ಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯಿಂದ ಕೇಂದ್ರ ಸರಕಾರ ಮತ್ತು ಗಡಿ ಸುರಕ್ಷಾ ಪಡೆಯ ಮೇಲೆ ಹುರುಳಿಲ್ಲದ ಆರೋಪ
ಕೋಲಕಾತಾ (ಬಂಗಾಲ) – ಬಾಂಗ್ಲಾದೇಶಕ್ಕೆ ಅಂಟಿಕೊಂಡಿರುವ ಗಡಿ ರಕ್ಷಣೆ ಮಾಡುವ ಗಡಿ ಭದ್ರತಾ ಪಡೆಯು ವಿವಿಧ ಭಾಗದಿಂದ ಬಂಗಾಲದಲ್ಲಿ ನುಸುಳಲು ಅನುಮತಿ ನೀಡುತ್ತಿದ್ದಾರೆ. ಬಾಂಗ್ಲಾದೇಶಿ ಭಯೋತ್ಪಾದಕರು ಬಂಗಾಲಕ್ಕೆ ಬರುತ್ತಾರೆ. ಇದು ಕೇಂದ್ರದ ಷಡ್ಯಂತ್ರವಾಗಿದೆ. ಇದು ಬಂಗಾಲ ಅಸ್ಥಿರಗೊಳಿಸಲಿರುವ ಷಡ್ಯಂತ್ರವಾಗಿದೆ ಎಂದು ಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇವರು ಆರೋಪಿಸಿದ್ದಾರೆ.
ತೃಣಮೂಲ ಕಾಂಗ್ರೆಸ್ಸಿನ ಕಾರ್ಯದರ್ಶಿ ಮತ್ತು ಮಮತಾ ಬ್ಯಾನರ್ಜಿ ಇವರ ಸೋದರ ಸಂಬಂಧಿಯಾಗಿರುವ ಸಂಸದ ಅಭಿಷೇಕ ಬ್ಯಾನರ್ಜಿ ಇವರು ಕೂಡ ಕೇಂದ್ರ ಸರಕಾರದ ಮೇಲೆ ಆರೋಪ ಹೊರಿಸಿದ್ದಾರೆ. ಅವರು, ನೆರೆಯ ದೇಶದಲ್ಲಿ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದೌರ್ಜನ್ಯದ ಸಂದರ್ಭದಲ್ಲಿ ರಾಜ್ಯದಲ್ಲಿನ ಭಾಜಪದ ನಾಯಕರು ಕೇಂದ್ರದ ನೇತೃತ್ವಕ್ಕೆ ಪ್ರಶ್ನಿಸಬೇಕಿತ್ತು. ಪ್ರತಿಯೊಂದು ಪ್ರಕರಣದಲ್ಲಿ ತೃಣಮೂಲ ಕಾಂಗ್ರೆಸ್ ಸರಕಾರದ ತಪ್ಪು ಹುಡುಕುವವರು ಮತ್ತು ಪ್ರತಿಭಟನೆ ನಡೆಸುವ ರಾಜ್ಯದಲ್ಲಿನ ಭಾಜಪದ ನಾಯಕರು ಬಾಂಗ್ಲಾದೇಶದಲ್ಲಿನ ಹಿಂದೂಗಳು ಮತ್ತು ಇತರ ಜನಾಂಗದ ಮೇಲೆ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ಹಾಗೂ ಕೇಂದ್ರ ಸರಕಾರದ ನಿಷ್ಕ್ರಿಯ ಪ್ರತಿಕ್ರಿಯೆ ಕುರಿತು ಮಾತನಾಡುವುದಿಲ್ಲ’, ಎಂದು ಹೇಳಿದರು. ಬಾಂಗ್ಲಾದೇಶದಲ್ಲಿನ ಪರಿಸ್ಥಿತಿಯ ಕುರಿತು ತೃಣಮೂಲ ಕಾಂಗ್ರೆಸ್ ಮತ್ತು ರಾಜ್ಯ ಸರಕಾರ ಕೇಂದ್ರ ತೆಗೆದುಕೊಂಡಿರುವ ನಿರ್ಣಯವನ್ನು ಪಾಲಿಸುವರು.
ಸಂಪಾದಕೀಯ ನಿಲುವುಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇವರು ಈ ಸಂದರ್ಭದಲ್ಲಿ ಸಾಕ್ಷಿ ನೀಡುವ ಆವಶ್ಯಕತೆ ಇದೆ. ಅವರ ಬಳಿ ಏನಾದರೂ ಸಾಕ್ಷಿ ಇದ್ದರೆ, ಜನರು ಸರಕಾರ ಮತ್ತು ಗಡಿ ಸುರಕ್ಷಾ ಪಡೆಗೆ ಪ್ರಶ್ನಿಸಬಹುದು; ಆದರೆ ಬಾಂಗ್ಲಾದೇಶಿ ನುಸುಳುಕೋರರಗೆ ಬಂಗಾಲದಲ್ಲಿ ಸ್ವತಂತ್ರವಾಗಿ ಓಡಾಡಲು ಬಿಟ್ಟಿರುವ ಮಮತಾ ಬ್ಯಾನರ್ಜಿ ಇವರು ಈ ಆರೋಪವನ್ನು ಯಾರಾದರು ಗಂಭೀರವಾಗಿ ಪರಿಗಣಿಸುವರು ಎಂದು ಅನಿಸುವುದಿಲ್ಲ ! |