ಹಿಂದೂಗಳು ತಮ್ಮ ಧರ್ಮ ಮತ್ತು ರಾಷ್ಟ್ರದ ಮೇಲೆ ಅಭಿಮಾನವನ್ನಿಟ್ಟು ಸಂಘಟಿತರಾಗಬೇಕು ! – ಶ್ರೀ. ಅಶೋಕ ನೆಗಿನಾಳ, ಸಂಸ್ಥಾಪಕರು, ಆಜಾದ್ ಯುವ ಸೇನೆ, ಸಿಂದಗಿ

ವಿಜಯಪುರದಲ್ಲಿ ಅರಕೇರಿಯಲ್ಲಿ ಹಿಂದೂ ಜನಜಾಗೃತಿ ಸಮಿತಿಯಿಂದ ಹಿಂದೂ ರಾಷ್ಟ್ರ ಜಾಗೃತಿ ಸಭೆ

(ಎಡದಿಂದ ದೀಪಪ್ರಜ್ವಲನೆ ಮಾಡುತ್ತಿರುವ ಶ್ರೀ. ಅಶೋಕ ನೆಗಿನಾಳ ಮತ್ತು ಶ್ರೀ. ವೆಂಕಟರಮಣ ನಾಯ್ಕ)

ವಿಜಯಪುರ – ‘ಈಗ ಹಿಂದೂ ಸಮಾಜವು ಜಾತಿ ಆಧಾರದ ಮೇಲೆ ವಿಭಜಿಸಲ್ಪಟ್ಟಿದೆ. ಆದ್ದರಿಂದ ಜನರಿಗೆ ಹಿಂದುತ್ವದ ಮೇಲೆ ಅಭಿಮಾನ ಕಡಿಮೆ ಆಗಿದೆ. ಹಿಂದೂಗಳು ತಮ್ಮ ಧರ್ಮ ಮತ್ತು ರಾಷ್ಟ್ರದ ಮೇಲೆ ಅಭಿಮಾನವನ್ನಿಟ್ಟು ಸಂಘಟಿತರಾದರೆ ಮಾತ್ರ ರಾಷ್ಟ್ರ ಮತ್ತು ಧರ್ಮ ರಕ್ಷಣೆಯಾಗುತ್ತದೆ. ಅದಕ್ಕಾಗಿ ಎಲ್ಲಾ ಹಿಂದೂಗಳು ಸಂಘಟಿತರಾಗಿ ರಾಷ್ಟ್ರ- ಧರ್ಮ ಕಾರ್ಯದಲ್ಲಿ ಕೈ ಜೋಡಿಸಿ ಎಂದು ಆಜಾದ್ ಯುವ ಸೇನೆಯ ಸಂಸ್ಥಾಪಕರಾದ ಶ್ರೀ. ಅಶೋಕ ನೆಗಿನಾಳ ಇವರು ಕರೆ ನೀಡಿದರು. ಅವರು ಹಿಂದೂ ಜನಜಾಗೃತಿ ಸಮಿತಿಯಿಂದ ಆಯೋಜಿಸಿದ್ದ ಹಿಂದೂ ರಾಷ್ಟ್ರಜಾಗೃತಿ ಸಭೆಯಲ್ಲಿ ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಸಮನ್ವಯಕರಾದ ಶೇ. ೬೧ ರಷ್ಟು ಆಧ್ಯಾತ್ಮಿಕ ಮಟ್ಟದ ಶ್ರೀ. ವೆಂಕಟರಮಣ ನಾಯ್ಕ ಇವರು ಮಾರ್ಗದರ್ಶನ ಮಾಡಿದರು. ಈ ಸಭೆಗೆ ೧೬೦ ಜನರು ಉಪಸ್ಥಿತರಿದ್ದರು.

ಗಮನಾರ್ಹ ಅಂಶಗಳು

೧. ಗ್ರಾಮದ ಶ್ರೀ ಆದಿಶಕ್ತಿ ಯುವ ಸೇನಾ ಸಮಿತಿಯ ಸದಸ್ಯರು ಮತ್ತು ಯುವಕರು ಪೂರ್ಣ ಜವಾಬ್ದಾರಿ ತೆಗೆದುಕೊಂಡು ಇಡೀ ಸಭೆಯ ಆಯೋಜನೆ ಹಾಗೂ ಪ್ರಸಾರ ಮಾಡಿದರು.

