ರಾಷ್ಟ್ರದ ಚರಿತ್ರೆಯ ದರ್ಶನ ಮಾಡಿಸುವ ಛತ್ರಪತಿ ಶಿವಾಜಿ ಮಹಾರಾಜರ ಐತಿಹಾಸಿಕ ದಕ್ಷಿಣ ದಿಗ್ವಿಜಯ ದಂಡಯಾತ್ರೆ !

೧೯ ಫೆಬ್ರವರಿ ೨೦೨೨ ರಂದು ದಿನಾಂಕಾನುಸಾರ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಇದೆ. ಅದರ ನಿಮಿತ್ತ..

೧. ಶೌರ್ಯ ಪ್ರದರ್ಶನ ಹಾಗೂ ಸಾಮರ್ಥ್ಯವನ್ನು ತೋರಿಸುವುದೇ  ಹಿಂದೂ ರಾಜರ ದಿಗ್ವಿಜಯ ದಂಡಯಾತ್ರೆಯ ಉದ್ದೇಶ

ಶ್ರೀ ವಿಜಯ ಪಾಟೀಲ್

ಪ್ರಭು ಶ್ರೀರಾಮಚಂದ್ರರು ರಾಜಸೂಯ ಯಜ್ಞವನ್ನು ಮಾಡಿ ಯಜ್ಞದ ಅಶ್ವವನ್ನು ಪೃಥ್ವಿಯ ಮೇಲೆ ಬಿಟ್ಟಿದ್ದರು. ಪ್ರಭು ರಾಮಚಂದ್ರರೊಂದಿಗೆ ಯುದ್ಧ ಮಾಡಲು ಸಮರ್ಥನಾಗಿರುವವನೇ ಆ ಅಶ್ವವನ್ನು ಯಾರು ಬಂಧಿಸಹುದಾಗಿತ್ತು. ಇದರ ಅರ್ಥ ಹಿಂದೂ ರಾಜರ ವಿಜಯ ದಂಡಯಾತ್ರೆಯು ಪುರುಷಾರ್ಥವನ್ನು ಪ್ರದರ್ಶಿಸುವುದಾಗಿ ಇರುತ್ತಿತ್ತು. ಕ್ಷತ್ರಿಯತೆ ಮತ್ತು ಸಾಮರ್ಥ್ಯವನ್ನು ಸಾಬೀತುಪಡಿಸುವುದಕ್ಕಾಗಿ ಇರುತ್ತಿತ್ತು. ಮಾಜಿ ರಕ್ಷಣಾಸಚಿವ ಮನೋಹರ ಪರ್ರೀಕರರು ಒಂದು ಕಾರ್ಯಕ್ರಮದಲ್ಲಿ ಭಾರತೀಯ ಸೈನ್ಯವು ಕೇವಲ ಕುಳಿತುಕೊಂಡಿರಲಿಕ್ಕಲ್ಲ, ಸೈನ್ಯಕ್ಕೆ ತನ್ನ ಪ್ರತಿಕಾರಕ್ಷಮತೆಯನ್ನು ಉಳಿಸಿಕೊಳ್ಳಲು ಯುದ್ಧದ ಅವಶ್ಯಕತೆ ಇರುತ್ತದೆ. ಅದೇ ರೀತಿ ಸೈನ್ಯದ ಪ್ರತಿಕಾರಕ್ಷಮತೆಯನ್ನು ಕಾಪಾಡಲು ಹಾಗೂ ತಮ್ಮ ಶೌರ್ಯವನ್ನು ಸಿದ್ಧಪಡಿಸಲು ಹಿಂದೂ ರಾಜರ ವಿಜಯ ದಂಡಯಾತ್ರೆ ನಡೆಯುತ್ತಿತ್ತು ಎಂದು ಹೇಳಿದ್ದರು.

ಇಬ್ಬರು ಹಿಂದೂ ರಾಜರ ನಡುವೆ ಯುದ್ಧ ನಡೆಯುವಾಗ ಆಯಾ ರಾಜ್ಯದ ಜನರು ತಮ್ಮ ತಮ್ಮ ಕೆಲಸಗಳಲ್ಲಿ ಮಗ್ನರಾಗಿರುತ್ತಿದ್ದರು. ಅವರಿಗೆ ಈ ಯುದ್ಧದಿಂದ ಯಾವುದೇ ತೊಂದರೆಯಾಗುತ್ತಿರಲಿಲ್ಲ. ಅದೇ ರೀತಿ ಯುದ್ಧವನ್ನು ಗೆದ್ದ ನಂತರ ಗೆದ್ದಿರುವ ರಾಜನು ಸೋತ ರಾಜನ ರಾಜ್ಯದಲ್ಲಿ ಕೋಲಾಹಲವೆಬ್ಬಿಸುತ್ತಿರಲಿಲ್ಲ ಅಥವಾ ಗೆದ್ದಿರುವ ಪ್ರದೇಶದ ಜನರಿಗೆ ಅನ್ಯಾಯ-ಅತ್ಯಾಚಾರ ಮಾಡುತ್ತಿರಲಿಲ್ಲ. ಮಹಾಭಾರತವು ಇದಕ್ಕೆ ಉದಾಹರಣೆಯಾಗಿದೆ. ಇದರೊಂದಿಗೆ ಸೋತ ರಾಜನೊಂದಿಗೆ ಕೂಡ ಗೌರವದಿಂದ ವರ್ತಿಸಲಾಗುತಿತ್ತು. ‘ಒಬ್ಬ ರಾಜನನ್ನು ರಾಜನ ಹಾಗೆಯೇ ಗೌರವಿಸಬೇಕು’, ಎಂದು ಸಿಕಂದರನಿಗೆ ಸ್ವಾಭಿಮಾನದಿಂದ ಉತ್ತರ ನೀಡುವ ಮಹಾರಾಜ ಪುರು ಇವರು ತಮ್ಮ ಸ್ಮರಣೆಯಲ್ಲಿರಬಹುದು. ಅವರು ಇತಿಹಾಸವನ್ನು ಮರೆತಿರಲಿಲ್ಲ.

