ತರ್ಕ, ಅದರ ವ್ಯಾಪ್ತಿ ಮತ್ತು ಮಹತ್ವ !

ಸರ್ವೋತ್ತಮ ಶಿಕ್ಷಣ ಯಾವುದು ?

ಪೂ. ಡಾ. ಶಿವಕುಮಾರ ಓಝಾ

ಪೂ. ಡಾ. ಶಿವಕುಮಾರ ಓಝಾ (೮೭ ವರ್ಷ) ಇವರು ‘ಐಐಟಿ’, ಮುಂಬಯಿಯಲ್ಲಿ ಏರೋಸ್ಪೇಸ್ ಇಂಜಿನಿಯರಿಂಗ್‌ನಲ್ಲಿ ಪಿ.ಎಚ್.ಡಿ. ಪದವಿಯನ್ನು ಪಡೆದ ಅಧ್ಯಾಪಕರೆಂದು ಕಾರ್ಯನಿರತರಾಗಿದ್ದರು ಅವರು ಭಾರತೀಯ ಸಂಸ್ಕೃತಿ, ಅಧ್ಯಾತ್ಮ, ಸಂಸ್ಕೃತ ಭಾಷೆ ಮುಂತಾದ ವಿಷಯಗಳ ೧೧ ಗ್ರಂಥಗಳನ್ನು ಪ್ರಕಾಶಿಸಿದ್ದಾರೆ. ಅವುಗಳಲ್ಲಿನ ‘ಸರ್ವೋತ್ತಮ ಶಿಕ್ಷಾ ಕ್ಯಾ ಹೈ ?’ ಎಂಬ ಹಿಂದಿ ಭಾಷೆಯ ಗ್ರಂಥದ ಕೆಲವೊಂದು ಲೇಖನಗಳನ್ನು ನಮ್ಮ ಓದುಗರಿಗಾಗಿ ಇಲ್ಲಿ ಪ್ರಕಟಿಸುತ್ತಿದ್ದೇವೆ. ಸಾಪ್ತಾಹಿಕ ಸನಾತನ ಪ್ರಭಾತದ ೨೩/೧೦ ನೇ ಸಂಚಿಕೆಯಲ್ಲಿ ‘ಅನೇಕ ವಿಷಯಗಳ ಬಗ್ಗೆ ಬುದ್ಧಿಯಲ್ಲಿರುವ ಅಜ್ಞಾನ !’ ಈ ವಿಷಯದ ಮಾಹಿತಿಯನ್ನು ನೀಡಲಾಗಿತ್ತು. ಇಂದು ನಾವು ಅದರ ಮುಂದಿನ ಭಾಗವನ್ನು ನೋಡೋಣ.           (ಭಾಗ ೧೮)

ಈ ಲೇಖನದ ಹಿಂದಿನ ಭಾಗವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ : https://sanatanprabhat.org/kannada/56857.html

೭೧. ಶಿಕ್ಷಣ ವ್ಯವಸ್ಥೆಯನ್ನು ನಿರ್ಧರಿಸುವಾಗ ವ್ಯಾಪಕ ದೃಷ್ಟಿಕೋನವಿರುವುದು ಆವಶ್ಯಕ !

