ಸನಾತನದ ಮೂವರು ಗುರುಗಳು ಅಂದರೆ, ಪರಾತ್ಪರ ಗುರು ಡಾ. ಆಠವಲೆ, ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಸೂಕ್ಷ್ಮದಲ್ಲಿನ ಅಲೌಕಿಕ, ವಿಶ್ವವ್ಯಾಪಕ ಮತ್ತು ಬುದ್ಧಿಗೆ ಮೀರಿಗೆ ಕಾರ್ಯ !

ಶ್ರೀ. ವಿನಾಯಕ ಶಾನಭಾಗ

‘ಪರಾತ್ಪರ ಗುರು ಡಾ. ಜಯಂತ ಬಾಳಾಜಿ ಆಠವಲೆಯವರ ಕೃಪೆಯಿಂದ ಸನಾತನ ಸಂಸ್ಥೆಯ ಗುರುಪರಂಪರೆಯಲ್ಲಿ ನಮ್ಮೆಲ್ಲ ಸಾಧಕರಿಗೆ ಪರಾತ್ಪರ ಗುರು ಡಾ. ಆಠವಲೆಯವರು ಗುರುಗಳೆಂದು ಮತ್ತು ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಅವರ ‘ಆಧ್ಯಾತ್ಮಿಕ ಉತ್ತರಾಧಿಕಾರಿ’ಗಳೆಂದು ಲಭಿಸಿದ್ದಾರೆ. ಈ ಮೂವರು ಗುರುಗಳು (ಪರಾತ್ಪರ ಗುರು ಡಾ. ಆಠವಲೆ, ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ) ಹೊರಗಿನಿಂದ ಬೇರೆಬೇರೆಯಾಗಿ ಕಾಣಿಸಿದರೂ ಅವರು ಒಂದೇ ಆಗಿರುವ (ಗುರುತತ್ತ್ವವು ಒಂದೇ ಆಗಿರುವ) ಅನುಭೂತಿಯನ್ನು ಇಂದಿನವರೆಗೆ ಸಾವಿರಾರು ಸಾಧಕರು ಪಡೆದಿದ್ದಾರೆ. ಸನಾತನದ ಮೂವರು ಗುರುಗಳು ಈಶ್ವರನ ಪ್ರೇರಣೆಯಿಂದ ಮನುಷ್ಯ ದೇಹದಲ್ಲಿದ್ದು ಕಾರ್ಯವನ್ನು ಮಾಡುತ್ತಿದ್ದಾರೆ. ಅವರು ತಮ್ಮ ಸ್ಥೂಲ ದೇಹದಿಂದ ಅನೇಕ ಸೇವೆಗಳನ್ನು ಮಾಡುತ್ತಿರುತ್ತಾರೆ; ಆದರೆ ಅವರ ಕಾರ್ಯವು ಕೇವಲ ಅವರ ಸ್ಥೂಲ ದೇಹಕಷ್ಟೇ ಸೀಮಿತವಾಗಿಲ್ಲ. ಸ್ಥೂಲ ದೇಹಕ್ಕಿಂತ ಎಷ್ಟೋ ಪಟ್ಟು ಹೆಚ್ಚು ಕಾರ್ಯವು ಸೂಕ್ಷ್ಮದಲ್ಲಿ ನಡೆದಿರುತ್ತದೆ. ಅವರ ಸೂಕ್ಷ್ಮದಲ್ಲಿನ ಕಾರ್ಯವು ಅಲೌಕಿಕ, ವಿಶ್ವವ್ಯಾಪಕ ಮತ್ತು ಬುದ್ಧಿಗೆ ಮೀರಿದೆ. ಅದನ್ನು ತಿಳಿದುಕೊಳ್ಳುವುದು ನಮಗೆ ಸಾಧ್ಯವಿಲ್ಲ, ಆದರೂ ಎಲ್ಲ ಕಡೆಗಿನ ಸಾಧಕರಿಗೆ ಮೂವರೂ ಗುರುಗಳ ಸೂಕ್ಷ್ಮದಲ್ಲಿನ ಅಗಾಧ ಕಾರ್ಯದ ಸ್ವಲ್ಪವಾದರೂ ಕಲ್ಪನೆ ಬರಬೇಕೆಂದು ಕೆಲವು ಅಂಶಗಳನ್ನು ಇಲ್ಲಿ ನೀಡಲಾಗಿದೆ. ಈ ಅಂಶಗಳನ್ನು ನನಗೆ ಗುರುದೇವರೇ ಸೂಚಿಸಿದ್ದರಿಂದ ಅವುಗಳನ್ನು ಅವರ ಚರಣಗಳಲ್ಲಿಯೇ ಅರ್ಪಿಸುತ್ತೇನೆ.

