ಇಚ್ಛಾಮರಣ (ಆತ್ಮಹತ್ಯೆ) ಅಥವಾ ದಯಾಮರಣ, ಪ್ರಾಯೋಪಗಮನ ಮತ್ತು ಸಂತರು ಸಮಾಧಿಯನ್ನು ತೆಗೆದುಕೊಳ್ಳುವುದು

ಪರಾತ್ಪರ ಗುರು ಡಾ. ಆಠವಲೆ

೧. ಸಾಮಾನ್ಯ ವ್ಯಕ್ತಿಯು ಆತ್ಮಹತ್ಯೆ ಮಾಡಿಕೊಳ್ಳುವುದು

೧ ಅ. ಇಚ್ಛಾಮರಣ (ಆತ್ಮಹತ್ಯೆ) : ‘ಆತ್ಮಹತ್ಯೆ’ ಎಂದರೆ ನೈಸರ್ಗಿಕ ಮೃತ್ಯುವನ್ನು ಸ್ವೀಕರಿಸದೇ ತಾನು ಸ್ವತಃ ಹತ್ಯೆ ಮಾಡಿಕೊಳ್ಳುವುದು. ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ವ್ಯಕ್ತಿಯು ಅವನ ಇಚ್ಛೆಗನುಸಾರ ಆತ್ಮಹತ್ಯೆ ಮಾಡುವುದು, ಇದಕ್ಕೆ ‘ಇಚ್ಛಾಮರಣ’ ಎನ್ನುತ್ತಾರೆ. ಈ ರೀತಿಯ ಮರಣವನ್ನು ವ್ಯಕ್ತಿಯು ಐಹಿಕ ಜೀವನದಲ್ಲಿನ ಸಮಸ್ಯೆಗಳಿಗೆ ಬೇಸತ್ತು ಸ್ವೀಕರಿಸುತ್ತಾನೆ.

೧ ಆ. ದಯಾಮರಣ : ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ರೋಗಿಯು ನಿರ್ಧಾರವನ್ನು ತೆಗೆದುಕೊಳ್ಳಲು ಅಸಮರ್ಥನಾಗಿರುವಾಗ ಕುಟುಂಬದವರ ಇಚ್ಛೆಗನುಸಾರ ಡಾಕ್ಟರರು ತಂದಿರುವ ಮೃತ್ಯುವಿಗೆ ‘ದಯಾಮರಣ’ ಎನ್ನುತ್ತಾರೆ. ಈ ರೀತಿ ಮೃತರಾದವವರಿಗೆ ಮೃತ್ಯು ನಂತರ ಸದ್ಗತಿ ಸಿಗುವುದಿಲ್ಲ; ಆದ್ದರಿಂದ ಧರ್ಮಶಾಸ್ತ್ರವು ಆತ್ಮಹತ್ಯೆಯನ್ನು ಬಹಿಷ್ಕರಿಸಿದೆ.

೧ ಇ. ಇಚ್ಛಾಮರಣ ಅಥವಾ ದಯಾಮರಣದ ಆಧ್ಯಾತ್ಮಿಕ ದೃಷ್ಟಿಕೋನದಿಂದ ವಿಚಾರಗಳು : ಜಗತ್ತಿನಾದ್ಯಂತ ಈ ಕುರಿತು ವಿಭಿನ್ನ ಕಾನೂನುಗಳಿವೆ. ಭಾರತದಲ್ಲಿ ಮಾತ್ರ ಈ ಕುರಿತು ಯಾವುದೇ ಕಾನೂನು ಇಲ್ಲದಿದ್ದರಿಂದ ಕೆಲವು ಮಾನವತಾವಾದಿಗಳು ‘ರೋಗಿಗೆ ಇಚ್ಛಾಮರಣ ಅಥವಾ ದಯಾಮರಣ ಇವುಗಳ ಅಧಿಕಾರವನ್ನು ನೀಡುವ ಕಾನೂನು ಮಾಡಬೇಕು’, ಎಂಬ ಬೇಡಿಕೆಯನ್ನು ಮಾಡುತ್ತಿದ್ದಾರೆ. ಅಧ್ಯಾತ್ಮಿಕ ದೃಷ್ಟಿಯಿಂದ ಈ ಅಂಶದ ವಿಚಾರವನ್ನು ಮಾಡುವುದು ಅವಶ್ಯಕವಾಗಿದೆ.

೧. ವ್ಯಕ್ತಿಯ ಮರಣವು ಅವನ ಜನ್ಮದಂತೆ ಪ್ರಾರಬ್ಧಕ್ಕನುಸಾರವಾಗಿರುತ್ತದೆ. ‘ಅದು ಯಾವಾಗ ಬರಬೇಕು’, ಎಂಬುದನ್ನು ವಿಧಿ ನಿರ್ಧರಿಸುತ್ತದೆ. ಹೀಗಿರುವಾಗ ರೋಗಿಯ ಅಥವಾ ಅವನ ಕುಟುಂಬದವರ ಇಚ್ಛೆಗನುಸಾರ ರೋಗಿಯ ಮರಣವನ್ನು ತರುವುದು, ಇದು ಈಶ್ವರೀ ಆಯೋಜನೆಯಲ್ಲಿ ಹಸ್ತಕ್ಷೇಪ ಮಾಡುವಂತಾಗಿದೆ. ಮಂದ ಪ್ರಾರಬ್ಧವಿದ್ದರೆ ಮಾತ್ರ ಇದು ಸಾಧ್ಯವಾಗುತ್ತದೆ.

