ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ೭೯ ನೇ ಜನ್ಮೋತ್ಸವದ ದಿನದಂದು ಅರಿವಾದ ಅಂಶಗಳು ಮತ್ತು ೮೦ ನೇ ಜನ್ಮೋತ್ಸವದ ನಿಮಿತ್ತ ಭಗವಂತನು ಸೂಚಿಸಿದ ವಿಚಾರಗಳು

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

`ಸೌ. ಮಧುವಂತಿ ಪಿಂಗಳೆಯವರು ಈ ಲೇಖನದಲ್ಲಿ `ಗುರುದೇವರ ಜನ್ಮೋತ್ಸವವನ್ನು ಪ್ರತಿದಿನ ಹೇಗೆ ಅನುಭವಿಸ ಬೇಕು ?’, ಎಂಬ ಬಗ್ಗೆ ಅವರು ಮಾಡಿದ ಪ್ರಯತ್ನ ಮತ್ತು ಅನುಭವಿಸಿದ ಭಾವಾವಸ್ಥೆಯನ್ನು ಬರೆದಿದ್ದಾರೆ. ಇದರಿಂದ ಸಾಧಕರಿಗೆ `ಗುರುದೇವರನ್ನು ಹೃದಯದಲ್ಲಿ ಹೇಗೆ ಅನುಭವಿಸ ಬೇಕು ?’, ಎಂದು ಕಲಿಯಲು ಸಿಗುತ್ತದೆ. ಸೌ. ಮಧುವಂತಿ ಪಿಂಗಳೆಯವರ ಈ ಲೇಖನವನ್ನು ಎಷ್ಟು ಪ್ರಶಂಸಿಸಿದರೂ ಅದು ಕಡಿಮೆಯೇ ಆಗಿದೆ ! ಅದಕ್ಕಾಗಿ ಅವರಿಗೆ ಅಭಿನಂದನೆ !’

– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ (೨೧.೭.೨೦೨೨)

