‘ನಮಸ್ಕಾರ ಮಾಡುವುದು’, ಇದು ಹಿಂದೂಗಳ ಮನಸ್ಸಿನ ಮೇಲಿರುವ ಒಂದು ಸಾತ್ತ್ವಿಕ ಸಂಸ್ಕಾರ !

‘ನನ್ನ ತಂದೆ ದಿವಂಗತ ಶಂಕರ ಖಂಡೋಜಿ ದಾಭೋಲಕರರು ಮೂಲತಃ ಸಾತ್ತ್ವಿಕರಾಗಿದ್ದರು. ಅವರು ಸ್ನೇಹ ಪರರಾಗಿದ್ದರು.ಅವರಿಗೆ ಸುತ್ತಮುತ್ತಲಿನ ಅನೇಕ ಜನರೊಂದಿಗೆ ಪರಿಚಯವಿತ್ತು. ಅವರು ಯಾವಾಗಲೂ ಸೈಕಲ್‌ ನಲ್ಲಿ ಪ್ರವಾಸ ಮಾಡುತ್ತಿದ್ದರು. ಅವರು ದಾರಿಯಲ್ಲಿ ಹೋಗು ವಾಗ ಅವರಿಗೆ ಪರಿಚಿತ ವ್ಯಕ್ತಿಗಳು ಕಂಡು ಬಂದರೆ ಅವರಿಗೆ ನಮಸ್ಕಾರ ಮಾಡುತ್ತಿದ್ದರು. ನಾನು ಕೆಲವೊಮ್ಮೆ ಅವರ ಜೊತೆಗೆ ಹೋಗುತ್ತಿದ್ದೆನು. ಆಗ ಅವರ ಈ ಕೃತಿ ನನಗೆ ಅಯೋಗ್ಯವೆನಿಸುತ್ತಿತ್ತು. ಅವರು ಪರಿಚಿತ ವ್ಯಕ್ತಿಗಳಿಗೆ ನಮಸ್ಕಾರ ಮಾಡಿದಾಗ ಕೆಲವರು ಅವರ ಕಡೆಗೆ ನೋಡಿ ಪ್ರತಿಕ್ರ್ರಿಯಿಸುತ್ತಿದ್ದರು ಮತ್ತು ಕೆಲವರು ಅವರ ಕಡೆಗೆ ನೋಡುತ್ತಲೂ ಇರಲಿಲ್ಲ. ಆಗ ‘ತಂದೆಯವರು ಹೀಗೆ ಮಾಡಬಾರದು’, ಎಂದು ನನಗೆ ಅನಿಸುತ್ತಿತ್ತು. ನಾನು ಸುಮಾರು ೧೪-೧೫ ವರ್ಷದವನಾದ ನಂತರ ‘ಅವರಲ್ಲಿನ ಈ ಗುಣದ ಬೀಜ ನನ್ನ ಮನಸ್ಸಿನಲ್ಲಿ ಯಾವಾಗ ಅಂಕುರಿಸಿತೋ ?’. ಎಂಬುದು ನನಗೆ ಗೊತ್ತಾಗಲೇ ಇಲ್ಲ. (ಒಂದು ಸಲ ಪ.ಪೂ. ಡಾಕ್ಟರರು ನನಗೆ, ”ನಿಮ್ಮ ತಂದೆಯವರು ಸಂತರಾಗಿದ್ದರು”, ಎಂದು ಹೇಳಿದರು.”)

(ಪೂ.) ಗುರುನಾಥ ದಾಭೋಲಕರ

ನನ್ನಲ್ಲಿರುವ ಈ ಗುಣವನ್ನು ಕೆಲವರು ಮೆಚ್ಚಿಕೊಳ್ಳುತ್ತಾರೆ ಮತ್ತು ಕೆಲವು ಜನರಿಗೆ ನಾನು ಆ ರೀತಿ ಮಾಡು ವುದು ಅಯೋಗ್ಯವೆನಿಸುತ್ತದೆ. ನಾನು ಕುಡಾಳದಲ್ಲಿರುವ ಸನಾತನದ ಸೇವಾಕೇಂದ್ರದಲ್ಲಿರುವಾಗ ಒಂದು ಸತ್ಸಂಗದಲ್ಲಿ ಓರ್ವ ಹಿರಿಯ ಸಾಧಕರು, ”ಏನು ಈ ದಾಭೋಲಕರ, ಯಾವಾಗ ನೋಡಿದರೂ ಯಾರ್ಯಾರಿಗೋ ನಮಸ್ಕಾರ ಮಾಡುತ್ತಿರುತ್ತಾನೆ”, ಎಂದು ಹೇಳಿದರು. ಅವರ ಈ ನುಡಿಗಳನ್ನು ಕೇಳಿ ನನ್ನ ಮನಸ್ಸು ಸ್ವಲ್ಪ ಮಟ್ಟಿಗೆ ಅಸ್ಥಿರವಾಯಿತು. ಆಗ ನನಗೆ, ‘ನನ್ನ ಈ ಅಭ್ಯಾಸವನ್ನು ಹೇಗೆ ನಿಯಂತ್ರಣಕ್ಕೆ ತರುವುದು ?’, ಎಂಬ ವಿಚಾರ ಬಂದಿತು. ಆದರೆ ಮನಸ್ಸು ಹೇಳಿದ್ದನ್ನು, ಶರೀರ ಸ್ವೀಕರಿಸು ತ್ತಿರಲಿಲ್ಲ. ‘ಪ್ರತಿಯೊಬ್ಬರಲ್ಲಿ ದೇವರ ಅಂಶವಿದೆ’, ಎಂದು ಪರಾತ್ಪರ ಗುರು ಡಾ. ಆಠವಲೆಯವರ ಬೋಧನೆ ಇದೆ. ಕಾಣುವ ಪ್ರತಿಯೊಬ್ಬ ವ್ಯಕ್ತಿಗೂ ನಮಸ್ಕಾರ ಮಾಡುವ ಅಭ್ಯಾಸವನ್ನು ಬಿಟ್ಟುಬಿಡುವ ನನ್ನ ಆ ವಿಚಾರ, ಒಂದು ದಿನ ಕಳೆದುಹೋಯಿತು, ಅದು ಹೀಗೆ….

