷ್ಟಿ ಸಾಧನೆಗೆ ಕಾಲಾನುಸಾರ ಶೇ. ೬೫ ರಷ್ಟು ಮಹತ್ವವಿದೆ; ಆದರೆ ಈ ಸಮಷ್ಟಿ ಸೇವೆಯನ್ನು ಸಾಧನೆಯೆಂದು ಮಾಡದಿದ್ದರೆ ಆಧ್ಯಾತ್ಮಿಕ ಉನ್ನತಿಗಾಗಿ ಅದರಿಂದೇನೂ ಲಾಭವಾಗುವುದಿಲ್ಲ ಅಥವಾ ಲಾಭ ಕಡಿಮೆಯಾಗುತ್ತದೆ. ಕೆಲವೊಮ್ಮೆ ಸಮಷ್ಟಿ ಸೇವೆಯನ್ನು ಮಾಡುತ್ತಿರುವಾಗ ಗಂಭೀರ ತಪ್ಪುಗಳಾದರೆ ಸಾಧನೆಯಲ್ಲಿ ಅಧೋಗತಿಯಾಗಬಹುದು. ‘ಅದು ಆಗಬಾರದು’, ಎಂಬುದಕ್ಕಾಗಿ ವ್ಯಷ್ಟಿ ಸಾಧನೆ ಮಾಡುವುದು ಬಹಳ ಆವಶ್ಯಕವಾಗಿದೆ.

೭. ಶೀಘ್ರ ಸಾಧನೆಗಾಗಿ ವ್ಯಷ್ಟಿ ಮತ್ತು ಸಮಷ್ಟಿ ಸೇವೆಯ ಸಮನ್ವಯ ಸಾಧಿಸುವುದು ಆವಶ್ಯಕ !

೭ ಅ. ಈಶ್ವರನೊಂದಿಗೆ ಏಕರೂಪವಾಗಲು ಸ್ವಭಾವದೋಷಗಳ ನಿರ್ಮೂಲನೆಯ ಜೊತೆಗೆ ಗುಣಸಂವರ್ಧನೆ ಮಾಡುವುದು ಆವಶ್ಯಕವಾಗಿರುವುದು : ‘ಈಶ್ವರನು ಪ್ರತಿಯೊಂದು ವಿಷಯವನ್ನು ಪರಿಪೂರ್ಣವಾಗಿ ಮಾಡುತ್ತಾನೆ. ಈಶ್ವರನಲ್ಲಿ ಒಂದೇ ಒಂದು ಸ್ವಭಾವದೋಷ ಇಲ್ಲ; ಅವನು ಸರ್ವಗುಣಸಂಪನ್ನನಾಗಿದ್ದಾನೆ. ನಾವು ಈಶ್ವರನೊಂದಿಗೆ ಏಕರೂಪವಾಗಬೇಕೆಂದರೆ ಪರಿಪೂರ್ಣ ಸೇವೆಯನ್ನು ಮಾಡಲು ಕಲಿಯಬೇಕು. ಸೇವೆಯನ್ನು ಮಾಡುವಾಗ ಗಮನಕ್ಕೆ ಬಂದ ಸ್ವಭಾವದೋಷಗಳನ್ನು ದೂರ ಮಾಡಲು ಪ್ರಯತ್ನಿಸುವುದರ ಜೊತೆಗೆ ಅಗತ್ಯವಿರುವ ಗುಣಗಳನ್ನು ಬೆಳೆಸುವುದೂ ಆವಶ್ಯಕವಾಗಿದೆ’, ಎಂದು ಪರಾತ್ಪರ ಗುರು ಡಾಕ್ಟರರು ಸಾಧಕರ ಮನಸ್ಸಿನಲ್ಲಿ ಯಾವಾಗಲೂ ಬಿಂಬಿಸುತ್ತಿದ್ದರು.