೧. ಸನಾತನದ ಮೂವರು ಗುರುಗಳ ಅಸ್ತಿತ್ವದಿಂದಲೇ ಸನಾತನ ಸಂಸ್ಥೆಯ ಕಾರ್ಯ ಮತ್ತು ಸಾಧಕರ ಸಾಧನೆ ನಡೆಯುತ್ತಿದೆ

ಪರಾತ್ಪರ ಗುರು ಡಾ. ಆಠವಲೆಯವರು ‘ಗುರುಕೃಪಾಯೋಗ’ ಈ ಗ್ರಂಥದಲ್ಲಿ ‘ಗುರುಗಳು ಹೇಗೆ ಕಾರ್ಯವನ್ನು ಮಾಡುತ್ತಾರೆ ?’ ಎಂಬುದರ ಬಗ್ಗೆ ವಿಸ್ತಾರವಾಗಿ ಬರೆದಿದ್ದಾರೆ. ಅದರಲ್ಲಿ ‘ಪರಾತ್ಪರ ಗುರುಗಳು ಕೇವಲ ಅಸ್ತಿತ್ವದಿಂದಲೇ ಕಾರ್ಯವನ್ನು ಮಾಡುತ್ತಾರೆ’, ಎಂದು ಬರೆಯಲಾಗಿದೆ. ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರಿಬ್ಬರೂ ಪರಾತ್ಪರ ಗುರು ಡಾಕ್ಟರರೊಂದಿಗೆ ಏಕರೂಪವಾಗಿದ್ದಾರೆ, ಆದುದರಿಂದ ಸನಾತನದ ಮೂವರು ಗುರುಗಳ ಅಸ್ತಿತ್ವದಿಂದಲೇ ಸನಾತನ ಸಂಸ್ಥೆಯ ಕಾರ್ಯ ಮತ್ತು ಸಾಧಕರ ಸಾಧನೆ ನಡೆದಿದೆ. ‘ಇಂದಿನವರೆಗೆ ಸನಾತನದ ಮೂವರು ಗುರುಗಳನ್ನು ಎಂದಿಗೂ ಭೇಟಿಯಾಗದ ಜಿಜ್ಞಾಸು ಅಥವಾ ಸಾಧಕರಿಗೆ ಕೇವಲ ಅವರ ಛಾಯಾಚಿತ್ರವನ್ನು ನೋಡಿಯೇ ಭಾವಜಾಗೃತವಾಗುವುದು, ಅಪರಿಚಿತ ವ್ಯಕ್ತಿ ಸಾಧನೆಯನ್ನು ಆರಂಭಿಸುವುದು, ಧರ್ಮಪ್ರೇಮಿಗಳಿಗೆ ಮತ್ತು ಹಿತಚಿಂತಕರಿಗೆ ಸನಾತನ ಸಂಸ್ಥೆಗೆ ಸಹಾಯ ಮಾಡಲು ಪ್ರೇರಣೆ ಸಿಗುವುದು, ಜಗತ್ತಿನಲ್ಲಿನ ಸಾವಿರಾರು ಸಾಧಕರಿಗೆ ಒಂದೇ ಸಮಯಕ್ಕೆ ದೈವೀ ಕಣಗಳು ಕಾಣಿಸುವುದು, ಅನೇಕ ಸಾಧಕರಿಗೆ ಧರ್ಮ ಅಥವಾ ಸಾಧನೆಯ ಬಗ್ಗೆ ಅಂತಃಪ್ರೇರಣೆಯಿಂದ ಲೇಖನಗಳನ್ನು ಬರೆಯಲು ಸಾಧ್ಯವಾಗುವುದು’, ಇದೆಲ್ಲವೂ ಕೇವಲ ಈ ಮೂರು ಜನ ಗುರುಗಳ ಅಸ್ತಿತ್ವದಿಂದಲೇ ನಡೆಯುತ್ತಿದೆ. ಮೂರು ಜನ ಗುರುಗಳ ಅಸ್ತಿತ್ವದಿಂದಾಗುವ ಕಾರ್ಯವು ಸೂಕ್ಷ್ಮಾತೀಸೂಕ್ಷ್ಮವಾಗಿದೆ. ಈ ಕಾರ್ಯವು ಅವರ ಅಸ್ತಿತ್ವದಿಂದ ಆಗುತ್ತದೆ, ಇಷ್ಟೇ ನಾವು ತಿಳಿದುಕೊಳ್ಳಬಲ್ಲೆವು; ಆದರೆ ‘ಅದು ಹೇಗೆ ಆಗುತ್ತದೆ’ ಎಂಬುದು ದೇವರಹಸ್ಯವಾಗಿದೆ, ಅಂದರೆ ಅದು ಅವತಾರಿ ಲೀಲೆಯಾಗಿದೆ !

