ವ್ಯವಹಾರ ಮತ್ತು ಸಾಧನೆಯ ಸುಂದರ ಸಂಗಮವನ್ನು ಸಾಧಿಸಿದ ಪೂ. (ಸೌ.) ಜ್ಯೋತಿ ಸುದಿನ ಢವಳೀಕರ (ವಯಸ್ಸು ೬೨ ವರ್ಷ)

ಪೂ. ಜ್ಯೋತಿ ಇವರ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಆಠವಲೆ ಹಾಗೂ ಶ್ರೀಸತ್‌ಶಕ್ತಿ ಬಿಂದಾ ಸಿಂಗಬಾಳರ ಮನೋಗತ

ಪೂ. (ಸೌ.) ಜ್ಯೋತಿ ಢವಳೀಕರ ಇವರ ಸನ್ಮಾನವನ್ನು ಮಾಡುತ್ತಿರುವ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ
ಪೂ. (ಸೌ.) ಜ್ಯೋತಿ ಢವಳೀಕರ

ಸನಾತನ ಆಶ್ರಮ – ಸಾಂಸಾರಿಕ ಜೀವನದಲ್ಲಿ ಉಪಾಸ್ಯದೇವತೆಯ ಮತ್ತು ಕುಲದೇವತೆಯ ಜೊತೆಗೆ ಗುರುಗಳ ಕೃಪೆಯ ಸುರಿಮಳೆ ಯಾಗುವುದೋ, ಅಪರೂಪವೇ ಆಗಿದೆ ! ಬಾಂದಿವಡೆಯ ಶ್ರೀ ಮಹಾಲಕ್ಷ್ಮೀದೇವಿ, ಕುಲದೇವತೆ ಶ್ರೀ ವಿಜಯಾದುರ್ಗಾದೇವಿ ಮತ್ತು ಗುರು ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ಕೃಪೆಯನ್ನು ಪ್ರತಿಯೊಂದು ಕ್ಷಣ ಅನುಭವಿಸುವ ಬಾಂದಿವಡೆ, ಫೋಂಡಾ (ಗೋವಾ)ದ ಸನಾತನದ ಸಾಧಕಿ ಸೌ. ಜ್ಯೋತಿ ಸುದಿನ ಢವಳೀಕರ (ವಯಸ್ಸು ೬೨ ವರ್ಷಗಳು) ಇವರು ಶೇ. ೭೨ ರಷ್ಟು ಆಧ್ಯಾತ್ಮಿಕ ಮಟ್ಟವನ್ನು ಪ್ರಾಪ್ತಮಾಡಿಕೊಂಡು ಸಂತರಾದರೆಂಬ ಘೋಷಣೆಯನ್ನು ೨೪ ಫೆಬ್ರವರಿ ಈ ದಿನದಂದು ಮಾಡಲಾಯಿತು. ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ಓರ್ವ ಆಧ್ಯಾತ್ಮಿಕ ಉತ್ತರಾಧಿಕಾರಿ ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರು ಈ ಆನಂದವಾರ್ತೆಯನ್ನು ನೀಡಿದರು.

