ಕಟ್ಟಡ ಕಾಮಗಾರಿಯನ್ನು ‘ಸಾಧನೆ’ ಎಂದು ಮಾಡಿದರೆ ಆ ಕಟ್ಟಡದಿಂದ ಅಗಾಧ ಪ್ರಮಾಣದಲ್ಲಿ ಸಕಾರಾತ್ಮಕ ಸ್ಪಂದನಗಳು ಪ್ರಕ್ಷೇಪಿಸುತ್ತವೆ !

ಕಟ್ಟಡ ಕಾಮಗಾರಿಯನ್ನು ‘ಸಾಧನೆ’ ಎಂದು ಮಾಡಿದರೆ ಆ ಕಟ್ಟಡದಿಂದ ಅಗಾಧ ಪ್ರಮಾಣದಲ್ಲಿ ಸಕಾರಾತ್ಮಕ ಸ್ಪಂದನಗಳು ಪ್ರಕ್ಷೇಪಿಸುತ್ತವೆ !

‘ಪ್ರಾಚೀನ ಕಾಲದಿಂದಲೂ ಮಾನವನು ಭೂಮಿಯ ಮೇಲೆ ವಿವಿಧ ರೀತಿಯ ವಾಸ್ತುಗಳನ್ನು ನಿರ್ಮಿಸುತ್ತಾ ಬಂದಿದ್ದಾನೆ. ಈ ಹಿಂದೆ ಕಟ್ಟಡಕಾಮಗಾರಿಯಲ್ಲಿ ಮಣ್ಣು, ಮರ, ಸುಣ್ಣ ಇತ್ಯಾದಿ ಪಾರಂಪರಿಕ ಮತ್ತು ನೈಸರ್ಗಿಕ ವಸ್ತುಗಳನ್ನು ಬಳಸುತ್ತಿದ್ದರು. ಕಾಲಾಂತರದಲ್ಲಿ ಅವುಗಳ ಜಾಗವನ್ನು ಸಿಮೆಂಟ್, ಕಬ್ಬಿಣ, ಕೃತಕಬಣ್ಣ ಇತ್ಯಾದಿ ವಸ್ತುಗಳು ಆಕ್ರಮಿಸಿದೆ. ಪ್ರತಿಯೊಂದು ವಸ್ತುವಿನಲ್ಲಿ ಅದರ ಮೂಲಭೂತ ಸ್ಪಂದನಗಳಿರುವಂತೆ ಕಟ್ಟಡಕಾಮಗಾರಿಯ ವಸ್ತುಗಳಲ್ಲಿಯೂ ಅವುಗಳ ಮೂಲಭೂತ ಸ್ಪಂದನಗಳಿರುತ್ತವೆ. ಯಾವುದೇ ಕಟ್ಟಡಕಾಮಗಾರಿಯಿಂದ ಪ್ರಕ್ಷೇಪಿಸುವ ಸ್ಪಂದನಗಳು ವಿವಿಧ ಘಟಕಗಳ ಮೇಲೆ ಅವಲಂಬಿಸಿರುತ್ತವೆ, ಉದಾ. ಕಟ್ಟಡ ಕಾಮಗಾರಿಯ-ನಿರ್ಮಾಣದ ಉದ್ದೇಶ, ಕಟ್ಟಡ ಕಾಮಗಾರಿಯ ವಿಧ, ಕಾಮಗಾರಿಗಾಗಿ ಬಳಸಿದ ವಸ್ತುಗಳು, ಕಾಮಗಾರಿಯನ್ನು ಮಾಡುವ ಕಾರ್ಮಿಕರು ಮತ್ತು ಅವರ ಕೌಶಲ್ಯ ಇತ್ಯಾದಿ. ಕಟ್ಟಡಕಾಮಗಾರಿಯು ಹಂತಹಂತವಾಗಿ ಆಗುತ್ತಿರುತ್ತದೆ. ಈ ಲೇಖನದಿಂದ ನಾವು ಗೋವಾದ ರಾಮನಾಥಿಯಲ್ಲಿನ ಸನಾತನದ ಆಶ್ರಮ-ಪರಿಸರದಲ್ಲಿ ಕಟ್ಟಡಕಾಮಗಾರಿಕೆಗೆ ಸಂಬಂಧಿತ ಸೇವೆಗೆ ಸಾಧಕರು ಕಟ್ಟಿದ ‘ಆರ್‌.ಸಿ.ಸಿ. ರಿಟೇನಿಂಗ್‌ ವಾಲ್‌’ನ (ಟಿಪ್ಪಣಿ) ಸಂದರ್ಭದಲ್ಲಿನ ಸಂಶೋಧನೆಯನ್ನು ನೋಡೋಣ.