೨. ಮೂವರು ಗುರುಗಳು ಸಾಧಕರಿಗೆ ಸಾಧನೆಗಾಗಿ ಪೂರಕ ವಾತಾವರಣ ನಿರ್ಮಿಸಿ ಕೊಡುವ ಕಾರ್ಯ ಮಾಡುತ್ತಿದ್ದಾರೆ

ಸನಾತನದ ಮೂವರು ಗುರುಗಳು ಸಾಧಕರ ಪ್ರಕೃತಿಗನುಸಾರ ಅವರಿಗೆ ಸಾಧನೆಯ ಮಾರ್ಗವನ್ನು ಹೇಳುತ್ತಾರೆ. ಇಷ್ಟೇ ಅಲ್ಲದೇ ಅವರು ಸಾಧಕರಿಗೆ ಸಾಧನೆ ಮಾಡಲು ಸ್ಥೂಲ ಮತ್ತು ಸೂಕ್ಷ್ಮದಿಂದ ಪೂರಕ ವಾತಾವರಣವನ್ನೂ ನಿರ್ಮಿಸುತ್ತಾರೆ.

೨ ಅ. ಗುರುಗಳು ಸ್ಥೂಲದಲ್ಲಿ ಮಾಡುತ್ತಿರುವ ಕಾರ್ಯ : ಸಾಧಕರ ಸಾಧನೆಗಾಗಿ ಪೂರಕ ವಾತಾವರಣವನ್ನು ಸೃಷ್ಟಿಸಲು ವಿವಿಧ ಆಶ್ರಮಗಳನ್ನು ನಿರ್ಮಿಸಿ ಅವರಿಗೆ ಸೇವೆಯ ಅವಕಾಶವನ್ನು ಲಭ್ಯ ಮಾಡಿಕೊಡುವುದು, ಸಂಸಾರದಲ್ಲಿದ್ದು ಸಾಧನೆಯನ್ನು ಮಾಡಲು ಅಧ್ಯಾತ್ಮಪ್ರಸಾರದ ಸೇವೆಯನ್ನು ಲಭ್ಯ ಮಾಡಿಕೊಡುವುದು ಇತ್ಯಾದಿ.