ರಾಜಕೀಯ ವಾತಾವರಣದಲ್ಲಿದ್ದು ‘ಸಾತ್ತ್ವಿಕ ವೃತ್ತಿ ಮತ್ತು ಸಾಧನೆ’ ಇವುಗಳ ಮೂಲಕ ಶೇ. ೭೨ ರಷ್ಟು ಆಧ್ಯಾತ್ಮಿಕ ಮಟ್ಟವನ್ನು ಪ್ರಾಪ್ತಮಾಡಿಕೊಂಡು ಸನಾತನದ ೧೩೨ ನೇ ಸಂತಪದವಿಯಲ್ಲಿ ವಿರಾಜಮಾನರಾದ ಸೌ. ಜ್ಯೋತಿ ಸುದಿನ ಢವಳೀಕರ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಗೋವಾದ ಸೌ. ಜ್ಯೋತಿ ಸುದಿನ ಢವಳೀಕರ ಇವರು ೧೯೯೯ ರಿಂದ ಸನಾತನದ ಮಾಧ್ಯಮದಿಂದ ಸಾಧನೆಯನ್ನು ಮಾಡುತ್ತಿದ್ದಾರೆ. ಅವರ ಪತಿ ಮಾನ್ಯ ಶ್ರೀ. ಸುದಿನ ಮಾಧವ ಢವಳೀಕರ ಇವರು ಗೋವಾದ ವಿದ್ಯುತ್‌ಮಂತ್ರಿ ಮತ್ತು ಮಾಜಿ ಉಪಮುಖ್ಯಮಂತ್ರಿಯಾಗಿದ್ದಾರೆ. ಆದುದರಿಂದ ಅವರ ಮನೆಗೆ ದೊಡ್ಡ ರಾಜಕೀಯ ಹಿನ್ನೆಲೆ ಇದೆ. ವಾಸ್ತವದಲ್ಲಿ ಸಂಸಾರದಲ್ಲಿದ್ದು ಸಾಧನೆ ಮಾಡುವುದು, ಬಹಳ ಕಠಿಣವಾಗಿದೆ ಮತ್ತು ರಾಜಕೀಯ ಹಿನ್ನೆಲೆ ಇರುವ ಅವಿಭಕ್ತ ಕುಟುಂಬದಲ್ಲಿದ್ದು ಸಾಧನೆಯನ್ನು ಮಾಡುವುದು ಇನ್ನೂ ಕಠಿಣವಾಗಿದೆ. ಹೀಗಿರುವಾಗ ಹುಟ್ಟಿನಿಂದಲೇ ಸಾತ್ತ್ವಿಕ ಮತ್ತು ಧಾರ್ಮಿಕ ವೃತ್ತಿ ಇರುವ ಸೌ. ಜ್ಯೋತಿ ಢವಳೀಕರ ಇವರು ‘ಶಾಂತ, ಸ್ಥಿರ ಮತ್ತು ಶ್ರದ್ಧೆಯುಳ್ಳ ಸ್ವಭಾವ, ಉತ್ತಮ ಆಯೋಜನಾಕೌಶಲ್ಯ, ಕುಟುಂಬವಾತ್ಸಲ್ಯ ಮತ್ತು ‘ಕರ್ತವ್ಯನಿಷ್ಠ’ ಈ ಗುಣಗಳ ಮೂಲಕ ಸಂಸಾರ ವನ್ನು ಉತ್ತಮ ರೀತಿಯಲ್ಲಿ ಸಂಭಾಳಿಸಿ ಆಧ್ಯಾತ್ಮಿಕ ಉನ್ನತಿಯನ್ನೂ ಮಾಡಿಕೊಂಡಿದ್ದಾರೆ. ‘ಸಾಧನೆ ಯಿಂದಾಗಿ ರಾಜಕಾರಣವನ್ನೂ ಅವರು ಆಧ್ಯಾತ್ಮಿಕ ದೃಷ್ಟಿಯಿಂದ ನೋಡಿದರು, ಇದು ಅತ್ಯಂತ ಪ್ರಶಂಸನೀಯ ಮತ್ತು ಅನುಕರಣೀಯವಾಗಿದೆ.

ನಿಜ ಹೇಳಬೇಕೆಂದರೆ ಪ್ರಭುತ್ವ, ಅಧಿಕಾರ ಮತ್ತು ಕೈಯಲ್ಲಿ ಹಣ ಬಂದರೆ ವ್ಯಕ್ತಿಯು ಅಹಂಕಾರಿಯಾಗುತ್ತಾನೆ ಮತ್ತು ದೇವರು-ಧರ್ಮದಿಂದ ದೂರವಾಗುತ್ತಾನೆ; ಆದರೆ ಸೌ. ಜ್ಯೋತಿ ಢವಳೀಕರ ಇವರು ಒಬ್ಬ ಅತ್ಯಂತ ಅಪರೂಪದ ಉದಾಹರಣೆಯಾಗಿದ್ದಾರೆ. ‘ಕಡಿಮೆ ಅಹಂ, ಎಲ್ಲರೊಂದಿಗೆ ಸಮಭಾವದಿಂದ ವ್ಯವಹರಿಸುವುದು, ಇತರರಿಗೆ ಸಹಾಯವನ್ನು ಮಾಡುವುದು, ಪರೇಚ್ಛೆಯಿಂದ ವರ್ತಿಸುವುದು ಮತ್ತು ವ್ಯವಹಾರ ಮತ್ತು ಅಧ್ಯಾತ್ಮದ ಸುಂದರ ಸಂಗಮವನ್ನು ಸಾಧಿಸುವುದು’, ಮುಂತಾದ ಗುಣಗಳಿಂದ ಅಧ್ಯಾತ್ಮ ದಲ್ಲಿ ಅವರು ಶೀಘ್ರಗತಿಯಲ್ಲಿ ಪ್ರಗತಿಯಾಗುತ್ತಿದೆ.

