ಪ್ರತಿದಿನ ಕಡಿಮೆಪಕ್ಷ ಅರ್ಧ ಗಂಟೆ ವ್ಯಾಯಾಮ ಮಾಡಿ !

‘ಆಯುರ್ವೇದದಲ್ಲಿ ವಾತ, ಪಿತ್ತ ಮತ್ತು ಕಫ ಇವುಗಳಿಗೆ ‘ದೋಷ’ ಎಂದು ಕರೆಯಲಾಗುತ್ತದೆ. ವಾತ, ಪಿತ್ತ ಮತ್ತು ಕಫ ಈ ದೋಷಗಳ ಕಾರ್ಯದಲ್ಲಿ ತೊಡಕುಂಟಾಗುವುದು, ಅಂದರೆ ರೋಗ ! ಆಯುರ್ವೇದಕ್ಕನುಸಾರ ಸರಿಯಾದ ಸಮಯದಲ್ಲಿ ಊಟ ಮಾಡುವುದು, ಪಚನವಾಗುವುದನ್ನೇ ತಿನ್ನುವುದು, ದೇಹಕ್ಕಾಗಿ ಅಹಿತಕರ ಪದಾರ್ಥಗಳನ್ನು ತಡೆಯುವುದು ಇತ್ಯಾದಿ ಆಹಾರದ ನಿಮಯಗಳನ್ನು ಪಾಲಿಸುವುದರಿಂದ ವಾತಾದಿ ದೋಷಗಳ ಕಾರ್ಯದಲ್ಲಿ ಸಮೋತಲನವಾಗಿದ್ದು ಆರೋಗ್ಯ ಚೆನ್ನಾಗಿರುತ್ತದೆ; ಆದರೆ ಅನೇಕ ಬಾರಿ ಊಟದ ಸಂದರ್ಭದ ನಿಮಯಗಳನ್ನು ಪಾಲಿಸಲು ಸಾಧ್ಯವಾಗುವುದಿಲ್ಲ. ಇಂತಹ ಸಮಯದಲ್ಲಿ ದೇಹವನ್ನು ಆರೋಗ್ಯವಂತವಾಗಿಡಲು ಸರ್ವೋತ್ತಮ ಮಾರ್ಗವೆಂದರೆ ‘ವ್ಯಾಯಾಮ ಮಾಡುವುದು’. ಆಹಾರದ ನಿಮಯಗಳನ್ನು ಪಾಲಿಸದಿರುವುದರಿಂದ ವಾತಾದಿ ದೋಷಗಳು ಅಸಮತೋಲನವಾಗಿದ್ದರೂ, ನಿಯಮಿತವಾಗಿ ವ್ಯಾಯಾಮ ಮಾಡುವುದರಿಂದ ಅದು ಪುನಃ ಸಮತೋಲನವಾಗಲು ಸಹಾಯವಾಗುತ್ತದೆ. ಆದುದರಿಂದ ದೇಹವು ಆರೋಗ್ಯವಾಗಿಡಲು ಪ್ರತಿದಿನ ಕಡಿಮೆ ಪಕ್ಷ ಅರ್ಧ ಗಂಟೆ ವ್ಯಾಯಾಮ ಮಾಡಿರಿ !’
– ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (೮.೮.೨೦೨೨)