ಟಿಪ್ಪಣಿ – ‘ಆರ್‌.ಸಿ.ಸಿ. ರಿಟೇನಿಂಗ್‌ ವಾಲ್’ (Reinforced Cement Concrete Retaining Wall) (ತಡೆಗೋಡೆ) : ಇದು ಒಂದು ರೀತಿಯ ಗೋಡೆಯಾಗಿರುತ್ತದೆ, ಇದನ್ನು ಮಣ್ಣು, ಉಸುಕು, ಕಲ್ಲು ಅಥವಾ ಇತರ ವಸ್ತುಗಳನ್ನು ಒಂದು ಜಾಗದಲ್ಲಿ ಹಿಡಿದಿಡಲು ಕಟ್ಟಲಾಗುತ್ತದೆ. ವಿಶೇಷವಾಗಿ ಇಳಿಜಾರುಗಳಲ್ಲಿ ಅಥವಾ ಭೂಕುಸಿತವನ್ನು ತಡೆಗಟ್ಟಲು ಇದರ ಉಪಯೋಗವಾಗುತ್ತದೆ. ರಸ್ತೆ, ಸೇತುವೆ, ಕಟ್ಟಡದ ಅಡಿಪಾಯ ಮುಂತಾದ ರಚನೆಗಳಲ್ಲಿ ಇದನ್ನು ದೊಡ್ಡ ಪ್ರಮಾಣದಲ್ಲಿ ಬಳಸಲಾಗುತ್ತದೆ.

ಸೌ. ಮಧುರಾ ಧನಂಜಯ ಕರ್ವೆ

೧. ಕಟ್ಟಡಕಾಮಗಾರಿಯಲ್ಲಿನ ವಿವಿಧ ಹಂತಗಳ ಛಾಯಾಚಿತ್ರಗಳ ನೋಂದಣಿ ಮತ್ತು ಅವುಗಳ ವಿವೇಚನೆ

‘ಆರ್‌.ಸಿ.ಸಿ. ರಿಟೇನಿಂಗ್‌ ವಾಲ್‌’ನ ಕಟ್ಟಡಕಾಮಗಾರಿಯು ಪ್ರಾರಂಭವಾದ ನಂತರ ವಿವಿಧ ಹಂತಗಳಲ್ಲಿ ಕಟ್ಟಡಕಾಮಗಾರಿಯ ಛಾಯಾಚಿತ್ರಗಳನ್ನು ತೆಗೆಯಲಾಯಿತು. ಈ ಛಾಯಾಚಿತ್ರಗಳನ್ನು ಲೋಲಕದಿಂದ ಪರೀಕ್ಷಣೆ ಮಾಡಲಾಯಿತು. ಲೋಲಕದಿಂದ ವಸ್ತು, ವಾಸ್ತು ಮತ್ತು ವ್ಯಕ್ತಿಯಲ್ಲಿನ ನಕಾರಾತ್ಮಕ ಮತ್ತು ಸಕಾರಾತ್ಮಕ ಊರ್ಜೆಯನ್ನು ಅಳೆಯಬಹುದು