೨. ಪ್ರಾರಬ್ಧವನ್ನು ಕ್ರಿಯಮಾಣದಿಂದ ಪರಿಹರಿಸಬಹುದು; ಆದರೆ ರೋಗಿಯ ಮೃತ್ಯುವಿನ ಬಗ್ಗೆ ಅವನು ಅಥವಾ ಅವನ ಕುಟುಂಬದವರು ನಿರ್ಧರಿಸುವುದು ಅಯೋಗ್ಯವಾಗಿದೆ. ಆದರೆ  ಆಧ್ಯಾತ್ಮಿಕ ದೃಷ್ಟಿಯಿಂದ ಉನ್ನತರು, ಅಂದರೆ ಸಂತರು ಹಾಗೆ ಮಾಡಲು ಹೇಳಿದರೆ ಅವಶ್ಯ ಮಾಡಬೇಕು; ಏಕೆಂದರೆ ಸಂತರಲ್ಲಿ ಅವನ ಪ್ರಾರಬ್ಧವನ್ನು ನಾಶಗೊಳಿಸುವ ಕ್ಷಮತೆ ಇರುತ್ತದೆ.

೨. ಪ್ರಾಯೋಪಗಮನ ಮಾಡುವುದು

ಪ್ರಾಯೋಪಗಮನ ಅಂದರೆ ಆಹಾರ, ನೀರು ಮತ್ತು ಔಷಧಗಳನ್ನು ತ್ಯಜಿಸುವುದರಿಂದಾಗುವ ಮರಣ. ಕೆಲವು ಸಾತ್ತ್ವಿಕ ವ್ಯಕ್ತಿಗಳು ಜೀವನ ಸಾರ್ಥಕಗೊಂಡ ನಂತರ ಪ್ರಾಯೋಪಗಮನ ಮಾಡುತ್ತಾರೆ. ಈ ರೀತಿ ಮಾಡುವವರಿಗೆ ನಿರಾಶೆ ಆಗಿರದೇ ಜೀವನವನ್ನು ಸಾರ್ಥಕಗೊಳಿಸಿದ ಬಗ್ಗೆ ಆನಂದವಿರುತ್ತದೆ. ಆದ್ದರಿಂದ ಅವರಿಗೂ ಮೃತ್ಯುವಿನ ನಂತರ ಸದ್ಗತಿ ಸಿಗುತ್ತದೆ.

೩. ಸಂತರು ಸಮಾಧಿಯನ್ನು ತೆಗೆದುಕೊಳ್ಳುವುದು, ಇದು ಆತ್ಮಹತ್ಯೆ ಆಗದಿರುವುದು

ಸಂತರು ಸಮಾಧಿಯನ್ನು ತೆಗೆದುಕೊಳ್ಳುವುದು ಇದಕ್ಕೆ ‘ಆತ್ಮಹತ್ಯೆ’ ಎನ್ನುವುದಿಲ್ಲ. ಸಂತರು ಸಮಾಧಿಯನ್ನು ತೆಗೆದುಕೊಳ್ಳುವ ಹಿಂದಿನ ಕಾರಣವು ಐಹಿಕವಿರುವುದಿಲ್ಲ. ಪೃಥ್ವಿಯ ಮೇಲಿನ ತಮ್ಮ ಕಾರ್ಯವನ್ನು ಮುಕ್ತಾಯಗೊಳಿಸಿದ ನಂತರ ಸಂತರು ಈಶ್ವರೇಚ್ಛೆಯಿಂದ ಸಮಾಧಿಯನ್ನು ತೆಗೆದುಕೊಳ್ಳುತ್ತಾರೆ. ಸಂತರು ಸಮಾಧಿಯನ್ನು ತೆಗೆದುಕೊಳ್ಳುವಾಗ ಅವರಿಂದ ಪ್ರಕ್ಷೇಪಿತವಾಗುವ ಚೈತನ್ಯದಿಂದ ಅಲ್ಲಿ ಉಪಸ್ಥಿತರಿರುವ ಸಾವಿರಾರು ಭಕ್ತಾದಿಗಳಿಗೆ ಲಾಭವಾಗುತ್ತದೆ. ಆತ್ಮಹತ್ಯೆ ಮಾಡಿಕೊಳ್ಳುವವರ ಬಗ್ಗೆ ಹೀಗೆ ಆಗುವುದಿಲ್ಲ, ಆಗ ‘ರಜ-ತಮದ ಪ್ರಕ್ಷೇಪಣೆಯಾಗಿ ಇತರರಿಗೂ ಹಾನಿಯಾಗುತ್ತದೆ.’

– (ಪರಾತ್ಪರ ಗುರು) ಡಾ. ಆಠವಲೆ