(ಸೌ.) ಮಧುವಂತಿ ಪಿಂಗಳೆ

೧. ೭೯ ನೇ ಜನ್ಮೋತ್ಸವದ ದಿನ ಅರಿವಾದ ಅಂಶಗಳು

೧. ಅ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಜನ್ಮೋತ್ಸವದ ದಿನ ಹೃದಯಸ್ಥ ಗುರುದೇವರ ಜನ್ಮೋತ್ಸವವು ಪ್ರತಿದಿನ ನಡೆಯುತ್ತಿರುವಾಗ ನಾನು ಕೇವಲ ಒಂದೇ ದಿನದ ಜನ್ಮೋತ್ಸವದ ವಿಚಾರವನ್ನು ಏಕೆ ಮಾಡುತ್ತಿರುವೆ ?’, ಎಂಬ ವಿಚಾರ ಮನಸ್ಸಿನಲ್ಲಿ ಬರುವುದು `ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಜನ್ಮೋತ್ಸವದ ದಿನದಂದು ನನ್ನ ಮನಸ್ಸು ಬಹಳ ಆನಂದಿಯಾಗಿತ್ತು. ಆ ಸಮಯದಲ್ಲಿ ನನ್ನ ಮನಸ್ಸಿನಲ್ಲಿ ಮುಂದಿನಂತೆ ವಿಚಾರ ಬಂದಿತು, `ನನಗೆ ಕೇವಲ ಇವತ್ತಷ್ಟೇ ಸಚ್ಚಿದಾನಂದ ಪರಬ್ರಹ್ಮ ಗುರುದೇವರ ಜನ್ಮೋತ್ಸವವಿದೆ’, ಎಂದು ಏಕೆ ಅನಿಸುತ್ತಿದೆ ? ನಾನು ಕೇವಲ ಗುರುದೇವರ ಸ್ಥೂಲದಲ್ಲಿನ ಜನ್ಮೋತ್ಸವದ ವಿಚಾರವನ್ನು ಮಾಡುತ್ತಿದ್ದೇನೆ. ಸಚ್ಚಿದಾನಂದ ಪರಬ್ರಹ್ಮ ಗುರುದೇವರು ನನ್ನ ಹೃದಯಲ್ಲಿದ್ದಾರೆ ಮತ್ತು ಹೃದಯಸ್ಥ ಗುರುದೇವರ ಜನ್ಮೋತ್ಸವವು ಪ್ರತಿದಿನ ಇರುತ್ತದೆ; ಏಕೆಂದರೆ ಸಚ್ಚಿದಾನಂದ ಪರಬ್ರಹ್ಮ ಗುರು ದೇವರು ಪ್ರತಿದಿನ ನನ್ನ ಪ್ರಾರಬ್ಧ ಮತ್ತು ಸಂಚಿತವನ್ನು ಕಡಿಮೆ ಮಾಡುತ್ತಾರೆ. ನನ್ನ ಸ್ವಭಾವದೋಷಗಳು ಮತ್ತು ಅಹಂಅನ್ನು ಕಡಿಮೆ ಮಾಡುತ್ತಾರೆ ಮತ್ತು ನನ್ನಲ್ಲಿ ಗುಣಗಳ ವೃದ್ಧಿಯನ್ನು ಮಾಡಿ ಹೃದಯದಲ್ಲಿನ ಗುರುದೇವರ ಸ್ಥಾನವನ್ನು ದೃಢ ಮಾಡುತ್ತಾರೆ. ನನಗೆ ಇದರ ಅರಿವು ಇಲ್ಲದಿರುವುದರಿಂದ ಹೃದಯಸ್ಥ ಗುರುದೇವರ ಜನ್ಮೋತ್ಸವದ ಆನಂದವನ್ನು ನನಗೆ ಪ್ರತಿದಿನ ಅನುಭವಿಸಲು ಸಾಧ್ಯವಾಗುವುದಿಲ್ಲ ಮತ್ತು ನನಗೆ ಕೃತಜ್ಞತಾ ಭಾವದಲ್ಲಿರಲು ಸಾಧ್ಯವಾಗುವುದಿಲ್ಲ.’ ಗುರುದೇವರೇ ನನ್ನ ಮನಸ್ಸಿನಲ್ಲಿ ಇವೆಲ್ಲ ವಿಚಾರಗಳನ್ನು ಹಾಕಿದರು ಮತ್ತು ಅವರ ಜನ್ಮೋತ್ಸವದ ಆನಂದವನ್ನು ಹೇಗೆ ಪಡೆಯಬೇಕು ? ಎಂದು ನನಗೆ ಕಲಿಸಿದರು.

೧ ಆ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಜನ್ಮೋತ್ಸವದ ದಿನ ಹೊಸ ಬಟ್ಟೆಗಳನ್ನು ಧರಿಸುವುದರೊಂದಿಗೆ ಆತ್ಮಸ್ವರೂಪದ ಮೇಲಿನ ಆವರಣವನ್ನು ನಾಶ ಮಾಡಿ ಅವರಲ್ಲಿ ಏಕರೂಪವಾಗುವ ವಿಚಾರವನ್ನು ಗುರುದೇವರು ನೀಡುವುದು

ನಾನು ಗುರುದೇವರ ಜನ್ಮೋತ್ಸವದ ದಿನ ಹೊಸ ಬಟ್ಟೆಗಳನ್ನು ಧರಿಸಿದೆನು. ಈ ಬಟ್ಟೆಗಳನ್ನು ಧರಿಸುವಾಗ ಗುರುದೇವರು, `ಗುರು ದೇವರ ಜನ್ಮೋತ್ಸವವಿರುವುದರಿಂದ ನಾನು ಹೊಸ ಬಟ್ಟೆಗಳನ್ನು ಕೇವಲ ನನ್ನ ನಶ್ವರ ಶರೀರಕ್ಕೆ ತೊಡಿಸಿ ಆಚರಿಸುವ ವಿಚಾರ ಮಾಡುತ್ತಿದ್ದೇನೆ ಮತ್ತು ಅದರಲ್ಲಿ ಆನಂದವನ್ನು ಪಡು ತ್ತಿದ್ದೇನೆ. ಇದನ್ನೆಲ್ಲವನ್ನು ನನಗೆ ಮಾಡಲೇ ಬೇಕಿದೆ; ಆದರೆ ನನ್ನ ಆತ್ಮಸ್ವರೂಪದ ಮೇಲಿನ ಆವರಣವನ್ನು ನಾಶ ಮಾಡಿ ಗುರುದೇವ ರಲ್ಲಿ ಏಕರೂಪವಾಗಬೇಕಿದೆ’ ಎಂಬ ವಿಚಾರವನ್ನು ನೀಡಿದರು.

