`ಆಪ್ ಪಕ್ಷದ’ ಅರವಿಂದ ಕೇಜರಿವಾಲ; ಸ್ವರಾಜ್ಯದಿಂದ ಮದ್ಯ ಹಗರಣದ ವರೆಗೆ !

ಅರವಿಂದ ಕೇಜರಿವಾಲ

ಕೆಲವು ದಿನಗಳ ಹಿಂದೆ ದೆಹಲಿಯ ಉಪಮುಖ್ಯಮಂತ್ರಿ ಮತ್ತು ಆಪ್‌ನ ಮುಖಂಡರಾದ ಮನೀಷ ಸಿಸೋದಿಯಾ ಇವರನ್ನು ಕೇಂದ್ರೀಯ ತನಿಖಾ ದಳವು (ಸಿ.ಬಿ.ಐ) ಮದ್ಯ ಹಗರಣದ ಪ್ರಕರಣದಲ್ಲಿ ವಿಚಾರಣೆ ನಡೆಸಿತು. ಇದರಿಂದ ಆಪ್ ಮತ್ತು ಆಪ್ ಪಕ್ಷದ ಸಂಘಟಕ ಮತ್ತು ದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜರಿವಾಲ ತಮ್ಮ ಪಕ್ಷದ ನಿಯಮಗಳಿಗೆ ತಿಲಾಂಜಲಿ ನೀಡಿರುವುದು ಕಂಡು ಬರುತ್ತದೆ. ಈ ವಿಷಯದ ಊಹಾಪೋಹವನ್ನು ಈ ಲೇಖನದಲ್ಲಿ ಮಾಡಲಾಗಿದೆ.

೧. ಭ್ರಷ್ಟಾಚಾರ ವಿರುದ್ಧ ನಡೆದ ಮಹಾ ಆಂದೋಲನದಿಂದ ಹುಟ್ಟಿದ ಆಮ್ ಆದ್ಮಿ ಪಕ್ಷದ ಕಾಲುಗಳು ಕೂಡ ಭ್ರಷ್ಟಾಚಾರದ ಕೆಸರಿನಲ್ಲಿಯೇ ಹೂತಿವೆ

`ಒಂದು ಕಾಲದಲ್ಲಿ, ಆಮ್ ಆದ್ಮಿ ಪಕ್ಷದ (`ಆಪ್’ನ) ಸದಸ್ಯರಾಗಲು ಪಕ್ಷದ ಸಂಸ್ಥಾಪಕ ಮತ್ತು ದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜರಿವಾಲ ಇವರು ಬರೆದ ಪುಸ್ತಕ `ಸ್ವರಾಜ್ಯ’ವನ್ನು ಓದುವುದು ಆವಶ್ಯಕವಾಗಿದೆ ಎಂದು ತಿಳಿಯಲಾಗುತ್ತಿತ್ತು. ಅದರ ಮುಖಪುಟದ ಮೇಲೆ `ಈ ಪುಸ್ತಕವು ವ್ಯವಸ್ಥೆಯ ಪರಿವರ್ತನೆ ಮತ್ತು ಭ್ರಷ್ಟಾಚಾರದ ವಿರುದ್ಧ ನಮ್ಮ ಆಂದೋಲನದ ಘೋಷಣಾಪತ್ರವಾಗಿದೆ’, ಎಂದು ಬರೆಯಲಾಗಿದೆ. ದೆಹಲಿಯ ಜನರಿಗೆ, `ಏನೇ ಆಗಲಿ ಈ ಪಕ್ಷ ಭ್ರಷ್ಟಾಚಾರವನ್ನು ಮುಗಿಸುವುದು’ ಎಂದು ಅನಿಸಿತ್ತು. `ದೆಹಲಿಯಲ್ಲಿ ಮೊದಲ ಬಾರಿಗೆ `ಆಪ್’ ಸರಕಾರ ಸ್ಥಾಪನೆಯಾದಾಗ ಅದರ ನಾಯಕರು `ನಾವು ಬಂಗಲೆಯನ್ನು ತೆಗೆದುಕೊಳ್ಳುವುದಿಲ್ಲ’, `ನಾವು ವಾಹನಗಳನ್ನು ತೆಗೆದು ಕೊಳ್ಳುವುದಿಲ್ಲ’, `ನಾವು ನಮ್ಮ ರಕ್ಷಣೆಗೆ ಭದ್ರತಾ ವ್ಯವಸ್ಥೆಯನ್ನು ಬಳಸಿಕೊಳ್ಳುವುದಿಲ್ಲ’, ಎಂದು ಹೇಳುತ್ತಿದ್ದರು. ಆಗ ಜನರಿಗೆ ಈ ಪಕ್ಷದ ಜನರು ಅಧಿಕಾರದ ಸುಖವನ್ನು ಅನುಭವಿಸಲು ಬಂದಿಲ್ಲ. ಅವರು ವ್ಯವಸ್ಥೆಯಲ್ಲಿ ಬದಲಾವಣೆಯನ್ನು ತರಲು ಬಂದಿದ್ದಾರೆ’ ಎಂದು ಅನಿಸತೊಡಗಿತ್ತು. ಆದರೆ ಇಷ್ಟು ಬೇಗನೆ `ಇದು ಭ್ರಮೆಯಾಗಿದೆ’, ಎಂದು ಜನರು ಕಲ್ಪನೆಯನ್ನೂ ಮಾಡಿರಲಿಲ್ಲ.

