‘ಸೃಷ್ಟಿಯ ನಿರ್ಮಿತಿ ಏಕಾಯಿತು ? ಅದು ಹೇಗೆ ಸಿದ್ಧವಾಯಿತು ?’, ಎಂದು ಜಿಜ್ಞಾಸುಗಳಿಗೆ ಪ್ರಶ್ನೆ ಮೂಡು ತ್ತದೆ. ಭಗವಂತನ ಕೃಪೆಯಿಂದ ಆ ಬಗ್ಗೆ ನನಗೆ ಸೂಕ್ಷ್ಮದಿಂದ ಜ್ಞಾನ ಪ್ರಾಪ್ತವಾಯಿತು. ಅದನ್ನು ಮುಂದೆ ಕೊಟ್ಟಿದ್ದೇನೆ.
೧. ಈಶ್ವರನಿಗೆ ಸೃಷ್ಟಿಯ ನಿರ್ಮಿತಿಯ ಇಚ್ಛೆ ಇಲ್ಲದಿರುವ ಹಿಂದಿನ ಕಾರಣ
ಈಶ್ವರನು ಅನಂತದಲ್ಲಿ ಅಸ್ತಿತ್ವರೂಪದಲ್ಲಿ ವ್ಯಾಪಿಸಿದ್ದಾನೆ. ಆದುದರಿಂದ ಅವನು ಯಾವುದೇ ನಿರ್ದಿಷ್ಟ ಕಾರ್ಯವನ್ನು ಹೊಂದಿಲ್ಲ. ಆದುದರಿಂದ ಈಶ್ವರನಿಗೆ ತನ್ನನ್ನು ಅನೇಕ ರೂಪಗಳಲ್ಲಿ ನೋಡುವ ಅಥವಾ ಸೃಷ್ಟಿಯ ಉತ್ಪತ್ತಿಯ ಇಚ್ಛೆಯಾಗುವುದಿಲ್ಲ.
೨. ಸೃಷ್ಟಿ ನಿರ್ಮಿತಿಯ ಮುಖ್ಯ ಕಾರಣ
ಅನಾದಿ ಪ್ರಕೃತಿಯ ಗುಣಧರ್ಮಗಳಿಗನುಸಾರ ಸೃಷ್ಟಿಯ ‘ಉತ್ಪತ್ತಿ’, ‘ಸ್ಥಿತಿ’ ಮತ್ತು ‘ಲಯ’ ಆಗುತ್ತಿರುತ್ತದೆ. ಅದರ ವಿವರವಾದ ವಿಶ್ಲೇಷಣೆಯನ್ನು ಮುಂದೆ ಕೊಡಲಾಗಿದೆ.
೩. ಸೃಷ್ಟಿಯ ನಿರ್ಮಿತಿಯ ಹಂತಗಳು
೩ ಅ. ಪರಮೇಶ್ವನು ‘ನಿರ್ಗುಣ’ನಿದ್ದಾನೆ. ಅನಂತರ ಈಶ್ವರನಿದ್ದಾನೆ. ಈಶ್ವರನ ಎರಡು ಅಂಗಗಳಿವೆ ಒಂದು ‘ಸಗುಣ’ ಮತ್ತು ಇನ್ನೊಂದು ‘ನಿರ್ಗುಣ’. ಸಗುಣದಲ್ಲಿ ‘ಅನಾದಿ ಶಕ್ತಿ’ ಇದೆ. ಅದರಲ್ಲಿ ‘ಅನಾದಿ ಪ್ರಕೃತಿಯ’ ವಾಸವಿರುತ್ತದೆ. ಅನಾದಿ ಪ್ರಕೃತಿಯಲ್ಲಿ ‘ಸತ್ತ್ವ’, ‘ರಜ’ ಮತ್ತು ‘ತಮ’ ಈ ತ್ರಿಗುಣಗಳಿವೆ.
೩ ಆ. ತ್ರಿಗುಣಗಳ ಗುಣಧರ್ಮ : ಸತ್ತ್ವವು ‘ಜ್ಞಾನ’ ಮತ್ತು ‘ಸ್ಥೈರ್ಯ’ ವನ್ನು ಒಳಗೊಂಡಿದೆ. ರಜದಿಂದ ಕಾರ್ಯ ಸಂಭವಿಸುತ್ತದೆ ಮತ್ತು ಅದಕ್ಕೆ ವೇಗ ಪ್ರಾಪ್ತವಾಗುತ್ತದೆ. ತಮದಿಂದ ‘ಲಯ’ ಅಥವಾ ‘ನಾಶ’ವಾಗುತ್ತದೆ.
