ಧರ್ಮಕಾರ್ಯಕ್ಕಾಗಿ ಸಿಗುವ ಅರ್ಪಣೆಯನ್ನು ಅಪಹರಿಸುವವರಿಂದ ಎಚ್ಚರದಿಂದಿರಿ ಹಾಗೂ ಇಂತಹ ಕೃತ್ಯಗಳ ಬಗ್ಗೆ ಹಿಂದೂ ಜನಜಾಗೃತಿ ಸಮಿತಿಗೆ ಕೂಡಲೇ ತಿಳಿಸಿ !

ಹಿಂದೂ ಜನಜಾಗೃತಿ ಸಮಿತಿಯ ಅರ್ಪಣೆದಾರರಿಗೆ ಕರೆ

ಮಹಾರಾಷ್ಟ್ರದ ಸಾಂಗಲೀ ಜಿಲ್ಲೆಯ ಓರ್ವ ಧರ್ಮಪ್ರೇಮಿಯು ಹಿಂದೂ ಜನಜಾಗೃತಿ ಸಮಿತಿಯ ಧರ್ಮ ಕಾರ್ಯಕ್ಕಾಗಿ ಅರ್ಪಣೆಯೆಂದು ಉರಣ-ಇಸ್ಲಾಂಮಪೂರ ಇಲ್ಲಿನ ವಿಠ್ಠಲ ಕುಂಭಾರ ಇವರಲ್ಲಿ ೫ ಸಾವಿರದ ೫೧ ರೂಪಾಯಿಗಳನ್ನು ಕೊಟ್ಟಿದ್ದರು. ಸಂತೋಷ ಕುಂಭಾರ ಇವರು ಈ ಅರ್ಪಣೆಯ ನಿಧಿಯಿಂದ ಕೇವಲ ೧೦೧ ರೂಪಾಯಿಗಳನ್ನು ಸಮಿತಿಗೆ ಕೊಟ್ಟು ಇನ್ನುಳಿದ ನಿಧಿಯನ್ನು ಅಪಹರಿಸಿರುವುದು ತಿಳಿದು ಬಂದಿದೆ. ಇದಲ್ಲದೆ ಸಂತೋಷ ಕುಂಭಾರ ಇವರು ಸಮಿತಿಯ ಕಾರ್ಯಕ್ಕಾಗಿ ಧಾನ್ಯ ಬೇಕು ಎಂದು ಹೇಳಿ ಕೆಲವರಿಂದ ಅದನ್ನು ಪಡೆದರು ಮತ್ತು ಪ್ರತ್ಯಕ್ಷದಲ್ಲಿ ಅದನ್ನು ತಮ್ಮ ಬಳಿಯಲ್ಲಿ ಇಟ್ಟುಕೊಂಡಿರುವುದು ಕೆಲವರ ದೂರಿನಿಂದ ಗಮನಕ್ಕೆ ಬಂದಿದೆ. ಸಂತೋಷ ಕುಂಭಾರ ಇವರ ಬಗ್ಗೆ ಯಾರಿಗಾದರೂ ಇಂತಹ ಅನುಭವಗಳು ಬಂದಿದ್ದರೆ ಅವರು ಅದರ ಬಗೆಗಿನ ವಿವರವಾದ ಮಾಹಿತಿಯನ್ನು ಇಲ್ಲಿ ನೀಡಿದ ವಿಳಾಸಕ್ಕೆ ಕಳುಹಿಸಬೇಕು.

ಅರ್ಪಣೆದಾರರಿಗೆ ಮನವಿ !