ಸಾಂದರ್ಭಿಕ ಚಿತ್ರ

ಎಂತಹ ಆಶ್ಚರ್ಯವೆಂದರೆ ಯಾವ ಪಕ್ಷವು ಭ್ರಷ್ಟಾಚಾರವನ್ನು ಮುಗಿಸಲು ನಿರ್ಮಾಣವಾಗಿತ್ತೋ, ಅದೇ ಪಕ್ಷ ಇಂದು ಸ್ವತಃ ಅನೇಕ ಆರೋಪಗಳಿಂದ ಸುತ್ತ್ತುವರಿದಿದೆ. ಆಪ್‌ನ ದೆಹಲಿಯ ಆರೋಗ್ಯಮಂತ್ರಿ ಸತ್ಯೇಂದ್ರ ಜೈನ `ಮನಿ ಲಾಂಡ್ರಿಂಗ್’ ಆರೋಪದಲ್ಲಿ ಕಾರಾಗೃಹದಲ್ಲಿದ್ದಾರೆ ಮತ್ತು ಉಪಮುಖ್ಯಮಂತ್ರಿ ಮನೀಷ ಸಿಸೋದಿಯಾ ಇವರು ದೆಹಲಿಯ ಹೊಸ ಮದ್ಯ ನೀತಿಯಲ್ಲಿ ಕೋಟಿಗಟ್ಟಲೆ ರೂಪಾಯಿಗಳ ಹಣದ ಅಕ್ರಮ ವಹಿವಾಟು ಮಾಡಿರುವ ಸಂಶಯದ ಮೇಲೆ ಕೇಂದ್ರೀಯ ತನಿಖಾ ದಳವು (ಸಿ.ಬಿ.ಐ.) ವಿಚಾರಣೆ (enquiry) ಮತ್ತು ದಾಳಿಯನ್ನು ಎದುರಿಸುತ್ತಿದ್ದಾರೆ. ಸಿ.ಬಿ.ಐ. ಮದ್ಯ ಹಗರಣದ ಪ್ರಕರಣದಲ್ಲಿ ದಾಖಲಿಸಿದ ಪ್ರಾಥಮಿಕ ವರದಿಯಲ್ಲಿ (ಎಫ್.ಐ.ಆರ್.ನಲ್ಲಿ) ಸಿಸೋದಿಯಾ ಇವರನ್ನು ಪ್ರಮುಖ ಆರೋಪಿ ಯನ್ನಾಗಿಸಿದೆ. ಆಶ್ಚರ್ಯದ ಸಂಗತಿ ಎಂದರೆ ಭ್ರಷ್ಟಾಚಾರದ ವಿರುದ್ಧದ ಮಹಾ ಆಂದೋಲನದಿಂದ ಹುಟ್ಟಿದ ಸರಕಾರದ ಮಂತ್ರಿಗಳು ಕಾರಾಗೃಹಕ್ಕೆ ಹೋಗುವ ಮೊದಲು ಅಥವಾ `ಎಫ್.ಐ.ಆರ್.’ ದಾಖಲಿಸಿದ ಬಳಿಕವೂ ರಾಜೀನಾಮೆ ನೀಡಿಲ್ಲ.