‘ನಮಸ್ಕಾರ ಮಾಡುವುದು’, ಇದು ಹಿಂದೂಗಳ ಮನಸ್ಸಿನ ಮೇಲಿರುವ ಒಂದು ಸಾತ್ತ್ವಿಕ ಸಂಸ್ಕಾರವಾಗಿದೆ !, ಸಮೃದ್ಧ ಹಿಂದೂ ಸಂಸ್ಕೃತಿಯ ಸಂಪ್ರದಾಯವನ್ನು ಸಂರಕ್ಷಿಸುವ ಕೃತಿ, ‘ಭಕ್ತಿಭಾವ, ಪ್ರೇಮ, ಗೌರವ ಮತ್ತು ಲೀನತೆ’ ಇವುಗಳಂತಹ ದೈವೀ ಗುಣಗಳನ್ನು ವ್ಯಕ್ತಪಡಿಸುವ ಒಂದು ಸಹಜ, ಸುಂದರ ಮತ್ತು ಸುಲಭ ಧಾರ್ಮಿಕ ಕೃತಿಯಾಗಿದೆ ! ಎಂದು ನಾನು ಓದಿದಾಗ ನನ್ನ ಮನಸ್ಸಿ ನಲ್ಲಿ, ‘ಯಾರೇ ನಗಲಿ ಅಥವಾ ಏನಾದರೂ ಇರಲಿ, ‘ನಮಸ್ಕಾರ ಮಾಡುವುದನ್ನು’, ಬಿಡಬಾರದು’, ಎಂಬ ದೃಢ ನಿರ್ಧಾರವಾಯಿತು. ನಿಜ ಹೇಳಬೇಕೆಂದರೆ ನನ್ನ ಈ ನಮಸ್ಕಾರದ ಕೃತಿಯಿಂದ ಆಧುನಿಕ ವೈದ್ಯರು, ಉದ್ಯಮಿಗಳು, ವಾಲಿಬಾಲ್‌ ಕ್ರೀಡಾಪಟುಗಳು ಮತ್ತು ಅನೇಕ ಪರಿಚಿತರು ನನ್ನೊಂದಿಗೆ ಜೋಡಿಸಲ್ಪಟ್ಟಿದ್ದಾರೆ. ಅದರಿಂದ ನನಗೆ ಬಹಳ ದೊಡ್ಡ ಲಾಭವಾಗಿದೆ.

ನನ್ನ ಈ ನಮಸ್ಕಾರ ಮಾಡುವ ಕೃತಿಯಿಂದಾಗಿಯೇ ಮೂಲತಃ ನಾನು ಸನಾತನ ಸಂಸ್ಥೆಯ ಸಂಪರ್ಕಕ್ಕೆ ಬಂದಿದ್ದೇನೆ. ಒಂದು ಸಲ ನಾನು ಶ್ರೀ ಸಮರ್ಥ ರಾಮದಾಸಸ್ವಾಮಿಗಳ ಒಂದು ಶ್ಲೋಕವನ್ನು ಓದಿದೆನು.

ನಮಸ್ಕಾರೇಂ ಲೀನತಾ ಘಡೇ | ನಮಸ್ಕಾರೇಂ ವಿಕಲ್ಪ ಮೋಡೇ |

ನಮಸ್ಕಾರೇಂ ಸಖ್ಯ ಘಡೇ | ನಾನಾ ಸತ್ಪಾತ್ರಾಸೀಂ ||

– ದಾಸಬೋಧ, ದಶಕ ೪, ಸಮಾಸ ೬, ದ್ವಿಪದಿ ೧೪

ಅರ್ಥ : ನಮಸ್ಕಾರದಿಂದ ನಮ್ಮಲ್ಲಿ ನಮ್ರತೆ ಬರುತ್ತದೆ, ನಮಸ್ಕಾರದಿಂದ ಮನಸ್ಸಿನಲ್ಲಿರುವ ಸಂದೇಹಗಳು ಇಲ್ಲವಾಗುತ್ತವೆ, ನಮಸ್ಕಾರದಿಂದ ವಿವಿಧ ಸಂತಸಜ್ಜನರೊಂದಿಗೆ ಸ್ನೇಹವುಂಟಾಗುತ್ತದೆ.

ಹೀಗಿರುವಾಗ ನಾನು ನನ್ನ ನಮಸ್ಕಾರ ಮಾಡುವ ಕೃತಿಯನ್ನು ಯಾರೋ ಏನೂ ಹೇಳಿದರೆಂದು ಏಕೆ ಬಿಡಲಿ ? ಪರಾತ್ಪರ ಗುರುದೇವರ ಕೃಪೆಯಿಂದ ಹೊಳೆದ ಈ ಪದಗಳನ್ನು ಅವರ ಸುಕೋಮಲ ಚರಣಗಳಲ್ಲಿ ಸಮರ್ಪಿಸುತ್ತೇನೆ !’

– (ಪೂ.) ಗುರುನಾಥ ದಾಭೋಲಕರ (ಸನಾತನದ ೪೦ ನೇ ಸಂತರು, ವಯಸ್ಸು ೮೪ ವರ್ಷಗಳು), ಸನಾತನ ಆಶ್ರಮ, ದೇವದ, ಪನವೇಲ. (೨೩.೬.೨೦೨೪)