ತರ್ಕ, ಅದರ ವ್ಯಾಪ್ತಿ ಮತ್ತು ಮಹತ್ವ !

ಸರ್ವೋತ್ತಮ ಶಿಕ್ಷಣ ಯಾವುದು ?

ಪೂ. ಡಾ. ಶಿವಕುಮಾರ ಓಝಾ

ಪೂ. ಡಾ. ಶಿವಕುಮಾರ ಓಝಾ (೮೭ ವರ್ಷ) ಇವರು ‘ಐಐಟಿ’, ಮುಂಬಯಿಯಲ್ಲಿ ಏರೋಸ್ಪೇಸ್ ಇಂಜಿನಿಯರಿಂಗ್‌ನಲ್ಲಿ ಪಿ.ಎಚ್.ಡಿ. ಪದವಿಯನ್ನು ಪಡೆದ ಅಧ್ಯಾಪಕರೆಂದು ಕಾರ್ಯನಿರತರಾಗಿದ್ದರು ಅವರು ಭಾರತೀಯ ಸಂಸ್ಕೃತಿ, ಅಧ್ಯಾತ್ಮ, ಸಂಸ್ಕೃತ ಭಾಷೆ ಮುಂತಾದ ವಿಷಯಗಳ ೧೧ ಗ್ರಂಥಗಳನ್ನು ಪ್ರಕಾಶಿಸಿದ್ದಾರೆ. ಅವುಗಳಲ್ಲಿನ ‘ಸರ್ವೋತ್ತಮ ಶಿಕ್ಷಾ ಕ್ಯಾ ಹೈ ?’ ಎಂಬ ಹಿಂದಿ ಭಾಷೆಯ ಗ್ರಂಥದ ಕೆಲವೊಂದು ಲೇಖನಗಳನ್ನು ನಮ್ಮ ಓದುಗರಿಗಾಗಿ ಇಲ್ಲಿ ಪ್ರಕಟಿಸುತ್ತಿದ್ದೇವೆ. ಸಾಪ್ತಾಹಿಕ ಸನಾತನ ಪ್ರಭಾತದ ೨೩/೧೦ ನೇ ಸಂಚಿಕೆಯಲ್ಲಿ ‘ಅನೇಕ ವಿಷಯಗಳ ಬಗ್ಗೆ ಬುದ್ಧಿಯಲ್ಲಿರುವ ಅಜ್ಞಾನ !’ ಈ ವಿಷಯದ ಮಾಹಿತಿಯನ್ನು ನೀಡಲಾಗಿತ್ತು. ಇಂದು ನಾವು ಅದರ ಮುಂದಿನ ಭಾಗವನ್ನು ನೋಡೋಣ.                     (ಭಾಗ ೧೭)

ಈ ಲೇಖನದ ಹಿಂದಿನ ಭಾಗವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ : https://sanatanprabhat.org/kannada/56549.html

೬೯. ತರ್ಕದ ನಿರರ್ಥಕತನ

‘ತರ್ಕ’ ಈ ಶಬ್ದದ ಶಾಸ್ತ್ರೀಯ ಅರ್ಥವೆಂದರೆ ಕತ್ತರಿಸುವುದು. ಯಾವುದು ಕತ್ತರಿಯ ಹಾಗೆ ಕತ್ತರಿಸುತ್ತಾ ಹೋಗುತ್ತದೋ, ಅದಕ್ಕೆ ‘ತರ್ಕ’ ಎಂದು ಹೇಳಲಾಗುತ್ತದೆ. ನಮ್ಮ ಬುದ್ಧಿಯ ಕಲ್ಪನೆಯನ್ನು ಯುಕ್ತಿಯಿಂದ ಅಥವಾ ಕೌಶಲ್ಯದಿಂದ ಮಂಡಿಸುವುದಕ್ಕೆ ‘ತರ್ಕ’ವೆಂದು ಹೇಳಲಾಗುತ್ತದೆ. ತರ್ಕ ಕೇವಲ ಪ್ರತ್ಯಕ್ಷ ಮತ್ತು ಅನುಮಾನದ ವರೆಗೆ (ಇಲ್ಲಿ ‘ಅನುಮಾನ ಪ್ರಮಾಣ’ ಅಪೇಕ್ಷಿತವಿರದೆ ಅದು ಕೇವಲ ಮನಸ್ಸಿನ ಕಲ್ಪನೆಯಾಗಿದೆ) ಹೋಗಬಹುದು.

ತರ್ಕವು ನಿರರ್ಥಕವಿರುತ್ತದೆ. ಅದರಲ್ಲಿ ಸ್ಥೈರ್ಯ, ದೃಢತ್ವ ಇವೆಲ್ಲ ಇರುವುದಿಲ್ಲ; ಏಕೆಂದರೆ ತನ್ನ ಅಭಿಪ್ರಾಯದಲ್ಲಿ ದೃಢವಾಗಿರುವ ಒಬ್ಬ ವ್ಯಕ್ತಿಯ ತರ್ಕವನ್ನು ಇನ್ನೊಬ್ಬ ವ್ಯಕ್ತಿಯು ಒಪ್ಪುವುದಿಲ್ಲ. ಆ ವ್ಯಕ್ತಿಯು ಅದರಲ್ಲಿ ದೋಷವನ್ನು ತೋರಿಸಿ ತನ್ನದೆ ತರ್ಕವನ್ನು ಮಂಡಿಸುತ್ತಾನೆ. ಈ ಪ್ರಕ್ರಿಯೆಯಿಂದ ಸಂಬಂಧಪಟ್ಟ ವಿಷಯದ ನಿರ್ಣಯವು ಸಂದಿಗ್ಧವಾಗಿರುತ್ತದೆ. ಅದು ಖಚಿತವಾಗಲು ಸಾಧ್ಯವಿಲ್ಲ.

