ಮುಂಬಯಿ – ಸತಾರಾದ ಯಶವಂತರಾವ್ ಚವಾಣ್ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಹೆಸರನ್ನು ಏಕವಚನದಲ್ಲಿ ಉಲ್ಲೇಖಿಸಲಾಗಿದೆ ಎಂದು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಕೆಲವು ವಿದ್ಯಾರ್ಥಿಗಳು ನೀಡಿದ ದೂರಿನನ್ವಯ ಸಹಾಯಕ ಪೊಲೀಸ್ ಅಧಿಕಾರಿ ಆರ್.ಎಸ್. ಗರ್ಜೆ ಇವರು, ಕಾರ್ಯಕ್ರಮದ ಆಯೋಜಕ ಇಂಗ್ಲಿಷ್ ಪ್ರಾಧ್ಯಾಪಕರು ಡಾ. ಮೃಣಾಲಿನಿ ಅಹೆರ್ ಅವರ ಇಲಾಖಾ ವಿಚಾರಣೆ ನಡೆಸಬೇಕು, ಅದಕ್ಕಾಗಿ ಕಾಲೇಜಿಗೆ ಪತ್ರ ಕಳುಹಿಸಲಾಗಿದೆ. ಇದರ ವಿರುದ್ಧ ಅಹೆರ್ ಮುಂಬಯಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದರು. ಈ ವಿಚಾರಣೆಯ ವೇಳೆ ನ್ಯಾಯಾಲಯವು ಪೊಲೀಸ್ ಅಧಿಕಾರಿ ಗರ್ಜೆ ಅವರನ್ನೇ ವಿಚಾರಣೆಗೊಳಪಡಿಸಿದರು.
1. ನ್ಯಾಯಮೂರ್ತಿ ರೇವತಿ ಡೆರೆ ಮತ್ತು ನ್ಯಾಯಮೂರ್ತಿ ಪೃಥ್ವಿರಾಜ್ ಚವಾಣ್ ಅವರ ಪೀಠದ ಮುಂದೆ ಜುಲೈ 26 ರಂದು ವಿಚಾರಣೆ ನಡೆಯಿತು. ಕಾ. ಗೋವಿಂದ್ ಪನ್ಸಾರೆ ಅವರ ‘ಶಿವಾಜಿ ಕೋಣ ಹೋತಾ?’ (ಶಿವಾಜಿ ಯಾರಾಗಿದ್ದ) ಪುಸ್ತಕವನ್ನು ಉಲ್ಲೇಖಿಸಿ ಮಹಾರಾಜರನ್ನು ಏಕವಚನದಲ್ಲಿ ಉಲ್ಲೇಖಿಸಿದ್ದಕ್ಕಾಗಿ ಪ್ರಾಧ್ಯಾಪಕರ ವಿರುದ್ಧ ಕ್ರಮ ಕೈಗೊಳ್ಳುವುದು ಮತ್ತು ಇಲಾಖಾ ವಿಚಾರಣೆಗೆ ಕಾಲೇಜಿಗೆ ಪತ್ರ ಕಳುಹಿಸುವುದು ಇದು ಯಾವ ರೀತಿಯ ಪ್ರಜಾಪ್ರಭುತ್ವ ಎಂದು ನ್ಯಾಯಾಲಯ ಪ್ರಶ್ನಿಸಿತು.
2. ಈ ವೇಳೆ ಪೊಲೀಸ್ ಅಧಿಕಾರಿ ಗರ್ಜೆ ಅವರು ವಿಶೇಷಾಧಿಕಾರಗಳ ಗರಿಷ್ಠ ಮಿತಿಗೆ ತಲುಪಿದ್ದಾರೆ ಎಂದು ನಮೂದಿಸಿ ಕಳುಹಿಸಿದ್ದ ಪತ್ರವನ್ನು ಹಿಂಪಡೆಯುವಂತೆ ಆದೇಶಿಸಿದ್ದಾರೆ. ಈ ಬಗ್ಗೆ ಸರಕಾರದ ಪರವಾಗಿ ವಕೀಲ ಹಿತೇನ್ ವೆನೆಗಾಂವ್ಕರ್ ಅವರು ಪತ್ರವನ್ನು ಹಿಂಪಡೆಯುವುದಾಗಿ ಭರವಸೆ ನೀಡಿದರು.
ಕಾಂ. ಗೋವಿಂದ್ ಪನ್ಸಾರೆ ಅವರ ‘ಶಿವಾಜಿ ಕೋಣ ಹೋತಾ ?’, ಪುಸ್ತಕವನ್ನು ಅನೇಕ ಶಿವಾಜಿ ಮಹಾರಾಜ ಪ್ರೇಮಿಗಳು ಆಕ್ಷೇಪಿಸಿದ್ದಾರೆ.
ಏನಿದು ಪ್ರಕರಣ ?ಯಶವಂತರಾವ್ ಚವ್ಹಾಣ ಕಾಲೇಜಿನಲ್ಲಿ ಆಗಸ್ಟ್ ಕ್ರಾಂತಿ ದಿನದ ನಿಮಿತ್ತ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಪ್ರೊ. ಡಾ. ವಿನಾಯಕರಾವ್ ಜಾಧವ್ ರಾಷ್ಟ್ರಪುರುಷರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ. ಕಾರ್ಯಕ್ರಮಕ್ಕೆ ಬಂದಿದ್ದ ಕೆಲ ವಿದ್ಯಾರ್ಥಿಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿದರು. ಆ ಸಮಯದಲ್ಲಿ ಪ್ರೊ. ಡಾ. ವಿನಾಯಕರಾವ್ ಜಾಧವ್ ಇವರು. ಕಾ. ಗೋವಿಂದ್ ಪನ್ಸಾರೆಯವರ ‘ಶಿವಾಜಿ ಕೋಣ ಹೋತೆ ?’ ಪುಸ್ತಕವನ್ನು ಉಲ್ಲೇಖಿಸಲಾಗಿದೆ. ಛತ್ರಪತಿ ಶಿವಾಜಿ ಮಹಾರಾಜರನ್ನು ಏಕ ವಚನದಲ್ಲಿ ಉಲ್ಲೇಖವಿರುವ ಪುಸ್ತಕದ ಉಲ್ಲೇಖವು ವಿದ್ಯಾರ್ಥಿಗಳನ್ನು ಮತ್ತಷ್ಟು ಕೆರಳಿಸಿತು. ಹಾಗಾಗಿ ಈ ಕಾರ್ಯಕ್ರಮದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. |
ಸಂಪಾದಕೀಯ ನಿಲುವುರಾಷ್ಟ್ರನಾಯಕರನ್ನು ಏಕವಚನದಲ್ಲಿ ಉಲ್ಲೇಖಿಸುವವರ ವಿರುದ್ಧ ಸರಕಾರ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಎಲ್ಲಾ ರಾಷ್ಟ್ರಪ್ರೇಮಿಗಳ ಒತ್ತಾಯವಿದೆ ! |