ಶ್ರೀಕೃಷ್ಣಜನ್ಮಭೂಮಿ ಅತಿಕ್ರಮಣದಿಂದ ಮುಕ್ತಗೊಳಿಸುವ ಗರ್ಜನೆ
ಮುಂಬಯಿ – ಯಾವುದು ನಮ್ಮದಿದೆ, ಅದು ನಮಗೆ ದೊರೆಯಲೇಬೇಕು ಮತ್ತು ಅದರ ಮೇಲೆ ನಮ್ಮ ಅಧಿಕಾರ ಇದೆ. ಇಲ್ಲಿಯ ಇಂಚು ಇಂಚು ಭೂಮಿ ನಮ್ಮದಾಗಿದೆ. ಅಯೋಧ್ಯ ಪಡೆದೆವು ಮತ್ತು ಈಗ ಕೃಷ್ಣ ಭೂಮಿ ಕೂಡ ಪಡೆಯುವ, ಎಂದು ಮೀನುಗಾರಿಕೆ ಇಲಾಖೆ ಮತ್ತು ಬಂದರು ಸಚಿವ ನಿತೇಶ್ ರಾಣಿ ಇವರು ವಿಶ್ವಾಸ ವ್ಯಕ್ತಪಡಿಸಿದರು. ‘ಶ್ರೀಕೃಷ್ಣಜನ್ಮಭೂಮಿ ಸಂಘರ್ಷ ನ್ಯಾಸ’ದ ವತಿಯಿಂದ ರಾಷ್ಟ್ರೀಯ ಅಧ್ಯಕ್ಷ ಶ್ರೀ. ದಿನೇಶ್ ಶರ್ಮಾ ಇವರ ನೇತೃತ್ವದಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಅವರು ಈ ವಿಶ್ವಾಸ ವ್ಯಕ್ತಪಡಿಸಿದರು. ಈ ಸಮಯದಲ್ಲಿ ಗೋರಕ್ಷಣೆಗಾಗಿ ಕಾರ್ಯನಿರತ ಗೋರಕ್ಷಕರ ಪಾದ ಪೂಜೆ ಮಾಡಲಾಯಿತು. ಇದರಲ್ಲಿ ಕೊಲ್ಲಾಪುರದ ಗೋರಕ್ಷಕ ಶ್ರೀ. ನಿತೇಶ ಓಝಾ ಸಹಭಾಗಿ ಆಗಿದ್ದರು.
Ayodhya has been won, now we will also get the land of Shri Krishna! – Maharashtra Minister @NiteshNRane‘s Call to make Shri Krishna Janmabhoomi free from encroachment
नीतेश राणे I श्री कृष्ण जन्मभूमि@Krishnjanmsthan #ReclaimTemples pic.twitter.com/BTRj1RyUkU
— Sanatan Prabhat (@SanatanPrabhat) January 2, 2025
ಈ ಸಮಯದಲ್ಲಿ ಪ್ರದೇಶಾಧ್ಯಕ್ಷ ಶ್ರೀ. ಶಂಕರ ವರಾಡಾಕರ ಇವರು ತಮ್ಮ ಮನೋಗತ ವ್ಯಕ್ತಪಡಿಸಿದರು. ಗೋರಕ್ಷಕ ಕಾನೂನಿನ ಕೆಲಸ ಮಾಡುತ್ತಿದ್ದಾರೆ. ಆದ್ದರಿಂದ ಗೋರಕ್ಷಕರಿಗೆ ರಕ್ಷಣೆ ಸಿಗಬೇಕು ಮತ್ತು ಸರಕಾರ ಕೂಡ ಅವರಿಗೆ ಬೆಂಬಲ ನೀಡಬೇಕು.
ಇದಕ್ಕಾಗಿ ನಾವು ಬೆಂಬೆತ್ತುವೆವು, ಎಂದು ಭಾಜಪದ ವಕ್ತಾರರು ಮತ್ತು ಪ್ರದೇಶ ಉಪಾಧ್ಯಕ್ಷ ಶ್ರೀ. ಮಾಧವ ಭಂಡಾರಿ ಇವರು ಪ್ರತಿಪಾದಿಸಿದರು. ಈ ಸಮಯದಲ್ಲಿ ಶ್ರೀ. ಪರಾಗ ಫಡಣಿಸ ಸಹಿತ ಮಹಾರಾಷ್ಟ್ರದ ವಿವಿಧ ಜಿಲ್ಲೆಗಳಿಂದ ಗೋರಕ್ಷಕರು ಮತ್ತು ನ್ಯಾಸದ ಪದಾಧಿಕಾರಿಗಳು ಉಪಸ್ಥಿತರಿದ್ದರು.