೧. ಇಡೀ ದೇಶದಲ್ಲಿ ಇಂತಹ ಯೋಜನೆಯನ್ನು ಜಾರಿಗೊಳಿಸಿ !
ಉತ್ತರಾಖಂಡದ ಭಾಜಪ ಸರಕಾರವು ಅನಾಥ ಗೋವುಗಳ ಆರೈಕೆಯ ಜವಾಬ್ದಾರಿಯನ್ನು ಗ್ರಾಮ ಗೋರಕ್ಷಾ ಸಮಿತಿಗಳಿಗೆ ನೀಡಲಿದೆ. ಇದಕ್ಕಾಗಿ ಸಮಿತಿಯ ಪ್ರತಿಯೊಬ್ಬ ಸದಸ್ಯರಿಗೆ ಮಾಸಿಕ ೫ ಸಾವಿರ ರೂಪಾಯಿ ವೇತನ ನೀಡಲಾಗುವುದು, ನಿರುದ್ಯೋಗಿಗಳು ಇದರ ಲಾಭ ಪಡೆಯಬಹುದಾಗಿದೆ.
೨. ಇಂತಹ ಮತಾಂಧರಿಗೆ ಕಠಿಣ ಶಿಕ್ಷೆ ವಿಧಿಸಿ !
ಕನ್ಹಯ್ಯಾಲಾಲ್ ಹತ್ಯೆಯ ವಿರುದ್ಧ ಫೇಸ್‌ಬುಕ್ ಪೋಸ್ಟ್ ಮಾಡಿದ ಮುಂಬೈನ ಅಪ್ರಾಪ್ತ ಹಿಂದೂ ಹುಡುಗಿಗೆ ಜೀವಬೆದರಿಕೆ ಹಾಕಿದ್ದ ಕಾಶ್ಮೀರದ ಫೈಯಾಜ್ ಅಹ್ಮದ್ ಭಟ್ ಇವನನ್ನು ಮುಂಬೈ ಪೊಲೀಸರು ಕಾಶ್ಮೀರದಿಂದ ಬಂಧಿಸಿದ್ದಾರೆ.
೩. ಚೀನಾದ ಕಂಪನಿಗಳನ್ನು ಭಾರತದಿಂದ ಹೊರದಬ್ಬಿ !
ಆದಾಯ ಗುಪ್ತಚರ ನಿರ್ದೇಶನಾಲಯ (ಡಿ.ಆರ್.ಐ.)ವು ಸಂಚಾರವಾಣಿ ತಯಾರಕ ಚೀನಾದ ಒಪ್ಪೋ ಕಂಪನಿಯು ೪ ಸಾವಿರದ ೩೮೯ ಕೋಟಿ ರೂಪಾಯಿ ಮೌಲ್ಯದ ಕಸ್ಟಮ್ಸ್ ಸುಂಕವನ್ನು ವಂಚಿಸಿದೆ ಎಂದು ಆರೋಪಿಸಿದೆ.
೪. ಹಿಂದೂಗಳೇ ಭಾರತವನ್ನು ‘ಇಸ್ಲಾಮಿಕ್ ರಾಷ್ಟ್ರ’ ಮಾಡುವ ಮತಾಂಧರ ಷಡ್ಯಂತ್ರವನ್ನು ತಿಳಿಯಿರಿ !
ವಿವಿಧ ರಾಜ್ಯಗಳ ಮುಸಲ್ಮಾನ ಯುವಕರಿಗೆ ಕರಾಟೆ ತರಬೇತಿ ನೀಡುವ ಹೆಸರಿನಲ್ಲಿ ಶಸ್ತ್ರಾಸ್ತ್ರದ ತರಬೇತಿ ನೀಡುತ್ತಿದ್ದ ಇಬ್ಬರು ಮತಾಂಧರನ್ನು ಬಿಹಾರ ಪೊಲೀಸರು ಬಂಧಿಸಿದ್ದಾರೆ. ‘೨೦೪೭ ರ ವೇಳೆಗೆ ಭಾರತವನ್ನು ‘ಇಸ್ಲಾಮಿ ರಾಷ್ಟ್ರ’ವನ್ನಾಗಿ ಮಾಡಲು ಅವರು ಸಂಚು ರೂಪಿಸಿದ್ದರು’, ಎಂದು ಪೊಲೀಸರು ತಿಳಿಸಿದ್ದಾರೆ.
೫. ಕಾವಡ್ ಯಾತ್ರೆ ಭಾರತದಲ್ಲಿ ಇದೆಯೇ ಪಾಕಿಸ್ತಾನದಲ್ಲಿಯೇ ?