೨. ಸಿಸೋದಿಯಾರ ಮನೆಯಲ್ಲಿ ಸಿ.ಬಿ.ಐ. ವಿಚಾರಣೆ ನಡೆಸುತ್ತಿರುವಾಗ ಕೇಜರಿವಾಲರು ಶಿಕ್ಷಣದ ಬಗ್ಗೆ ಪತ್ರಿಕಾ ಪರಿಷತ್ತನ್ನು ಕರೆದು ಜನರಿಗೆ ತಪ್ಪು ಮಾಹಿತಿ ನೀಡುವುದು

ಈ ಮದ್ಯ ಹಗರಣದ ಪ್ರಕರಣದಲ್ಲಿ ೧೯ ಆಗಸ್ಟ್ ೨೦೨೨ ರಂದು ಸಿಬಿಐ ಸುಮಾರು ೭ ರಾಜ್ಯಗಳಲ್ಲಿ ೨೦ ಕ್ಕಿಂತ ಹೆಚ್ಚು ಸ್ಥಳಗಳ ಮೇಲೆ ದಾಳಿ ಮಾಡಿ, ಅನೇಕ ಮಹತ್ವದ ಕಾಗದಪತ್ರಗಳನ್ನು ವಶಪಡಿಸಿಕೊಂಡಿದೆ. ಯಾವಾಗ ಸಿ.ಬಿ.ಐ.ತಂಡವು ಮನೀಷ ಸಿಸೋದಿಯಾರ ಮನೆಯಲ್ಲಿ ವಿಚಾರಣೆಯನ್ನು ನಡೆಸುತ್ತಿತ್ತೋ, ಆಗ ಮುಖ್ಯಮಂತ್ರಿ ಅರವಿಂದ ಕೇಜರಿವಾಲ ಇವರು ಮಧ್ಯಾಹ್ನ ೧೨ ಗಂಟೆಗೆ ಒಂದು ಪತ್ರಿಕಾ ಪರಿಷತ್ತನ್ನು ಕರೆದಿದ್ದರು.