೨. ಪ್ರಾಣಿಮಾತ್ರರ ಹಿತಕ್ಕಾಗಿ ಹಿಂದೂ ರಾಜರು ಯುದ್ಧ ಮಾಡುತ್ತಿದ್ದರು !

ಯಾರಾದರೊಬ್ಬ ರಾಜನು ಅಡ್ಡದಾರಿ ಹಿಡಿದು ತನ್ನ ರಾಜ್ಯದ ಜನರ ಮೇಲೆ ಅತ್ಯಾಚಾರ ಮಾಡುತ್ತಿದ್ದರೆ, ಇನ್ನೊಂದು ರಾಜ್ಯದ ಧರ್ಮಶೀಲ, ಸಾಮರ್ಥ್ಯಶಾಲಿ, ಸದಾಚಾರಿ ರಾಜನು ಆ ರಾಜ್ಯದ ಮೇಲೆ ಆಕ್ರಮಣ ಮಾಡಿ ಆ ಪ್ರಜೆಗಳನ್ನು ರಕ್ಷಿಸುತ್ತಿದ್ದನು. ಇದರ ಅರ್ಥವೆಂದರೆ, ಎಲ್ಲ ಪ್ರಾಣಿಮಾತ್ರರ ಸುಖಕ್ಕಾಗಿ, ಶಾಂತಿಗಾಗಿ ಹಿಂದೂ ರಾಜರು ಯುದ್ಧ ಮಾಡುತ್ತಿದ್ದರು. ಅನ್ಯಾಯಕಾರಿ ರಾಜನನ್ನು ಸೋಲಿಸಿ ಆ ರಾಜ್ಯವನ್ನು ತನ್ನ ವಶದಲ್ಲಿಟ್ಟುಕೊಂಡು ಜನರನ್ನು ಸುಖವಾಗಿಡುತ್ತಿದ್ದನು. ಭಗವಾನ ಶ್ರೀಕೃಷ್ಣನಿಂದಾದ ಕಂಸನ ವಧೆ ಹಾಗೂ ಪ್ರಭು ಶ್ರೀರಾಮಚಂದ್ರರಿಂದಾದ ರಾವಣ ವಧೆ, ರಾಕ್ಷಸರ ವಧೆ ಇತ್ಯಾದಿ ಎಲ್ಲವೂ ಅದೇ ರೀತಿಯಲ್ಲಿ ನಡೆದಿದೆ.

೩. ಹಿಂದೂ ಸಂಸ್ಕೃತಿ ಮತ್ತು ಇಸ್ಲಾಮಿ ರಾಜರ ವಿಕೃತಿ ಇವುಗಳ ನಡುವಿನ ಮೂಲಭೂತ ವ್ಯತ್ಯಾಸಗಳನ್ನು ತಿಳಿದುಕೊಳ್ಳುವುದು ಆವಶ್ಯಕವಾಗಿದೆ

ಇಬ್ಬರು ಹಿಂದೂ ರಾಜರ ನಡುವಿನ ಯುದ್ಧದಲ್ಲಿ ಗೆದ್ದಿರುವ ರಾಜನು ಸೋತ ರಾಜನ ರಾಜ್ಯದಲ್ಲಿ ದೌರ್ಜನ್ಯ ಅಥವಾ ಧ್ವಂಸ ಮಾಡಿರುವುದು ಕಂಡು ಬರುವುದಿಲ್ಲ. ಇಂತಹ ಒಂದೇ ಒಂದು ಉದಾಹರಣೆಯೂ ಇತಿಹಾಸದಲ್ಲಿ ಕಾಣಿಸುವುದಿಲ್ಲ. ತದ್ವಿರುದ್ಧ ನಾವು ಇಸ್ಲಾಮಿ ಆಕ್ರಮಣಗಳ ಇತಿಹಾಸವನ್ನು ನೋಡಿದರೆ, ಇಸ್ಲಾಮಿ ರಾಜನು ಗೆದ್ದ ನಂತರ ಅವನು ಸೋತ ಹಿಂದೂ ರಾಜನ ಪ್ರಜೆಗಳ ಮೇಲೆ ದೌರ್ಜನ್ಯ ನಡೆಸಿರುವುದು ಕಂಡು ಬರುತ್ತದೆ. ಹಿಂದೂ ಸಂಸ್ಕೃತಿ ಮತ್ತು ಇಸ್ಲಾಮೀ ಉಗ್ರವಾದದಲ್ಲಿನ ಈ ಮೂಲಭೂತ ವ್ಯತ್ಯಾಸವನ್ನು ನಾವು ತಿಳಿದುಕೊಳ್ಳಬೇಕು. ಅಲ್ಲಾಉದ್ದೀನ ಖಿಲ್ಜಿಯಿಂದಾದ ಅವಮಾನ ಮತ್ತು ದೌರ್ಜನ್ಯವನ್ನು ಸಹಿಸಿಕೊಳ್ಳುವುದಕ್ಕಿಂತ ರಾಣಿ ಪದ್ಮಿನಿಯು ೧೪ ಸಾವಿರ ಹಿಂದೂ ಸ್ತ್ರಿಯರೊಂದಿಗೆ ಜೋಹಾರ ಸ್ವೀಕಾರ ಮಾಡಿರುವುದು ನಮ್ಮೆಲ್ಲರಿಗೂ ತಿಳಿದಿದೆ. ಇದರ ಒಂದೇ ಕಾರಣವೆಂದರೆ, ಈ ಜಿಹಾದಿಯು ಯುದ್ಧವನ್ನು ಗೆದ್ದ ನಂತರ ಅವನು ಮಹಿಳೆಯರ ಮಾನಹಾನಿ ಮಾಡುವುದು ಖಚಿತವಾಗಿತ್ತು. ಇಂತಹ ಒಂದೆರಡಲ್ಲ, ಮೂರು ಜೋಹಾರವನ್ನು ನಮ್ಮ ಈ ಭಾರತಭೂಮಿಯು ನೋಡಿದೆ.