೭೧ ಅ. ಆಹಾರ, ನಿದ್ರೆ, ಭಯದಿಂದ ರಕ್ಷಣೆ ಮತ್ತು ಮೈಥುನ ಈ ನಾಲ್ಕು ಪ್ರಾಥಮಿಕ ಆವಶ್ಯಕತೆಗಳನ್ನು ಪೂರ್ಣಗೊಳಿಸಲು ಮನುಷ್ಯನು ಹೆಚ್ಚು ಬುದ್ಧಿಯನ್ನು ಉಪಯೋಗಿಸುತ್ತಾನೆ ಮತ್ತು ಅದರಿಂದಲೇ ಆಗುವ ಪಶು ಸಂಸ್ಕೃತಿಯ ವಿಕಾಸದಿಂದ ಕಲಹಗಳು, ಹಾಗೆಯೇ ವೈಮನಸ್ಸು ಹೆಚ್ಚಾಗುತ್ತದೆ : ಆಧುನಿಕ ಶಿಕ್ಷಣದ ದೃಷ್ಟಿಕೋನವು ಅತ್ಯಂತ ಸಂಕುಚಿತ ಮತ್ತು ಸೀಮಿತವಾಗಿದ್ದು ಅದು ಕೇವಲ ಮನುಷ್ಯನ ಸಹಜ ನೈಸರ್ಗಿಕ ಪ್ರವೃತ್ತಿ ಅಥವಾ ಆವಶ್ಯಕತೆಗಳನ್ನು ಆಧರಿಸಿದೆ. ಮನುಷ್ಯನಿಗೆ ಅವನ ಸಹಜಪ್ರವೃತ್ತಿಗನುಸಾರ, ಆಹಾರ (ಭೋಜನ), ನಿದ್ರೆ (ಆರಾಮ), ಭಯದಿಂದ ರಕ್ಷಣೆ ಮತ್ತು ಮೈಥುನ ಈ ನಾಲ್ಕು ಮೂಲಭೂತ ಆವಶ್ಯಕತೆಗಳಿವೆ ಎಂದು ಅನಿಸುತ್ತದೆ; ಆದರೆ ಮನುಷ್ಯ ಮತ್ತು ಪಶು ಇವುಗಳಲ್ಲಿ ಇವು ಸಮಾನವಾಗಿವೆ. ಈ ಆವಶ್ಯಕತೆಗಳು ಪೂರ್ಣವಾದ ನಂತರ ಮನುಷ್ಯನು ಹೆಚ್ಚೆಚ್ಚು ಪ್ರಮಾಣದಲ್ಲಿ ಅವುಗಳನ್ನು ಪೂರ್ಣಗೊಳಿಸಲು ತನ್ನ ಬುದ್ಧಿಯನ್ನು ಉಪಯೋಗಿಸುತ್ತಾನೆ. ಆಧುನಿಕ ಮನುಷ್ಯನ ಬುದ್ಧಿಯ ಹೆಚ್ಚಿನ ಸಮಯವು ಈ ನಾಲ್ಕು ಆವಶ್ಯಕತೆಗಳನ್ನು ಪೂರ್ಣಗೊಳಿಸುವಲ್ಲಿಯೇ ಖರ್ಚಾಗುತ್ತಿರುತ್ತದೆ. ಇದಕ್ಕಾಗಿ ಅವನು ಅನುಕೂಲ ಶಿಕ್ಷಣವನ್ನು ಪಡೆದು ಅಥವಾ ನೀಡಿ ಪಶು ಸಂಸ್ಕೃತಿಯನ್ನು ವಿಕಸಿತ ಮತ್ತು ವೈಭವೀಕರಣ ಮಾಡುವ ಪ್ರಯತ್ನದಲ್ಲಿರುತ್ತಾನೆ. ಈ ದೃಷ್ಟಿಕೋನವು ಅತ್ಯಂತ ಸಂಕುಚಿತವಾಗಿದ್ದು, ಅದು ಏಕಾಂಗಿಯೂ ಆಗಿದೆ. ಆದುದರಿಂದಲೇ ಆಧುನಿಕ ಮಾನವರ ಸಮಾಜದಲ್ಲಿ ಎಲ್ಲೆಡೆ ಕಲಹಗಳು (ಜಗಳಗಳು) ಹರಡಿವೆ. ಅಂತರಾಷ್ಟ್ರೀಯ ವೈಮನಸ್ಸು ಹೆಚ್ಚುತ್ತಾ ಹೋಗುತ್ತಿದೆ. ದೊಡ್ಡ ದೊಡ್ಡ ದೇಶಗಳು ತಮ್ಮನ್ನು ಎಲ್ಲಕ್ಕಿಂತ ಮಹಾನ ಎಂದು ಸಿದ್ಧಪಡಿಸಲು ಪರಸ್ಪರರರೊಂದಿಗೆ ಸಂಘರ್ಷ ಮಾಡುತ್ತಿವೆ. ಇವೆಲ್ಲವುಗಳ ಅಂತ್ಯ ಎಲ್ಲಿಯೂ ಕಾಣಿಸುವುದಿಲ್ಲ. ಪರಿಸ್ಥಿತಿಯು ಬಹುದೊಡ್ಡ ಮಹದಾಕಾರ ಸ್ವರೂಪವನ್ನು ತಾಳಿದೆ. ಆಧುನಿಕ ಭೌತಿಕ ಪದಾರ್ಥಗಳ ಬಗ್ಗೆ ಆಕರ್ಷಣೆ ಮತ್ತು ಆಸಕ್ತಿಯು ಎಷ್ಟು ಹೆಚ್ಚಾಗಿದೆ ಎಂದರೆ, ಮನುಷ್ಯನಿಗೆ, ವ್ಯಾಪಕ ದೃಷ್ಟಿಕೋನ ಹೇಗಿರುತ್ತದೆ ಎಂಬುದೂ ತಿಳಿಯದಂತಾಗಿದೆ. ಇದನ್ನು ತಿಳಿದುಕೊಳ್ಳಲು ಅವನ ಬಳಿ ಸಮಯವೂ ಇಲ್ಲ ಮತ್ತು ಅವನಿಗೆ ಅದರ ಇಚ್ಛೆಯೂ ಇಲ್ಲ.

೭೨. ವ್ಯಾಪಕ ದೃಷ್ಟಿಕೋನದ ಮೇಲಾಧರಿಸಿದ ಶಿಕ್ಷಣವೇ ‘ಸರ್ವೋತ್ತಮ’ ಶಿಕ್ಷಣ !

