ಸಮಷ್ಟಿ ಸಾಧನೆಯ ಮಹತ್ವ ಮತ್ತು ಆ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರು ಮಾಡಿದ ಮಾರ್ಗದರ್ಶನ

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ವ್ಯಷ್ಟಿ ಮತ್ತು ಸಮಷ್ಟಿ ಸಾಧನೆಯ ಏಕೈಕ ಆದರ್ಶ ಉದಾಹರಣೆಯೆಂದರೆ ಹನುಮಂತ ! – ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ

೧. ಈಶ್ವರನು ಅತಿಸೂಕ್ಷ್ಮನಾಗಿ ದ್ದಾನೆ ಅದೇ ರೀತಿ ಸರ್ವ ವ್ಯಾಪಿಯೂ ಆಗಿದ್ದಾನೆ. ಆದುದರಿಂದ ಈಶ್ವರಪ್ರಾಪ್ತಿಯ, ಅಂದರೆ ಈಶ್ವರನೊಂದಿಗೆ ಏಕರೂಪವಾಗಲು ಸೂಕ್ಷ್ಮಾತಿಸೂಕ್ಷ್ಮವಾಗುವುದು, ಎಂದರೆ ಶೂನ್ಯಕ್ಕೆ ಹೋಗುವುದು ಅಥವಾ ಸರ್ವವ್ಯಾಪಿಯಾಗುವುದು, ಇವೆರಡು ಮಾರ್ಗಗಳಿವೆ. ಸೂಕ್ಷ್ಮಾತಿಸೂಕ್ಷ್ಮವಾಗುವುದು ಇದು ವ್ಯಷ್ಟಿ ಸಾಧನೆ ಮಾಡುವವರ ಮಾರ್ಗವಾಗಿದ್ದರೆ ಸಮಷ್ಟಿಯೊಂದಿಗೆ ಏಕರೂಪವಾಗಲು ತಮ್ಮ ವ್ಯಾಪಕತೆ ಹೆಚ್ಚಿಸುವುದು ಇದು ಸಮಷ್ಟಿ ಸಾಧನೆಯನ್ನು ಮಾಡುವವರ ಮಾರ್ಗವಾಗಿರುತ್ತದೆ. ವ್ಯಷ್ಟಿ ಸಾಧನೆಯನ್ನು ಮಾಡುತ್ತಾ ಮಾಡುತ್ತಾ ಮುಂದೆ ಶೂನ್ಯಕ್ಕೆ ಹೋಗಿ ಈಶ್ವರನೊಂದಿಗೆ ಏಕರೂಪವಾಗಲು ಬರುತ್ತದೆ. ಸಮಷ್ಟಿ ಸಾಧನೆಯನ್ನು ಮಾಡುತ್ತಾ ಮಾಡುತ್ತಾ ವ್ಯಾಪಕತೆ ಬರತೊಡಗುತ್ತದೆ ಮತ್ತು ಕೊನೆಗೆ ಸರ್ವವ್ಯಾಪಿ ಈಶ್ವರನೊಂದಿಗೆ ಏಕರೂಪವಾಗಲು ಬರುತ್ತದೆ.

೨. ಸ್ವತಃ ಈಶ್ವರನು ಏಕ ಕಾಲದಲ್ಲಿ ಸೂಕ್ಷ್ಮಾತೀಸೂಕ್ಷ್ಮ ಮತ್ತು ಸರ್ವವ್ಯಾಪಿಯೂ ಆಗಿರುವುದರಿಂದ ಸಾಧಕನ ವ್ಯಷ್ಟಿ ಅಥವಾ ಸಮಷ್ಟಿ ಸಾಧನಾಮಾರ್ಗಕ್ಕನುಸಾರ ಅವನು ಅವನಿಗೆ ಅಂತಹ ಅನುಭೂತಿ ನೀಡುತ್ತಾನೆ. ಈಶ್ವರನೊಂದಿಗೆ ಏಕರೂಪವಾಗಲು ಬಯಸುವ ಸಾಧಕನೂ ಇವೆರಡೂ ಅನುಭೂತಿಗಳನ್ನು ಪಡೆದರೆ ಅವನು ಈಶ್ವರನೊಂದಿಗೆ ಬೇಗನೇ ಏಕರೂಪವಾಗುತ್ತಾನೆ.