೪. ಹಿಂದವೀ ಸ್ವರಾಜ್ಯವನ್ನು ವಿಸ್ತರಿಸುವ ಸಲುವಾಗಿಯೇ ಛತ್ರಪತಿ ಶಿವಾಜಿ ಮಹಾರಾಜರ ದಕ್ಷಿಣ ದಿಗ್ವಿಜಯ ದಂಡಯಾತ್ರೆ !

ಪ್ರಭು ಶ್ರೀರಾಮಚಂದ್ರ, ಭಗವಾನ ಶ್ರೀಕೃಷ್ಣ ಇವರ ಪರಂಪರೆಯನ್ನು ಮುನ್ನಡೆಸುವ ಈ ಛತ್ರಪತಿ ಶಿವಾಜಿ ಮಹಾರಾಜರು ಸಹ ಪ್ರಭು ಶ್ರೀರಾಮರ ರಾಜಸೂಯ ಯಾಗದಂತೆಯೇ ದಕ್ಷಿಣ ದಿಗ್ವಿಜಯ ದಂಡಯಾತ್ರೆಯನ್ನು ಪ್ರಾರಂಭಿಸಿದರು. ಇದಕ್ಕೆ ‘ಜನರನ್ನು ಮುಸಲ್ಮಾನ ಬಾದಶಾಹರ ಅತ್ಯಾಚಾರದಿಂದ ಮುಕ್ತಗೊಳಿಸಿ ಧರ್ಮ ಸಂಸ್ಥಾಪನೆ ಮಾಡುವುದೊಂದೇ ಕಾರಣವಾಗಿತ್ತು !’ ಮಹಾರಾಜರು ಹಿಂದೂ ಆಗಿರುವುದರಿಂದ ಅದನ್ನು ತನ್ನ ಕರ್ತವ್ಯವೆಂದು ತಿಳಿದುಕೊಂಡಿದ್ದರು. ಇದಕ್ಕೆ ಸಂಬಂಧಿಸಿ ಕಾಶಿ ವಿಶ್ವೇಶ್ವರದಲ್ಲಿ ಜಿಝಿಯಾ ತೆರಿಗೆಯನ್ನು ಹೇರಿದ ಔರಂಗಜೇಬನಿಗೆ ಛತ್ರಪತಿ ಶಿವಾಜಿ ಮಹಾರಾಜರು ಸ್ಪಷ್ಟೀಕರಣವನ್ನು ಕೇಳುವ ಪತ್ರವನ್ನು ಕಳುಹಿಸಿದ್ದರು ಮತ್ತು ಜಿಝಿಯಾ ತೆರಿಗೆಯನ್ನು ರದ್ದುಪಡಿಸುವಂತೆ ಬೇಡಿಕೆಯನ್ನಿಟ್ಟಿದ್ದರು.

೫. ಕುತುಬಶಹಾನಿಗೆ ‘ನನ್ನನ್ನು ಗೌರವಿಸಲು ನನ್ನ ರಾಜರು (ಶಿವಾಜಿ) ಸಕ್ಷಮವಾಗಿದ್ದಾರೆ’, ಎಂದು ಸ್ವಾಭಿಮಾನದಿಂದ ಉತ್ತರಿಸಿದ ಯೇಸಾಜಿ ಕಂಕ !

