ಪರಾತ್ಪರ ಗುರು ಡಾ. ಆಠವಲೆಯವರ ಚರಣ ಮತ್ತು ಕೈಬೆರಳುಗಳ ಉಗುರುಗಳಲ್ಲಾಗಿರುವ ಬದಲಾವಣೆ ಹಾಗೂ ಅದರ ಹಿಂದಿನ ಅಧ್ಯಾತ್ಮಶಾಸ್ತ್ರ !

ಕು. ಮಧುರಾ ಭೋಸಲೆ

ಸಂತರ ಅಸ್ತಿತ್ವದಿಂದಲೇ ವಾತಾವರಣದ ಶುದ್ಧೀಕರಣವಾಗುತ್ತದೆ. ಸಂತರ ಸಹವಾಸದಲ್ಲಿರುವ ವಸ್ತುಗಳ ಮೇಲೆಯೂ ಅವರ ಚೈತನ್ಯದ ಸಕಾರಾತ್ಮಕ ಪರಿಣಾಮ ಕಾಣಿಸುತ್ತದೆ. ಪರಾತ್ಪರ ಗುರು ಡಾ. ಆಠವಲೆಯವರು ಸಮಷ್ಟಿ ಗುರು ಹಾಗೂ ಜಗದ್ಗುರು ಆಗಿರುವುದರಿಂದ ಅವರ ಅವತಾರಿ ಕಾರ್ಯವು ಸಂಪೂರ್ಣ ಬ್ರಹ್ಮಾಂಡದಲ್ಲಿ ನಡೆಯುತ್ತಾ ಇರುತ್ತದೆ. ಈ ಕಾರ್ಯವನ್ನು ಪೂರ್ಣಗೊಳಿಸಲು ಅವರ ದೇಹದಲ್ಲಿಯೂ ಪಂಚತತ್ತ್ವಗಳು ಕಾರ್ಯನಿರತವಾಗಿರುತ್ತವೆ. ಆದ್ದರಿಂದ ಅವತಾರಿ ಕಾರ್ಯ ನಡೆಯುತ್ತಿರುವಾಗ ಅವರ ಸೂಕ್ಷ್ಮದೇಹದಿಂದ ಪ್ರಕ್ಷೇಪಣೆಯಾಗುವ ಲಹರಿಗಳ ಪರಿಣಾಮವು ಅವರ ಶರೀರದ ಮೇಲೆಯೂ ಕಾಣಿಸುತ್ತದೆ. ಇದು ಯಾವುದೇ ಚಮತ್ಕಾರವಾಗಿರದೆ ಸಾಧನೆಯಿಂದ ಆಗಿರುವ ಪರಿಣಾಮವಾಗಿದೆ. ಪರಾತ್ಪರ ಗುರು ಡಾ. ಆಠವಲೆಯವರಲ್ಲಿನ ಚೈತನ್ಯದಿಂದ ಅವರ ಕೈಗಳ ಮತ್ತು ಚರಣಗಳ ಬೆರಳುಗಳ ಉಗುರುಗಳಲ್ಲಿ ಕಾಣಿಸುವ ದೃಶ್ಯ ಪರಿಣಾಮ ಹಾಗೂ ಅದರ ಕಾರಣಮೀಮಾಂಸೆಯನ್ನು ಈ ಲೇಖನದ ಮೂಲಕ ಅಭ್ಯಾಸ ಮಾಡೋಣ.

‘ಜೂನ್ ೨೦೨೧ ರಿಂದ ಪರಾತ್ಪರ ಗುರು ಡಾ. ಆಠವಲೆಯವರ ಚರಣ ಮತ್ತು ಕೈಬೆರಳುಗಳ ಉಗುರುಗಳ ಮೇಲೆ ಸರಳ ರೇಖೆ (ಚಿತ್ರ ಕ್ರ. ೧ ನೋಡಿ) ಮತ್ತು ಉಗುರುಗಳ ಬುಡದಿಂದ ಮೇಲಕ್ಕೆ ಹೋಗುತ್ತಿರುವ ಗುಲಾಬಿ ಬಣ್ಣದ ಅರ್ಧವರ್ತುಲಾಕಾರದ ೨-೩ ವಲಯಗಳು ಕಾಣಿಸುತ್ತಿದ್ದವು. ಆಗಸ್ಟ್ ೨೦೨೧ ರಿಂದ ಈ ರೇಖೆಗಳ ಸ್ಪರ್ಶ ಒರಟಾಗಿದೆ ಎಂದು ಅನಿಸುತ್ತಿತ್ತು. ೬.೧೦.೨೦೨೧ ರಂದು ಈ ರೇಖೆಗಳ ಉಬ್ಬುವಿಕೆಯು ಇನ್ನಷ್ಟು ಹೆಚ್ಚಾಗಿರುವುದು ಅರಿವಾಯಿತು. (ಛಾಯಾಚಿತ್ರ ಕ್ರ. ೨ ನೋಡಿ) ಇದರ ಹಿಂದಿನ ಅಧ್ಯಾತ್ಮಶಾಸ್ತ್ರ ಈ ಮುಂದಿನಂತಿದೆ.

