|
ಡೆಹ್ರಾಡೂನ್ (ಉತ್ತರಾಖಂಡ) – ತನ್ನ ಹೆಸರು ‘ಸೂರಜ್’ ಎಂದು ಸುಳ್ಳು ಹೇಳಿದ ಜಬೀರ್ ಅಲಿ ಎಂಬ ಮುಸ್ಲಿಂ ವ್ಯಕ್ತಿಯೊಬ್ಬ ಹಿಂದೂ ಯುವತಿಯನ್ನು ಪ್ರೇಮದ ಬಲೆಗೆ ಬೀಳಿಸಿದ ಘಟನೆ ಉಧಮಸಿಂಗ ನಗರದ ಕಿಚ್ಛಾ ಪ್ರದೇಶದಲ್ಲಿ ನಡೆದಿದೆ. ಮದುವೆಯ ನೆಪದಲ್ಲಿ ಮಹಿಳೆಯೊಂದಿಗೆ ಹಲವು ಬಾರಿ ದೈಹಿಕ ಸಂಬಂಧ ಬೆಳೆಸಿದ್ದ ಈತ ಸಂತ್ರಸ್ತೆಯ ಅಶ್ಲೀಲ ವಿಡಿಯೋ ಮಾಡಿ ಬೆದರಿಸಿ ಬಲವಂತವಾಗಿ ಮದುವೆಯಾಗಿದ್ದ. 6 ವರ್ಷಗಳ ನಂತರ ಆಕೆಯ ಚಿನ್ನಾಭರಣ ಮತ್ತು ಹಣವನ್ನು ದೋಚಿ ಜಬೀರ್ ಕಣ್ಮರೆಯಾಗಿದ್ದಾನೆ.
ಪೊಲೀಸ್ ನೀಡಿದ ದೂರಿನಲ್ಲಿ ಸಂತ್ರಸ್ತೆ, ‘ಜಬಿರ್ ನನ್ನನ್ನು ಮದುವೆಯಾಗುವಂತೆ ಒತ್ತಾಯಿಸಿದ್ದನು. ನಾನು ಜಬೀರ್ ಅಲಿಯನ್ನು ಹಿಂದೂ ಎಂದು ತಿಳಿದುಕೊಂಡಿದ್ದೆ. ಆದರೆ ಸತ್ಯ ಹೊರಬೀಳುವ ತನಕ ಬಹಳ ತಡವಾಗಿತ್ತು. ಜಬೀರ್ ನನ್ನನ್ನು ಹೊಡೆಯುತ್ತಿದ್ದನು ಮತ್ತು ಮತಾಂತರಕ್ಕಾಗಿ ಒತ್ತಡ ಹೇರುತ್ತಿದ್ದನು. ಜಬೀರ್ ಮತ್ತು ಆತನ ಮನೆಯವರು ನನಗೆ ಜೀವ ಬೆದರಿಕೆ ಹಾಕಿದ್ದರು. ಮದುವೆಯಾದ ನಂತರ ನನ್ನ ಚಿನ್ನಾಭರಣ ಹಾಗೂ ಹಣವನ್ನು ಕಿತ್ತುಕೊಂಡು, ವರದಕ್ಷಿಣೆ ತರುವಂತೆ ಒತ್ತಡ ಹೇರಿದ್ದನು. 6 ವರ್ಷದ ನನ್ನ ಮಗಳು ಮತ್ತು ನನ್ನನ್ನು ಮನೆಯಿಂದ ಹೊರ ಹಾಕಿದನು ಎಂದು ಹೇಳಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.
ಸಂಪಾದಕೀಯ ನಿಲುವುಇಂತಹವರ ವಿರುದ್ಧ ತುರ್ತು ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ ನಡು ರಸ್ತೆಯಲ್ಲಿ ಗಲ್ಲಿಗೇರಿಸಿದರೆ ಲವ್ ಜಿಹಾದ್ ಗೆ ಬಿಸಿ ಮುಟ್ಟುತ್ತದೆ ! |