ಮಹಾರಾಜರು ದಕ್ಷಿಣ ದಿಗ್ವಿಜಯ ದಂಡಯಾತ್ರೆಯನ್ನು ಕರ್ನಾಟಕದಿಂದ ಆರಂಭಿಸಿದರು. ಭಾಗ್ಯಾನಗರದಲ್ಲಿನ ಗೋಲ್ಕೊಂಡಾದಲ್ಲಿ ಕುತುಬಶಹಾ ಎಂಬವನು ರಾಜ್ಯವಾಳುತ್ತಿದ್ದನು. ಅವನ ಎಲ್ಲ ವಿಶ್ವಾಸವು ತನ್ನ ಸೇನಾಪತಿ ಮದಾಣ್ಣ ಇವರ ಮೇಲಿತ್ತು. ಮದಾಣ್ಣನವರು ಕುತುಬಶಹಾ ಮತ್ತು ಛತ್ರಪತಿ ಶಿವಾಜಿ ಮಹಾರಾಜರ ಭೇಟಿ ಮಾಡಿಸಿ ಅವರಲ್ಲಿ ಮೈತ್ರಿಯ ಒಪ್ಪಂದವನ್ನು ಮಾಡಿಸಿದರು. ಭಾಗ್ಯಾನಗರದಲ್ಲಿ ಛತ್ರಪತಿ ಶಿವಾಜಿ ಮಹಾರಾಜರು ಮತ್ತು ಕುತುಬಶಹಾ ಇವರ ಭೇಟಿ ಮತ್ತು ಒಪ್ಪಂದವಾಯಿತು. ಅದರಲ್ಲಿ ಕುತುಬಶಹಾನು ‘ನಮ್ಮಿಂದ ಸ್ವರಾಜ್ಯಕ್ಕೆ ತೊಂದರೆಯಾಗಲಿಕ್ಕಿಲ್ಲ’, ಎಂದು ಹೇಳಿದನು. ಭೇಟಿಯ ಸಮಯದಲ್ಲಿ ಕುತುಬಶಹಾನು ತನ್ನ ವೈಭವವನ್ನು ತೋರಿಸಲು ಛತ್ರಪತಿ ಶಿವಾಜಿ ಮಹಾರಾಜರಿಗೆ ಅವನಲ್ಲಿದ್ದ ೧೦೦೦ ಆನೆಗಳನ್ನು ತೋರಿಸಿ ‘ನಿಮ್ಮಲ್ಲಿ ಎಷ್ಟು ಆನೆಗಳಿವೆ ?’, ಎಂದು ಕುತ್ಸಿತವಾಗಿ ವಿಚಾರಿಸಿದನು. ಮಹಾರಾಜರು ಚತುರರಾಗಿದ್ದರು. ಅವರು ಕುತುಬಶಹಾನಿಗೆ, “ನಮ್ಮದು ಗುಡ್ಡಗಾಡು ಪ್ರದೇಶವಾಗಿದೆ. ನಮಗೆ ಆನೆಯ ಅವಶ್ಯಕತೆಯೇನಿದೆ ? ಆದರೆ ನಮ್ಮಲ್ಲಿ ಆನೆಯಷ್ಟು ಬಲಶಾಲಿಗಳಾದ ಸಾವಿರ ಜನರಿದ್ದಾರೆ”, ಎಂದರು, ಅದಕ್ಕೆ ಕುತುಬಶಹಾನು ಮಹಾರಾಜರಿಗೆ, “ಅದರಲ್ಲಿನ ಒಬ್ಬಿಬ್ಬರನ್ನು ಜೊತೆಗೆ ಕರೆದುಕೊಂಡು ಬಂದಿದ್ದೀರಾ ?”, ಎಂದು ಕೇಳಿದನು. ಮಹಾರಾಜರು ಯೇಸಾಜಿ ಕಂಕನ ಕಡೆಗೆ ನೋಡಿ “ನಮ್ಮ ಯೇಸಾಜಿ ಅವರಲ್ಲಿ ಒಬ್ಬನು” ಎಂದರು. ಆಗ ಕುತುಬಶಹಾನು ಇವನನ್ನು ಪರೀಕ್ಷಿಸಬಹುದೇ ? ಎಂದು ಕೇಳಿದಾಗ ಮಹಾರಾಜರು ಒಪ್ಪಿದರು. ಅದಕ್ಕನುಸಾರ ಕುತುಬಶಹಾನು ಆನೆಗೆ ಮದ್ಯವನ್ನು ಕುಡಿಸಿ ತೀಕ್ಷ್ಣ ಆಯುಧದಿಂದ ತಿವಿದು ಆಳವಾದ ಹೊಂಡದಲ್ಲಿ ಬಿಡುವಂತೆ ಆದೇಶಿಸಿದನು. ಈ ಅಮಲೇರಿದ ಆನೆಯೊಂದಿಗೆ ಹೋರಾಡಲು ಯೇಸಾಜಿ ಕಂಕ ಇವರು ಕಣಕ್ಕೆ ಇಳಿದರು. ತಲೆತಿರುಕ ಆನೆ ಭಯಂಕರವಾಗಿರುತ್ತದೆ; ಆದರೂ ಯೇಸಾಜಿ ಕಂಕ ಒಂದು ಕತ್ತಿಯಿಂದ ಆನೆಯ ಸೊಂಡಿಲನ್ನು ಕತ್ತರಿಸಿದರು. ಅದರಿಂದ ಆನೆ ಕುಸಿಯಿತು. ಯೇಸಾಜಿ ಕಂಕರ ಪರಾಕ್ರಮವನ್ನು ನೋಡಿ ಕುತುಬಶಹಾ ತನ್ನ ಕೊರಳಲ್ಲಿದ್ದ ಚಿನ್ನದ ಹಾರವನ್ನು ತೆಗೆದು ಯೇಸಾಜಿ ಕಂಕರಿಗೆ ಕೊಡಲು ಹೋದನು. ಆಗ ಯೇಸಾಜಿ ಕಂಕರು ಕುತುಬಶಹಾನಿಗೆ ಸ್ವಾಭಿಮಾನದಿಂದ “ನನ್ನನ್ನು ಗೌರವಿಸಲು ನನ್ನ ರಾಜರು (ಶಿವಾಜಿಯವರು) ಸಮರ್ಥರಾಗಿದ್ದಾರೆ. ನನಗೆ ನಿಮ್ಮ ಉಡುಗೊರೆಯ ಅವಶ್ಯಕತೆಯಿಲ್ಲ” ಎಂದು ದಿಟ್ಟವಾಗಿ ಉತ್ತರಿಸಿದರು. ಇದನ್ನೇ ರಾಷ್ಟ್ರೀಯ ಚಾರಿತ್ರ್ಯ ಎನ್ನಲಾಗುತ್ತದೆ, ಇದು ಮಹಾರಾಜರ ಚಾರಿತ್ರ್ಯಸಂಪನ್ನ ಆಚರಣೆಯಿಂದ ಇತರರಲ್ಲಿಯೂ ನಿರ್ಮಾಣವಾಗಿತ್ತು. ಆದರೆ ಇಂದು ನಮ್ಮ ಸ್ವಘೋಷಿತ (ತಥಾಕಥಿತ) ವಿಚಾರವಾದಿಗಳು ಪಾಕಿಸ್ತಾನಕ್ಕೆ ಹೋಗಿ ಪುರಸ್ಕಾರವನ್ನು ಪಡೆಯುತ್ತಾರೆ, ಸತ್ಕಾರ ಮಾಡಿಸಿಕೊಳ್ಳುತ್ತಾರೆ. ಇಂತಹವರು ಶತ್ರುರಾಷ್ಟ್ರದ ಸನ್ಮಾನವನ್ನು ತುಚ್ಛವೆಂದು ತಿಳಿದು ಭಾರತದ ಸ್ವಾಭಿಮಾನವನ್ನು ತೋರಿಸಬೇಕಿತ್ತು; ಆದರೆ ದುರದೃಷ್ಠವಶಾತ್ ಛತ್ರಪತಿ ಶಿವಾಜಿ ಮಹಾರಾಜರ ಭಾರತಭೂಮಿಯಲ್ಲಿ ಇಂತಹ ಸ್ವಾಭಿಮಾನಶೂನ್ಯ ವ್ಯಕ್ತಿಗಳು ಜನ್ಮ ತಾಳಿದ್ದಾರೆ. ಶಾಲೆಯ ಪಠ್ಯಪುಸ್ತಕದಿಂದ ಛತ್ರಪತಿ ಶಿವಾಜಿ ಮಹಾರಾಜರ ಚರಿತ್ರೆಯನ್ನು ಇದ್ದ ಹಾಗೆಯೇ ಕಲಿಸಿದರೆ, ಯೇಸಾಜಿ ಕಂಕ ಇವರಂತಹ ಸ್ವಾಭಿಮಾನಿ ಪೀಳಿಗೆಗಳು ನಿರ್ಮಾಣವಾಗುವವು, ಅದರಿಂದ ಭಾರತದ ಸ್ವಾಭಿಮಾನ ಶಾಶ್ವತವಾಗಿರುವುದು.