೨ ಆ. ಗುರುಗಳು ಸೂಕ್ಷ್ಮದಿಂದ ಮಾಡುತ್ತಿರುವ ಕಾರ್ಯ : ಆಶ್ರಮ ಮತ್ತು ಸಾಧಕರ ಮನೆಗಳಲ್ಲಿನ ಕೆಟ್ಟ ಶಕ್ತಿಗಳ ತೊಂದರೆಗಳನ್ನು ದೂರಗೊಳಿಸಲು, ಹಾಗೆಯೇ ಈ ತೊಂದರೆಗಳು ಒಂದು ಹಂತಕ್ಕಿಂತ ಮುಂದೆ ಹೆಚ್ಚಾಗದಂತೆ ನೋಡಿಕೊಳ್ಳುವುದು ಮತ್ತು ‘ಸಾಧಕರಿಗೆ ಸಹಿಸುವಷ್ಟೇ, ತೊಂದರೆ ಅವರಿಗೆ ಭೋಗಿಸಲು ಕೊಡುವುದು’ ಇತ್ಯಾದಿ.

೩. ಸನಾತನ ಹಿಂದೂ ಧರ್ಮದಂತೆಯೇ ಮೂವರೂ ಗುರುಗಳು ತತ್ತ್ವರೂಪದಿಂದ ಸೂಕ್ಷ್ಮ ಮತ್ತು ವ್ಯಾಪಕವಾಗಿರುವುದು

ಸನಾತನ ಸಂಸ್ಥೆಯ ಮೂವರು ಗುರುಗಳ ನಿಜಸ್ವರೂಪ ಮತ್ತು ‘ಸನಾತನ ಹಿಂದೂ ಧರ್ಮ’ ಇವುಗಳಲ್ಲಿ ಸಾಮ್ಯತೆ ಇದೆ. ನಿಜ ಹೇಳಬೇಕೆಂದರೆ ‘ಸನಾತನ ಹಿಂದೂ ಧರ್ಮ’ ಮತ್ತು ಮೂವರು ಗುರುಗಳು ಒಂದೇ ಆಗಿದ್ದಾರೆ. ಧರ್ಮವು ಸೂಕ್ಷ್ಮವಾಗಿದೆ ಮತ್ತು ವ್ಯಾಪಕವೂ ಆಗಿದೆ. ಅದರಂತೆ ಸನಾತನದ ಮೂವರೂ ಗುರುಗಳು ತತ್ತ್ವರೂಪದಿಂದ ಸೂಕ್ಷ್ಮ ಮತ್ತು ವ್ಯಾಪಕವಾಗಿದ್ದಾರೆ. ಪೃಥ್ವಿ, ಮನುಷ್ಯ ಇತ್ಯಾದಿ ಎಲ್ಲವೂ ಅವರಲ್ಲಿ ಸಮಾವೇಶಗೊಂಡಿವೆ.

೪. ಮೂವರು ಗುರುಗಳು ಸಾಧಕರನ್ನು ಅಡಚಣೆಗಳಿಂದ ಪಾರು ಮಾಡುವುದು

ಇಂದಿನವರೆಗೆ ಸಾಧಕರ ಸಾಧನೆಯಲ್ಲಿ ಅನೇಕ ಅಡಚಣೆಗಳು ಬಂದವು; ಆದರೆ ಮೂರು ಗುರುಗಳಿಗೆ ಅದರ ಬಗ್ಗೆ ಎಂದಿಗೂ ಒತ್ತಡವಾಗಲಿಲ್ಲ. ಬದಲಾಗಿ ಇಂದಿನವರೆಗಿನ ಎಲ್ಲ ಅಡಚಣೆಗಳಿಂದ ಶ್ರೀ ಗುರುಗಳು ಸಾಧಕರನ್ನು ಹೊರಗೆ ತೆಗೆದಿದ್ದಾರೆ.