೩ ಇ. ತ್ರಿಗುಣಗಳ ಏಕತ್ರೀಕರಣ ಮತ್ತು ಅದರಿಂದ ಪಂಚತತ್ತ್ವಗಳ ನಿರ್ಮಿತಿಯಾಗುವುದು : ಅನಾದಿ ಪ್ರಕೃತಿಯ ಕಾರ್ಯವು ಅನಾದಿ ಕಾಲದಿಂದ ಮತ್ತು ನಿರಂತರವಾಗಿ ನಡೆದಿದೆ. ಅದೇ ರೀತಿ ತ್ರಿಗುಣಗಳ ಕಾರ್ಯವೂ ನಿರಂತರ ನಡೆದಿರುತ್ತದೆ. ‘ಸತ್ತ್ವ’, ‘ರಜ’ ಮತ್ತು ‘ತಮ’ ಇವುಗಳ ಸಂಯೋಗ-ವಿಯೋಗ ಅವುಗಳಲ್ಲಿನ ಗುಣಧರ್ಮಗಳಿಂದಾಗಿ ಆಗುತ್ತದೆ. ಆ ಸಮಯದಲ್ಲಿ ಅವುಗಳ ಅಸಂಖ್ಯಾತ ತತ್ತ್ವಗಳ ಸಂಯೋಗ-ವಿಯೋಗವೂ ಆಗುತ್ತದೆ. ಈ ತತ್ತ್ವಗಳು ಸೂಕ್ಷ್ಮ ಕಣಗಳ ಸ್ವರೂಪದಲ್ಲಿರುತ್ತವೆ. ತ್ರಿಗುಣಗಳ ‘ಸಂಯೋಗ’-‘ವಿಯೋಗ’ಗಳಿಂದ ‘ಪೃಥ್ವಿ’, ‘ಆಪ’, ತೇಜ’, ‘ವಾಯು’ ಮತ್ತು ‘ಆಕಾಶ’ ಈ ಪಂಚತತ್ತ್ವಗಳ ನಿರ್ಮಿತಿಯಾಗುತ್ತದೆ.
೩ ಈ. ಪಂಚತತ್ತ್ವಗಳ ಮಿಶ್ರಣಗಳಿಂದ ಸೃಷ್ಟಿಯ ಉತ್ಪತ್ತಿಯಾಗುವುದು : ಪಂಚತತ್ತ್ವಗಳಲ್ಲಿನ ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಕಣಗಳ ಸಂಯೋಗ ಮತ್ತು ವಿಯೋಗಗಳಿಂದ ಸೃಷ್ಟಿಯ ನಿರ್ಮಿತಿಯಾಗು ತ್ತದೆ. ಇದು ಕಣಶಾಸ್ತ್ರದ ವಿಷಯವಾಗಿದೆ.
೪. ‘ಅನಾದಿ ಪ್ರಕೃತಿ’ಯ ಗುಣಧರ್ಮ
ಅ. ಅನಾದಿ ಪ್ರಕೃತಿಗೆ ‘ಸತ್ತ್ವ’ ಗುಣಗಳಿಂದ ಸೃಷ್ಟಿಯ ಉತ್ಪತ್ತಿಗೆ ಪ್ರೇರಣೆ ಸಿಗುತ್ತದೆ, ಆಗ ಪ್ರಕೃತಿಯಲ್ಲಿನ ಶಕ್ತಿಯ ಪ್ರಕಟೀಕರಣವಾಗುತ್ತದೆ. ‘ರಜೋ’ ಗುಣಗಳಿಂದಾಗಿ ಶಕ್ತಿಯಿಂದ ಸೃಷ್ಟಿಯ ಉತ್ಪತ್ತಿಯ ಕಾರ್ಯವು ಸಂಭವಿಸುತ್ತದೆ ಮತ್ತು ಅದಕ್ಕೆ ವೇಗ ಬರುತ್ತದೆ. ಪ್ರಕಟಗೊಂಡ ಶಕ್ತಿಯ, ಅಂದರೆ ಸೃಷ್ಟಿಯ ಸ್ವಲ್ಪ ಸಮಯದ ನಂತರ ‘ತಮೋ’ ಗುಣದಿಂದಾಗಿ ಅವನತಿಯಾಗುತ್ತದೆ. ಅದರ ಪರಿಣಾಮದಿಂದ ಸೃಷ್ಟಿಯ ‘ಲಯ’ವಾಗುತ್ತದೆ.