ಹಿಂದೂ ಜನಜಾಗೃತಿ ಸಮಿತಿಯ ಧರ್ಮಕಾರ್ಯದ ದುರ್ಲಾಭ ಪಡೆಯುವುದಕ್ಕಾಗಿ ಕೆಲವರು ಸಮಿತಿಯ ಕಾರ್ಯದಲ್ಲಿ ಭಾಗವಹಿಸಲು ಪ್ರಯತ್ನಿಸುತ್ತಾರೆ. ಅವರು ಅರ್ಪಣೆದಾರರ ಪರಿಚಯ ಮಾಡಿಕೊಂಡು ಆತ್ಮೀಯತೆಯನ್ನು ಬೆಳೆಸಿ ಅದರ ದುರುಪಯೋಗವನ್ನು ಮಾಡುತ್ತಿರುತ್ತಾರೆ. ಸಮಿತಿಯ ಹೆಸರನ್ನು ದುರುಪಯೋಗಿಸುವವರನ್ನು ತಡೆಗಟ್ಟುವುದಕ್ಕಾಗಿ ಅರ್ಪಣೆದಾರರು ಅರ್ಪಣೆಯನ್ನು ಕೇಳುವುದಕ್ಕಾಗಿ ಬರುವವರ ಬಳಿ ಅರ್ಪಣೆಯ ಮುದ್ರಿತ ಪಾವತಿಪುಸ್ತಕವು ಇದೆಯೋ ಇಲ್ಲವೋ ಎಂಬುದನ್ನು ನೋಡಿ ಅರ್ಪಣೆಯನ್ನು ಕೊಡಬೇಕು ಮತ್ತು ಅವರಿಂದ ಅರ್ಪಣೆಯ ಪಾವತಿಯನ್ನು ತಪ್ಪದೇ ತೆಗೆದುಕೊಳ್ಳಬೇಕು. ಅರ್ಪಣೆಯನ್ನು ಕೇಳುವುದಕ್ಕಾಗಿ ಬರುವ ವ್ಯಕ್ತಿಯ ಬಗ್ಗೆ ಏನಾದರೂ ಸಂದೇಹ ಬಂದರೆ ತಮಗೆ ಪರಿಚಯವಿರುವ ಸ್ಥಳೀಯ ಸಮಿತಿ ಸಮನ್ವಯಕರನ್ನು ಸಂಪರ್ಕಿಸಬೇಕು.

ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕರ್ತರಿಗೆ ಸೂಚನೆಗಳು

ಧರ್ಮಕಾರ್ಯಕ್ಕಾಗಿ ಧರ್ಮಪ್ರೇಮಿಗಳು ಅರ್ಪಣೆಯನ್ನು ನೀಡಿದ ನಂತರ ಅವರಿಗೆ ಅದರ ಅಧಿಕೃತ ಪಾವತಿಯನ್ನು ಕೊಡಬೇಕು. ಅದೇ ರೀತಿಯಲ್ಲಿ ಸಮಿತಿಯು ನಿಗದಿಪಡಿಸಿದ ಕಾರ್ಯಪದ್ಧತಿಯನ್ನು ಚಾಚುತಪ್ಪದೇ ಪಾಲಿಸಬೇಕು. ಧರ್ಮಪ್ರೇಮಿಗಳು ಧರ್ಮಕಾರ್ಯಕ್ಕಾಗಿ ಅರ್ಪಣೆಯೆಂದು ಕೊಟ್ಟ ನಿಧಿ ಅಥವಾ ವಸ್ತುಗಳನ್ನು ಯಾರಾದರೂ ದುರುಪಯೋಗಿಸಿಕೊಳ್ಳುತ್ತಿರುವುದು ಗಮನಕ್ಕೆ ಬಂದರೆ ಅದರ ಬಗ್ಗೆ ಕೆಳಗಿನ ವಿಳಾಸಕ್ಕೆ ತಿಳಿಸಬೇಕು.

ಶ್ರೀ. ಗೌತಮ ಗಡೇಕರ, ವ್ಯವಸ್ಥಾಪಕೀಯ ವಿಶ್ವಸ್ಥರು, ಹಿಂದೂ ಜನಜಾಗೃತಿ ಸಮಿತಿ, ‘ಮಧು ಸ್ಮೃತಿ’, ಸತ್ಯನಾರಾಯಣ ದೇವಸ್ಥಾನದ ಹತ್ತಿರ, ಫೋಂಡಾ, ಗೋವಾ. ಪಿನ್ – ೪೦೩ ೪೦೧

ಸಂಪರ್ಕ ಕ್ರಮಾಂಕ : ೭೭೩೮೨೩೩೩೩೩