ಮನುಷ್ಯನ ಜೀವನವನ್ನು ಜೀವಿಸುವ ಪದ್ಧತಿ, ಹಾಗೆಯೇ ಶಿಕ್ಷಣವ್ಯವಸ್ಥೆ ಇವುಗಳಲ್ಲಿ ಪೂರ್ಣತ್ವ ಬರಲು ವ್ಯಾಪಕ (ವಿಶಾಲ) ದೃಷ್ಟಿಕೋನವನ್ನು ಅರಿತುಕೊಳ್ಳುವುದು ಮತ್ತು ಅದನ್ನು ಮೈಗೂಡಿಸಿಕೊಳ್ಳುವುದು ಅತ್ಯಂತ ಆವಶ್ಯಕವಾಗಿದೆ, ಉದಾ. ಒಂದು ವೇಳೆ ‘ಮನುಷ್ಯನು ವಿವಿಧ ರೂಪಗಳಲ್ಲಿ ಪುನಃ ಪುನಃ ಜನ್ಮ ತಾಳುತ್ತಾನೆ, ಮನುಷ್ಯನು ಮುಂದಿನ ಜನ್ಮದಲ್ಲಿ ಪ್ರಾಣಿಯ ಜನ್ಮವನ್ನೂ ಸಹ ಪಡೆಯಬಹುದು ಮತ್ತು ವಿವಿಧ ಪ್ರಕಾರದ ಭಯಂಕರ ಭೋಗಗಳನ್ನು ಭೋಗಿಸಬಹುದು ಎಂಬುದು ಪುರಾವೆಗಳೊಂದಿಗೆ ಸಿದ್ಧವಾಗಿದೆ. ಹೀಗಿದ್ದಲ್ಲಿ ಮನುಷ್ಯನ ಪುನರ್ಜನ್ಮವನ್ನು ತಡೆಗಟ್ಟುವಂತಹ ಶಿಕ್ಷಣವನ್ನು ಏಕೆ ನೀಡಬಾರದು ? ಯಾವುದೇ ಮನುಷ್ಯನಿಗೆ ಮೇಲಿಂದ ಮೇಲೆ ದುಃಖಗಳು ಬರಬೇಕು ಎಂದು ಎಂದಿಗೂ ಅನಿಸುವುದಿಲ್ಲ; ಆದರೆ ಅದು ಬರುತ್ತಲೇ ಇರುತ್ತದೆ. ಪ್ರತಿಯೊಬ್ಬ ಮನುಷ್ಯನು ತಾನು ಯಾವಾಗಲೂ ಸುಖದಿಂದ, ಅಖಂಡ ಆನಂದಲ್ಲಿರಬೇಕೆಂದು ಇಚ್ಚಿಸುತ್ತಾನೆ. ಒಂದು ವೇಳೆ ಅದು ಸಾಧ್ಯವಿದ್ದರೆ (ಭಾರತೀಯ ಸಂಸ್ಕೃತಿ ಮತ್ತು ಅದರ ಕಲಿಕೆ ವಿವಿಧ ಪುರಾವೆಗಳೊಂದಿಗೆ ಇದನ್ನು ಹೇಳುತ್ತದೆ), ಅದನ್ನು ಪ್ರಾಪ್ತ ಮಾಡಿಕೊಳ್ಳುವ ಶಿಕ್ಷಣವನ್ನು ಏಕೆ ನೀಡಬಾರದು ? ಮನುಷ್ಯ ಜೀವನದ ಜ್ಞಾತ-ಅಜ್ಞಾತ ಬಂಧನಗಳು ಯಾವುವು, ಎಂಬುದರ ಜ್ಞಾನವಿರಬೇಕು. ಈ ಬಂಧನಗಳಿಂದ ಮುಕ್ತಿಯನ್ನು ಪಡೆಯುವ ಶಿಕ್ಷಣವನ್ನು ಏಕೆ ನೀಡಬಾರದು ? ಇವೆಲ್ಲ ಪ್ರಶ್ನೆಗಳು, ಹಾಗೆಯೇ ಇತರ ಅನೇಕ ಪ್ರಶ್ನೆಗಳು ಈ ವ್ಯಾಪಕ ದೃಷ್ಟಿಕೋನದ ಅಂತರ್ಗತ ಬರುತ್ತವೆ. ಯಾವುದು ವ್ಯಾಪಕ ದೃಷ್ಟಿಕೋನದ ಮೇಲೆ ಆಧರಿಸಿದೆಯೋ, ಅದುವೇ ‘ಸರ್ವೋತ್ತಮ’ ಶಿಕ್ಷಣವಾಗಿದೆ.’

– (ಪೂ.) ಡಾ. ಶಿವಕುಮಾರ ಓಝಾ, ಹಿರಿಯ ಸಂಶೋಧಕರು ಮತ್ತು ಭಾರತೀಯ ಸಂಸ್ಕೃತಿಯ ಅಧ್ಯಯನಕಾರರು

(ಆಧಾರ : ‘ಸರ್ವೋತ್ತಮ ಶಿಕ್ಷಾ ಕ್ಯಾ ಹೈ ?’) (ಮುಕ್ತಾಯ)