ಪರಾತ್ಪರ ಗುರು ಡಾ. ಆಠವಲೆಯವರ ಹಿಂದೂ ರಾಷ್ಟ್ರ ಸ್ಥಾಪನೆಯ ಈಶ್ವರೀ ಕಾರ್ಯ !’ ಈ ಬಗ್ಗೆ ವಿಶೇಷ ಸಂವಾದ !
ಪರಾತ್ಪರ ಗುರು ಡಾ. ಆಠವಲೆಯವರು ವೈದ್ಯಕೀಯ ಕ್ಷೇತ್ರದಲ್ಲಿ ಉನ್ನತ ಶಿಕ್ಷಣವನ್ನು ಪಡೆದಿದ್ದಾರೆ. ಅವರು ಬಯಸಿದ್ದಲ್ಲಿ ಬಹಳ ಪ್ರಖ್ಯಾತಿ ಮತ್ತು ಹಣವನ್ನು ಗಳಿಸಬಹುದಿತ್ತು; ಆದರೆ ಅವರು ಹಿಂದೂಗಳ ಮೇಲಿನ ಅನ್ಯಾಯವನ್ನು ದೂರ ಮಾಡಲು ‘ಹಿಂದೂ ರಾಷ್ಟ್ರದ ಸ್ಥಾಪನೆ’ಯ ನಿರ್ಧಾರವನ್ನು ಮಾಡಿದರು. ಪರಾತ್ಪರ ಗುರು ಡಾ. ಆಠವಲೆಯವರು ಸ್ಥಾಪಿಸಿದ ‘ಸನಾತನ ಸಂಸ್ಥೆ’ಯು ಸದ್ಯ ವಿಶ್ವವ್ಯಾಪಿಯಾಗುತ್ತಿದೆ. ಅವರ ವಿಚಾರಗಳಿಂದ ಪ್ರೇರಣೆ ಪಡೆದು 2002 ನೇ ಇಸವಿಯಲ್ಲಿ ‘ಹಿಂದೂ ಜನಜಾಗೃತಿ ಸಮಿತಿ’ಯ ಸ್ಥಾಪನೆಯಾಯಿತು. ಸದ್ಯ ಸಮಿತಿಯ ಮಾಧ್ಯಮದಿಂದ ದೊಡ್ಡ ಪ್ರಮಾಣದಲ್ಲಿ ಹಿಂದೂ ಸಂಘಟನೆಯಾಗುತ್ತಿದೆ. ಶ್ರೀಕೃಷ್ಣನ ವಚನಕ್ಕನುಸಾರ ಕಲಿಯುಗದಲ್ಲಿ ಧರ್ಮಕ್ಕೆ ಬಂದ ಗ್ಲಾನಿಯನ್ನು ದೂರ ಮಾಡಲು ಶ್ರೀಕೃಷ್ಣನ ರೂಪದಲ್ಲಿ ಸಾಕ್ಷಾತ್ ಪರಾತ್ಪರ ಗುರು ಡಾ. ಆಠವಲೆಯವರು ಜನ್ಮ ತಾಳಿದ್ದಾರೆ. ಆದುದರಿಂದ ಅವರ ಮಾರ್ಗದರ್ಶನಕ್ಕನುಸಾರ ‘ಹಿಂದೂ ರಾಷ್ಟ್ರದ ಸ್ಥಾಪನೆ’ ಬೇಗನೆ ಆಗುವುದು ಎಂದು ನಮಗೆ ಖಚಿತವಿದೆ, ಎಂಬ ಭಾವಪೂರ್ಣ ಹೇಳಿಕೆಯನ್ನು ಝಾರಖಂಡ ರಾಜ್ಯದ ‘ತರುಣ ಹಿಂದೂ’ದ ಅಧ್ಯಕ್ಷ ಶ್ರೀ. ನೀಲ ಮಾಧವ ದಾಸ ಇವರು ನೀಡಿದರು. ಅವರು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ‘ಪರಾತ್ಪರ ಗುರು ಡಾ. ಆಠವಲೆಯವರ ಹಿಂದೂ ರಾಷ್ಟ್ರ ಸ್ಥಾಪನೆಯ ಈಶ್ವರೀ ಕಾರ್ಯ !’ ಎಂಬ ಬಗ್ಗೆ ಆಯೋಜಿಸಿದ ‘ಆನ್‌ಲೈನ್’ ವಿಶೇಷ ಸಂವಾದದಲ್ಲಿ ಮಾತನಾಡುತ್ತಿದ್ದರು.