ಆ. ಪ್ರಕೃತಿಯ ಕಾರ್ಯವು ಅನಾದಿ ಕಾಲದಿಂದ ನಡೆದುದರಿಂದ ಅದಕ್ಕೆ ‘ಅನಾದಿ ಪ್ರಕೃತಿ’, ಎಂದು ಹೇಳುತ್ತಾರೆ.
ಇ. ಪ್ರಕೃತಿಯ ಕಾರ್ಯ ಅಖಂಡವಾಗಿದೆ. ಸೃಷ್ಟಿಯ ‘ಉತ್ಪತ್ತಿ’, ‘ಸ್ಥಿತಿ’ ಮತ್ತು ‘ಲಯ’, ಇವು ಅನಂತ ಕಾಲದಿಂದ ನಡೆದಿವೆ; ಆದರೆ ಮೇಲ್ನೋಟಕ್ಕೆ ಇರುವುದರಿಂದ ಅದನ್ನು ‘ಪ್ರಕೃತಿನಾಟ್ಯ’, ಎನ್ನುತ್ತಾರೆ.
ಈ. ಪ್ರಕೃತಿಯು ತನ್ನ ಗುಣಧರ್ಮಗಳಿಗನುಸಾರ ಸೃಷ್ಟಿಯನ್ನು ನಡೆಸುತ್ತದೆ. ಈ ಪ್ರಕ್ರಿಯೆಗೆ ‘ಪ್ರಕೃತಿ ನರ್ತನ’, ಎಂದು ಹೇಳುತ್ತಾರೆ.
೫. ಈಶ್ವರ ಮತ್ತು ‘ಅನಾದಿ ಪ್ರಕೃತಿ’ ಇವುಗಳ ಪರಸ್ಪರ ಸಂಬಂಧ
ಈಶ್ವರನು ಅನಂತ ರೂಪಗಳಲ್ಲಿ ವ್ಯಾಪಿಸಿದ್ದಾನೆ. ಆದುದರಿಂದ ಅವನಿಗೆ ವಿಶಿಷ್ಟ ಕಾರ್ಯವಿಲ್ಲ. ‘ಅನಾದಿ ಪ್ರಕೃತಿ’ಯು ಅವನ ಒಂದು ‘ಚಿಕ್ಕ ಅಂಗ’ವಾಗಿದೆ. ಅನಾದಿ ಪ್ರಕೃತಿಯು ತನ್ನ ಗುಣಧರ್ಮಗಳಿಗನುಸಾರ ನಿರಂತರ ಕಾರ್ಯ ಮಾಡುತ್ತಿರುತ್ತದೆ. ಆದುದರಿಂದ ಅನಂತ ಕಾಲದಿಂದ ಸೃಷ್ಟಿಯ ‘ಉತ್ಪತ್ತಿ’, ‘ಸ್ಥಿತಿ’ ಮತ್ತು ‘ಲಯ’ ಇವುಗಳ ಕಾರ್ಯ ನಡೆಯುತ್ತದೆ.
೫ ಅ. ಪ್ರಕೃತಿಯ ಕಾರ್ಯದಲ್ಲಿ ಈಶ್ವರನ ಹಸ್ತಕ್ಷೇಪ
೧. ಯಾವ ಜೀವಗಳಿಗೆ ‘ಪ್ರಕೃತಿಯು ಭಾಸಮಾನವಾಗಿದೆ. ಅದರಲ್ಲಿ ಕೇವಲ ಸುಖ ಮತ್ತು ದುಃಖಗಳಿವೆ. ಇದರಲ್ಲಿ ಸಿಲುಕದೇ ನನಗೆ ಆನಂದಪ್ರಾಪ್ತಿಗಾಗಿ ಈಶ್ವರನ ಬಳಿಗೆ ಹೋಗಬೇಕಾಗಿದೆ’, ಎಂಬ ಅರಿವಿರುತ್ತದೆಯೋ, ಅವರಿಗೆ ಈಶ್ವರನು ಪ್ರಕೃತಿಯಿಂದ ಹೊರಗೆ ಬರಲು ಸಹಾಯ ಮಾಡುತ್ತಾನೆ; ಏಕೆಂದರೆ ಈಶ್ವರನು ‘ಭಕ್ತವತ್ಸಲ, ಕೃಪಾಳು ಮತ್ತು ಪ್ರೀತಿಸ್ವರೂಪ’ನಾಗಿದ್ದಾನೆ.