೩. ವ್ಯಷ್ಟಿ ಸಾಧನೆಯಲ್ಲಿ ಜ್ಞಾನಮಾರ್ಗದ ಸಾಕ್ಷಿಭಾವ ಮತ್ತು ಭಕ್ತಿಯೋಗದ ಈಶ್ವರೇಚ್ಛೆ ಈ ಶಬ್ದಗಳು ಉಪಯುಕ್ತ ವಾಗಿವೆ. ಸಮಷ್ಟಿ ಸಾಧನೆಯಲ್ಲಿ ಮಾತ್ರ ವ್ಯಾಪಕತೆಯನ್ನು ಪಡೆಯಲು ಕರ್ತವ್ಯಕರ್ಮಗಳು ಮಹತ್ವದ್ದಾಗಿವೆ.

೪. ವ್ಯಷ್ಟಿ ಸಾಧನೆಯಲ್ಲಿ ಜೀವವು ಶರೀರದಿಂದ ಅಥವಾ ಮನಸ್ಸಿನಿಂದ ಎಲ್ಲರಿಂದ ದೂರವಿದ್ದು ಏಕಾಂಗಿಯಾಗಿಯೇ ಸಾಧನೆ ಮಾಡುತ್ತದೆ. ಆದುದರಿಂದ ಅದಕ್ಕೆ ಇತರರ ಸಹಾಯ ಸಿಗುವುದಿಲ್ಲ; ಆದ್ದರಿಂದಲೇ ಸಾಧಕನು ಕೆಲವು ವರ್ಷಗಳಿಂದ ನೂರಾರು ವರ್ಷಗಳ ವರೆಗೆ ತಪಸ್ಸು ಮಾಡಿ ದನು ಎಂದು ನಾವು ಓದುತ್ತೇವೆ. ತದ್ವಿರುದ್ಧ ಸಮಷ್ಟಿ ಸಾಧನೆ ಮಾಡುವ ಸಾಧಕನು ಇತರರ ಜೊತೆ ಸಾಧನೆ ಮಾಡುವುದರಿಂದ, ಸಾಧನೆ ಮಾಡುವಾಗ ಅವನಿಂದ ಏನಾದರೂ ಕೊರತೆಯಾದರೆ, ಇತರರು ಅವನಿಗೆ ಸಹಾಯ ಮಾಡು ತ್ತಾರೆ. ಆದುದರಿಂದ ಅವನ ಪ್ರಗತಿ ವೇಗವಾಗಿ ಆಗುತ್ತದೆ.

೫. ಈಶ್ವರನು ಅನಂತ ಕೋಟಿ ಬ್ರಹ್ಮಾಂಡಗಳ ಕಾರ್ಯ ಮಾಡುತ್ತಾನೆ, ಅಂದರೆ ಅವನಲ್ಲಿ ಎಷ್ಟು ಸಮಷ್ಟಿ ಭಾವ ಇದೆ, ಎಂಬುದು ಗಮನಕ್ಕೆ ಬರುತ್ತದೆ.

೬. ಋಷಿ-ಮುನಿಗಳು ಸಾವಿರಾರು ವರ್ಷಗಳ ಕಾಲ ತಪಸ್ಸು ಮಾಡುತ್ತಿದ್ದರು; ಆದರೆ ಸಮಷ್ಟಿಯ ಕಲ್ಯಾಣಕ್ಕಾಗಿ ಯಜ್ಞಯಾಗಗಳನ್ನು ಮಾಡುವುದು, ಅಧ್ಯಾತ್ಮವನ್ನು ಕಲಿಸುವುದು ಇತ್ಯಾದಿ ಮಾಡುತ್ತಿದ್ದರು. ವ್ಯಷ್ಟಿ ಸಾಧನೆ ಮಾಡುವವರು ಇದನ್ನೂ ಗಮನದಲ್ಲಿಡಬೇಕು.

೭. ವ್ಯಕ್ತಿಗಳೆಷ್ಟೋ ಅಷ್ಟು ಪ್ರಕೃತಿಗಳು, ಅಷ್ಟೇ ಸಾಧನಾಮಾರ್ಗ ಗಳು, ಎಂಬ ಸಿದ್ಧಾಂತವಿರುವುದರಿಂದ ಕೆಲವು ಜನರು ವ್ಯಷ್ಟಿ, ಮತ್ತು ಕೆಲವರು ಸಮಷ್ಟಿ ಸಾಧನೆ ಮಾಡುತ್ತಾರೆ. ಹೀಗಿದ್ದರೂ ವ್ಯಷ್ಟಿ ಸಾಧನೆಯನ್ನು ಮಾಡುವವರು, ‘ಶೀಘ್ರ ಆಧ್ಯಾತ್ಮಿಕ ಉನ್ನತಿಯನ್ನು ಮಾಡಿಕೊಳ್ಳಲು ಸಮಷ್ಟಿ ಸಾಧನೆಯ ದೃಷ್ಟಿಯಿಂದ ಅವರು ತಮ್ಮ ಪ್ರಯತ್ನಗಳನ್ನು ಪ್ರಾರಂಭಿಸುವುದು ಆವಶ್ಯಕವಾಗಿರುತ್ತದೆ’, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು.