೫. ಹಿಂದೂ ರಾಷ್ಟ್ರದ-ಸ್ಥಾಪನೆಯ ವಿಶ್ವವ್ಯಾಪಕ ಕಾರ್ಯವನ್ನು ಮಾಡುವ ಮೂವರು ಗುರುಗಳು !

ಯಾರು ವಿಶ್ವವ್ಯಾಪಕವಾಗಿದ್ದಾರೆಯೋ, ಅವರೇ ವಿಶ್ವವ್ಯಾಪಕ ಕಾರ್ಯವನ್ನು ಮಾಡ ಬಲ್ಲರು. ಧರ್ಮ, ರಾಷ್ಟ್ರ ಮತ್ತು ಮನುಕುಲದ ಹಿತಕ್ಕಾಗಿ ‘ಹಿಂದೂ ರಾಷ್ಟ್ರ’ದ ಸ್ಥಾಪನೆಯಂತಹ ವಿಶ್ವವ್ಯಾಪಕ ಸಂಕಲ್ಪವನ್ನು ಮಾಡುವ ಪರಾತ್ಪರ ಗುರು ಡಾ. ಆಠವಲೆಯವರು ಮತ್ತು ಅವರ ಈ ವಿಶ್ವವ್ಯಾಪಕ ಕಾರ್ಯವನ್ನು ಮುಂದೆ ನಡೆಸುವ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರ ಚರಣಗಳಲ್ಲಿ ನಾವೆಲ್ಲ ಸಾಧಕರು ನತಮಸ್ತಕರಾಗಿದ್ದೇವೆ !

೬. ಸತ್ತ್ವಗುಣಿ ಆಚಾರ-ವಿಚಾರಗಳಿರುವ ಸಾಧಕರನ್ನು ರೂಪಿಸಲು ಸೂಕ್ಷ್ಮದಿಂದ ಕಾರ್ಯನಿರತರಾಗಿರುವ ಸನಾತನದ ಮೂವರು ಗುರುಗಳು !

ಧರ್ಮವು ಆಚಾರ-ವಿಚಾರಗಳಿಗೆ ಸಂಬಂಧಿಸಿದೆ. ಜನರ ಆಚಾರ-ವಿಚಾರಗಳು ಎಷ್ಟು ಶುದ್ಧವಾಗಿರುತ್ತವೆಯೋ, ಅಷ್ಟು ಸೃಷ್ಟಿಯು ಆನಂದವಾಗಿರುತ್ತದೆ. ಇಂದು ಆಚಾರ ಮತ್ತು ವಿಚಾರ ಇವೆರಡೂ ಭ್ರಷ್ಟವಾಗಿವೆ. ಸತ್ತ್ವಗುಣಿ ಆಚಾರ ಮತ್ತು ವಿಚಾರಗಳಿರುವ ಸಾಧಕರನ್ನು ನಿರ್ಮಿಸಿ ಸಮಾಜದೆದುರು ಆದರ್ಶವನ್ನಿಡಲು ಸನಾತನದ ಮೂವರು ಗುರುಗಳು ಸೂಕ್ಷ್ಮದಿಂದ ಕಾರ್ಯನಿರತರಾಗಿದ್ದಾರೆ.

೬. ಮೂರು ಜನ ಗುರುಗಳು ದೈವೀ ಶಕ್ತಿಗಳಿಗೆ ಸರಿಸಮಾನವಾಗಿರುವ ಬಲಾಢ್ಯ ಕೆಟ್ಟ ಶಕ್ತಿಗಳ ಬಲವನ್ನು ಕಡಿಮೆ ಮಾಡುವುದು