೨. ಜನ್ಮ-ಮೃತ್ಯುಗಳ ಚಕ್ರಗಳಿಂದ ಬಳಲುತ್ತಿರುವ ಹೆಚ್ಚಿನ ಜೀವಗಳಿಗೆ ‘ಈಗ ಈ ಚಕ್ರವು ನಿಲ್ಲುತ್ತದೆ, ನನಗೆ ಪುನಃ ಜನ್ಮ ಬೇಡ’, ಎಂಬ ತೀವ್ರ ಅರಿವಾಗಿ ಸಾಧನೆಯನ್ನು ಮಾಡಬೇಕೆಂದೆನಿಸುತ್ತದೆ. ಅವರಿಗೆ ಈಶ್ವರನು ಗುರುಗಳ ಮೂಲಕ ಸಹಾಯ ಮಾಡುತ್ತಾನೆ.
೩. ಸಮಾಜದಲ್ಲಿ ಸಾಧನೆಯನ್ನು ಮಾಡುವ ಜೀವಗಳಿಗೆ ಅಥವಾ ಭಕ್ತರಿಗೆ ಕೆಟ್ಟ ಪ್ರವೃತ್ತಿಯ ಜನರಿಂದಾಗಿ ತೊಂದರೆ ಭೋಗಿಸ ಬೇಕಾಗುತ್ತದೆ, ಆಗ ಈಶ್ವರನು ತಾನಾಗಿಯೇ ಅವತಾರವೆಂದು ಜನ್ಮ ತೆಗೆದುಕೊಳ್ಳುತ್ತಾನೆ, ಉದಾ. ಶ್ರೀರಾಮ, ಶ್ರೀಕೃಷ್ಣ ಮುಂತಾದವರು ಅಥವಾ ಅವನು ಪರೋಕ್ಷವಾಗಿ ಸೂಕ್ಷ್ಮದಿಂದ ಭಕ್ತರಿಗೆ ಸಹಾಯ ಮಾಡುತ್ತಾನೆ.
೫ ಆ. ಈಶ್ವರ ಸಾಧನೆಯನ್ನು ಮಾಡದ ಜೀವಗಳ ವಿಷಯದಲ್ಲಿ ತಟಸ್ಥನಾಗಿರುತ್ತಾನೆ : ಯಾವ ಜೀವವು ಸಾಧನೆಯನ್ನು ಮಾಡುವುದಿಲ್ಲವೋ ಮತ್ತು ತನ್ನ ಅಯೋಗ್ಯ ಕರ್ಮಗಳಿಂದಾಗಿ ದುಃಖ ಅಥವಾ ಯಾತನೆಯನ್ನು ಭೋಗಿಸುತ್ತದೆಯೋ, ಅದರ ಬಗ್ಗೆ ಈಶ್ವರನು ತಟಸ್ಥನಾಗಿರುತ್ತಾನೆ; ಆದರೆ ಅಂತಹ ಜೀವಗಳಿಗೆ ದುಃಖ ಅಥವಾ ಯಾತನೆಯನ್ನು ಭೋಗಿಸುವ ಶಕ್ತಿಯನ್ನು ‘ಅನಾದಿ ಶಕ್ತಿ’ ನೀಡುತ್ತದೆ.