ಮನುಷ್ಯನ ವಾಸನೆ (ರಾಗ, ದ್ವೇಷ, ಈರ್ಷ್ಯೆ, ಭಯ ಇತ್ಯಾದಿ), ಸಂಸ್ಕಾರ, ಅಜ್ಞಾನ, ಪ್ರಲೋಭನೆ, ಸಾಮಾಜಿಕ ವಾತಾವರಣ, ರಾಜಕೀಯ ಹಸ್ತಕ್ಷೇಪ ಇತ್ಯಾದಿಗಳ ಪ್ರಭಾವದಿಂದ ತರ್ಕವು ಮಲಿನವಾಗಿರುವುದರಿಂದ ಸತ್ಯವು ಖಚಿತವಾಗಲು ಸಾಧ್ಯವಿಲ್ಲ. ಕೇವಲ ತರ್ಕ ಮಾಡಿ ನೀರಿನಲ್ಲಿ ಈಜಲು ಬರುವುದಿಲ್ಲ.

೭೦. ಶಾಸ್ತ್ರಾನುಕೂಲ ಮತ್ತು ಶ್ರೇಷ್ಠ ತರ್ಕದ ಮಹತ್ವ

ತರ್ಕದ್ದಲ್ಲ, ಶಾಸ್ತ್ರಾನುಕೂಲ ತರ್ಕದ ತಾತ್ಪರ್ಯವೇ ನಿರ್ಣಾಯಕವಾಗಿರುತ್ತದೆ. ಶಾಸ್ತ್ರಾನುಕೂಲ ತರ್ಕವನ್ನು ಶಾಸ್ತ್ರಗಳ ಮೂಲಕ ಪ್ರತಿಪಾದಿತ ಪ್ರಮಾಣಗಳು ಹಾಗೂ ಯುಕ್ತಿವಾದಗಳನ್ನು ಆಧರಿಸಿ ಮಾಡಲಾಗಿರುತ್ತದೆ. ಇದು ಕೂಡ ಹಾಗೆಯೇ ಇರುತ್ತದೆ.

ಆಧುನಿಕ ನ್ಯಾಯಾಲಯಗಳಿಗೆ ಸಾಮಾನ್ಯ ಜನರ ತರ್ಕ ಒಪ್ಪಿಗೆಯಿರುವುದಿಲ್ಲ. ಕೇವಲ ವಕೀಲರ ಮೂಲಕ ಮಂಡಿಸಿದ ತರ್ಕ ಒಪ್ಪಿಗೆಯಾಗುತ್ತದೆ; ಏಕೆಂದರೆ ಅವರು ನ್ಯಾಯಶಾಸ್ತ್ರಕ್ಕನುಸಾರ ತರ್ಕ ಮಾಡುತ್ತಾರೆ. ಯಾವ ತರ್ಕವನ್ನು ಪ್ರಮಾಣದ ಆಧಾರದ ಹೊರತು, ಕೇವಲ ತನ್ನ ಬುದ್ಧಿಗನುಸಾರ ಕಲ್ಪನೆ ಮಾಡಿ ಮಂಡಿಸಲಾಗುತ್ತದೆಯೋ, ಇಂತಹ ಒಣ-ತರ್ಕ ನಿರ್ಣಾಯಕವಾಗುವುದಿಲ್ಲ. ಶಾಸ್ತ್ರಾನುಕೂಲ ತರ್ಕದ ಆ ಅರ್ಥವನ್ನು ನಿರ್ಣಯಕ್ಕಾಗಿ ಸಹಾಯಕವೆಂದು ಆರಿಸಲಾಗುತ್ತದೆ. ಆದ್ದರಿಂದ ಭಾರತೀಯ ಋಷಿಗಳು ಶ್ರೇಷ್ಠವಾದ ತರ್ಕಗಳನ್ನು ಉಪೇಕ್ಷಿಸದೇ ಅದರ ಮಹತ್ವವನ್ನು ಸ್ವೀಕರಿಸಿದ್ದಾರೆ. ಮನುಷ್ಯನ ದೈನಂದಿನ ಕಾರ್ಯಗಳು ಮತ್ತು ವ್ಯವಹಾರಕ್ಕಾಗಿ ಆ ತರ್ಕಗಳು ಉಪಯೋಗವಾಗುತ್ತವೆ.          (ಮುಂದುವರಿಯುವುದು)

– (ಪೂ.) ಡಾ. ಶಿವಕುಮಾರ ಓಝಾ, ಹಿರಿಯ ಸಂಶೋಧಕರು ಮತ್ತು ಭಾರತೀಯ ಸಂಸ್ಕೃತಿಯ ಅಧ್ಯಯನಕಾರರು (ಆಧಾರ : ‘ಸರ್ವೋತ್ತಮ ಶಿಕ್ಷಾ ಕ್ಯಾ ಹೈ ?’)