೨. ಜನ್ಮೋತ್ಸವದ ನಿಮಿತ್ತ ದೇವರು ಸೂಚಿಸಿದ ವಿಚಾರ

೨  ಅ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಜನ್ಮೋತ್ಸವದ ದಿನ ಸಾಧಕಿಯ ಹೃದಯದಲ್ಲಿಯೇ ಗುರುದೇವರ ಜನ್ಮವಾಗಿದ್ದು ಅದನ್ನು ಹೇಗೆ ಅನುಭವಿಸು ವುದು ? ಎಂಬ ಬಗ್ಗೆ ಗುರುದೇವರು ಸೂಚಿಸುವುದು ಈ ವರ್ಷ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಜನ್ಮೋತ್ಸವವು ಹತ್ತಿರ ಬಂದಿದೆ. ಸಚ್ಚಿದಾನಂದ ಪರಬ್ರಹ್ಮ ಗುರುದೇವರ ಜನ್ಮೋತ್ಸವವನ್ನು ನನ್ನ ಹೃದಯಮಂದಿರದಲ್ಲಿ ಆಚರಿಸಬೇಕಾಗಿದೆ. ಭಾವಸತ್ಸಂಗದಲ್ಲಿ `ನಮ್ಮ ಹೃದಯದಲ್ಲಿಯೇ ಸಚ್ಚಿದಾನಂದ ಪರಬ್ರಹ್ಮ ಗುರುದೇವರ ಜನ್ಮವಾಗಿದೆ, ಎಂಬುದನ್ನು ಅನುಭವಿಸಬೇಕು’, ಎಂಬ ಪ್ರಯತ್ನವನ್ನು ಹೇಳಿದ್ದರು. ಗುರು ದೇವರೆಂದರೆ ಚೈತನ್ಯದ ಸ್ರೋತ. ಈ ಚೈತನ್ಯದ ಆಧಾರದಿಂದಲೇ ಎಲ್ಲ ಪ್ರಯತ್ನಗಳಾಗುತ್ತವೆ; ಆದರೆ ನನ್ನ ಸ್ವಕರ್ತತ್ವದಿಂದಾಗಿ ಅದನ್ನು ಅನುಭವಿಸಲು ಸಾಧ್ಯವಾಗುವುದಿಲ್ಲ. `ಇದನ್ನೆಲ್ಲವನ್ನು ಹೇಗೆ ಅನುಭವಿಸಬೇಕು ?’, ಎಂಬ ಬಗ್ಗೆ ವಿಚಾರ ಮಾಡುತ್ತಿರುವಾಗ ಗುರುದೇವರು ನನಗೆ ಮುಂದಿನ ವಿಚಾರಗಳನ್ನು ನೀಡಿದರು.

೧. ಈಶ್ವರನ ಬಳಿಗೆ ಕರೆದೊಯ್ಯುವ ಯಾವುದಾದರೊಂದು ವಿಚಾರ ವೆಂದರೆ ಹೃದಯದಲ್ಲಿ ಗುರುದೇವರ ಜನ್ಮ !

೨. ನನ್ನಲ್ಲಿ ಗುಣವೃದ್ಧಿ ಮಾಡಿಕೊಳ್ಳಲು ಮಾಡಿದ ಪ್ರಯತ್ನವೆಂದರೆ, ಹೃದಯದಲ್ಲಿ ಗುರುದೇವರ ಜನ್ಮ !