೧ ಅ. ಕಟ್ಟಡಕಾಮಗಾರಿಯಲ್ಲಿನ ವಿವಿಧ ಹಂತಗಳ ಛಾಯಾಚಿತ್ರಗಳಲ್ಲಿ ಉತ್ತರೋತ್ತರ ಹೆಚ್ಚು ಪ್ರಮಾಣದಲ್ಲಿ ಸಕಾರಾತ್ಮಕ ಊರ್ಜೆ ಇರುವುದು : ಕಟ್ಟಡಕಾಮಗಾರಿಯ ಯಾವುದೇ ಛಾಯಾಚಿತ್ರಗಳಲ್ಲಿ ನಕಾರಾತ್ಮಕ ಊರ್ಜೆ ಕಂಡುಬರಲಿಲ್ಲ. ಕಟ್ಟಡ ಕಾಮಗಾರಿಯನ್ನು ಪ್ರಾರಂಭಿಸಿದಾಗಿನಿಂದ ಅದು ಪೂರ್ಣಗೊಳ್ಳುವವರೆಗಿನ ಛಾಯಾಚಿತ್ರಗಳಲ್ಲಿ ಉತ್ತರೋತ್ತರ ಹೆಚ್ಚು ಪ್ರಮಾಣದಲ್ಲಿ ಸಕಾರಾತ್ಮಕ ಊರ್ಜೆ ಕಂಡುಬಂದಿತು. ಇದು ಮುಂದೆ ಕೊಟ್ಟಿರುವ ನೋಂದಣಿಯಿಂದ ಗಮನಕ್ಕೆ ಬರುತ್ತದೆ.

೨. ಕಟ್ಟಡಕಾಮಗಾರಿಗೆ ಸಂಬಂಧಿಸಿದ ಸೇವೆಯನ್ನು ಮಾಡುವ ಸಾಧಕರು ಕಟ್ಟಿದ ‘ಆರ್‌.ಸಿ.ಸಿ. ರಿಟೇನಿಂಗ್‌ ವಾಲ್‌’ನಿಂದ ಸಾತ್ತ್ವಿಕ ಸ್ಪಂದನಗಳು ಪ್ರಕ್ಷೇಪಿಸುವುದರ ಕಾರಣಗಳು

೨ ಅ. ಕಟ್ಟಡಕಾಮಗಾರಿಗೆ ಸಂಬಂಧಿಸಿದ ಸೇವೆಯನ್ನು ಮಾಡುವ ಸಾಧಕರ ಭಾವ : ಈ ಕಟ್ಟಡಕಾಮಗಾರಿಯನ್ನು ಸನಾತನದ ಆಶ್ರಮದಲ್ಲಿನ ಕಟ್ಟಡಕಾಮಗಾರಿಯನ್ನು ಸಂಬಂಧೀತ ಸಾಧಕರು ಸೇವಾ ಭಾವದಿಂದ ಮಾಡಿದ್ದಾರೆ. ಈ ಸಾಧಕರಲ್ಲಿ ಶ್ರೀ ಗುರುಗಳ ಬಗ್ಗೆ (ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಬಗ್ಗೆ) ಮತ್ತು ಅವರು ನಿರ್ಮಿಸಿದ ಆಶ್ರಮದ ಬಗ್ಗೆ ಭಾವವಿದೆ.