೬. ‘ರಾಜನು ಹೇಗಿರಬೇಕು ?’, ಎಂಬುದರ ಆದರ್ಶವನ್ನು ಹಾಕಿಕೊಡುವ ಛತ್ರಪತಿ ಶಿವಾಜಿ ಮಹಾರಾಜರು !

ಶಿವಾಜಿ ಮಹಾರಾಜರು ಇವೆಲ್ಲ ಪ್ರಸಂಗಗಳು ನಡೆಯುತ್ತಿರುವಾಗ ತಲೆತಗ್ಗಿಸಿ ಕುಳಿತಿದ್ದರು. ಆಗ ಕುತುಬಶಹಾನು ಛತ್ರಪತಿಯವರ ಬಳಿ ‘ನಿಮ್ಮ ಸೈನಿಕನ ಪರಾಕ್ರಮವನ್ನು ನೀವೇಕೆ ನೋಡಲಿಲ್ಲ ? ಎಂದು ವಿಚಾರಿಸಿದರು. ಆಗ ಛತ್ರಪತಿ ಶಿವಾಜಿ ಮಹಾರಾಜರು ನೀಡಿದ ಉತ್ತರವು ಪ್ರತಿಯೊಬ್ಬರೂ ನೆನಪಿಡುವ ಹಾಗಿದೆ. ಛತ್ರಪತಿ ಶಿವಾಜಿ ಮಹಾರಾಜರು “ತನ್ನ ಮನೋರಂಜನೆಗಾಗಿ ಪ್ರಾಣಿಗಳ ವಧೆ ಮಾಡುವುದು ಅಥವಾ ಅವುಗಳ ಜೀವದೊಂದಿಗೆ ಚೆಲ್ಲಾಟವಾಡುವುದು, ಇದು ನಮ್ಮ ಸಂಸ್ಕೃತಿಗೆ ಶೋಭಿಸುವುದಿಲ್ಲ; ಆದ್ದರಿಂದ ನಾನು ಅದನ್ನು ನೋಡಲಿಲ್ಲ” ಎಂದುತ್ತರಿಸುತ್ತಾರೆ.  ರಾಜನು ಹೇಗಿರಬೇಕು ? ಎಂಬುದರ ಆದರ್ಶ ಪ್ರಸಂಗ ಇದಾಗಿದೆ !

೭. ‘ಮೊದಲು ವಿವಾಹ ಕೊಂಢಾಣದ್ದು’, ಈ ಪರಂಪರೆಯ ಎರಡನೆಯ ಸರದಾರ ಅಂದರೆ ಸರ್ಜೆರಾವ್ ಜೆಧೆ !