ಈ ಸಮಯದಲ್ಲಿ ರತ್ನಾಗಿರಿ ಜಿಲ್ಲೆಯ ವಾರಕರಿ ಸಂಪ್ರದಾಯದ ಹ.ಭ.ಪ. ಬಾಳಕೃಷ್ಣ ಬಾಯಿತ್ ಮಹಾರಾಜರು ಮಾತನಾಡುತ್ತಾ, ‘ಪರಾತ್ಪರ ಗುರು ಡಾ. ಆಠವಲೆಯವರು ಮಂಡಿಸಿದ ಹಿಂದೂ ರಾಷ್ಟ್ರದ ಸಂಕಲ್ಪನೆ ಪ್ರತ್ಯಕ್ಷದಲ್ಲಿ ಅವತರಿಸುತ್ತಿದೆ. ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗವು ದೊರಕುವುದು, ಕಾಶ್ಮೀರದಲ್ಲಿ 370 ಕಲಮ್ ರದ್ದಾಗುವುದು ಈ ಘಟನೆಗಳು ಅಂದರೆ ಹಿಂದೂ ರಾಷ್ಟ್ರದ ನಾಂದಿಯೇ ಆಗಿದೆ. ಸಂತರು ನುಡಿದ ಭವಿಷ್ಯವಾಣಿ ಈಗ ಸತ್ಯವೆಂದು ಸಿದ್ಧವಾಗುತ್ತಿದೆ. ಸ್ವಭಾವದೋಷ ನಿರ್ಮೂಲನೆಯ ಮೂಲಕ ಆನಂದಪ್ರಾಪ್ತಿಯನ್ನು ಹೇಗೆ ಮಾಡಿಕೊಳ್ಳಬೇಕು, ಎಂಬುದು ಸನಾತನ ಸಂಸ್ಥೆಯ ‘ಸ್ವಭಾವದೋಷ ನಿರ್ಮೂಲನೆ’ ಮತ್ತು ‘ಅಹಂ ನಿರ್ಮೂಲನೆ’ ಈ ಗ್ರಂಥಗಳಿಂದ ತಿಳಿಯಿತು. ಈ ಗ್ರಂಥಗಳ ಮಾಧ್ಯಮದಿಂದ ನಿಜವಾದ ಅರ್ಥದಲ್ಲಿ ಅಧ್ಯಾತ್ಮದ ಪರಿಚಯವಾಯಿತು’, ಎಂದು ಹೇಳಿದರು.