೬ ಅ ಬ್ರಹ್ಮಾಂಡದಲ್ಲಿನ ದೈವೀ ಶಕ್ತಿಗಳಿಗೆ ಸರಿಸಮಾನವಾಗಿರುವ ದೊಡ್ಡ ಕೆಟ್ಟ ಶಕ್ತಿಗಳೂ ಕಾರ್ಯನಿರತವಾಗಿವೆ : ಬ್ರಹ್ಮಾಂಡವನ್ನು ನಡೆಸುವ ಕಾರ್ಯವನ್ನು ಈಶ್ವರನು ದೇವತೆಗಳಿಗೆ ನೀಡಿದ್ದಾನೆ. ಈ ದೈವೀ ಶಕ್ತಿಗಳು ಪೂರ್ಣ ಬ್ರಹ್ಮಾಂಡವನ್ನು ನಡೆಸುತ್ತಿರುತ್ತವೆ. ನಾವು ಯಾವ ಪೃಥ್ವಿಯ ಮೇಲೆ ವಾಸಿಸುತ್ತೇವೆಯೋ, ಆ ಪೃಥ್ವಿಯನ್ನೂ ದೈವೀ ಶಕ್ತಿಗಳೇ ನಡೆಸುತ್ತವೆ; ಆದರೆ ಮನುಷ್ಯನಿಗೆ ತನ್ನ ಅಹಂಕಾರದಿಂದಾಗಿ ಅದು ಗಮನಕ್ಕೆ ಬರುವುದಿಲ್ಲ. ಯಾವ ರೀತಿ ಬ್ರಹ್ಮಾಂಡದಲ್ಲಿ ದೈವೀ ಶಕ್ತಿಗಳಿವೆಯೋ, ಅದೇ ರೀತಿ ಈ ದೈವೀ ಶಕ್ತಿಗಳಿಗೆ ಸಮಾನವಾಗಿರುವ ದೊಡ್ಡ ದೊಡ್ಡ ಕೆಟ್ಟ ಶಕ್ತಿಗಳೂ ಇವೆ. ‘ಅತಲ, ವಿತಲ, ಸುತಲ, ತಲಾತಲ, ಮಹಾತಲ, ರಸಾತಳ ಮತ್ತು ಪಾತಾಳ, ಇಂತಹ ಏಳು ಪಾತಾಳಗಳಿವೆ. ಈ ಏಳು ಪಾತಾಳಗಳಲ್ಲಿ ಕೆಟ್ಟ ಶಕ್ತಿಗಳು ವಾಸಿಸುತ್ತವೆ.

೭. ಮೂವರು ಗುರುಗಳ ಕೃಪಾಶೀರ್ವಾದದಿಂದ ಸಾಧಕರ ಆಧ್ಯಾತ್ಮಿಕ ಉನ್ನತಿಯಾಗುವುದು

ಸದ್ಯ ಭೀಕರ ಕಲಿಯುಗವಿದೆ. ಆದುದರಿಂದ ಮಾಯೆ ಪ್ರಬಲವಾಗಿದೆ. ಇದು ಅಹಂಕಾರದ ಯುಗವಾಗಿದೆ. ಈ ಸ್ಥಿತಿಯಲ್ಲಿ ‘ಸಾಮಾನ್ಯ ಸಾಧಕನು ಸಾಧನೆಯನ್ನು ಮಾಡುವುದು ಮತ್ತು ಅವನ ಆಧ್ಯಾತ್ಮಿಕ ಮಟ್ಟ ವರ್ಷಕ್ಕೆ ಶೇ. ೧ ರಷ್ಟು ಹೆಚ್ಚಾಗುವುದೂ ಕಠಿಣವಾಗಿದೆ. ಯಾವಾಗ ಸನಾತನದ ಯಾವುದಾದರೊಬ್ಬ ಸಾಧಕನ ಆಧ್ಯಾತ್ಮಿಕ ಮಟ್ಟ ವರ್ಷಕ್ಕೆ ಶೇ. ೧ ರಷ್ಟು ಹೆಚ್ಚಾಗುವುದೋ, ಆಗ ಅದರಲ್ಲಿನ ಅರ್ಧ ಶೇಕಡಾದಷ್ಟು ಪ್ರಗತಿಯ ಕಾರಣವೆಂದರೆ ಆ ಸಾಧಕನ ಪ್ರಯತ್ನ ಮತ್ತು ಉಳಿದ ಅರ್ಧ ಶೇಕಡಾದಷ್ಟು ಪ್ರಗತಿಯ ಕಾರಣವೆಂದರೆ ಈ ಮೂವರು ಗುರುಗಳ ಕೃಪಾಶೀರ್ವಾದವಾಗಿದೆ. ಶ್ರೀ ಗುರುಗಳ ಕೃಪಾಶೀರ್ವಾದ ಪ್ರಾಪ್ತವಾಗದ ಹೊರತು ಜೀವವು ಜನ್ಮ-ಮೃತ್ಯುವಿನ ಚಕ್ರದಿಂದ ಹೊರಗೆ ಬರಲು ಸಾಧ್ಯವಿಲ್ಲ.