ಉಗುರುಗಳ ಮೇಲಿನ ಸರಳ ರೇಖೆಗಳಿಂದ ಸಂಪೂರ್ಣ ವಾತಾವರಣದಲ್ಲಿ ದೊಡ್ಡ ಪ್ರಮಾಣದಲ್ಲಿ ಮಾರಕ ಶಕ್ತಿ ಹಾಗೂ ಚೈತನ್ಯ ಲಹರಿಗಳು ಪ್ರಕ್ಷೇಪಣೆಯಾಗುತ್ತವೆ. ಉಗುರುಗಳಲ್ಲಿನ ಅರ್ಧವರ್ತುಲಾಕಾರ ವಲಯಗಳಲ್ಲಿ ತಾರಕ ಶಕ್ತಿ ಹಾಗೂ ಚೈತನ್ಯವು ಕಾರ್ಯನಿರತವಾಗಿರುತ್ತದೆ. ಹಾಗಾಗಿ ಪರಾತ್ಪರ ಗುರು ಡಾ. ಆಠವಲೆಯವರ ಮೇಲೆ ಪಾತಾಳದಲ್ಲಿನ ದೊಡ್ಡ ಅನಿಷ್ಟ ಶಕ್ತಿಗಳು ಪ್ರಕ್ಷೇಪಿಸುತ್ತಿರುವ ತೊಂದರೆದಾಯಕ ಕಪ್ಪು ಶಕ್ತಿಯ ಲಹರಿಗಳು ದೇಹದಲ್ಲಿ ಪ್ರವೇಶಿಸದಂತೆ ತಡೆಯಲ್ಪಡುತ್ತವೆ. ಉಗುರುಗಳಲ್ಲಿನ ಸರಳ ರೇಖೆಗಳು ಕಪ್ಪು ಶಕ್ತಿಯನ್ನು ವಿಭಜಿಸುವ ಹಾಗೂ ಅರ್ಧವರ್ತುಲಾಕಾರ ರೇಖೆಗಳು ತೊಂದರೆದಾಯಕ ಲಹರಿಗಳಿಂದ ರಕ್ಷಿಸುವ ಕಾರ್ಯವನ್ನು ಮಾಡುತ್ತವೆ.

ಉಗುರುಗಳ ರೇಖೆಗಳಲ್ಲಿ ಪಂಚತತ್ತ್ವಗಳ ಸ್ತರದ ಚೈತನ್ಯ ಕಾರ್ಯನಿರತವಾದಾಗ ರೇಖೆಗಳಲ್ಲಾಗುವ ಬದಲಾವಣೆ



ಸರ್ವಸಾಮಾನ್ಯ ವ್ಯಕ್ತಿ ಹಾಗೂ ಪರಾತ್ಪರ ಗುರು ಡಾ. ಆಠವಲೆಯವರ ಉಗುರುಗಳಲ್ಲಿ ಕಾರ್ಯನಿರತವಿರುವ ಶಕ್ತಿಗನುಸಾರ ಅವರ ಉಗುರುಗಳ ಮೇಲಿನ ರೇಖೆಗಳು ಸ್ಪಷ್ಟವಾಗಿ(ಒರಟಾಗಿ) ಸ್ಪರ್ಶವಾಗುವುದು ಹಾಗೂ ರೇಖೆಗಳು ಎದ್ದು (ಆಕರ್ಷಕವಾಗಿ) ಕಾಣಿಸುವುದು

ಸರ್ವಸಾಮಾನ್ಯ ವ್ಯಕ್ತಿಯ ಉಗುರುಗಳಲ್ಲಿ ರಜ-ತಮ ಪ್ರಧಾನ ಶಕ್ತಿಯ ಲಹರಿಗಳು ಕಾರ್ಯನಿರತವಾದಾಗ ಉಗುರುಗಳ ಸ್ಪರ್ಶವು ಒರಟಾಗಿರುತ್ತದೆ. ಪರಾತ್ಪರ ಗುರು ಡಾ. ಆಠವಲೆಯವರ ಉಗುರುಗಳಲ್ಲಿ ಕಾರ್ಯನಿರತವಾಗಿರುವ ನಿರ್ಗುಣ- ಸಗುಣ ಸ್ತರದಲ್ಲಿನ ಶಕ್ತಿಯ ಲಹರಿಗಳು ಸಗುಣ-ನಿರ್ಗುಣ ಸ್ತರದಲ್ಲಿ ಪ್ರಕ್ಷೇಪಣೆಯಾಗುವಾಗ ಅವುಗಳು ಘನೀಕರಣವಾಗಲು ಆರಂಭವಾಗುತ್ತವೆ. ಆದ್ದರಿಂದ ಉಗುರುಗಳ ಮೇಲಿನ ರೇಖೆಗಳು ಸ್ಪರ್ಶ ಒರಟಾಗಿರುತ್ತದೆ ಹಾಗೂ ರೇಖೆಗಳು ಉಬ್ಬಿದಂತೆ ಎದ್ದು ಕಾಣಿಸುತ್ತವೆ.