೬. ಅನಾದಿ ಪ್ರಕೃತಿಯು ನಿರ್ಮಿತ ಪೃಥ್ವಿ ಶುದ್ಧ ಮತ್ತು ಆನಂದ ಸ್ವರೂಪದಲ್ಲಿದೆ; ಆದರೆ ಮಾನವನು ಅಧರ್ಮಾಚರಣೆಯಿಂದ ದುಃಖಿಯಾಗುವುದು
ಅನಾದಿ ಪ್ರಕೃತಿಯು ಸೃಷ್ಟಿಯ ನಿರ್ಮಿತಿಯಲ್ಲಿ ನೂರಾರು ಪೃಥ್ವಿಗಳನ್ನು ನಿರ್ಮಿಸಿದೆ. ಎಲ್ಲ ಪೃಥ್ವಿಗಳು ಶುದ್ಧ ಸತ್ತ್ವಗುಣಿ ಮತ್ತು ಆನಂದ ಸ್ವರೂಪದಲ್ಲಿರುತ್ತವೆ. ಮನುಷ್ಯ, ಪ್ರಾಣಿ ಮತ್ತು ಪಕ್ಷಿ ಇವುಗಳಿಗಾಗಿ ಪೃಥ್ವಿ ಆನಂದದಾಯಕವಾಗಿರುತ್ತದೆ. ‘ಭೂಮಿಯಲ್ಲಿ ನಿರಂತರವಾಗಿ ಆನಂದದಿಂದಿರುವುದು ಹೇಗೆ ?’, ಈ ಬಗೆಗಿನ ಜ್ಞಾನವನ್ನು ಅನಾದಿ ಪ್ರಕೃತಿಯು ಮನುಷ್ಯನಿಗೆ ಸನಾತನ ಧರ್ಮದ ವಿವಿಧ ಗ್ರಂಥ ಮತ್ತು ಋಷಿ-ಮುನಿಗಳ ಮಾಧ್ಯಮದಿಂದ ನೀಡುತ್ತದೆ; ಆದರೆ ಮಾನವನಿಗೆ ಕ್ರಮೇಣ ಇವೆಲ್ಲವುಗಳ ವಿಸ್ಮರಣೆಯಾಗುತ್ತದೆ. ಅವರಿಂದ ಅಧರ್ಮವಾಗತೊಡಗುತ್ತದೆ ಮತ್ತು ಕೊನೆಗೆ ಅವನು ದುಃಖಿಯಾಗುತ್ತಾನೆ. ಸಾಧನೆಯನ್ನು ಮಾಡುವ, ಸದಾಚರಣಿ ಅಥವಾ ಧರ್ಮಾಚರಣಿ ಜೀವವು ಈಶ್ವರೀ ತತ್ತ್ವಕ್ಕೆ ಅನುಸರಿಸಿ ಆಚರಣೆ ಮಾಡುತ್ತಿರುತ್ತದೆ. ಅವನ ಮೇಲೆ ಈಶ್ವರನ ಕೃಪಾದೃಷ್ಟಿ ಇರುತ್ತದೆ. ಆದುದರಿಂದ ಅವನು ಇಂತಹ ಜೀವಗಳಿಗೆ ಸಹಾಯ ಮಾಡುತ್ತಾನೆ. ಸಾಧನೆಯನ್ನು ಮಾಡದಿರುವ ಜೀವಗಳಿಗೆ ಈಶ್ವರನ ಕೃಪಾದೃಷ್ಟಿ ಲಭಿಸದ ಕಾರಣ ಅವನು ರಜ-ತಮ ಪ್ರಕೃತಿಗೆ ಬಲಿಯಾಗುತ್ತಾನೆ ಮತ್ತು ದೀರ್ಘಕಾಲ ದುಃಖವನ್ನು ಭೋಗಿಸುತ್ತಾನೆ.’
– ಶ್ರೀ. ರಾಮ ಹೊನಪ (ಸೂಕ್ಷ್ಮದಿಂದ ಪ್ರಾಪ್ತವಾದ ಜ್ಞಾನ), ಸನಾತನ ಆಶ್ರಮ, ರಾಮನಾಥಿ, ಗೋವಾ. (೨೬.೨.೨೦೨೩)
* ಸೂಕ್ಷ್ಮ : ಪ್ರತ್ಯಕ್ಷ ಕಾಣುವ ಅವಯವಗಳಾದ ಮೂಗು, ಕಿವಿ, ಕಣ್ಣುಗಳು, ನಾಲಿಗೆ ಮತ್ತು ಚರ್ಮ ಇವು ಪಂಚಜ್ಞಾನೇಂದ್ರಿಯಗಳಾಗಿವೆ. ಈ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಆಚೆಗಿನ ಎಂದರೆ ಸೂಕ್ಷ್ಮ. ಸಾಧನೆಯಲ್ಲಿ ಪ್ರಗತಿ ಮಾಡಿಕೊಂಡ ಕೆಲವು ವ್ಯಕ್ತಿಗಳಿಗೆ ಈ ಸೂಕ್ಷ್ಮ ಸಂವೇದನೆಯ ಅರಿವಾಗುತ್ತದೆ. ಈ ಸೂಕ್ಷ್ಮ ಜ್ಞಾನದ ಬಗ್ಗೆ ವಿವಿಧ ಧರ್ಮಗ್ರಂಥಗಳಲ್ಲಿ ಉಲ್ಲೇಖವಿದೆ. |