೮. ಎಲ್ಲವನ್ನೂ ತಾವೇ ಮಾಡಿ ಏನೂ ಮಾಡದಂತಿರುವ ಸನಾತನದ ಮೂವರು ಗುರುಗಳು !

ಇಂದಿನವರೆಗೆ ಗುರುದೇವರು ಸಾಧಕರ ಆಧ್ಯಾತ್ಮಿಕ ಪ್ರಗತಿಯ ಎಲ್ಲ ಶ್ರೇಯಸ್ಸನ್ನು ಸಾಧಕರಿಗೇ ಕೊಟ್ಟಿದ್ದಾರೆ. ನಾವೆಲ್ಲ ಸಾಧಕರು ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರಿಗೆ, ನಿಮ್ಮಿಂದಾಗಿ ನಮ್ಮ ಪ್ರಗತಿ ಆಯಿತು ಎಂದು ಹೇಳಿದರೆ ಅವರು ಸಹ, ಗುರುದೇವರಂತೆ ನಿಮ್ಮ ಪ್ರಯತ್ನಗಳಿಂದಲೇ ಈಶ್ವರನು ಫಲವನ್ನು ನೀಡಿದ್ದಾನೆ ಎಂದು ಹೇಳುತ್ತಾರೆ. ‘ಎಲ್ಲವನ್ನೂ ಮೂವರು ಗುರುಗಳೇ ಮಾಡುತ್ತಾರೆ; ಆದರೆ ಅವರು ಮಾತ್ರ ಏನೂ ಮಾಡದಂತಿರುತ್ತಾರೆ, ಇದೊಂದು ಸಿಹಿ ಸತ್ಯವಾಗಿದೆ’ !

ಸನಾತನದ ಮೂವರು ಗುರುಗಳೆಂದರೆ ಸನಾತನದ ಪ್ರತಿಯೊಬ್ಬ ಸಾಧಕನಲ್ಲಿನ ಆಧ್ಯಾತ್ಮಿಕ ಊರ್ಜೆಯಾಗಿದ್ದಾರೆ. ಸನಾತನದ ಮೂವರು ಗುರುಗಳೆಂದರೆ ಸಾಧಕನ ಒಳಗೆ ಸೂಕ್ಷ್ಮದಿಂದ ವಾಸಿಸುವ ಚಿರಂತನ ‘ಸತ್-ಚಿತ್-ಆನಂದ’ ! ಇಂತಹ ‘ಸತ್-ಚಿತ್-ಆನಂದ’ಸ್ವರೂಪರಾಗಿರುವ ಸನಾತನದ ಮೂವರು ಗುರುಗಳ ಚರಣಗಳಲ್ಲಿ ನಮ್ಮೆಲ್ಲ ಸಾಧಕರ ಕೋಟಿ ಕೋಟಿ ನಮಸ್ಕಾರಗಳು !