೩. ಯಾವುದಾದರೊಂದು ಸಂಘರ್ಷದ ಪ್ರಸಂಗ ಉದ್ಭವಿಸಿದಾಗ ಅದನ್ನು ಪಾರು ಮಾಡುವುದು, ಎಂದರೆ ಹೃದಯದಲ್ಲಿ ಗುರುದೇವರ ಜನ್ಮ !

೪. ದಿನವಿಡೀ ಕಲಿಯುವಿಕೆಯ ಆನಂದವನ್ನು ಪಡೆಯುವುದು, ಎಂದರೆ ಹೃದಯದಲ್ಲಿ ಗುರುದೇವರ ಜನ್ಮ !

೫. ಸೇವೆಯನ್ನು ಮಾಡುವಾಗ ಹೊಳೆದ ಯಾವುದಾದರೊಂದು ಹೊಸ ಸಂಕಲ್ಪನೆಯೆಂದರೆ ಹೃದಯದಲ್ಲಿ ಗುರುದೇವರ ಜನ್ಮ !

೬. ಭಾವಜಾಗೃತಿಗಾಗಿ ಮಾಡಿದ ಪ್ರಯತ್ನಗಳಿಂದ ಅನುಭವಿಸಿದ ಗುರುದೇವರ ಅಸ್ತಿತ್ವವೆಂದರೆ ಹೃದಯದಲ್ಲಿ ಗುರುದೇವರ ಜನ್ಮ !

೭. ನಾನು ಗುರುದೇವರ ಅಂಶವಾಗಿದ್ದೇನೆ ಮತ್ತು ಗುರುದೇವರೇ ಈ ದೇಹ, ಮನಸ್ಸು ಮತ್ತು ಬುದ್ಧಿಯಲ್ಲಿ ಕಾರ್ಯನಿರತರಾಗಿದ್ದಾರೆ ಎಂಬುದನ್ನು ಅನುಭವಿಸುವುದು ಎಂದರೆ ಹೃದಯದಲ್ಲಿ ಗುರುದೇವರ ಜನ್ಮ !

ಮೇಲಿನಂತೆ ಭಾವವಿಟ್ಟುಕೊಂಡರೆ ನಾನು ದಿನವಿಡೀ ಅನೇಕ ಬಾರಿ ನನ್ನ ಹೃದಯದಲ್ಲಿ ಗುರುದೇವರ ಜನ್ಮವಾಗುತ್ತಿದೆ ಎಂದು ಅನುಭವಿಸಬಹುದು. ಅದರಿಂದಲೇ ಗುರುದೇವರು ನನ್ನನ್ನು (ಗುರುದೇವರ ಅಂಶವನ್ನು) ತಮ್ಮಲ್ಲಿ ಏಕರೂಪ ಮಾಡಿಸಿಕೊಳ್ಳಲಿದ್ದಾರೆ. ಈ ವಿಚಾರದಿಂದ ನನ್ನ ಮನಸ್ಸು ಆನಂದಿ ಯಾಯಿತು ಮತ್ತು ಗುರುದೇವರ ಕೃಪೆಯಿಂದ ಆ ರೀತಿಯ ಪ್ರಯತ್ನ ಆರಂಭವಾಯಿತು. ಈ ಎಲ್ಲ ವಿಚಾರಗಳನ್ನು ನನಗೆ ಸೂಚಿಸಿದ್ದಕ್ಕಾಗಿ ನಾನು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಯವರ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆಗಳನ್ನು ವ್ಯಕ್ತ ಮಾಡುತ್ತೇನೆ.’

– ಆಧುನಿಕ ವೈದ್ಯೆ (ಸೌ.) ಮಧುವಂತಿ ಚಾರುದತ್ತ ಪಿಂಗಳೆ, ಮಂಗಳೂರು. (೧೫.೫.೨೦೨೨)