– ಕು. ಮಧುರಾ ಭೋಸಲೆ ಆಧ್ಯಾತ್ಮಿಕ ಮಟ್ಟ ಶೇ. ೬೩) (ಸೂಕ್ಷ್ಮದಿಂದ ಸಿಕ್ಕಿದ ಜ್ಞಾನ), ಸನಾತನ ಆಶ್ರಮ, ರಾಮನಾಥಿ ಗೋವಾ. (೨೦.೧೧.೨೦೨೧)

*ಕೆಟ್ಟ ಶಕ್ತಿ(ಅನಿಷ್ಟ ಶಕ್ತಿ): ವಾತಾವರಣದಲ್ಲಿ ಉತ್ತಮ ಹಾಗೂ ಕೆಟ್ಟ ಎರಡೂ ಶಕ್ತಿಗಳು ಕಾರ್ಯನಿರತವಾಗಿರುತ್ತವೆ. ಒಳ್ಳೆಯ ಶಕ್ತಿ ಒಳ್ಳೆಯ ಕಾರ್ಯಕ್ಕಾಗಿ ಮಾನವನಿಗೆ ಸಹಾಯ ಮಾಡುತ್ತವೆ ಹಾಗೂ ಕೆಟ್ಟ ಶಕ್ತಿಗಳು ಅವನಿಗೆ ತೊಂದರೆ ಕೊಡುತ್ತವೆ. ಹಿಂದಿನ ಕಾಲದಲ್ಲಿ ಋಷಿಮುನಿಗಳ ಯಜ್ಞಗಳಲ್ಲಿ ರಾಕ್ಷಸರು ವಿಘ್ನಗಳನ್ನು ತಂದಿರುವ ಅನೇಕ ಕಥೆಗಳು ವೇದ -ಪುರಾಣಗಳಲ್ಲಿ ಇರುತ್ತವೆ. ‘ಅಥರ್ವವೇದದಲ್ಲಿ ಅನೇಕ ಕಡೆಗಳಲ್ಲಿ ಕೆಟ್ಟ ಶಕ್ತಿ. ಉದಾ. ಅಸುರರು, ರಾಕ್ಷಸರು, ಪಿಶಾಚಿ ಇವರ ಪ್ರತಿಬಂಧದ ಮಂತ್ರಗಳನ್ನು ಹೇಳಲಾಗಿದೆ. ಕೆಟ್ಟ ಶಕ್ತಿಗಳ ತೊಂದರೆಯ ನಿವಾರಣೆಗಾಗಿ ವಿವಿಧ ಆಧ್ಯಾತ್ಮಿಕ ಉಪಾಯಗಳನ್ನು ವೇದ ಮತ್ತು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ.

ವಾಚಕರಿಗೆ ಮನವಿ : ‘ಮುದ್ರಣದ ತಾಂತ್ರಿಕ ಅಡಚಣೆಯಿಂದ ಇಲ್ಲಿ ಮುದ್ರಿಸಿದ ಛಾಯಾಚಿತ್ರಗಳು ಇದ್ದ ಹಾಗೆ ಮುದ್ರಿಸಲ್ಪಡುವ ಸಾಧ್ಯತೆ ಇಲ್ಲ. ಅದಕ್ಕಾಗಿ ಮತ್ತು ಪ್ರತಿಯೊಬ್ಬರಿಗೆ ಈ ಬದಲಾವಣೆ ಕಾಣಿಸಬೇಕೆಂದು ಮತ್ತು ವಿಷಯ ತಿಳಿಯಬೇಕೆಂದು ಈ ಬದಲಾವಣೆಯನ್ನು ಗಣಕಯಂತ್ರದ ಸಹಾಯದಿಂದ ಇನ್ನಷ್ಟು ಎದ್ದು ಕಾಣಿಸುವಂತೆ ಮಾಡಲಾಗಿದೆ. ಮೂಲ ಛಾಯಾಚಿತ್ರಗಳು ಸ್ಪಷ್ಟ ಕಾಣಿಸಲು ವಾಚಕರು ‘ಸನಾತನ ಪ್ರಭಾತ’ದ ಜಾಲತಾಣದ bit.ly/3IqBG3U ಈ ಸಂಪರ್ಕಕೊಂಡಿಗೆ (ಲಿಂಕ್) ಭೇಟಿ ನೀಡಬೇಕು. (ಈ ಲಿಂಕ್‍ನ ಕೆಲವು ಅಕ್ಷರಗಳು ‘ಕ್ಯಾಪಿಟಲ್’ ಇವೆ)