ದೇವಾಲಯಗಳ ರಕ್ಷಣೆಗಾಗಿ ಛತ್ರಪತಿ ಶಿವಾಜಿ ಮಹಾರಾಜರಂತಹ ಆಡಳಿತಗಾರರು ಬೇಕು !

೧. ದೇವಾಲಯಗಳ ರಕ್ಷಣೆಗಾಗಿ ಛತ್ರಪತಿ ಶಿವಾಜಿ ಮಹಾರಾಜರಂತಹ ಆಡಳಿತಗಾರರು ಬೇಕು !

ಶಿರಡಿಯ ಪುಣತಾಂಬಾ ಗ್ರಾಮದ ಮಹಾದೇವ ದೇವಸ್ಥಾನದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ವಿಗ್ರಹವನ್ನು ಧ್ವಂಸಗೊಳಿಸಿ ವಿರೂಪಗೊಳಿಸಿದ್ದಾನೆ. ಹದಿನೈದು ದಿನಗಳ ಹಿಂದೆ ಮಾರುತಿಯ ದೇವಸ್ಥಾನದಲ್ಲಿಯೂ ವಿಗ್ರಹವನ್ನು ಅಪವಿತ್ರಗೊಳಿಸಲಾಗಿತ್ತು.

 ೨. ಖಲಿಸ್ತಾನವಾದಿಗಳು ಈ ಬಗ್ಗೆ ಏಕೆ ಮೌನವಾಗಿದ್ದಾರೆ ?

ಭೋಪಾಲ್‌ನ (ಮಧ್ಯಪ್ರದೇಶ) ಮುಸಲ್ಮಾನ ಬಹುಸಂಖ್ಯಾತ ಜಹಾಂಗೀರಾಬಾದ್‌ ಪ್ರದೇಶದ ಹಳೆಯ ಗಲ್ಲಾ ಮಂಡಿಯಲ್ಲಿ ಮತಾಂಧಸ್ ಮುಸಲ್ಮಾನರು ಸಿಕ್ಖ್‌ರ ಮೇಲೆ ದಾಳಿ ಮಾಡಿದರು.  ಈ ವೇಳೆ ೬ ಜನರು ಗಾಯಗೊಂಡಿದ್ದಾರೆ.

 ೩. ಇಂತಹ ಪಕ್ಷಗಳನ್ನು ನಿಷೇಧಿಸಲು ಆಗ್ರಹಿಸಿ !

೨೦೨೦ ರಲ್ಲಿ ದೆಹಲಿಯಲ್ಲಿ ನಡೆದ ಗಲಭೆಯಲ್ಲಿ ಭಾಗಿಯಾಗಿರುವ ವ್ಯಕ್ತಿಗೆ ಸಂಸದ ಅಸಾದುದ್ದೀನ್‌ ಓವೈಸಿ ಅವರ ಎಂ.ಐ.ಎಂ. ಪಕ್ಷದಿಂದ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿಸುವ ಬಗ್ಗೆ  ಚರ್ಚೆ ನಡೆಯುತ್ತಿದೆ.

 ೪. ಎಲ್ಲೆಡೆಗಳಲ್ಲಿರುವ ಹಿಂದೂಗಳು ಈಗ ಇದನ್ನು ಮಾಡಬೇಕು !

ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಾಗುತ್ತಿರುವ ದೌರ್ಜನ್ಯಕ್ಕೆ ಪ್ರತ್ಯುತ್ತರವೆಂದು ದೆಹಲಿಯ ಕೆಲವು ವ್ಯಾಪಾರಿಗಳು ಬಾಂಗ್ಲಾದೇಶವನ್ನು ಬಹಿಷ್ಕರಿಸಲು ನಿರ್ಧರಿಸಿದ್ದಾರೆ. ಕಾಶ್ಮೀರಿ ಗೇಟ್‌ನಲ್ಲಿ ವಾಹನ ಬಿಡಿಭಾಗಗಳ ೨ ಸಾವಿರ ವ್ಯಾಪಾರಸ್ಥರು ಬಾಂಗ್ಲಾದೇಶದೊಂದಿಗೆ ವ್ಯಾಪಾರವನ್ನು ನಿಲ್ಲಿಸುವುದಾಗಿ ನಿರ್ಧರಿಸಿದ್ದಾರೆ.

 ೫. ಇಡೀ ದೇಶದಲ್ಲಿ ದೇವಾಲಯಗಳ ವಿಮೋಚನೆಗಾಗಿ ಅಭಿಯಾನವನ್ನು ನಡೆಸುವುದು ಅವಶ್ಯಕ !

ಸಮಾಜವಾದಿ ಪಕ್ಷದ ನಾಯಕ ಕೈಶ್‌ ಖಾನ್‌ ಅವರು ಕನೌಜ್‌ (ಉತ್ತರಪ್ರದೇಶ) ನಲ್ಲಿರುವ ೨೦೦ ವರ್ಷಗಳಷ್ಟು ಹಳೆಯ ಶ್ರೀ ಜಾಗೇಶ್ವರ ನಾಥ ಶಿವ ದೇವಾಲಯವನ್ನು ಕಬಳಿಸಿದ್ದಾರೆ ಮತ್ತು ಅಲ್ಲಿ ಅವರು ೩ ಅಂತಸ್ತಿನ ಮನೆಯನ್ನು ನಿರ್ಮಿಸಿದ್ದಾರೆಂದು ಆರೋಪಿಸಲಾಗಿದೆ.

 ೬. ದೇಶದೆಲ್ಲೆಡೆ ಇಂತಹ ಕಾರ್ಯಾಚರಣೆಯಾಗಬೇಕು !

ಸೀತಾಪುರದಲ್ಲಿ (ಉತ್ತರಪ್ರದೇಶ) ಹಲವು ವರ್ಷಗಳಿಂದ ಅಕ್ರಮವಾಗಿ ನಿರ್ಮಿಸಲಾಗಿದ್ದ ಮದರಸಾವನ್ನು ಉಪಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ನೆಲಸಮಗೊಳಿಸಲಾಗಿದೆ. ಬಿಜೆಪಿ ಮುಖಂಡ ಆಶಿಶ್‌ ಚೌಧರಿ ಅವರ ದೂರಿನ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ.

೭. ಇಸ್ಲಾಮಿಕ್‌ ದೇಶಗಳ ಸರಕಾರಗಳ ಜಿಹಾದಿ ಮನಸ್ಥಿತಿಯನ್ನು ತಿಳಿಯಿರಿ !

ಬಾಂಗ್ಲಾದೇಶದ ಹಂಗಾಮಿ ಸರಕಾರವು ‘ಇಸ್ಲಾಮಿಕ್‌ ರೆವಲ್ಯೂಷನರಿ ಆರ್ಮಿ’ ಹೆಸರಿನಲ್ಲಿ ತನ್ನದೇ ಆದ ಭಯೋತ್ಪಾದಕ ಸಂಘಟನೆಯನ್ನು ಸ್ಥಾಪಿಸುತ್ತಿದೆ ಎಂದು ಬಾಂಗ್ಲಾದೇಶದ ಹಿರಿಯ ಪತ್ರಕರ್ತರೊಬ್ಬರು ಹೇಳಿದ್ದಾರೆ, ಎಂದು ‘ಝೀ ನ್ಯೂಸ್’ ನ ಜಾಲತಾಣದಲ್ಲಿ ಪ್ರಕಟಿಸಲಾಗಿದೆ.