ಸರ್ಜೆರಾವ್ ಜೆಧೆ ಛತ್ರಪತಿಯ ಜೊತೆಗೆ ದಕ್ಷಿಣ ದಿಗ್ವಿಜಯ ದಂಡಯಾತ್ರೆಯಲ್ಲಿರುವಾಗ ಮಹಾರಾಷ್ಟ್ರದಲ್ಲಿ ಅವರ ಸ್ವಂತ ಮಗನು ಹಣೆಗೆ ಬಾಣ ತಗಲಿ ಮರಣ ಹೊಂದಿದ್ದನು. ಅವನ ಪತ್ನಿ ಅಂದರೆ ಸರ್ಜೆರಾವ್ ಇವರ ಸೊಸೆ ಸತಿಯಾಗಲಿಕ್ಕಿದ್ದಳು. ಈ ವಾರ್ತೆಯು ದಕ್ಷಿಣದಲ್ಲಿದ್ದ ಛತ್ರಪತಿಯವರಿಗೆ ತಿಳಿದಾಗ ಅವರು ಸರ್ಜೆರಾವ್ ಇವರಿಗೆ ಮಹಾರಾಷ್ಟ್ರಕ್ಕೆ ಹಿಂತಿರುಗಲು ಹೇಳಿದರು; ಆದರೆ ಸರ್ಜೆರಾವ್ ಅವರು “ಹೇಗೂ ನನಗೆ ನನ್ನ ಮಗನ ಅಂತ್ಯಸಂಸ್ಕಾರಕ್ಕೆ ತಲುಪಲು ಸಾಧ್ಯವಾಗಲಿಕ್ಕಿಲ್ಲ. ಆದ್ದರಿಂದ ನಾವು ಕೈಗೊಂಡಿರುವ ದಂಡಯಾತ್ರೆಯನ್ನು ಪೂರ್ಣಗೊಳಿಸಿಯೇ ಹೋಗುತ್ತೇನೆ ಎಂದು ಹೇಳಿದರು. ರಾಷ್ಟ್ರೀಯ ಕರ್ತವ್ಯವನ್ನು ನಿರ್ವಹಿಸುವಾಗ ತನ್ನ ಮಗನ ಬಗೆಗಿನ ಕರ್ತವ್ಯವನ್ನು ಬದಿಗೊತ್ತುವ ಸರ್ಜೆರಾವ್ ಇತಿಹಾಸದಲ್ಲಿ ಅಜರಾಮರರಾದರು; ಏಕೆಂದರೆ, ಅವರಿಗೆ ಈ ಪ್ರೇರಣೆಯು ಛತ್ರಪತಿ ಶಿವಾಜಿ ಮಹಾರಾಜರಿಂದ ಸಿಕ್ಕಿದೆ. ಒಂದು ವೇಳೆ ಇತಿಹಾಸದಲ್ಲಿರುವ ಈ ಚರಿತ್ರೆಯನ್ನು ಭಾವೀ ಪೀಳಿಗೆಗೆ ಕಲಿಸುತ್ತಿದ್ದರೆ, ದೇಶ-ಧರ್ಮಕ್ಕಿಂತ ತನ್ನ ಜಾತಿ ಅಥವಾ ಪಕ್ಷವೇ ಮಹತ್ವದ್ದೆಂದು ನಂಬುವ ಜನರು ಈ ಭೂಮಿಯಲ್ಲಿ ಜನ್ಮ ತಾಳುತ್ತಿರಲಿಲ್ಲ. ಜಗತ್ತಿನಲ್ಲಿ ಯಾವುದೇ ಧರ್ಮದವರಿಗೆ ಲಭಿಸದಷ್ಟು ತೇಜೋಮಯ ಐತಿಹಾಸಿಕ ಸಂಪತ್ತು ಹಿಂದೂಗಳಿಗೆ ಲಭಿಸಿದೆ; ಆದರೆ ನಾವು ನಮ್ಮ ಇತಿಹಾಸವನ್ನು ಮರೆತಿರುವುದರಿಂದ ನಮ್ಮ ದುರ್ಗತಿಯಾಗಿದೆ.

೮. ಸ್ತ್ರೀ ಕೋಟೆರಕ್ಷಕರೊಂದಿಗೆ ಹೋರಾಡುವ ಸರದಾರ ಹಿರೋಜಿ ಫರ್ಜಂದ ಇವರಿಗೆ ಶಿಕ್ಷೆಯನ್ನು ನೀಡುವ ಶಿವಾಜಿ ಮಹಾರಾಜರು !

