ಜಬಲ್ಪುರ (ಮಧ್ಯಪ್ರದೇಶ) ಇಲ್ಲಿ ಮುಸ್ಲಿಂ ಹುಡುಗನಿಂದ ಹನುಮಂತನ ವಿಗ್ರಹವನ್ನು ಭಗ್ನಗೊಳಿಸಿ ನೆಲದಲ್ಲಿ ಹೂಳಿದ !

ಬಾಲಕ ಮನೋರೋಗಿಯಾಗಿದ್ದರಿಂದ ಚಿಕಿತ್ಸೆ ಪಡೆಯುತ್ತಿದ್ದಾನೆ

ಈ ಮೇಲೆ ಪ್ರಕಟಿಸಿರುವ ಚಿತ್ರದ ಉದ್ದೇಶ ಯಾರ ಧಾರ್ಮಿಕ ಭಾವನೆಗಳಿಗೆ ನೋವನ್ನು ತರುವುದಾಗಿರದೇ ನೈಜ ಸ್ಥಿತಿ ತಿಳಿಸುವುದಾಗಿದೆ – ಸಂಪಾದಕರು

ಜಬಲ್ಪುರ (ಮಧ್ಯಪ್ರದೇಶ) – ಜಿಲ್ಲೆಯ ಪಾಟಣದಲ್ಲಿರುವ ‘ಜೈ ಬಜರಂಗ್ ಅಖಾಡಾ’ (ವ್ಯಾಯಾಮ ಶಾಲೆ) ದಲ್ಲಿ ಮುಸ್ಲಿಂ ಬಾಲಕನೊಬ್ಬ ಹನುಮಂತನ ವಿಗ್ರಹವನ್ನು ಒಡೆದು ನೆಲದಲ್ಲಿ ಹೂತು ಹಾಕಿರುವ ಘಟನೆ ಬೆಳಕಿಗೆ ಬಂದಿದೆ. ಈ ಕೃತ್ಯದ ವಿಷಯ ತಿಳಿದ ಸ್ಥಳೀಯ ಹಿಂದೂಗಳು ಆಕ್ರೋಶಗೊಂಡಿದ್ದರು. ಇದರ ಪರಿಣಾಮ ಏನು ಬೇಕಾದರೂ ಆಗಬಹುದು’, ಎಂದು ಎಚ್ಚರಿಕೆ ನೀಡಿದ್ದಾರೆ. ಬಳಿಕ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಪೊಲೀಸರು ಆರೋಪಿ ಅಪ್ರಾಪ್ತ ಮುಸ್ಲಿಂ ಬಾಲಕನನ್ನು ವಶಕ್ಕೆ ತೆಗೆದುಕೊಂಡರು. (ಮದರಸಾಗಳಲ್ಲಿ ಮುಸ್ಲಿಂ ಮೌಲಾ-ಮೌಲ್ವಿಗಳು ಮುಸ್ಲಿಂ ಮಕ್ಕಳಿಗೆ ಹಿಂದೂ ದ್ವೇಷವನ್ನು ಕಲಿಸಿದ ಪರಿಣಾಮ ಇದು ! ಸಾಮಾಜಿಕ ಸಾಮರಸ್ಯ ಕದಡುವ ಇಂತಹ ಘಟನೆಗಳನ್ನು ತಡೆಯಲು ಮದರಸಾಗಳ ಮೇಲೆ ನಿಗಾ ಇಡುವುದು ಅನಿವಾರ್ಯವಾಗಿದೆ ! – ಸಂಪಾದಕರು) ಮುಸ್ಲಿಂ ಹುಡುಗ ಮನೋರೋಗಿ ಆಗಿದ್ದರಿಂದ , ಉಪಚಾರದ ವ್ಯವಸ್ಥೆ ಮಾಡಲಾಗಿದೆ.

1. ‘ಈ ಪ್ರಕರಣ ಅತ್ಯಂತ ಸೂಕ್ಷ್ಮವಾಗಿದ್ದು, ಆರೋಪಿಗಳ ವಿರುದ್ಧ ಪೊಲೀಸರು ಕ್ರಮ ಕೈಗೊಂಡಿದ್ದಾರೆ’, ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸೂರ್ಯಕಾಂತ್ ಶರ್ಮಾ ತಿಳಿಸಿದ್ದಾರೆ. ಶಾಂತಿ ಕಾಪಾಡಲು ಸ್ಥಳದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.

2. ಘಟನೆಯ ನಂತರ ಬಜರಂಗದಳದ ಜಿಲ್ಲಾ ಸಂಚಾಲಕ ರಾಜಾ ಠಾಕೂರ್ ಮಾತನಾಡಿ, ಇದೊಂದು ಧಾರ್ಮಿಕ ಭಾವನೆಗಳ ಮೇಲಿನ ದಾಳಿಯಾಗಿದ್ದು, ಇಂತಹ ಘಟನೆಗಳನ್ನು ಸಹಿಸುವುದಿಲ್ಲ’, ಎಂದು ಹೇಳಿದ್ದಾರೆ. ‘ಇದು ನಮ್ಮ ನಂಬಿಕೆಯ ಮೇಲಿನ ನೇರ ದಾಳಿಯಾಗಿದ್ದು, ಮುಂದೆ ಇಂತಹ ಘಟನೆಗಳು ನಡೆಯದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು’, ಎಂದು ಹಿಂದೂ ಸಂಘಟನೆಗಳು ಎಚ್ಚರಿಸಿವೆ.

ಸಂಪಾದಕೀಯ ನಿಲುವು

  • ಹಿಂದೂ ದೇವಸ್ಥಾನಗಳು ಅಥವಾ ಮೂರ್ತಿಗಳನ್ನು ಧ್ವಂಸ ಮಾಡುವವರು ಹೇಗೆ ಮನೋರೋಗಿಗಳಾಗುತ್ತಾರೆ ? ಅವರು ಮಸೀದಿಗಳಲ್ಲಿ ಅಲ್ಲ, ಬದಲಾಗಿ ಹಿಂದೂ ದೇವರುಗಳ ಮೂರ್ತಿಗಳನ್ನೇ ಏಕೆ ಧ್ವಂಸ ಮಾಡುತ್ತಾರೆ ಈ ಬಗ್ಗೆ ನಾಸ್ತಿಕರು ಉತ್ತರಿಸುತ್ತಾರೆಯೇ ?
  • ಇತ್ತೀಚಿನ ದಿನಗಳಲ್ಲಿ ಅಪ್ರಾಪ್ತರು ಗಂಭೀರ ಅಪರಾಧಗಳನ್ನು ಮಾಡಿದರೂ, ಕಾನೂನಿನಲ್ಲಿ ಶಿಕ್ಷೆಯ ಅವಕಾಶವಿಲ್ಲದ ಕಾರಣ ಅವರು ಅದರಿಂದ ತಪ್ಪಿಸಿಕೊಳ್ಳುತ್ತಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಅಪರಾಧ ಮನೋಭಾವದ ಮಕ್ಕಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಕಾನೂನಿನಲ್ಲಿ ಅವಕಾಶವಿರಬೇಕು !