Poet Kumar Vishwas Statement : ಆಕ್ರಮಣಕಾರರ ಹೆಸರನ್ನು ಮಕ್ಕಳಿಗೆ ಇಡುವುದು ಸಹಿಸಲಾಗುವುದಿಲ್ಲ ! – ಕುಮಾರ ವಿಶ್ವಾಸ, ಖ್ಯಾತ ಕವಿ

ತಮ್ಮ ಮಗನಿಗೆ ‘ತೈಮೂರ್’ ಎಂದು ಹೆಸರಿಟ್ಟಿದ್ದ ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಗೆ ಛೀಮಾರಿ

ನವದೆಹಲಿ – ಖ್ಯಾತ ಕವಿ ಕುಮಾರ ವಿಶ್ವಾಸ ಭಾಷಣವೊಂದರಲ್ಲಿ ನಟ ಸೈಫ್ ಅಲಿ ಖಾನ್ ಮತ್ತು ಅವರ ಪತ್ನಿ ಕರೀನಾ ಕಪೂರ್ ಅವರನ್ನು ಹೆಸರು ಹೇಳದೆ ಟೀಕಿಸಿದ್ದಾರೆ. ಅವರು, ‘ಬಾಲಿವುಡ್ ಮಂದಿ ಈ ದೇಶ ಏನನ್ನು ಬಯಸುತ್ತದೆ’, ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ನೀವು ನಮ್ಮಿಂದಾಗಿ ಜನಪ್ರಿಯರಾಗಿದ್ದೀರಿ,  ನಮ್ಮಿಂದಾಗಿ ನಿಮಗೆ ಹಣ ಸಿಗುತ್ತದೆ. ನಮ್ಮಿಂದಾಗಿ ನೀವು ಹೀರೋ ಆಗುತ್ತೀರಿ; ಆದರೆ ಎರಡನೇ ಮದುವೆಯಿಂದ ನಿಮಗೆ ಮಗುವಾದರೆ, ದಾಳಿಕೋರನ ಹೆಸರನ್ನು ಇಡುತ್ತೀರಿ, ಅದನ್ನು ಸಹಿಸಲಾಗುವುದಿಲ್ಲ.” ಎಂದು ಹೇಳಿದರು. ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ತಮ್ಮ ಮಗನಿಗೆ ‘ತೈಮೂರ್’ ಎಂದು ಹೆಸರಿಟ್ಟರು. ಆ ನಂತರ ಅವರು ವಿವಾದದ ಸುಳಿಯಲ್ಲಿ ಸಿಲುಕಿದ್ದರು.
ಕುಮಾರ ವಿಶ್ವಾಸ ಮಾತು ಮುಂದುವರೆಸುತ್ತಾ

1. ನಿಮ್ಮ ಮಗುವಿಗೆ ರಿಜ್ವಾನ್, ಉಸ್ಮಾನ್, ಯೂನಸ್, ಬೇರೆ ಯಾವುದಾದರೂ ಹೆಸರಿಡಬಹುದಿತ್ತು; ಆದರೆ ನಿಮಗೆ ಸಿಕ್ಕಿದ್ದು ಒಂದೇ ಹೆಸರು. ಅದು ದುಷ್ಟ ಮತ್ತು ಕುಂಟ ವ್ಯಕ್ತಿಯ ಹೆಸರು (ಮುಸ್ಲಿಂ ಆಕ್ರಮಣಕಾರ ತೈಮೂರ್ ಲಂಗ್) ಅವನು ಭಾರತಕ್ಕೆ ಬಂದು ಇಲ್ಲಿನ ತಾಯಂದಿರು ಮತ್ತು ಸಹೋದರಿಯರನ್ನು ಬಲಾತ್ಕಾರ ಮಾಡಿದನು. ಅವನ ಹೆಸರನ್ನು ನಿಮ್ಮ ಪ್ರೀತಿಯ ಮಗನಿಗೆ ಇಡಲು ನಿಮಗೆ ವಿನಾಯತಿ ಸಿಕ್ಕಿದೆ.

2. ಭವಿಷ್ಯದಲ್ಲಿ ಮಗನನ್ನು ಹೀರೋ ಮಾಡಲು ನೀವು ಪ್ರಯತ್ನಿಸಿದರೆ, ನಾಯಕ ಏನು ? ನಾವು (ಸಾರ್ವಜನಿಕರು) ಅವನು ಚಿತ್ರದಲ್ಲಿ ಖಳನಾಯಕ ಆಗಲು ಸಹ ಬಿಡುವುದಿಲ್ಲ. 75 ವರ್ಷಗಳ ನಂತರ ಭಾರತ ಜಾಗೃತಗೊಂಡಿದೆ. ಎಂದು ಹೇಳಿದರು.

ಸಂಪಾದಕೀಯ ನಿಲುವು

  • ಕುಮಾರ ವಿಶ್ವಾಸ ಅವರ ಹೇಳಿಕೆಯ ನಂತರ ಅವರನ್ನು ಯಾರಾದರೂ ‘ಅಸಹಿಷ್ಣು’ ಅಥವಾ ‘ಕಟ್ಟರವಾದಿ’ ಎಂದು ಕರೆದರೆ ಆಶ್ಚರ್ಯವೆನಿಸುವುದಿಲ್ಲ!
  • ಭಾರತದಲ್ಲಿ ವ್ಯಕ್ತಿ ಸ್ವಾತಂತ್ರ್ಯವಿರುವುದರಿಂದ ಒಬ್ಬನು ತನ್ನ ಮಗುವಿಗೆ ಏನು ಹೆಸರಿಡಬೇಕು ಎಂಬುದು ಅವನ ವೈಯಕ್ತಿಕ ಪ್ರಶ್ನೆಯಾಗಿದೆ; ಆದರೆ ಒಬ್ಬ ಕ್ರೂರ ಮುಸ್ಲಿಂ ಆಕ್ರಮಣಕಾರನ ಹೆಸರನ್ನು ತನ್ನ ಮಗನಿಗೆ ಇಟ್ಟು ಹಿಂದೂಗಳ ಗಾಯದ ಮೇಲೆ ಉಪ್ಪು ಸವರಿದರೆ ಅದನ್ನು ಹಿಂದೂಗಳು ಏಕೆ ಸಹಿಸಿಕೊಳ್ಳಬೇಕು ?