ದಕ್ಷಿಣ ದಿಗ್ವಿಜಯ ದಂಡಯಾತ್ರೆಯಲ್ಲಿ ಅದ್ಭುತವಾದ ಯಶಸ್ಸನ್ನು ಗಳಿಸಿ ಮಹಾರಾಜರು ಹಿಂತಿರುಗುವ ಪ್ರವಾಸವನ್ನು ಆರಂಭಿಸಿದ್ದರು. ಮಹಾರಾಜರ ತಂಗುವ ಸ್ಥಳವನ್ನು ನಿರ್ಧರಿಸುವ ಹಾಗೂ ಎಲ್ಲ ಸುರಕ್ಷಿತತೆಯ ಕಾರ್ಯವನ್ನು ಮಹಾರಾಜರ ಸರದಾರ ಹಿರೋಜಿ ಫರ್ಜಂಧ ಇವರು ನೋಡುತ್ತಿದ್ದರು. ಅವರು ೪ ದಿನಗಳ ಮೊದಲೇ ಮುಂದೆ ಹೋಗಿ ದಂಡಯಾತ್ರೆ ಹಾಗೂ ತಂಗುವ ಸಿದ್ಧತೆಯನ್ನು ಮಾಡುತ್ತಿದ್ದರು. ಮಹಾರಾಜರು ಬೆಳಗಾವಿಗೆ ಬರುವಾಗ ಅಲ್ಲಿ ಒಂದು ಘಟನೆ ನಡೆಯಿತು. ಬೆಳಗಾವಿಯಿಂದ ಹತ್ತು ಮೈಲು ಅಂತರದಲ್ಲಿ ಬೆಳವಾಡಿಯ ಭುಯೀಕೋಟ್ ಕೋಟೆಯಿತ್ತು. ಈ ಕೋಟೆಯು ಭೂಮಿಯ ಅಡಿಯಲ್ಲಿದ್ದ ಕಾರಣ ಅದಕ್ಕೆ ಭುಯೀಕೋಟ್ ಕೋಟೆ ಎಂದು ಹೇಳಲಾಗುತ್ತದೆ. ಸಾವಿತ್ರಿಬಾಯಿ ದೇಸಾಯಿಯವರು ಈ ಕೋಟೆಯ ರಕ್ಷಕರಾಗಿದ್ದರು. ಅವರ ಪತಿ ನಿಧನರಾಗಿರುವುದರಿಂದ ಅವರು ಸ್ವತಃ ಕೋಟೆಯ ಉಸ್ತುವಾರಿಯನ್ನು ನಿಭಾಯಿಸುತ್ತಿದ್ದರು. ಅವರಿಗೆ ೩ ವರ್ಷದ ಮಗನಿದ್ದನು. ಕೋಟೆಯು ಆದಿಲ್‌ಶಾಹಿಯ ಊರಿನಲ್ಲಿತ್ತು. ಹಿರೋಜಿ ಫರ್ಜಂದ ಇವರು, ಮಹಾರಾಜರು ಬರುವ ಮೊದಲೇ ನಾವು ಈ ಕೋಟೆಯನ್ನು ಸ್ವರಾಜ್ಯಕ್ಕೆ ಸೇರಿಸೋಣ ಎಂದು ವಿಚಾರ ಮಾಡಿದರು ಮತ್ತು ಹಿರೋಜಿ ಫರ್ಜಂದ ಇವರು ಬೆಳವಾಡಿಯ ಕೋಟೆಯ ಮೇಲೆ ಆಕ್ರಮಣ ಮಾಡಿದರು; ಆದರೆ ಸಾವಿತ್ರಿ ದೇಸಾಯಿ ಶೂರಳಾಗಿದ್ದಳು. ಅವಳು ಮೊದಲು ಆ ಆಕ್ರಮಣವನ್ನು ಎದುರಿಸಿ ಹಿಮ್ಮೆಟ್ಟಿಸಿದಳು. ‘ಓರ್ವ ಮಹಿಳೆಯೊಂದಿಗೆ ಮಾಡಿದ ಯುದ್ಧದಲ್ಲಿ ನಾವು ಸೋತೆವು’, ಎಂಬುದು ಮಹಾರಾಜರಿಗೆ ತಿಳಿದರೆ, ನಾವು ಹೇಗೆ ಮುಖ ತೋರಿಸುವುದು, ಎನ್ನುವ ವಿಚಾರದಿಂದ ಫರ್ಜಂದ ಇವರು ರಾಜಕಾರಣ ಮಾಡುತ್ತಾ ಮೊಗಲರ ಸೈನ್ಯವನ್ನು ಜೊತೆಗಿಟ್ಟುಕೊಂಡು ಪುನಃ ಬೆಳವಾಡಿಯ ಕೋಟೆಯ ಮೇಲೆ ಆಕ್ರಮಣ ಮಾಡಿದರು. ಇದರಲ್ಲಿ ಸಾವಿತ್ರಿಬಾಯಿ ದೇಸಾಯಿ ಸೋತರು ಹಾಗೂ ಅವರನ್ನು ಬಂಧಿಸಲಾಯಿತು. ಮಹಾರಾಜರು ಬೆಳಗಾವಿಯಿಂದ ಇಲ್ಲಿಗೆ ಬಂದ ನಂತರ ಅವರಿಗೆ ಹಿರೋಜಿ ಫರ್ಜಂದ ಇವರು ಬೆಳವಾಡಿಯ ಕೋಟೆಯನ್ನು ವಶಪಡಿಸಿರುವ ವಾರ್ತೆಯನ್ನು ನೀಡಿದರು. ಮಹಾರಾಜರು ಅವರಿಗೆ ಕೋಟೆಯ ರಕ್ಷಕರನ್ನು ಉಪಸ್ಥಿತಗೊಳಿಸಲು ಹೇಳಿದರು. ಸಾವಿತ್ರಿಬಾಯಿ ದೇಸಾಯಿಯವರನ್ನು ಉಪಸ್ಥಿತಗೊಳಿಸಲಾಯಿತು, ಆಗ ಸ್ತ್ರೀ ಕೋಟೆಯ ರಕ್ಷಕರನ್ನು ನೋಡಿ ಮಹಾರಾಜರ ಕೋಪ ನೆತ್ತಿಗೇರಿತು. ಮಹಾರಾಜರು ಹಿರೋಜಿ ಫರ್ಜಂದ ಇವರಿಗೆ ‘ಮಹಿಳೆಯೊಂದಿಗೆ ಯುದ್ಧ ಮಾಡುತ್ತೀರಾ ? ನಾಚಿಕೆಯಾಗುವುದಿಲ್ಲವೇ ?’ ಎಂದು ಗದರಿಸಿದರು. ‘ಸ್ತ್ರೀ ಅಂದರೆ ಮರಾಠರ ದೇವರಮನೆಯ ದೇವತೆಯಾಗಿದ್ದಾಳೆ. ಅವಳ ಕೂದಲು ಸಹ ಕೊಂಕಬಾರದು’, ಎಂದು ಸೈನಿಕರಿಗೆ ಮಹಾರಾಜರ ಆದೇಶವಿತ್ತು. ಮಹಾರಾಜರು ಸಾವಿತ್ರಿಬಾಯಿ ದೇಸಾಯಿಯನ್ನು ಕೋಟೆಯ ರಕ್ಷಕರೆಂದು ಗೌರವಿಸಿದರು ಹಾಗೂ ಪಲ್ಲಕಿಯಲ್ಲಿ ಕುಳ್ಳಿರಿಸಿ ಅವರನ್ನು ಬೀಳ್ಕೊಟ್ಟರು.

