ಅಧ್ಯಾತ್ಮದ ಕುರಿತು ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ಮಾರ್ಗದರ್ಶನ !

(ಪರಾತ್ಪರ ಗುರು) ಡಾ. ಆಠವಲೆ

ಸೂಕ್ಷ್ಮದಿಂದ ಪಡೆದ ಜ್ಞಾನದ ಲಾಭ !

‘ಯಾವುದೇ ಮಾಹಿತಿಯನ್ನು ಅಂತಿಮಗೊಳಿಸಲು, ಮೊದಲಿಗೆ ಅನೇಕ ಗ್ರಂಥಗಳನ್ನು ಓದಬೇಕಾಗುತ್ತದೆ ಅದರ ಆಧಾರದಲ್ಲಿ ವಿವಿಧ ಪ್ರಯೋಗಗಳನ್ನು ಮಾಡಬೇಕಾಗುತ್ತದೆ. ಅನಂತರ ಅದರ ಬಗ್ಗೆ ತೀರ್ಮಾನಗಳನ್ನು ತೆಗೆದುಕೊಳ್ಳಬಹುದು. ಇದಕ್ಕೆ ಕೆಲವು ದಿನಗಳಿಂದ ಕೆಲವು ವರ್ಷಗಳ ವರೆಗೆ ಸಮಯ ನೀಡಬೇಕಾಗುತ್ತದೆ. ತದ್ವಿರುದ್ಧ, ಸಂತರು ಸೂಕ್ಷ್ಮದಿಂದ ಪಡೆಯುವ ಜ್ಞಾನವು ಎಲ್ಲ ದೃಷ್ಟಿಯಿಂದ ಪರಿಪೂರ್ಣವಾಗಿರುತ್ತದೆ. ಅದರಲ್ಲಿ ಏನೂ ಬದಲಾಗುವುದಿಲ್ಲ. ಅದರಲ್ಲಿ ಸಂಶೋಧನೆಗೆ ಸಮಯ ಕೊಡಬೇಕಾಗುವುದಿಲ್ಲ. ಸಾಧಕರು ಕೇವಲ ಗುರುಗಳ ಮಾರ್ಗದರ್ಶನದಲ್ಲಿ ಸಾಧನೆ ಮಾಡಬೇಕಾಗುತ್ತದೆ !- ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ (೨೨.೧.೨೦೨೨)

ಆಶ್ರಮ ಜೀವನದ ಲಾಭ !

ಸಾಮಾನ್ಯವಾಗಿ ಹಲವು ಕುಟುಂಬಗಳಲ್ಲಿ ಗಂಡ-ಹೆಂಡತಿ, ತಂದೆ-ತಾಯಿ, ಚಿಕ್ಕವರು-ಹಿರಿಯರು ಇತ್ಯಾದಿ ಎಲ್ಲಾ ಸಂಬಂಧಗಳಲ್ಲಿ ಕಲಹಗಳಾಗುತ್ತಿರುವುದು ಕಂಡು ಬರುತ್ತದೆ. ಸನಾತನದ ಆಶ್ರಮಗಳಲ್ಲಿ ಎಲ್ಲರೂ ಸಾಧನೆ ಮಾಡುವುದಕ್ಕಾಗಿ ‘ಸಾಧಕ’ ಈ ಸಂಬಂಧದಿಂದ ಇರುವುದರಿಂದ ಒಂದು ಆಶ್ರಮದಲ್ಲಿ ೨೦೦-೨೫೦ ಜನರು ಇರುತ್ತಿದ್ದರೂ, ಯಾರಲ್ಲೂ ಜಗಳಗಳಾಗುವುದಿಲ್ಲ. ಎಲ್ಲರೂ ಆನಂದದಿಂದ ಇರುತ್ತಾರೆ ಮತ್ತು ಪರಸ್ಪರರಿಗೆ ಸಹಾಯ ಮಾಡುತ್ತಾರೆ.’

– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆೆ (೨೭.೪.೨೦೨೨)