ವಿಜ್ಞಾನದ ಮಿತಿ !
‘ಸದ್ಯದ ಕಾಲದಲ್ಲಿ ವಿಜ್ಞಾನವು ಬಹಳ ಪ್ರಗತಿ ಮಾಡಿದೆ, ಎಂದು ಹೇಳಲಾಗುತ್ತದೆ. ಅದರ ಒಂದು ಉದಾಹರಣೆಯೆಂದು ‘ವಿವಿಧ ರೋಗಗಳಿಗೆ ಉಪಾಯವೆಂದು ‘ಅಲೋಪಥಿಯಲ್ಲಿ ವಿವಿಧ ಔಷಧಿಗಳನ್ನು ಕಂಡು ಹಿಡಿಯಲಾಗಿದೆ, ಎಂದು ಸಹ ಹೇಳ ಲಾಗುತ್ತದೆ; ಆದರೆ ವಿಜ್ಞಾನವು ‘ಯಾವುದಾದರೊಂದು ಘಟನೆಯು ಘಟಿಸುವ ಹಿಂದಿನ ಮೂಲ ಕಾರಣವನ್ನು ಕಂಡು ಹಿಡಿಯುವುದು ಅಥವಾ ‘ಅಲೋಪಥಿಯ ದೃಷ್ಟಿಕೋನದಿಂದ ರೋಗವಾಗುವ ಹಿಂದಿನ ಮೂಲ ಕಾರಣವನ್ನು ಕಂಡು ಹಿಡಿಯುವುದು ಮತ್ತು ಆ ಮೂಲ ಕಾರಣಗಳಿಗೆ ಉಪಾಯಯೋಜನೆಯನ್ನು ಹೇಳುವುದು, ಮಾಡಲು ಸಾಧ್ಯವಿಲ್ಲ. ಆದ್ದರಿಂದಲೇ ಅನೇಕ ಜನರಿಗೆ ‘ಯಾವುದಾದರೊಂದು ರೋಗವನ್ನು ಅನೇಕ ಆಧುನಿಕ ವೈದ್ಯರಿಗೆ ತೋರಿಸಿದರೂ ಅಥವಾ ಅದಕ್ಕಾಗಿ ಅನೇಕ ರೀತಿಯ ಪರೀಕ್ಷೆಗಳನ್ನು ಮಾಡಿಸಿಕೊಂಡರೂ ರೋಗದ ಮೂಲ ಕಾರಣವು ತಿಳಿಯುವುದಿಲ್ಲ ಮತ್ತು ಅದು ಗುಣವಾಗುವುದಿಲ್ಲ, ಎಂಬ ಅನುಭವವು ಬರುತ್ತದೆ. ಅವರಲ್ಲಿನ ಕೆಲವು ಜನರು ಸಂತರ ಬಳಿಗೆ ಹೋದಾಗ ಅವರು ಹೇಳಿದ ಉಪಾಯಗಳನ್ನು ಮಾಡಿದಾಗ ಗುಣಹೊಂದುತ್ತಾರೆ. ಅಂದರೆ ಅಧ್ಯಾತ್ಮದಲ್ಲಿ ಯಾವುದಾದರೊಂದು ರೋಗವಾಗುವ ಹಿಂದೆ ಅದರ ಮೂಲ ಕಾರಣವನ್ನು ಕಂಡುಹಿಡಿಯಲಾಗುತ್ತದೆ, ಉದಾ. ಆ ವ್ಯಕ್ತಿಗಿರುವ ಪೂರ್ವಜರ ತೊಂದರೆ, ಅಪಮೃತ್ಯುಯೋಗ ಇತ್ಯಾದಿ. ಅದರಿಂದ ಅದಕ್ಕೆ ಯೋಗ್ಯವಾದ ಉಪಾಯಯೋಜನೆಯನ್ನು ಮಾಡಲು ಸಾಧ್ಯವಾಗುತ್ತದೆ.
– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