೭ ಆ. ಸಮಷ್ಟಿ ಸೇವೆಯನ್ನು ಮಾಡುವಾಗ ‘ಅದರಿಂದ ಸಾಧನೆ ಆಗುತ್ತಿದೆ ಅಲ್ಲವೇ ?’, ಎಂಬ ಕಡೆಗೆ ಗಮನ ನೀಡಿದರೆ ಸಾಧನೆ ಬೇಗನೆ ಆಗುವುದು : ‘ಸಾಧಕರು ಕೇವಲ ಕಾರ್ಯ ಮಾಡುವುದು’, ಗುರುದೇವರಿಗೆ ಅಪೇಕ್ಷಿತವಿಲ್ಲ. ಕೇವಲ ಕಾರ್ಯ ಮಾಡುತ್ತಾ ಹೋದರೆ ಅವರು ಕಾರ್ಯನಿರತರಾಗುವರು. ನಮಗೆ ಕೇವಲ ಕಾರ್ಯಕರ್ತರು ಬೇಕಾಗಿಲ್ಲ, ಆದರೆ ಉತ್ತಮ ಸಾಧಕನಾಗಲು ಕಾರ್ಯವನ್ನು ಮಾಡಬೇಕಾಗಿದೆ; ಆದುದರಿಂದ ಸಾಧಕರು ಕಾರ್ಯವನ್ನು ಮಾಡುವಾಗ ಸಾಧನೆಯ ಕಡೆಗೆ ಸತತ ಗಮನ ನೀಡುವುದು ಆವಶ್ಯಕವಾಗಿದೆ.

ಪರಾತ್ಪರ ಗುರು ಡಾಕ್ಟರರು ಸೇವೆಯ ಬಗ್ಗೆ ಮಾಡಿದ ಈ ಮಹತ್ವಪೂರ್ಣ ಮಾರ್ಗದರ್ಶನವನ್ನು ಗಮನದಲ್ಲಿಟ್ಟುಕೊಂಡು ಸಾಧಕರು ‘ಸೇವೆಯನ್ನು ಮಾಡುವಾಗ ಅದರಿಂದ ಸಾಧನೆ ಹೇಗಾಗುತ್ತದೆ ?’, ಎಂಬ ಕಡೆಗೆ ಗಮನ ನೀಡಿದರೆ ಅವರ ಆಧ್ಯಾತ್ಮಿಕ ಉನ್ನತಿ ಶೀಘ್ರವಾಗಿ ಆಗುತ್ತದೆ.

೮. ಪರಾತ್ಪರ ಗುರು ಡಾ. ಆಠವಲೆಯವರು ಹೇಳಿದ ಇತರ ಮಹತ್ವಪೂರ್ಣ ಅಂಶಗಳು

ಅ. ‘ಸಾಧಕರ ಆಧ್ಯಾತ್ಮಿಕ ಉನ್ನತಿ’, ಸನಾತನ ಸಂಸ್ಥೆಯ ಸ್ಥಾಪನೆಯ ಉದ್ದೇಶವಾಗಿದೆ.

ಆ. ಸಾಧನೆ ಶೀಘ್ರವಾಗಿ ಆಗಲು ಸೇವೆಯು ಮಾಧ್ಯಮವಾಗಿದೆ.

ಇ. ದೇವರು ‘ನೀವು ಯಾವ ಸೇವೆಯನ್ನು ಮಾಡುತ್ತೀರಿ ?’, ಎಂದು ನೋಡುವುದಿಲ್ಲ, ಆದರೆ ‘ನೀವು ಆ ಸೇವೆಯನ್ನು ಹೇಗೆ ಮಾಡುವಿರಿ ?’, ಎಂಬುದನ್ನು ನೋಡುತ್ತಾನೆ.

ಈ. ಭಾವಪೂರ್ಣ ಮತ್ತು ಪರಿಪೂರ್ಣವಾಗಿ ಸೇವೆ ಮಾಡುವುದೇ ಸಾಧನೆಯಾಗಿದೆ.

