ಇಂತಹ ಸಂತ ರಾಜಕಾರಣಿಗಳು ಎಲ್ಲೆಡೆಯೂ ಬೇಕು !

ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ

೧. ಮೊಘಲರನ್ನು ಕೊಂಡಾಡುವ ಕಾಂಗ್ರೆಸ್‌ !

ಔರಂಗಜೇಬನು ೨೭ ವರ್ಷಗಳ ಕಾಲ ಇಲ್ಲಿದ್ದನು; ಆದರೆ ಯಾರಿಗೂ ಅವನಿಗೆ ಏನೂ ಮಾಡಲು ಸಾಧ್ಯವಾಗಲಿಲ್ಲ; ಹಾಗಾದರೆ ಅವನ ಗೋರಿಯನ್ನು ಇಲ್ಲಿಂದ ತೆಗೆದುಹಾಕುವ ಮೂಲಕ ವಿಹಿಂಪ ಮತ್ತು ಬಜರಂಗ ದಳ ಏನು ಸಾಧಿಸಲಿದೆ ? ಎಂದು ಕಾಂಗ್ರೆಸ್‌ ಶಾಸಕ ವಿಜಯ್‌ ವಡೆಟ್ಟಿವಾರ್‌ ಪ್ರಶ್ನೆಯನ್ನು ಕೇಳಿದ್ದಾರೆ.

೨. ಗಲಭೆಕೋರರಿಗೆ ಮರಣದಂಡನೆ ಏಕೆ ವಿಧಿಸಬಾರದು ?

ಮಾರ್ಚ್ ೧೭ ರ ಸಂಜೆ ನಾಗಪುರದಲ್ಲಿ ಮತಾಂಧರಿಂದ ಉಂಟಾದ ಗಲಭೆಯಲ್ಲಿ ೩ ಪೊಲೀಸ್‌ ಉಪಆಯುಕ್ತರು ಸೇರಿದಂತೆ ೩೩ ಪೊಲೀಸರು ಗಾಯಗೊಂಡರು. ರಾಜ್ಯದ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳು ಈ ದಾಳಿಯನ್ನು ಪೂರ್ವಯೋಜಿತ ಎಂದು ಹೇಳಿದ್ದಾರೆ.

೩. ಗಲಭೆಕೋರರಿಗೆ ಮರಣದಂಡನೆ ವಿಧಿಸಿ !

ನಾಗಪುರ ಹಿಂಸಾಚಾರದ ಹಿಂದಿನ ಮುಖ್ಯ ರೂವಾರಿ ‘ಮೈನಾರಿಟಿ ಡೆಮೊಕ್ರೆಟಿಕ್‌ ಪಾರ್ಟಿ’ಯ ನಗರ ಅಧ್ಯಕ್ಷ ಫಹೀಮ್‌ ಖಾನ್‌ ಎಂದು ಪೊಲೀಸರು ಪ್ರಾಥಮಿಕ ವರದಿಯಲ್ಲಿ ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ಖಾನ್‌ನನ್ನು ಬಂಧಿಸಲಾಗಿದ್ದು, ಪೊಲೀಸ್‌ ಕಸ್ಟಡಿಯಲ್ಲಿ ಇರಿಸಲಾಗಿದೆ.

೪. ಅಂತಹ ದೇಶದ್ರೋಹಿಗಳಿಗೆ ಮರಣದಂಡನೆ ವಿಧಿಸಿ !

ಪಾಕಿಸ್ತಾನಕ್ಕಾಗಿ ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ ‘ಭಾರತ ಎಲೆಕ್ಟ್ರಾನಿಕ್ಸ್ ಲಿಮಿಟೆಡ್’ (ಬೆಲ್‌)ನ ದೀಪ್‌ ರಾಜ್‌ ಚಂದ್ರ ಎಂಬ ಸಿಬ್ಬಂದಿಯನ್ನು ಬಂಧಿಸಲಾಗಿದೆ.

೫. ಇಂತಹ ಸಂತ ರಾಜಕಾರಣಿಗಳು ಎಲ್ಲೆಡೆಯೂ ಬೇಕು !

ನನ್ನ ೩ ತಲೆಮಾರುಗಳು ಶ್ರೀ ರಾಮಜನ್ಮಭೂಮಿ ಆಂದೋಲನಕ್ಕೆ ಸಮರ್ಪಿತವಾಗಿದ್ದವು. ನಾವು ಅಧಿಕಾರಕ್ಕಾಗಿ ಬಂದಿಲ್ಲ.  ಶ್ರೀರಾಮ ಮಂದಿರಕ್ಕಾಗಿ ಅಧಿಕಾರ ಕಳೆದುಕೊಳ್ಳ ಬೇಕಾದರೂ ಯಾವುದೇ ಸಮಸ್ಯೆ ಇಲ್ಲ, ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಅಯೋಧ್ಯೆಯಲ್ಲಿ ಹೇಳಿಕೆ ನೀಡಿದ್ದಾರೆ.

೬. ಮತಾಂಧರನ್ನು ಬಿಟ್ಟು ಹಿಂದೂಗಳನ್ನು ಗಲ್ಲಿಗೇರಿಸುವ ಪ್ರಯತ್ನವನ್ನು ತಿಳಿಯಿರಿ !

ನ್ಯಾಶನಲಿಸ್ಟ್ ಕಾಂಗ್ರೆಸ್‌ ಪಾರ್ಟಿ (ಎನ್‌.ಸಿ.ಪಿ.) ವತಿಯಿಂದ ಆಯೋಜಿಸಲಾಗಿದ್ದ ಇಫ್ತಾರ್‌ ಕೂಟದಲ್ಲಿ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್‌ ಪವಾರ್‌ ಅವರು ಮುಸಲ್ಮಾನರಿಗೆ ಬೆದರಿಕೆ ಹಾಕುವ ಅಥವಾ ಕೋಮುವೈಷಮ್ಯ ಸೃಷ್ಟಿಸುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.