ಪ್ರಸಾರದಲ್ಲಿನ ಮತ್ತು ಸನಾತನದ ಆಶ್ರಮಗಳಲ್ಲಿನ ಸಾಧಕರಿಗಾಗಿ ಸೂಚನೆ !
‘ಪ್ರಸಾರದಲ್ಲಿ, ಹಾಗೆಯೇ ಸನಾತನದ ಆಶ್ರಮಗಳಲ್ಲಿ ವಿವಿಧ ಕಾರ್ಯಕ್ರಮಗಳು ಅಥವಾ ಉಪಕ್ರಮಗಳು, ಉದಾ. ಸಂತರ ಸನ್ಮಾನ ಸಮಾರಂಭ, ಗ್ರಂಥಪ್ರಕಾಶನ ಸಮಾರಂಭ, ‘ಸನಾತನ ಪ್ರಭಾತ’ದ ನಿಯತಕಾಲಿಕೆಗಳ ವರ್ಧಂತ್ಯುತ್ಸವ ಸಮಾರಂಭಗಳು ಮುಂತಾದವುಗಳು ಆಗುತ್ತಿರುತ್ತವೆ. ಈ ಕಾರ್ಯಕ್ರಮಗಳ ಸಮಯದಲ್ಲಿ ಅನೇಕ ಸಾಧಕರು ವೇದಿಕೆಯ ಮೇಲೆ ಹೋಗಿ ತಮ್ಮ ಅನುಭವಕಥನ, ಹಾಗೆಯೇ ಕಲಿಯಲು ಸಿಕ್ಕಿದ ಅಂಶಗಳನ್ನು ಹೇಳುತ್ತಾರೆ. ವೇದಿಕೆಯ ಮೇಲೆ ಹೋಗುವಾಗ ಸಾಧಕರು ಮುಂದಿನ ಅಂಶಗಳನ್ನು ಗಮನದಲ್ಲಿಡಬೇಕು.
೧. ಸಾಧಕರು ವೇದಿಕೆಯ ಮೇಲಿನ ‘ಪೊಡಿಯಮ್’ನ ಹತ್ತಿರ ನಿಂತು ವೇದಿಕೆಯ ಮೇಲೆ ಆಸೀನರಾಗಿರುವ ಸಂತರು ಮತ್ತು ಗಣ್ಯರಿಗೆ ಕೈ ಜೋಡಿಸಿ ಎಲ್ಲರಿಗೂ ಒಟ್ಟಿಗೆ ನಮಸ್ಕಾರವನ್ನು ಮಾಡಬೇಕು.
೨. ಸಂತರಿಗೆ ಮತ್ತು ಗಣ್ಯರಿಗೆ ನಮಸ್ಕಾರವನ್ನು ಮಾಡುವಾಗ ಸಾಧಕರು ಎದುರಿಗೆ ಕುಳಿತಿರುವ ಶ್ರೋತೃಗಳಿಗೆ, ಸಾಧಕರಿಗೆ ಮುಂತಾದವರಿಗೆ ನಮಸ್ಕಾರವನ್ನು ಮಾಡಬೇಕು ಅನಂತರ ತಮ್ಮ ಅನುಭವವನ್ನು ಹೇಳಲು ಆರಂಭಿಸಬೇಕು.
೩. ನಮ್ಮ ಮಾತು ಮುಗಿದ ನಂತರ ಕೆಳಗೆ ಹೋಗುವ ಮೊದಲು ಸಾಧಕರು ಮತ್ತೊಮ್ಮೆ ಮೇಲಿನಂತೆ ಸಂತರು, ಗಣ್ಯರು ಮತ್ತು ಶ್ರೋತೃಗಳಿಗೆ ನಮಸ್ಕಾರ ಮಾಡಬೇಕು.’
– ಶ್ರೀಸತ್‌ಶಕ್ತಿ (ಸೌ.) ಬಿಂದಾ ನಿಲೇಶ ಸಿಂಗಬಾಳ, ಸನಾತನ ಆಶ್ರಮ, ರಾಮನಾಥಿ, ಗೋವಾ. (೧೫.೩.೨೦೨೨)