ಆಗ ದೆಹಲಿಯ ಜನರಿಗೆ `ಕೇಜರಿವಾಲ ಇವರು ತಮ್ಮ ಮದ್ಯದ ನೀತಿಯ ಬಗ್ಗೆ ಏನಾದರೂ ಪುರಾವೆಯನ್ನು ಜನರೆದುರು ಇಡ ಬಹುದು, ಇದರಿಂದ ಅವರ `ಮದ್ಯಮಾಡೆಲ್’ ಜಗತ್ತಿನಲ್ಲಿ ಸರ್ವಶ್ರೇಷ್ಠವಾಗಿದೆ ಎಂದು ಸಿದ್ಧವಾಗುವುದು ಎಂದು ಅನಿಸಿತ್ತು ಹಾಗೂ ಅದರಲ್ಲಿ ಒಂದೇ ಒಂದು ಪೈಸೆಯ ಭ್ರಷ್ಟಾಚಾರವಾಗಿದ್ದರೂ, ಅಥವಾ ಆದಾಯ ಕಡಿಮೆ ಆಗಿರುವುದು ಸಿದ್ಧವಾದರೂ, ಅವರು ಅದರ ಹೊಣೆಯನ್ನು ಹೊತ್ತುಕೊಂಡು ರಾಜೀನಾಮೆ ನೀಡಬಹುದು ಅಥವಾ ಅವರು `ಮದ್ಯಮಾಡೆಲ್’ ನಿಯಮಗಳು ದೋಷಭರಿತವಾಗಿದ್ದವು ಎಂದು ಹೇಳಬಹುದು ಎಂಬ ಆಸೆಯಿತ್ತು. ಅದಕ್ಕಾಗಿ ಅವರು ಸ್ವತಃ ಸಂಬಂಧಿತ ಜನರ ಮೇಲೆ ಕಾರ್ಯಾಚರಣೆ ಮಾಡಬಹುದು ಮತ್ತು ದೆಹಲಿಯ ಜನರಲ್ಲಿ ಕೈಮುಗಿದು ಕ್ಷಮೆ ಕೇಳಬಹುದು ಎಂದೆಸಿತ್ತು. ಆದರೆ ಅವರು ಹೀಗೇನೂ ಮಾಡಲಿಲ್ಲ. ಬದಲಾಗಿ ಅವರು ಈ ಪತ್ರಿಕಾ ಪರಿಷತ್ತಿನಲ್ಲಿ `ನ್ಯೂಯಾರ್ಕ ಟೈಮ್ಸ’ ನಲ್ಲಿ ದೆಹಲಿ ಸರಕಾರದ ಶಿಕ್ಷಣ ನೀತಿಯನ್ನು ಯಾವ ರೀತಿ ಹೊಗಳಿದ್ದಾರೆ ಎಂದು ಹೇಳುತ್ತಿದ್ದರು ಮತ್ತು ಅದರ ಮೂಲಕ ಅವರು ಇಡೀ ದೇಶವನ್ನುದ್ದೇಶಿಸಿ ಅವರು ಭಾರತದ ಪ್ರಧಾನಮಂತ್ರಿಗಳಿದ್ದಂತೆ ಮತ್ತು ೧೩೦ ಕೋಟಿ ಜನತೆಗೆ ದೇಶವನ್ನು ಮುಂದಕ್ಕೆ ಕರೆದೊಯ್ಯಲು ಕರೆ ನೀಡುತ್ತಿರುವಂತೆ ಮಾತನಾಡುತ್ತಿದ್ದರು. ಅವರ ಈ ನಾಟಕೀಯ ಸ್ವರೂಪದ ಕರೆಯು ದೆಹಲಿಯ ಜನರ ಕ್ರೂರ ತಮಾಷೆ ಮಾಡುವಂತಹದ್ದಾಗಿತ್ತು. ಮುಖ್ಯಮಂತ್ರಿಗಳು ತಮ್ಮ ಸರಕಾರಕ್ಕೆ ತಗುಲಿದ ಭ್ರಷ್ಟಾಚಾರದ ಆರೋಪದ ಬಗ್ಗೆ ಒಂದೇ ಒಂದು ಶಬ್ದವನ್ನೂ ಮಾತನಾಡಲಿಲ್ಲ ಮತ್ತು ಅವರು ಭ್ರಷ್ಟಾಚಾರ ಒಂದು ಮಹತ್ವದ ವಿಷಯವೇ ಅಲ್ಲ ಎನ್ನುವಂತಹ ಪ್ರತಿಕ್ರಿಯೆಯನ್ನು ನೀಡಿದರು.