೨. ಆರು ದೇವಸ್ಥಾನಗಳಲ್ಲಿ ೨೦ ಧರ್ಮಶಿಕ್ಷಣ ಫಲಕಗಳನ್ನು ಹಾಕುವ ಬೇಡಿಕೆ ಬಂದಿತು.

ಕಾರೇಹಳ್ಳಿಯಲ್ಲಿ ನಡೆದ ಹಿಂದೂ ರಾಷ್ಟ್ರಜಾಗೃತಿ ಸಭೆ ಪ್ರತಿಯೊಬ್ಬರೂ ಧರ್ಮಶಿಕ್ಷಣವನ್ನು ಪಡೆಯಬೇಕಿದೆ – ನ್ಯಾಯವಾದಿ ಸುಬ್ರಮಣ್ಯ, ತರೀಕೆರೆ, ಶಿವಮೊಗ್ಗ

ಶಿವಮೊಗ್ಗ – ‘ಇಂದು ಪ್ರತಿಯೊಬ್ಬ ಹಿಂದೂಗಳು ಧರ್ಮಾಚರಣೆ ಮಾಡಿದರೆ ನಮ್ಮ ರಕ್ಷಣೆ ಆಗುತ್ತದೆ. ಪ್ರತಿಯೊಬ್ಬರೂ ಧರ್ಮಶಿಕ್ಷಣ ಪಡೆದು ತಮ್ಮ ಮಕ್ಕಳಿಗೂ ಧರ್ಮಶಿಕ್ಷಣ ಕಲಿಸಿ, ಎಂದು ತರೀಕೆರೆಯ ನ್ಯಾಯವಾದಿಗಳಾದ ಶ್ರೀ. ಸುಬ್ರಮಣ್ಯ ಇವರು ಕರೆ ನೀಡಿದರು. ಅವರು ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಭದ್ರಾವತಿ ತಾಲೂಕಿನ ಕಾರೇಹಳ್ಳಿಯ ಶ್ರೀ ಹುಚ್ಚನ ದಾಸಪ್ಪ ದೇವಸ್ಥಾನ ಆವರಣದಲ್ಲಿ ಏಪ್ರಿಲ್ ೧೦ ರಂದು ನಡೆದ ಹಿಂದೂ ರಾಷ್ಟ್ರಜಾಗೃತಿ ಸಭೆಯಲ್ಲಿ ಮಾತನಾಡುತ್ತಿದ್ದರು. ಈ ವೇಳೆ ಸನಾತನ ಸಂಸ್ಥೆಯ ಸೌ. ಸೌಮ್ಯ ಮೊಗೇರ್ ಹಾಗೂ ಹಿಂದೂ ಜನಜಾಗೃತಿ ಸಮಿತಿಯ ಸಮನ್ವಯಕರಾದ ಶೇ. ೬೫ ರಷ್ಟು ಆಧ್ಯಾತ್ಮಿಕ ಮಟ್ಟದ ಶ್ರೀ. ವಿಜಯ ರೇವಣ್ಕರ್ ಇವರು ಮಾರ್ಗದರ್ಶನ ಮಾಡಿದರು. ಈ ವೇಳೆ ೧೧೦ ಕ್ಕೂ ಹೆಚ್ಚು ಧರ್ಮಪ್ರೇಮಿಗಳು ಉಪಸ್ಥಿತರಿದ್ದರು.

ಗಮನಾರ್ಹ ಅಂಶಗಳು

೧. ಕಾರ್ಯಕ್ರಮದ ನಡುವೆ ಮಳೆ ಬಂದಾಗ ಪಕ್ಕದ ದೇವಸ್ಥಾನದಲ್ಲಿ ಸಭೆಯನ್ನು ಮಾಡಲಾಯಿತು. ಆಗ  ಹೆಚ್ಚಿನ ಮಹಿಳೆಯರು ಸಹಿತ ಅನೇಕ ಧರ್ಮಪ್ರೇಮಿಗಳು ಉಪಸ್ಥಿತರಿದ್ದರು.

೨. ಸಭೆಯ ಪ್ರಸಾರವನ್ನು ಕಾರೇಹಳ್ಳಿಯ ಧರ್ಮಾಭಿಮಾನಿಗಳೇ ಮಾಡಿದ್ದರು.

೩. ಧರ್ಮಶಿಕ್ಷಣ ವರ್ಗ, ಬಾಲಸಂಸ್ಕಾರ ವರ್ಗ, ಸ್ವರಕ್ಷಣಾ ತರಬೇತಿ ವರ್ಗದ ಬೇಡಿಕೆ ನೀಡಿದರು.