ಈ ಸಮಯದಲ್ಲಿ ‘ಸನಾತನ ಸಂಸ್ಥೆ’ಯ ರಾಷ್ಟ್ರೀಯ ವಕ್ತಾರರಾದ ಶ್ರೀ. ಚೇತನ ರಾಜಹಂಸ ಇವರು ಮಾತನಾಡುತ್ತಾ, ಹಿಂದೂ ರಾಷ್ಟ್ರದ ಸ್ಥಾಪನೆಯಿಂದ ಸಂಪೂರ್ಣ ಜಗತ್ತಿನ ಕಲ್ಯಾಣವಾಗಲಿದೆ. ಸನಾತನ ಸಂಸ್ಥೆಯ ಸಂಸ್ಥಾಪಕ ಪರಾತ್ಪರ ಗುರು ಡಾ. ಆಠವಲೆಯವರು ತಮ್ಮ ಗುರು ಪ.ಪೂ. ಭಕ್ತರಾಜ ಮಹಾರಾಜರ ಆಜ್ಞೆಗನುಸಾರ ಹಿಂದೂ ರಾಷ್ಟ್ರದ ಸ್ಥಾಪನೆಯ ಮಹಾನ ಕಾರ್ಯವನ್ನು ಆರಂಭಿಸಿದ್ದಾರೆ. ಧರ್ಮಸಂಸ್ಥಾಪನೆ ಇದು ದೊಡ್ಡ ಶಿವಧನಸ್ಸು ಆಗಿದೆ ಮತ್ತು ಈ ಕಾರ್ಯವನ್ನು ಯಾರಾದರೊಬ್ಬ ಮಹಾಪುರುಷ ಅಥವಾ ಪುಣ್ಯಾತ್ಮನೇ ಮಾಡಬಹುದು. ಹಿಂದೂ ರಾಷ್ಟ್ರದ ಸ್ಥಾಪನೆಯ ಕಾರ್ಯವನ್ನು ಹಿಂದೂಗಳು ತಟಸ್ಥರಾಗಿದ್ದು ನೋಡದೇ ಅದರಲ್ಲಿ ತಮ್ಮ ಕ್ಷಮತೆ ಮತ್ತು ಕೌಶಲ್ಯಕ್ಕನುಸಾರ ಪ್ರತ್ಯಕ್ಷ ಪಾಲ್ಗೊಳ್ಳಬೇಕು. ಹಿಂದೂ ರಾಷ್ಟ್ರದ ಸ್ಥಾಪನೆಯ ಕಾರ್ಯದಲ್ಲಿ ಪಾಲ್ಗೊಳ್ಳುವುದು ಇದು ಸಂಬಂಧಿತ ಹಿಂದೂವಿನ ಪುರುಷಾರ್ಥವಾಗಿದೆ ಮತ್ತು ಇದರಿಂದ ಅವನ ಪಾರಮಾರ್ಥಿಕ ಉನ್ನತಿಯು ನಿಶ್ಚಿತವಾಗಿಯೇ ಆಗುಲಿರುವುದು’, ಎಂದು ಹೇಳಿದರು.
ಈ ಸಮಯದಲ್ಲಿ ಕೊಲ್ಹಾಪುರದ ಪ್ರಖ್ಯಾತ ಹಿಂದುತ್ವನಿಷ್ಠ ಶ್ರೀ. ಶರದ ಮಾಳಿ ಇವರು ಮಾತನಾಡುತ್ತಾ, ನಾನು ಕಳೆದ 12-13 ವರ್ಷಗಳ ಕಾಲ ಸನಾತನ ಸಂಸ್ಥೆಯ ಧರ್ಮಸಭೆ, ರಾಷ್ಟ್ರ ಮತ್ತು ಧರ್ಮ ರಕ್ಷಣೆಗೆ ಸಂಬಂಧಿಸಿದಂತೆ ಸರಕಾರಕ್ಕೆ ಮನವಿಯನ್ನು ನೀಡುವುದು ಮುಂತಾದ ಕಾರ್ಯದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದೇನೆ. ಸಂಸ್ಥೆಯ ಸಂಸ್ಥಾಪಕರಾದ ಪರಾತ್ಪರ ಗುರು ಡಾ. ಜಯಂತ ಆಠವಲೆಯವರು ಹಿಂದೂ ಧರ್ಮದ ಮಹಾನತೆಯನ್ನು ಎಲ್ಲರಿಗೂ ಹೇಳುತ್ತಿದ್ದಾರೆ. ಹಿಂದೂ ರಾಷ್ಟ್ರದ ನಿರ್ಮಿತಿಯಾಗಬೇಕು, ಎಂದು ಎಲ್ಲ ಹಿಂದೂಗಳ ಪ್ರಾರ್ಥನೆಯಾಗಿದೆ’, ಎಂದು ಹೇಳಿದರು.