ದೇಶಬಾಂಧವರೇ, ರಾಷ್ಟ್ರಭಕ್ತರಾಗಿದ್ದರೆ ಮಾತ್ರ, ನಿಮಗೆ ಸ್ವಾತಂತ್ರ್ಯದಿನವನ್ನು ಆಚರಿಸುವ ಅಧಿಕಾರವಿದೆ !

(ಪೂ.) ಶ್ರೀ. ಸಂದೀಪ ಆಳಶಿ,

ಇಂದು ನಾವು ಉಪಭೋಗಿಸುತ್ತಿರುವ ರಾಷ್ಟ್ರದ ಸ್ವಾತಂತ್ರ್ಯ ವನ್ನು ನಮಗೆ ಯಾರೂ ದಾನ ವೆಂದು ಕೊಟ್ಟದ್ದಲ್ಲ, ಆದರೆ ಛತ್ರಪತಿ ಶಿವಾಜಿ ಮಹಾರಾಜರಂತಹ ರಾಷ್ಟ್ರಪುರುಷರು, ಸ್ವಾತಂತ್ರ್ಯ ಸೈನಿಕರು ಮತ್ತು ರಾಷ್ಟ್ರದ ಗಡಿಯಲ್ಲಿ ಹೋರಾಡುವ ಸೈನಿಕರು ಸುರಿಸಿದ ರಕ್ತ ಮತ್ತು ಬೆವರುಗಳ ಹನಿಹನಿಗಳಿಂದ ನಮಗೆ ಸ್ವಾತಂತ್ರ್ಯವು ಲಭಿಸಿದೆ ! ಈ ಶೂರವೀರರು ಒಂದು ಕೈಯಲ್ಲಿ ತುಳಸಿಪತ್ರ ಮತ್ತು ಒಂದು ಕೈಯಲ್ಲಿ ಪ್ರಜ್ವಲಿತ ಕೆಂಡ ಹಿಡಿದುಕೊಂಡೇ ಭಾರತ ಮಾತೆಗೆ ಸವಾಲು ನೀಡಿದ್ದರು, ಹೇಳು ಮಾತೆ, ನಿನಗಾಗಿ ಮನೆಮಠಕ್ಕೆಲ್ಲ ತುಳಸಿಪತ್ರವನ್ನಿಡಲೋ ಅಥವಾ ಕೆಂಡವನ್ನು ಇಡಲಿ ?

ದೇಶಬಾಂಧವರೇ, ನಾವು ರಾಷ್ಟ್ರವನ್ನು ಪ್ರೀತಿಸುತ್ತೇವೆ, ಆದರೆ ರಾಷ್ಟ್ರಭಕ್ತಿ ಮಾಡುವುದಿಲ್ಲ. ಪ್ರೀತಿಯು ಭಾವನಾಸ್ತರ ದ್ದಾಗಿರುತ್ತದೆ. ಭಕ್ತಿಯು ತ್ಯಾಗದ ಸ್ತರದ್ದಾಗಿರುತ್ತದೆ. ನಮಗೆ ಗಡಿಗೆ ಹೋಗಿ ಶತ್ರುಗಳೊಂದಿಗೆ ಹೋರಾಡಲು ಆಗುವುದಿಲ್ಲ, ಆದರೆ ರಾಷ್ಟ್ರಭಕ್ತರಾಗಿರಲು ಸಂಕಲ್ಪ ಮಾಡೋಣ, ಇಂದಿನಿಂದ ನಾನು ಯಾವುದೇ ಭ್ರಷ್ಟಾಚಾರವಾಗಲು ಬಿಡುವುದಿಲ್ಲ, ರಾಷ್ಟ್ರಧ್ವಜ-ರಾಷ್ಟ್ರಗೀತೆ ಇವುಗಳ ಅವಮಾನವನ್ನು ತಡೆಗಟ್ಟುವೆನು, ನನ್ನ ಸ್ವಂತದ ಮತ್ತು ಎಲ್ಲ ಮಾತೆ ಸಹೋದರಿಯರ ರಕ್ಷಣೆಗಾಗಿ ಸ್ವರಕ್ಷಣಾ ತರಬೇತಿ ಪಡೆಯುವೆನು, ಅನ್ಯಾಯಪೀಡಿತ ಹಿಂದೂ ಬಾಂಧವನ ಸಹಾಯಕ್ಕೆ ತತ್ಪರನಾಗಿ ಧಾವಿಸುವೆನು. ಈ ಸಂಕಲ್ಪಕ್ಕನುಸಾರ ಕೃತಿ ಮಾಡಿದರೆ ಮಾತ್ರ, ನಮಗೆ ಸ್ವಾತಂತ್ರ್ಯದಿನವನ್ನು ಆಚರಿಸುವ ಅಧಿಕಾರವಿದೆ !

– (ಪೂ.) ಸಂದೀಪ ಆಳಶಿ (೮.೮.೨೦೧೯)