ಉತ್ತರಭಾರತದಲ್ಲಿ ಆರಂಭವಾಗಿರುವ ಕಾವಡ್ ಯಾತ್ರೆ ಮೇಲೆ ಜಿಹಾದಿಗಳು ದಾಳಿ ನಡೆಸುವ ಸಾಧ್ಯತೆಯಿದ್ದು, ರಾಜ್ಯಗಳಿಗೆ ಎಚ್ಚರಿಕೆ ವಹಿಸುವಂತೆ ಕೇಂದ್ರ ಗೃಹ ಸಚಿವಾಲಯ ಸೂಚಿಸಿದೆ. ಕೂಡಲೇ ಈ ಯಾತ್ರಾರ್ಥಿಗಳ ಭದ್ರತೆಯನ್ನು ಹೆಚ್ಚಿಸುವಂತೆ ಆದೇಶವನ್ನೂ ನೀಡಲಾಗಿದೆ.
೬. ಹಿಂದೂಗಳು ಅಲ್ಪಸಂಖ್ಯಾತರಾದಾಗ ಅಗುವ ಪರಿಣಾಮ ತಿಳಿಯಿರಿ !
ಗಢವಾ (ಜಾರ್ಖಂಡ್) ದ ಶೇ.೯೦ ರಷ್ಟು ಮುಸಲ್ಮಾನರಿರುವ ಮಾನಪೂರ ಗ್ರಾಮದ ಸರಕಾರಿ ಶಾಲೆಯು ಹಿಂದೂ ವಿದ್ಯಾರ್ಥಿಗಳಿಗೆ ಪ್ರವೇಶವನ್ನು ನಿರಾಕರಿಸಿದೆ, ಹಾಗೆಯೇ ಶಾಲೆಯ ೫ ಹಿಂದೂ ವಿದ್ಯಾರ್ಥಿಗಳನ್ನು ಶಾಲೆಯಿಂದ ಹೊರಹಾಕಿದೆ.
೭. ಈ ಬಗ್ಗೆ ಭಾರತ ಏಕೆ ಮೌನವಾಗಿದೆ?
ಬಾಂಗ್ಲಾದೇಶದ ಹಿಂದೂ ಯುವಕನೊಬ್ಬ ಫೇಸ್‌ಬುಕ್‌ನಲ್ಲಿ ಪ್ರವಾದಿ ಪೈಗಂಬರ ಅವರ ವಿರುದ್ಧ ಆಕ್ಷೇಪಾರ್ಹ ಪೋಸ್ಟ್ ಮಾಡಿದ್ದಾನೆಂದು ಆರೋಪಿಸಿ ಸ್ಥಳೀಯ ಮತಾಂಧರು ಆತನ ಮನೆ ಸೇರಿದಂತೆ ಹಿಂದೂಗಳ ೨೧ ಮನೆಗಳನ್ನು ಸುಟ್ಟುಹಾಕಿದ್ದಾರೆ, ೩೭ ಅಂಗಡಿಗಳನ್ನು ಲೂಟಿ ಮಾಡಿದ್ದಾರೆ, ೯ ದೇವಾಲಯಗಳನ್ನು ಧ್ವಂಸಗೊಳಿಸಿ ದೇವತೆಗಳ ವಿಗ್ರಹಗಳಿಗೆ ಅವಮಾನ ಮಾಡಿದ್ದಾರೆ.
ಕಾಂಗ್ರೆಸ್ ಆಡಳಿತದಲ್ಲಿ ಎಡಪಂಥೀಯ ವಿಚಾರಧಾರೆಗೆ ರಾಜಾಶ್ರಯ !ಕಾಂಗ್ರೆಸ್ ಆಡಳಿತದಲ್ಲಿ ಎಡಪಂಥೀಯ ವಿಚಾರಧಾರೆಗಳಿಗೆ ಆಶ್ರಯ ಸಿಕ್ಕಿದ್ದರಿಂದ ವಿವಿಧ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸುವ ಮೂಲಕ ಸಮಾಜದಲ್ಲಿ ಹಿಂದೂವಿರೋಧಿ ಸಿದ್ಧಾಂತವನ್ನು ಸ್ಥಾಪಿಸಿದ್ದಾರೆ. ಇದರ ಪರಿಣಾಮವಾಗಿ ಇಂದು ಟಿಕಲಿ ಅಥವಾ ಕುಂಕುಮ ಇಲ್ಲದ ಜಾಹೀರಾತುಗಳು ಪ್ರಸಾರವಾಗುತ್ತಿವೆ. ಅವುಗಳ ಅಧ್ಯಯನ ಮಾಡಿ ವಿರೋಧಿಸಬೇಕು. – ನ್ಯಾಯವಾದಿ ಸತೀಶ ದೇಶಪಾಂಡೆ, ಇತಿಹಾಸ ತಜ್ಞರು. |