೨ ಆ. ಕಟ್ಟಡಕಾಮಗಾರಿಯ ಸೇವೆಯನ್ನು ಸಾಧನೆ ಎಂದು ಮಾಡುವುದು : ಕಟ್ಟಡಕಾಮಗಾರಿಯ ಸೇವೆಯನ್ನು ಮಾಡುವ ಸಾಧಕರು ‘ಕಟ್ಟಡಕಾಮಗಾರಿಯನ್ನು ಮಾಡುವಾಗ ತಮ್ಮ  ಪ್ರತಿಯೊಂದು ಕೃತಿಯಿಂದ ಸಾಧನೆ ಆಗುತ್ತಿದೆಯಲ್ಲ ?’ ಎಂಬುದರ ಕಡೆಗೆ ಗಮನ ಕೊಡುತ್ತಾರೆ. ಕಟ್ಟಡಕಾಮಗಾರಿಯ ಸೇವೆಯನ್ನು ಪ್ರಾರಂಭಿಸುವ ಮೊದಲು ಪ್ರಾರ್ಥನೆ ಮಾಡುವುದು, ಸೇವೆಯಲ್ಲಿ ಏಕರೂಪವಾಗಿ ನಾಮಜಪ ಮಾಡುತ್ತ ಸೇವೆಯನ್ನು ಮಾಡುವುದು, ಸೇವೆ ಆದನಂತರ ಕೃತಜ್ಞತೆಯನ್ನು ವ್ಯಕ್ತಪಡಿಸುವುದು ಇತ್ಯಾದಿ ಕೃತಿ ಗಳನ್ನು ಅವರು ನಿಯಮಿತವಾಗಿ ಮಾಡುತ್ತಾರೆ. ಆ ಕಟ್ಟಡ ಕಾಮಗಾರಿಯು ಒಳ್ಳೆಯ ಗುಣಮಟ್ಟದೊಂದಿಗೆ ಆಗಬೇಕು ಅದರೊಂದಿಗೆ ಅದು ಸಾತ್ತ್ವಿಕವಾಗಬೇಕೆಂದೂ ಪ್ರಯತ್ನಿಸುತ್ತಾರೆ. ಆ ಕಟ್ಟಡಕಾಮಗಾರಿಯಲ್ಲಿ ತಮ್ಮಿಂದಾದ ತಪ್ಪುಗಳ ಅಧ್ಯಯನ ಮಾಡಿ ಅವುಗಳನ್ನು ಸುಧಾರಿಸಲು ಪ್ರಯತ್ನಿಸುತ್ತಾರೆ.

೨ ಇ. ಕಟ್ಟಡಕಾಮಗಾರಿಯ ಸೇವೆಯನ್ನು ಪರಿಪೂರ್ಣಗೊಳಿಸಲು ಪ್ರಯತ್ನಿಸುವುದು : ಕಟ್ಟಡಕಾಮಗಾರಿಗೆ ಸಂಬಂಧಿಸಿದ ಸೇವೆಯನ್ನು ಮಾಡುವ ಸಾಧಕರು ಪ್ರತಿದಿನ ಹೊರಗಿನ ಕಾರ್ಮಿಕರನ್ನು ಕೆಲಸದ ಸ್ಥಳಕ್ಕೆ ಕರೆದುಕೊಂಡು ಬರುವುದು-ಕರೆದುಕೊಂಡು ಹೋಗುವುದು, ಅವರಿಗೆ ಕೆಲಸಗಳನ್ನು ನಿಯಮಿಸಿ ಕೊಡುವುದು, ಅವರಿಂದ ಕೆಲಸಗಳನ್ನು ಸರಿಯಾಗಿ ಮಾಡಿಸಿಕೊಳ್ಳುವುದು, ಕೆಲಸದ ಮೇಲೆ ಗಮನವಿಟ್ಟು ಕೆಲಸದಲ್ಲಿ ತಪ್ಪುಗಳಾಗಬಾರದೆಂದು ಎಚ್ಚರಿಕೆಯಿಂದಿದ್ದು ಪ್ರಯತ್ನಿಸುವುದು. ಕೆಲಸದ ಸ್ಥಳದಲ್ಲಿರುವ ಪರಿಸರವನ್ನು ಸ್ವಚ್ಛವಾಗಿಡುವುದು ಇತ್ಯಾದಿ ಕೃತಿಗಳನ್ನು ಪರಿಪೂರ್ಣ ಮಾಡಲು ಪ್ರಯತ್ನಿಸುತ್ತಾರೆ. ಇದರಿಂದ ಆಶ್ರಮದಲ್ಲಿ ದೊಡ್ಡ ಪ್ರಮಾಣದಲ್ಲಿ ಕಟ್ಟಡಕಾಮಗಾರಿ ನಡೆಯುತ್ತಿದ್ದರೂ ಆ ಸ್ಥಳದಲ್ಲಿ ಗೊಂದಲ-ಗಡಿಬಿಡಿ ಅಥವಾ ಅಸ್ವಚ್ಛತೆ ಇರುವುದಿಲ್ಲ. ಅಲ್ಲಿನ ಪರಿಸರವು ಸ್ವಚ್ಛ ಮತ್ತು ಅಚ್ಚುಕಟ್ಟಾಗಿರುತ್ತದೆ.

