ದೇವಸ್ಥಾನ-ಸಂಸ್ಕೃತಿ ರಕ್ಷಣೆಗಾಗಿ ಸಂಘಟಿತರಾಗಿ ಮಾಡಬೇಕಾದ ಕೃತಿ 

ಶ್ರೀ. ಚೇತನ ರಾಜಹಂಸ

೧. ದೇವಸ್ಥಾನ ಪ್ರತಿನಿಧಿಗಳ ಸ್ಥಳೀಯ ಸಂಘಟನೆ ಮಾಡುವುದು

ಇದು ನಮ್ಮೆಲ್ಲರ ಮಹತ್ವದ ಉದ್ದೇಶವಿರಬೇಕು. ಅದಕ್ಕಾಗಿ ಜಿಲ್ಲೆಯ ದೇವಸ್ಥಾನಗಳ ವಿಶ್ವಸ್ಥರು (ಟ್ರಸ್ಟಿ), ಅರ್ಚಕರ ಸಂಘ, ಹಿಂದೂ ಸಂಘಟನೆಗಳ ಕಾರ್ಯಕರ್ತರು, ವಿವಿಧ ಸಂಪ್ರದಾಯ, ಆಖಾಡಗಳು ಮುಂತಾದವುಗಳ ಪ್ರಮುಖರು, ಸ್ಥಳೀಯ ಸಂತರು, ದೇವಸ್ಥಾನ-ರಕ್ಷಣೆಗಾಗಿ ಕಾರ್ಯ ಮಾಡುವ ನ್ಯಾಯವಾದಿ ಗಳು ಹಾಗೂ ಸಮಾಜದಲ್ಲಿನ ಗಣ್ಯ ವ್ಯಕ್ತಿಗಳ ಸಭೆಗಳನ್ನು ನಿಯಮಿತವಾಗಿ ಆಯೋಜನೆ ಮಾಡಬಹುದು. ಈ ಸಭೆಗಳ ಮೂಲಕ ನಿರ್ಮಾಣವಾಗುವ ಸಂಘಟನೆಯಿಂದ ತಮ್ಮ ಕ್ಷೇತ್ರದಲ್ಲಿ ಇಂತಹ ಯಾವುದೇ ಆಘಾತವಾಗುತ್ತಿದ್ದರೆ ಅದರ ವಿರುದ್ಧ ಕೃತಿ ಮಾಡಲು ಪ್ರಯತ್ನಿಸಬೇಕು.

೨. ದೇವಸ್ಥಾನವಿರೋಧಿ ಘಟನೆಗಳಾದಲ್ಲಿ ಆಂದೋಲನ ಮಾಡುವುದು 

ಯಾವಾಗ ದೇವಸ್ಥಾನವಿರೋಧಿ ಘಟನೆಗಳಾಗುತ್ತವೆಯೊ, ಆಗ ಜಿಲ್ಲೆಯ ದೇವಸ್ಥಾನ ಪ್ರತಿನಿಧಿಗಳು ಒಟ್ಟಾಗಿ ಆಂದೋಲನ ಮಾಡುವುದು, ಜಿಲ್ಲಾಧಿಕಾರಿಗಳಿಗೆ ಮನವಿಪತ್ರ ನೀಡುವುದು, ಪ್ರತಿಭಟನಾ ಸಭೆ ಆಯೋಜಿಸುವುದು ಇತ್ಯಾದಿ ಕೃತಿ ಮಾಡಬೇಕು. ಕೆಲವು ಉದಾಹರಣೆಗಳು ಮುಂದಿನಂತಿವೆ,

೨ ಅ. ದೇವಸ್ಥಾನಗಳಲ್ಲಿನ ಕಳ್ಳತನ ಹಾಗೂ ಮೂರ್ತಿಭಂಜನ : ಈ ಘಟನೆಗಳ ಹಿಂದೆ  ಹೆಚ್ಚಾಗಿ ಸಮಾಜದಲ್ಲಿನ ಮತಾಂಧ ಪ್ರವೃತ್ತಿ ಇರುತ್ತದೆ ಎಂಬುದು ಸಿದ್ಧವಾಗಿದೆ. ಹಿಂದೂಗಳ ಶ್ರದ್ಧಾಸ್ಥಾನಗಳ ಮೇಲೆ ಆಘಾತ ಮಾಡುವುದು ಅವರ ಉದ್ದೇಶವಾಗಿರುತ್ತದೆ. ಇಂತಹ ಪ್ರಸಂಗದಲ್ಲಿ ಯಾವ ದೇವಸ್ಥಾನದ ವಿಷಯದಲ್ಲಿ ಈ ಘಟನೆ ಘಟಿಸಿದೆಯೊ, ಅವರ ಸಹಾಯಕ್ಕೆ ಇನ್ನಿತರ ದೇವಸ್ಥಾನಗಳು ಮುಂದೆ ಬರುವುದು ಆವಶ್ಯಕವಾಗಿದೆ.