ಮೇಲಿನ ಕಾರಣಗಳಿಂದ ಸನಾತನ ಸಂಸ್ಥೆಯಲ್ಲಿ ವ್ಯಷ್ಟಿಯ ಜೊತೆಗೆ ಸಮಷ್ಟಿ ಸಾಧನೆಯನ್ನು ಕಲಿಸಲಾಗುತ್ತದೆ. ಇದರ ಫಲಶೃತಿಯೆಂದು ಕಳೆದ ೨೬ ವರ್ಷಗಳಲ್ಲಿ ಒಟ್ಟು ೧೨೬೪ ಸಾಧಕರು ಶೇ. ೬೦ ಮಟ್ಟಕ್ಕಿಂತ ಹೆಚ್ಚು ಆಧ್ಯಾತ್ಮಿಕ ಮಟ್ಟವನ್ನು ಪ್ರಾಪ್ತಮಾಡಿಕೊಂಡಿದ್ದಾರೆ, ಅಂದರೆ ಅವರು ಸಂತರಾಗುವ ಮಾರ್ಗದಲ್ಲಿದ್ದಾರೆ ಮತ್ತು ೧೩೨ ಸಾಧಕರು ಶೇ. ೭೦ ಮಟ್ಟಕ್ಕಿಂತ ಹೆಚ್ಚು ಆಧ್ಯಾತ್ಮಿಕ ಮಟ್ಟವನ್ನು ಪ್ರಾಪ್ತಮಾಡಿಕೊಂಡಿದ್ದಾರೆ, ಅಂದರೆ ಅವರು ಸಂತರಾಗಿದ್ದಾರೆ.

– ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ

ಕಲಿಯುಗದಲ್ಲಿ ಸಮಷ್ಟಿ ಸಾಧನೆಯ ಮಹತ್ವ

ಸತ್ಯಯುಗದಲ್ಲಿ ಪ್ರತಿಯೊಬ್ಬರು ಸಾಧನೆಯನ್ನು ಮಾಡುತ್ತಿರುವುದರಿಂದ ಸಮಷ್ಟಿ ಸಾಧನೆಯ, ಅಂದರೆ ಸಮಾಜಕ್ಕೆ ಹೋಗಿ ಸಾಧನೆಯ ಮಹತ್ವ ಹೇಳುವುದು, ಸಾಧನೆ ಮಾಡಿಸಿಕೊಳ್ಳುವುದು ಇತ್ಯಾದಿಗಳ ಆವಶ್ಯಕತೆ ಇರಲಿಲ್ಲ. ಮುಂದೆ ತ್ರೇತಾಯುಗ ಮತ್ತು ದ್ವಾಪರಯುಗಗಳಲ್ಲಿ ವ್ಯಷ್ಟಿ ಸಾಧನೆಯ ಪ್ರಮಾಣವು ಹೆಚ್ಚೆಚ್ಚು ಕಡಿಮೆಯಾಗುತ್ತಾ ಹೋಯಿತು. ಕಲಿಯುಗದಲ್ಲಿ ವ್ಯಷ್ಟಿ ಸಾಧನೆಯ ಪ್ರಮಾಣ ಶೇ. ೪ ರಿಂದ ೫ ರಷ್ಟು ಕಡಿಮೆಯಾದುದರಿಂದ ಇತರರಿಗೆ ಸಾಧನೆ ಹೇಳುವುದು, ಅಂದರೆ ಸಮಷ್ಟಿ ಸಾಧನೆ ಮಾಡುವ ಪ್ರಮಾಣ ಹೆಚ್ಚಾಗುವುದು ಆವಶ್ಯಕವಾಗಿದೆ.

ಮೇಲಿನ ಕೋಷ್ಟಕದಿಂದ ಕಲಿಯುಗದಲ್ಲಿ ಸಮಷ್ಟಿ ಸಾಧನೆಯು ಎಷ್ಟು ಮಹತ್ವದ್ದಾಗಿದೆ ಎಂದು ಗಮನಕ್ಕೆ ಬರುತ್ತದೆ.

ಇದಕ್ಕಾಗಿಯೇ ಸನಾತನ ಸಂಸ್ಥೆಯು ಹೇಳುತ್ತಿರುವ ಸಾಧನೆಯಲ್ಲಿ ಸಮಷ್ಟಿ ಸಾಧನೆಗೆ ಪ್ರಾಮುಖ್ಯತೆಯನ್ನು ನೀಡಲಾಗಿದೆ.

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