೩. ದೇಶದಲ್ಲಿ ಸ್ವರಾಜ್ಯ ತರುವ ಮಾತುಗಳನ್ನಾಡುವ ಕೇಜರಿವಾಲ ಸರಕಾರದ ಮೇಲೆ ಮದ್ಯಹಗರಣದ ಆರೋಪ

ದೆಹಲಿಯಲ್ಲಿ `ಮದ್ಯಮಾಡೆಲ್’ ಜಾರಿಗೊಳಿಸುವ ಮೊದಲು ಕೇಜರಿವಾಲರಿಗೆ ಅವರ `ಸ್ವರಾಜ್ಯ’ ಪುಸ್ತಕದ ನೆನಪಾಗಲಿಲ್ಲವೇ? ಅದರಲ್ಲಿ ಅವರು ಮದ್ಯನಿಲುವಿನ ಬಗ್ಗೆ ಕೆಲವು ಸೂಚನೆಗಳನ್ನು ನೀಡಿದ್ದಾರೆ. ಈ ಪುಸ್ತಕದ ಪುಟ ಸಂಖ್ಯೆ ೧೪೬ ರಲ್ಲಿ ಕೇಜರಿವಾಲರು `ಈಗಿನ ಅಧಿಕಾರಿಗಳು ಮದ್ಯದ ಅಂಗಡಿಗಳಿಗೆ ರಾಜಕಾರಣಿಗಳ ಶಿಫಾರಸ್ಸಿನ ಮೇರೆಗೆ ಪರವಾನಿಗೆಯನ್ನು ಕೊಡುತ್ತಾರೆ. ಅವರು ಹೆಚ್ಚಾಗಿ ಲಂಚವನ್ನು ತೆಗೆದುಕೊಂಡೇ ಪರವಾನಿಗೆಯನ್ನು ಕೊಡುತ್ತಾರೆ. ಮದ್ಯದ ಅಂಗಡಿಗಳಿAದ ದೊಡ್ಡ ಪ್ರಮಾಣದಲ್ಲಿ ಸಮಸ್ಯೆಗಳು ಉದ್ಭವಿಸುತ್ತವೆ ಮತ್ತು ಜನರ ಕೌಟುಂಬಿಕ ಜೀವನ ನಾಶವಾಗುತ್ತದೆ’, ವಿಡಂಬನೆ ಎಂದರೆ ಇದರಿಂದ ಯಾವ ಜನರು ತೊಂದರೆಗೊಳಗಾಗುತ್ತಾರೆಯೋ, ಅವರನ್ನು ಮದ್ಯದ ಅಂಗಡಿಗಳನ್ನು ತೆರೆಯಬೇಕೋ ಅಥವಾ ತೆರೆಯಬಾರದೋ ಎಂದು ಯಾರೂ ಕೇಳುವುದಿಲ್ಲ?’ ಎಂದು ಬರೆದಿದ್ದಾರೆ. ೧೧ ವರ್ಷಗಳ ಮೊದಲು ಕೇಜರಿವಾಲ ಇವರಿಗೆ ಈ ಭಯಾನಕ ಭ್ರಷ್ಟಾಚಾರವನ್ನು ಮುಗಿಸುವುದಿತ್ತು. ಆದರೆ ಇಂದು ಅವರ ಸರಕಾರದ ಮೇಲೆಯೇ ಅಂತಹ ಆರೋಪಗಳಾಗುತ್ತಿವೆ.