೨ ಆ. ದೇವಸ್ಥಾನಗಳ ಭೂಮಿ ಕಬಳಿಕೆ : ಕೆಲವು ದೇವಸ್ಥಾನಗಳ ಭೂಮಿಯಲ್ಲಿ ಇಸ್ಲಾಮಿಕ್‌ ಪ್ರವೃತ್ತಿಯಿಂದ ಅನಧಿಕೃತ ಅತಿಕ್ರಮಣ ಮಾಡಲಾಗಿದೆ. ಕೆಲವು ದೇವಸ್ಥಾನಗಳ ಭೂಮಿಯಲ್ಲಿ ಸರಕಾರಿ ವಿಭಾಗಗಳೇ ಕಾರ್ಯಾಲಯ ನಿರ್ಮಿಸಿರುವುದು ಸಿದ್ಧವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ದೇವಸ್ಥಾನಗಳು ಏಕಾಂಗಿಯಾಗಿ ಹೋರಾಡುತ್ತಾ ಇರುತ್ತವೆ. ಅವರಿಗೆ ದೇವಸ್ಥಾನ ಪ್ರತಿನಿಧಿಗಳು ಧಾರ್ಮಿಕ ಬಾಂಧವ್ಯದ ದೃಷ್ಟಿಯಲ್ಲಿ ಸಹಾಯ ಮಾಡಬೇಕು.

೨ ಇ. ಆಡಳಿತದವರು ದೇವಸ್ಥಾನಗಳನ್ನು ಕೆಡಹುವುದು : ಕೆಲವೊಮ್ಮೆ ಸ್ಥಳೀಯ ಆಡಳಿತದವರ ಮೂಲಕ ದೇವಸ್ಥಾನಗಳನ್ನು ಅನಧಿಕೃತವೆಂದು ಪರಿಗಣಿಸಿ ಕೆಡವಲಾಗುತ್ತದೆ. ಕೆಲವೊಮ್ಮೆ ರಸ್ತೆ ಅಗಲೀಕರಣದ ನೆಪದಲ್ಲಿ ದೇವಸ್ಥಾನಗಳನ್ನು ಕೆಡವಲಾಗುತ್ತದೆ. ಇದು ಕೂಡ ಒಂದು ರೀತಿಯಲ್ಲಿ ದೇವಸ್ಥಾನಗಳ ಮೇಲಿನ ಶ್ರದ್ಧಾಭಂಜನದ ಕೃತ್ಯವಾಗಿದೆ. ಆಗ ಸಂಬಂಧಪಟ್ಟ ದೇವಸ್ಥಾನದ ಸಹಾಯಕ್ಕಾಗಿ ಧಾವಿಸುವುದು ನಮ್ಮ ಧರ್ಮಕರ್ತವ್ಯವಾಗಿದೆ.

೩. ದೇವಸ್ಥಾನಗಳ ಸರಕಾರಿಕರಣವನ್ನು ವಿರೋಧಿಸಿ !

೪. ಧರ್ಮಸಂಸ್ಥಾಪನೆಯ ಕಾರ್ಯದಲ್ಲಿ ಭಾಗವಹಿಸಿರಿ !

ದೇವಸ್ಥಾನ-ಸಂಸ್ಕೃತಿ ರಕ್ಷಣೆಯ ಚಳುವಳಿಯು ಧರ್ಮರಕ್ಷಣೆಯ ಚಳುವಳಿಯಾಗಿದೆ. ದೇವಸ್ಥಾನಗಳಿಂದ ಸಮಾಜದಲ್ಲಿ ಧಾರ್ಮಿಕಭಾವನೆ ವೃದ್ಧಿಯಾಗುತ್ತದೆ. ಆದ್ದರಿಂದ ಇದರಲ್ಲಿ ಎಲ್ಲ ದೇವಸ್ಥಾನಗಳ ಪ್ರತಿನಿಧಿಗಳ ಯೋಗದಾನ ಮಹತ್ವದ್ದಾಗಿದೆ. ಸದ್ಯ ಎಲ್ಲ ಕಡೆಗಳಲ್ಲಿ ಧರ್ಮಕ್ಕೆ ಗ್ಲಾನಿಯಾಗಿರುವುದರಿಂದ ಧರ್ಮಸಂಸ್ಥಾಪನೆಗಾಗಿ ನಾವು ಮುಂದಾಳತ್ವ ವಹಿಸಬೇಕಾಗಿದೆ.

– ಶ್ರೀ. ಚೇತನ ರಾಜಹಂಸ, ರಾಷ್ಟ್ರೀಯ ವಕ್ತಾರರು, ಸನಾತನ ಸಂಸ್ಥೆ. (೨.೨.೨೦೨೩)