೯. ಪ್ರಾರ್ಥನೆ

‘ಗುರುದೇವಾ, ಇದನ್ನು ಬರೆಯುವ ಕ್ಷಮತೆ ನನ್ನಲ್ಲಿಲ್ಲ. ಈ ಮೊದಲು ‘ಹೀಗೇನಾದರೂ ಬರೆಯೋಣ’, ಎಂಬ ವಿಚಾರವೂ ನನ್ನ ಮನಸ್ಸಿನಲ್ಲಿ ಬಂದಿರಲಿಲ್ಲ. ತಾವು ಸ್ಫೂರ್ತಿರೂಪದಲ್ಲಿ ನೀಡಿದ ವಿಚಾರಗಳನ್ನು ಶಬ್ದರೂಪಗಳಲ್ಲಿ ನೀವೇ ನನ್ನ ಮಾಧ್ಯಮದಿಂದ ಬರೆದುಕೊಂಡಿದ್ದೀರಿ. ಇದನ್ನು ಬರೆಯುವಾಗ ‘ಮನಸ್ಸಿಗೆ ಏನು ಅರಿವಾಗುತ್ತಿತ್ತೋ, ಅದನ್ನು ಶಬ್ದಗಳಲ್ಲಿ ಮಂಡಿಸುವುದು ಅಸಾಧ್ಯವಾಗಿದೆ’, ಇದೂ ನನಗೆ ಕಲಿಯಲು ಸಿಕ್ಕಿತು.

ಸದ್ಗುರುಚರಣಾರ್ಪಣಮಸ್ತು

– ಶ್ರೀ. ವಿನಾಯಕ ಶಾನಭಾಗ, (ಆಧ್ಯಾತ್ಮಿಕ ಮಟ್ಟ ಶೇ.೬೬) ದೆಹಲಿ (೨೭.೭.೨೦೨೧)

ಕೆಟ್ಟ ಶಕ್ತಿ : ವಾತಾವರಣದಲ್ಲಿ ಉತ್ತಮ ಹಾಗೂ ಕೆಟ್ಟ ಎರಡೂ ಶಕ್ತಿಗಳು ಕಾರ್ಯನಿರತವಾಗಿರುತ್ತವೆ. ಒಳ್ಳೆಯ ಶಕ್ತಿ ಒಳ್ಳೆಯ ಕಾರ್ಯಕ್ಕಾಗಿ ಮಾನವನಿಗೆ ಸಹಾಯ ಮಾಡುತ್ತವೆ ಹಾಗೂ ಕೆಟ್ಟ ಶಕ್ತಿಗಳು ಅವನಿಗೆ ತೊಂದರೆ ಕೊಡುತ್ತವೆ. ಹಿಂದಿನ ಕಾಲದಲ್ಲಿ ಋಷಿಮುನಿಗಳ ಯಜ್ಞಗಳಲ್ಲಿ ರಾಕ್ಷಸರು ವಿಘ್ನಗಳನ್ನು ತಂದಿರುವ ಅನೇಕ ಕಥೆಗಳು ವೇದ-ಪುರಾಣಗಳಲ್ಲಿ ಇರುತ್ತವೆ. ‘ಅಥರ್ವವೇದ’ದಲ್ಲಿ ಅನೇಕ ಕಡೆಗಳಲ್ಲಿ ಕೆಟ್ಟ ಶಕ್ತಿ, ಉದಾ. ಅಸುರರು, ರಾಕ್ಷಸರು, ಪಿಶಾಚಿ, ಇವರ ಪ್ರತಿಬಂಧದ ಮಂತ್ರಗಳನ್ನು ಹೇಳಲಾಗಿದೆ. ಕೆಟ್ಟ ಶಕ್ತಿಗಳ ತೊಂದರೆಯ ನಿವಾರಣೆಗಾಗಿ ವಿವಿಧ ಆಧ್ಯಾತ್ಮಿಕ ಉಪಾಯಗಳನ್ನು ವೇದ ಮತ್ತು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ.