ಅಡುಗೆ ವಿಷಯದಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಹೇಳಿದಂತೆ ಶ್ರೀ. ಅಪೂರ್ವ ಢಗೆ ಇವರು ಮಾಡಿದ ಚಿಂತನೆ ಮತ್ತು ಪ್ರಯೋಗ !

ಶ್ರೀ. ಅಪೂರ್ವ ಢಗೆ

‘ಒಂದು ಸಲ ನನಗೆ ಪರಾತ್ಪರ ಗುರು ಡಾ. ಆಠವಲೆಯವರ ಸತ್ಸಂಗ ಲಭಿಸಿತು. ಆಗ ಅವರು ನನಗೆ ಅಡುಗೆ ಮಾಡುವ ವಿಷಯದಲ್ಲಿ ಸಂಶೋಧನೆ ಮಾಡಲು ಹೇಳಿದರು. ಅವರು ನನಗೆ, ”ನಿನ್ನ ಮನಸ್ಸಿನಲ್ಲಿ ಕೇವಲ ಅಡುಗೆಯ ವಿಷಯದಲ್ಲಿ ಸಂಶೋಧನೆಗಳನ್ನು ಮಾಡುವ ವಿಚಾರಗಳಿರಬೇಕು. ಪದಾರ್ಥಗಳಲ್ಲಿ ಸತ್ತ್ವ, ರಜ ಮತ್ತು ತಮ ಈ ಗುಣಗಳಿರುತ್ತವೆ. ನಿನ್ನ ಮನಸ್ಸಿನಲ್ಲಿ ‘ಪದಾರ್ಥಗಳನ್ನು ಹೇಗೆ ಸಾತ್ತ್ವಿಕ ಮಾಡಬೇಕು ?’, ಎಂಬ ವಿಚಾರಗಳು  ಬರಬೇಕು”, ಎಂದರು. ಅನಂತರ ‘ಗುರುದೇವರು ಹೇಳಿದಂತೆ ಪದಾರ್ಥಗಳನ್ನು ಹೇಗೆ ಸಾತ್ತ್ವ್ವಿಕ ಮಾಡಬೇಕು ?’, ಎಂಬ ವಿಚಾರಗಳು ನನ್ನ ಮನಸ್ಸಿನಲ್ಲಿ ಬರಲಾರಂಭಿಸಿದವು. ಆಗ ಅವರೇ ನನ್ನಿಂದ ಮಾಡಿಸಿಕೊಂಡ ಚಿಂತನೆಯನ್ನು ಇಲ್ಲಿ ಕೊಡುತ್ತಿದ್ದೇನೆ.

೧. ಪದಾರ್ಥಗಳಲ್ಲಿನ ಸಾತ್ತ್ವಿಕತೆಯನ್ನು ಹೆಚ್ಚಿಸಲು ಪ್ರತಿಯೊಂದು ಕೃತಿಯನ್ನು ಸಾತ್ತ್ವಿಕ ಮಾಡಲು ಪ್ರಯತ್ನಿಸುವುದು

‘ಪದಾರ್ಥಗಳಲ್ಲಿನ ರಜ-ತಮವನ್ನು ಕಡಿಮೆ ಮಾಡಿ ಪದಾರ್ಥಗಳು ಹೆಚ್ಚೆಚ್ಚು ಸಾತ್ತ್ವಿಕವಾಗಲು ಹೇಗೆ ಪ್ರಯತ್ನಿಸಬೇಕು ? ಪದಾರ್ಥಗಳನ್ನು ತಯಾರಿಸುವಾಗ ನಮ್ಮ ವಿಚಾರಪ್ರಕ್ರಿಯೆ ಹೇಗಿರಬೇಕು ?’ ಎಂಬ ವಿಚಾರಗಳು ಮನಸ್ಸಿನಲ್ಲಿ ಸತತ ಬರತೊಡಗಿದವು. ಗುರುದೇವರು ‘ಅಧ್ಯಾತ್ಮವು ಕೃತಿಯ ಶಾಸ್ತ್ರವಾಗಿದೆ’, ಎಂದು ಹೇಳಿದ್ದಾರೆ. ಅದಕ್ಕನುಸಾರ ‘ನಮಗೆ ಪದಾರ್ಥಗಳನ್ನು ಸಾತ್ತ್ವಿಕ ಮಾಡಬೇಕಾಗಿದ್ದರೆ, ನಮ್ಮ ಆಚರಣೆಯೂ ಸಾತ್ತ್ವಿಕವಾಗಿರಬೇಕು’, ಎಂಬುದು ನನ್ನ ಗಮನಕ್ಕೆ ಬಂದಿತು. ಅನಂತರ ಪದಾರ್ಥಗಳನ್ನು ಸಾತ್ತ್ವಿಕ ಮಾಡಲು ವಿವಿಧ ಅಂಶಗಳು ನನಗೆ ಅರಿವಾಗತೊಡಗಿದವು.