ಉ. ಕಾರ್ಯವು ಮೋಕ್ಷಕ್ಕೆ ಹೋಗುವುದಿಲ್ಲ, ಆದರೆ ಸಾಧಕರು ಮೋಕ್ಷಕ್ಕೆ ಹೋಗಬೇಕಾಗಿದೆ.

೯. ಕೃತಜ್ಞತೆ

ಪರಾತ್ಪರ ಗುರು ಡಾಕ್ಟರರು ‘ಸಾಧನೆಯೆಂದು ಕಾರ್ಯ(ಸೇವೆ)ವನ್ನು ಹೇಗೆ ಮಾಡಬೇಕು ?’, ಪ್ರಾಯಶಃ ‘ಕಾರ್ಯದಿಂದ ಸಾಧನೆಯಾಗಬೇಕು’, ಎಂದು ಕಲಿಸಿರುವುದರಿಂದ ಸೇವೆಯ ವ್ಯಸ್ತ ದಿನಚರಿಯಲ್ಲಿಯೂ ಸಾಧನೆಯ ಕಡೆಗೆ ಗಮನ ನೀಡಿದುದರಿಂದ ನನ್ನ ಸಾಧನೆಯ ಮೇಲೆ ಪರಿಣಾಮವಾಗಲಿಲ್ಲ. ಇದು ಪರಾತ್ಪರ ಗುರುದೇವರು ನನ್ನ ಮೇಲೆ ಮಾಡಿದ ಕೃಪೆಯೇ ಆಗಿದೆ. ‘ಕಾರ್ಯ ಮತ್ತು ಸಾಧನೆ ಇವುಗಳ ಸಮನ್ವಯ ಹೇಗೆ ಸಾಧಿಸಬೇಕು ?’, ಎಂಬ ಬಗ್ಗೆ ಪರಾತ್ಪರ ಗುರು ಡಾಕ್ಟರರು ಕಾಲಕಾಲಕ್ಕೆ (ಮೇಲಿಂದ ಮೇಲೆ) ಕಲಿಸಿದ ಜ್ಞಾನ ಅಮೂಲ್ಯವಾಗಿದೆ. ಈ ಬಗ್ಗೆ ಅವರ ಚರಣಗಳಲ್ಲಿ ಎಷ್ಟು ಕೃತಜ್ಞತೆ ವ್ಯಕ್ತ ಮಾಡಿದರೂ ಅದು ಕಡಿಮೆಯೇ ಆಗಿದೆ.

೧೦. ಪ್ರಾರ್ಥನೆ

‘ಹೇ ಸಚ್ಚಿದಾನಂದ ಪರಬ್ರಹ್ಮ ಗುರುದೇವರೇ, ‘ಪ್ರತಿಯೊಬ್ಬ ಸಾಧಕನಿಗೆ ಆತನು ಮಾಡುತ್ತಿರುವ ಸೇವೆಯು ಸಾಧನೆಯೆಂದು ಮಾಡುವ ಬುದ್ಧಿ ಬರಲಿ’, ಇದೇ ತಮ್ಮ ಚರಣಗಳಲ್ಲಿ ಶರಣಾಗತಭಾವದಿಂದ ಪ್ರಾರ್ಥನೆಯಾಗಿದೆ. ಸಚ್ಚಿದಾನಂದ ಪರಬ್ರಹ್ಮ ಗುರುದೇವರು ಸೂಚಿಸಿದ ಶಬ್ದಪುಷ್ಪಗಳನ್ನು ಕೃತಜ್ಞತಾಭಾವದಿಂದ ಅವರ ಚರಣಗಳಲ್ಲಿ ಅರ್ಪಿಸುತ್ತೇನೆ !’

ಇದಂ ನ ಮಮ |’ (ಈ ಬರವಣಿಗೆ ನನ್ನದಲ್ಲ !)

(ಮುಂದುವರಿಯುವುದು)

– (ಸದ್ಗುರು) ರಾಜೇಂದ್ರ ಶಿಂದೆ, ದೇವದ ಆಶ್ರಮ, ಪನವೆಲ. (೧೬.೧೦.೨೦೨೩)