ಸಂಕ್ಷಿಪ್ತವಾಗಿ ಹೇಳುವುದಾದರೆ, ಕಟ್ಟಡಕಾಮಗಾರಿ ಸೇವೆ ಯನ್ನು ಮಾಡುವ ಸಾಧಕರು ಮಾಡಿದ ಭಾವಪೂರ್ಣ ಮತ್ತು ಪರಿಪೂರ್ಣ ಸೇವೆಯಿಂದಾಗಿ ‘ರಿಟೇನಿಂಗ್‌ ವಾಲ್‌’ದಲ್ಲಿ ಸಾತ್ತ್ವಿಕ ಸ್ಪಂದನಗಳು ನಿರ್ಮಾಣವಾಗಿ ಅವುಗಳಲ್ಲಿ ಉತ್ತರೋತ್ತರ ಹೆಚ್ಚಳವಾಗುತ್ತಾ ಹೋಯಿತು. ಸಮಾಜದಲ್ಲಿನ ಜನರು ಬಹಳಷ್ಟು ಹಣ ಖರ್ಚು ಮಾಡಿ ದೊಡ್ಡದೊಡ್ಡ ಎತ್ತರ ಮತ್ತು ಆಕರ್ಷಕ ಕಟ್ಟಡಗಳನ್ನು ಕಟ್ಟುತ್ತಾರೆ; ಆದರೆ ಅವುಗಳು ಸಾತ್ತ್ವಿಕ ಇರುತ್ತವೆ ಎಂದೇನಿಲ್ಲ. ಬದಲಾಗಿ ಆಶ್ರಮದಲ್ಲಿನ ಚೈತನ್ಯ, ಕಟ್ಟಡಕಾಮಗಾರಿಗೆ ಸಂಬಂಧಿಸಿದ ಸೇವೆಯನ್ನು ಮಾಡುವ ಸಾಧಕರ ಸೇವಾಭಾವದಿಂದಾಗಿ ‘ರಿಟೇನಿಂಗ್‌ ವಾಲ್‌’ನ ಕಟ್ಟಡಕಾಮಗಾರಿ ಯಿಂದ ತುಂಬಾ ಪ್ರಮಾಣದಲ್ಲಿ ಸಕಾರಾತ್ಮಕ ಸ್ಪಂದನಗಳು ಪ್ರಕ್ಷೇಪಿಸಿದವು. ಇದರಿಂದ ‘ಕಟ್ಟಡಕಾಮಗಾರಿಯಂತಹ ಕೃತಿ (ವಾಸ್ತುನಿರ್ಮಿತಿ)ಯನ್ನು ಸೇವಾಭಾವದಿಂದ ಮಾಡಿದರೆ, ಆ ಕಟ್ಟಡದಲ್ಲಿ (ವಾಸ್ತುವಿನಲ್ಲಿ) ತುಂಬಾ ಸಾತ್ತ್ವಿಕತೆ ಉತ್ಪನ್ನವಾಗುತ್ತದೆ’, ಎಂದು ಈ ಉದಾಹರಣೆಯಿಂದ ಗಮನಕ್ಕೆ ಬರುತ್ತದೆ.’

ಸೌ. ಮಧುರಾ ಧನಂಜಯ ಕರ್ವೆ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೮.೨.೨೦೨೫)

ವಿ-ಅಂಚೆ : mav.research2014@gmail.com