ಅರ್ಪಣೆದಾರರೇ, ಸನಾತನದ ಸಾಧಕ ಎಂದು ತೋರ್ಪಡಿಸಿ ದಿಕ್ಕು ತಪ್ಪಿಸುವವರಿಂದ ಎಚ್ಚರದಿಂದಿರಿ

ಸನಾತನದ ಅಧ್ಯಾತ್ಮಪ್ರಸಾರ ಕಾರ್ಯದ ದುರುಪಯೋಗ ಪಡಿಸಿಕೊಳ್ಳಲು ಕೆಲವರು ಸನಾತನದ ಕಾರ್ಯದಲ್ಲಿ ಸಹಭಾಗಿಯಾಗಲು ಪ್ರಯತ್ನಿಸುತ್ತಾರೆ ಮತ್ತು ಅರ್ಪಣೆದಾರರೊಂದಿಗೆ ಪರಿಚಯ ಹಾಗೂ ಆತ್ಮೀಯತೆ ಮಾಡಿಕೊಂಡು ಅದನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಇದೇ ರೀತಿಯಲ್ಲಿ ಹಿಂದೆ ಸನಾತನದ ಪ್ರಸಾರ ಕಾರ್ಯದಲ್ಲಿ ಸಹಭಾಗಿಯಾಗಿರುವ ಆದರೆ ಕಳೆದ ಕೆಲವು ವರ್ಷಗಳಿಂದ ಇತರ ಸಂಪ್ರದಾಯದಲ್ಲಿ ಸಕ್ರಿಯ ಇರುವ ಕೆಲವರು ಸನಾತನದ ಅರ್ಪಣೆದಾರರಿಂದ ಇತರ ಕಾರಣಗಳಿಗಾಗಿ ಹಣ ಸಂಗ್ರಹಿಸುತ್ತಿರುವುದು ಗಮನಕ್ಕೆ ಬಂದಿದೆ.

ಸನಾತನದ ಹೆಸರನ್ನು ದುರುಪಯೋಗಪಡಿಸಿಕೊಳ್ಳುವವರನ್ನು ನಿಯಂತ್ರಿಸಲು ಅರ್ಪಣೆದಾರರು ಅವರಲ್ಲಿ ಅರ್ಪಣೆಯನ್ನು ಕೇಳಲು ಬರುವ ಸನಾತನದ ಸಾಧಕರಲ್ಲಿ ಅರ್ಪಣೆಯ ಮುದ್ರಿತ ಪಾವತಿ ಪುಸ್ತಕ ಇದೆಯೇ ಇಲ್ಲವೇ ಎಂಬುದನ್ನು ನೋಡಿ ಅರ್ಪಣೆ ನೀಡಬೇಕು ಮತ್ತು ಅವರಿಂದ ಪಾವತಿ ಪಡೆಯಬೇಕು. ಅರ್ಪಣೆ ಕೇಳಲು ಬರುವ ವ್ಯಕ್ತಿಯ ವಿಷಯದಲ್ಲಿ ಏನಾದರೂ ಸಂದೇಹಾಸ್ಪದ ಅಂಶ ಗಮನಕ್ಕೆ ಬಂದರೆ ತಮ್ಮ ಪರಿಚಯದ ಇತರ ಸ್ಥಳೀಯ ಸನಾತನದ ಸಾಧಕರನ್ನು ಸಂಪರ್ಕಿಸಬೇಕು. ಅದು ಸಾಧ್ಯವಾಗದಿದ್ದರೆ ಸನಾತನದ ರಾಮನಾಥಿ, ಫೋಂಡಾ, ಗೋವಾದಲ್ಲಿನ ಕಛೇರಿಗೆ ಕೆಳಗಿನ ಕ್ರಮಾಂಕಕ್ಕೆ ತಿಳಿಸಬೇಕು.

ಹೆಸರು ಮತ್ತು ಸಂಪರ್ಕ ಸಂಖ್ಯೆ : ಸೌ. ಭಾಗ್ಯಶ್ರೀ ಸಾವಂತ – ೭೦೫೮೮೮೫೬೧೦

ವಿ-ಅಂಚೆ ವಿಳಾಸ : [email protected]