ಇಂದು ಭಾರತದಲ್ಲಿ ಮಹಿಳೆಯರ ಮೇಲಿನ ಅತ್ಯಾಚಾರಗಳ ಘಟನೆಗಳನ್ನು ನೋಡಿದರೆ ಮಹಾರಾಜರ ಚರಿತ್ರೆಯನ್ನು ಪಠ್ಯಪುಸ್ತಕದಲ್ಲಿ ಕಲಿಸುವುದು ಎಷ್ಟು ಅತ್ಯಾವಶ್ಯಕವಾಗಿದೆ ?, ಎಂಬುದು ಅರಿವಾಗುತ್ತದೆ. ಈ ಚರಿತ್ರೆಯು ಜನರಿಗೆ ಮತ್ತು ರಾಜಕಾರಣಿಗಳಿಗೆ ಇಬ್ಬರಿಗೂ ಉಪಯುಕ್ತವಾಗಿದೆ. ಮಹಾರಾಜರು ಹಿರೋಜಿ ಫರ್ಜಂದ ಇವರಿಗೆ ಒಂದು ಆಶ್ಚರ್ಯಕರವಾದ ಶಿಕ್ಷೆಯನ್ನು ನೀಡಿದರು. ಅದೇನೆಂದರೆ, ಸಾವಿತ್ರಿ ಬಾಯಿ ದೇಸಾಯಿಯ ಪಲ್ಲಕ್ಕಿ ಹೊರುವವನಾಗುವುದು. ಮಹಾರಾಜರ ಸರದಾರನಾಗಿರುವ ಹಿರೋಜಿ ಫರ್ಜಂದರು ಸಾವಿತ್ರಿಬಾಯಿ ದೇಸಾಯಿಯ ಪಲ್ಲಕಿಯ ಹೊರುವವನಾಗಿ ಅವರನ್ನು ಸನ್ಮಾನಪೂರ್ವಕ ಕೋಟೆಗೆ ತಲುಪಿಸಿದರು. ತಪ್ಪು ಮಾಡುವ ವ್ಯಕ್ತಿ ಯಾರೆಂದು ನೋಡದೆ ಶಿಕ್ಷೆ ನೀಡುವ ಮಹಾರಾಜರು ಎಲ್ಲರ ಹಾಗಲ್ಲ ! ಇಂದೂ ಎಷ್ಟೋ ಜನಪ್ರತಿನಿಧಿಗಳ ಮೇಲೆ ಭ್ರಷ್ಟಾಚಾರದ ಆರೋಪವಿದೆ. ಅಪರಾಧ ದಾಖಲಾಗಿದೆ; ಆದರೆ ಅವರಿಗೆ ಅದರ ಬಗ್ಗೆ ಏನೂ ಅನಿಸುವುದಿಲ್ಲ. ಹಿಂದವೀ ಸ್ವರಾಜ್ಯದಲ್ಲಿ ‘ಕ್ಲಾಸ್ ವನ್’ ದರ್ಜೆಯ ಅಧಿಕಾರಿಯಾಗಿದ್ದ ಈ ಸರದಾರ ಫರ್ಜಂದ ಇವರಿಗೆ ಮಹಾರಾಜರು ಶಿಕ್ಷೆಯನ್ನು ವಿಧಿಸುತ್ತಾರೆ, ಇದು ವಿಶೇಷವಾಗಿದೆ ! ಇಲ್ಲಿನ ಪ್ರಜಾಪ್ರಭುತ್ವದಲ್ಲಿ ಮಾತ್ರ ಬಹಿರಂಗವಾಗಿ ಉಗ್ರವಾದಿಗಳ ಹಾಗೂ ಪಾಕಿಸ್ತಾನವನ್ನು ಸಮರ್ಥಿಸುವ ಪಕ್ಷಗಳ ಜನರ ಮೇಲೆ ಪಕ್ಷದ ಅಧಿಕಾರಿಗಳು ಕ್ರಮ ತೆಗೆದುಕೊಳ್ಳುವುದಿಲ್ಲ, ಎಂಬುದನ್ನು ನಾವು ಪ್ರತಿದಿನ ನೋಡುತ್ತೇವೆ.

ಛತ್ರಪತಿ ಶಿವಾಜಿ ಮಹಾರಾಜರು ದಕ್ಷಿಣದ ದಿಗ್ವಿಜಯ ದಂಡಯಾತ್ರೆ ಮತ್ತು ಅದರಿಂದ ಕಂಡು ಬಂದಿರುವ ರಾಷ್ಟ್ರೀಯ ಚರಿತ್ರೆಯನ್ನು ಶಾಲೆಯ ಹಾಗೂ ಮಹಾವಿದ್ಯಾಲಯಗಳಲ್ಲಿನ ಪಠ್ಯಪುಸ್ತಕಗಳಲ್ಲಿ ಸೇರಿಸಿಕೊಂಡರೆ ಒಂದು ಆದರ್ಶ ಹಾಗೂ ರಾಷ್ಟ್ರಪ್ರೇಮಿ ಪೀಳಿಗೆ ಸಿದ್ಧವಾಗಲು ಸಹಾಯವಾಗುವುದು ಎಂಬುದು ಖಂಡಿತ ! ಹೀಗೇ ಆಗಲಿ ಎಂದು ಈಶ್ವರನ ಚರಣಗಳಲ್ಲಿ ಶಿವಾಜಿ ಜಯಂತಿಯ ನಿಮಿತ್ತದಲ್ಲಿ ಪ್ರಾರ್ಥನೆ !

– ಶ್ರೀ. ವಿಜಯ ಪಾಟೀಲ, ವಾಪಿ, ಗುಜರಾತ