೨. ‘ದೇವರೊಂದಿಗೆ ಅನುಸಂಧಾನ ಇರುವಾಗ ಮತ್ತು ಅನುಸಂಧಾನ ಇಲ್ಲದಿರುವಾಗ ಅಡುಗೆಯನ್ನು ಮಾಡುವುದು’ ಈ ಸಂದರ್ಭದಲ್ಲಿ ಮಾಡಿದ ಪ್ರಯೋಗ !

ಅಡುಗೆ ಮಾಡುವಾಗ ‘ದೇವರೊಂದಿಗೆ ಅನುಸಂಧಾನ ಇರುವಾಗ ಮತ್ತು ಅನುಸಂಧಾನ ಇಲ್ಲದಿರುವಾಗ ಏನು ಅರಿವಾಗುತ್ತದೆ ?’, ಇದರ ಬಗ್ಗೆ ಒಂದು ಪ್ರಯೋಗ ಮಾಡಿದೆ. ಆಗ ನನಗೆ ಅರಿವಾದ ಅಂಶಗಳನ್ನು ಮುಂದೆ ಕೊಟ್ಟಿದ್ದೇನೆ.

೩. ಕೃತಜ್ಞತೆ

ಮೇಲಿನ ಪ್ರಯೋಗವನ್ನು ಮಾಡುವಾಗ ಈಶ್ವರನು ನನಗೆ ಬಹಳಷ್ಟು ಅನುಭೂತಿಗಳನ್ನು ನೀಡಿದನು. ಅನಂತರ ಯಾವುದಾದರೊಂದು ಪದಾರ್ಥವನ್ನು ತಯಾರಿಸಲು ಮಾಡಬೇಕಾದ ಸೇವೆಯನ್ನು ಮಾಡುವಾಗ, ಉದಾ. ಸ್ವಚ್ಛತೆ, ಪೂರ್ವಸಿದ್ಧತೆ ಇತ್ಯಾದಿಗಳನ್ನು ಮಾಡುವಾಗ ಅಥವಾ ಪ್ರತ್ಯಕ್ಷ ಪದಾರ್ಥಗಳನ್ನು ತಯಾರಿಸುವಾಗ ಹೆಚ್ಚೆಚ್ಚು ದೇವರೊಂದಿಗೆ ಅನುಸಂಧಾನವನ್ನು ಇಟ್ಟುಕೊಳ್ಳುವ ಪ್ರಯತ್ನವಾಗತೊಡಗಿತು. ‘ಈ ಪ್ರಯೋಗದಿಂದ ನನಗೆ ಬಹಳಷ್ಟು ಕಲಿಯಲು ಸಿಕ್ಕಿತು ಮತ್ತು ಅದನ್ನು ದೈನಂದಿನ ಜೀವನದಲ್ಲಿ ಆಚರಣೆಯಲ್ಲಿ ತರಲು ಸಾಧ್ಯವಾಯಿತು’, ಇದಕ್ಕಾಗಿ ಗುರುದೇವರ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆಗಳು !’

– ಶ್ರೀ. ಅಪೂರ್ವ ಪ್ರಸನ್ನ ಢಗೆ (ಹೊಟೇಲ್‌ ಮ್ಯಾನೇಜಮೆಂಟ್‌ ಪದವೀಧರ), ಸನಾತನ ಆಶ್ರಮ, ರಾಮನಾಥಿ, ಗೋವಾ.