ಕೇಜರಿವಾಲ ಇವರು ಈ ಸಮಸ್ಯೆಗೆ ಉಪಾಯ ಹೇಳುವಾಗ ಮುಂದಿನ ಪುಟದಲ್ಲಿ ಗ್ರಾಮಸಭೆ ಒಪ್ಪಿಗೆಯನ್ನು ನೀಡಿದ ಬಳಿಕವೇ `ಮದ್ಯದ ಅಂಗಡಿಗಳನ್ನು ತೆರೆಯಲು ಪರವಾನಿಗೆಯನ್ನು ನೀಡಬೇಕು; ಹಾಗೆಯೇ ಅಲ್ಲಿ ವಾಸಿಸುವ ಶೇ. ೯೦ ರಷ್ಟು ಮಹಿಳೆಯರು ಅದರ ಪರವಾಗಿ ಮತದಾನ ಮಾಡಬೇಕು’, ಎಂದು ಬರೆದಿದ್ದಾರೆ. ಹೀಗಿರುವಾಗ ಸಿಸೋದಿಯಾ ಇವರು ಈ ಪುಸ್ತಕವನ್ನು ಓದಿಲ್ಲವೇ? ಅಥವಾ ಕೇಜರಿವಾಲರು ಈ ಪುಸ್ತಕವನ್ನು ಜನರನ್ನು ಮೋಸಗೊಳಿಸಲು ಬರೆದಿದ್ದಾರೆಯೇ? ಎನ್ನುವ ಪ್ರಶ್ನೆ ಏಳುತ್ತದೆ. ದೆಹಲಿ ಸರಕಾರವು ಈ ಪರವಾನಿಗೆಗಳನ್ನು ಕೊಡುವಾಗ ಅಥವಾ ತಿರಸ್ಕರಿಸುವಾಗ ಅಲ್ಲಿರುವ ಮಹಿಳೆಯರಲ್ಲಿ ಕೇಳಿರಲಿಲ್ಲ. ಅದರಲ್ಲಿಯೂ ಪರವಾನಿಗೆಯನ್ನು ನೀಡುವಾಗ ಆಗಿರುವ ಹಗರಣದ (ಲಂಚದ) ವಿಚಾರಣೆ ಮುಂದುವರಿದಿದೆ. ಕೇಜರಿವಾಲರು `ಮದ್ಯ ಮಾಡೆಲ್’ ಮಾಡುವಾಗ ಮಕ್ಕಳ ಪೋಷಕರನ್ನು ಮದ್ಯ ಕುಡಿಯಲು ನಿಮ್ಮ ಮಕ್ಕಳ ವಯಸ್ಸನ್ನು ಕಡಿಮೆಗೊಳಿಸಬೇಕೋ ಬೇಡವೋ ಎಂದು ಕೇಳಿದ್ದರೇ ? ದೆಹಲಿಯ ಜನರ ಸುಮಾರು ೧೪೪ ಕೋಟಿ ರೂಪಾಯಿಗಳನ್ನು ಮದ್ಯಮಾಫಿಯಾಗಳ ಮೇಲೆ ಸುರಿಯುವ ಮೊದಲು ಮತ್ತು ಸುಮಾರು ೩೦ ಕೋಟಿ ರೂಪಾಯಿ ಮರಳಿಸುವಾಗಲೂ ಮೊದಲು ಯಾವುದಾದರೂ ಮೊಹಲ್ಲಾ ಸಮಿತಿಯನ್ನು ಕೇಳಿದ್ದರೇ ?

೪. ಸರಕಾರ ಸ್ಥಾಪನೆಯಾಗುವ ಮೊದಲು ಮದ್ಯವನ್ನು ಅಸ್ಪೃಶ್ಯವೆಂದು ನಿರ್ಧರಿಸಿದ್ದ ಕೇಜರಿವಾಲರು ಮುಖ್ಯಮಂತ್ರಿಯಾದ ಬಳಿಕ ದೆಹಲಿಯ ಜನತೆಯನ್ನು ಮದ್ಯವ್ಯಸನಿಗಳನ್ನಾಗಿಸುವ ಯೋಜನೆಯನ್ನು ಮಾಡುವುದು

ಒಂದು ವೇಳೆ ಮದ್ಯವು ದೆಹಲಿಯ ಯುವಕರನ್ನು ಆಕರ್ಷಿಸ ತೊಡಗಿದರೆ, ಅವರ ಶಿಕ್ಷಣ ಮತ್ತು ಆರೋಗ್ಯದ ಬಗ್ಗೆ ಏನು? `ಸ್ವರಾಜ್ಯ’ ಈ ಪುಸ್ತಕದಲ್ಲಿ ಯಾವ ಮದ್ಯವು `ಮನೆಯನ್ನು ಸರ್ವನಾಶಗೊಳಿಸುವುದು’, ಎಂದು ಹೇಳಲಾಗಿದೆಯೋ, ಆ ಮದ್ಯವನ್ನು ಪ್ರತಿಯೊಂದು ಬೀದಿಯಲ್ಲಿ ಮತ್ತು ಮಾರುಕಟ್ಟೆಯಲ್ಲಿ ಸಿಗುವಂತಾಗಲು ಈ ಜನರು ಇಷ್ಟೇಕೆ ಉತ್ಸುಕರಾಗಿದ್ದರು? ದೆಹಲಿ ಸರಕಾರವು ಅವರ ತಥಾಕಥಿತ `ಮದ್ಯ ಮಾಡೆಲ್’ ನಲ್ಲಿ ಮದ್ಯಪಾನ ಮಾಡಲು ಕಾನೂನುಬದ್ಧ ವಯಸ್ಸನ್ನು ೨೫ ವರ್ಷದಿಂದ ಕಡಿಮೆಗೊಳಿಸಿ ೨೧ ವರ್ಷ ಮಾಡಿದ್ದರು.

ದೆಹಲಿ ಸರಕಾರವು ಉಚ್ಚ ನ್ಯಾಯಾಲಯದ ಒಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ನೀಡಿದ ಉತ್ತರದಲ್ಲಿ, `ಒಂದು ವೇಳೆ `ಮತದಾನ ಮಾಡುವ ವಯಸ್ಸು ೧೮ ವರ್ಷ ಇರುವಾಗ, ಮದ್ಯಸೇವನೆಯ ವಯಸ್ಸು ೧೮ ವರ್ಷ ಏಕೆ ಇರಬಾರದು?’ ಎಂದು ಕೇಳಿತ್ತು. ದೆಹಲಿ ಸರಕಾರ ರಾಜ್ಯದ ಯುವಕರಿಗೆ ೧೮ ವರ್ಷದಿಂದಲೇ ಮದ್ಯ ಕುಡಿಸುವ ನಿಯೋಜನೆಯನ್ನು ಮಾಡುತ್ತಿತ್ತು ? ಕೇವಲ ಹಣ ಗಳಿಸಲು ಯುವಕರನ್ನು ಮದ್ಯ ಕುಡಿಯುವುದರ ಕಡೆಗೆ ಆಕರ್ಷಿಸುವುದು, ಬಾರ, ಕ್ಲಬ್ ಮತ್ತು ರೆಸ್ಟೊರೆಂಟಗಳಲ್ಲಿ ರಾತ್ರಿ ೩ ಗಂಟೆಯ ವರೆಗೆ ಮದ್ಯ ಒದಗಿಸಲು ಅವಕಾಶ ನೀಡುವುದು ಇತ್ಯಾದಿ ಕೆಲಸಗಳಿಗಾಗಿಯೇ ಆಮ ಆದ್ಮಿ ಪಕ್ಷ ಉದಯವಾಗಿತ್ತೇ? ನೀವಂತೂ `ಸ್ವರಾಜ್ಯ’ ತರಲು ಅಧಿಕಾರಕ್ಕೆ ಬಂದಿದ್ದೀರಿ, ಹಾಗಾದರೆ ದೆಹಲಿಯಲ್ಲಿ ಮದ್ಯದಿಂದಲೇ ಸ್ವರಾಜ್ಯ ಬರುವುದಿದೆಯೇ ? ಈಗ `ಆಪ್’ ನ ಭ್ರಷ್ಟಾಚಾರದ ಆರೋಪ ಮತ್ತು ಮದ್ಯನೀತಿಯ ವಿರುದ್ಧವೂ ಅಣ್ಣಾ ಹಜಾರೆ, ಕಿರಣ ಬೇಡಿ ಮತ್ತು ಕುಮಾರ ವಿಶ್ವಾಸ ಇವರೆಲ್ಲ ಮತ್ತೊಮ್ಮೆ ರಾಮಲೀಲಾ ಮೈದಾನದಲ್ಲಿ ಅಂದೋಲನವನ್ನು ಮಾಡಬೇಕಾಗಬಹುದು.’

– ಡಾ. ರಾಮಕಿಶೋರ ಉಪಾಧ್ಯಾಯ

(ಆಧಾರ: ಸಾಪ್ತಾಹಿಕ `ಪಾಂಚಜನ್ಯ,)