೨೦೧೩ ರಲ್ಲಿ ಸೌ. ಜ್ಯೋತಿ ಢವಳೀಕರ ಇವರು ಶೇ. ೬೧ ರಷ್ಟು ಆಧ್ಯಾತ್ಮಿಕ ಮಟ್ಟವನ್ನು ಪ್ರಾಪ್ತಮಾಡಿಕೊಂಡರು. ೨೦೨೪ ರ ಗುರು ಪೂರ್ಣಿಮೆಯಂದು ಅವರ ಆಧ್ಯಾತ್ಮಿಕ ಮಟ್ಟ ಶೇ. ೬೯ ರಷ್ಟಿತ್ತು. ಇಂದಿನ ಶುಭದಿನದಂದು ಅವರು ಶೇ. ೭೨ ರಷ್ಟು ಆಧ್ಯಾತ್ಮಿಕ ಮಟ್ಟವನ್ನು ಪ್ರಾಪ್ತಮಾಡಿಕೊಂಡು ‘ಸಮಷ್ಟಿ ಸಂತ’ರೆಂದು ಅವರು ಸನಾತನದ ೧೩೨ ನೇ ಸಂತಪದವಿಯಲ್ಲಿ ವಿರಾಜಮಾನರಾಗಿದ್ದಾರೆ. ಪೂ. (ಸೌ.) ಜ್ಯೋತಿ ಢವಳೀಕರ ಇವರು ‘ರಾಜಕೀಯ ವಾತಾವರಣ ದಲ್ಲಿದ್ದರೂ ಸಾಧನೆಯಲ್ಲಿ ಪ್ರಗತಿ ಮಾಡಿಕೊಂಡು ಸಂತಪದವಿಯನ್ನು ಪ್ರಾಪ್ತಮಾಡಿಕೊಳ್ಳಲು ಬರು ತ್ತದೆ’, ಎಂಬುದನ್ನು ಸಿದ್ಧಮಾಡಿ ತೋರಿಸಿದ್ದಾರೆ.

‘ಪೂ. (ಸೌ.) ಜ್ಯೋತಿ ಢವಳೀಕರ ಇವರ ಮುಂದಿನ ಪ್ರಗತಿಯೂ ಶೀಘ್ರ ಗತಿಯಲ್ಲಾಗಲಿ’, ಎಂದು ಭಗವಾನ ಶ್ರೀಕೃಷ್ಣನ ಚರಣಗಳಲ್ಲಿ ಪ್ರಾರ್ಥನೆ !’

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ (೨೪.೨.೨೦೨೫)

ಪರಸ್ಪರರಿಗೆ ಆಧಾರ ನೀಡುವ ಮತ್ತು ಕಲಿಯುಗದಲ್ಲಿಯೂ ಒಟ್ಟಿಗೆ ಇರುವ ಢವಳೀಕರ ಕುಟುಂಬ !

ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ

‘ಸದ್ಯದ ವಿಭಕ್ತ ಕುಟಂಬಪದ್ಧತಿಯ ಕಾಲದಲ್ಲಿಯೂ ಢವಳೀಕರ ಕುಟಂಬದವರು ಒಟ್ಟಿಗೆ ಇರುತ್ತಾರೆ. ಎಲ್ಲ ಕುಟುಂಬದವರು ಮನಸ್ಸಿನಿಂದ ಒಂದಾಗಿದ್ದಾರೆ. ಮನೆಯಲ್ಲಿ ಹಬ್ಬಹರಿದಿನಗಳಂದು ಒಟ್ಟಿಗೆ ಸೇರಿ ಆನಂದದಿಂದ ಆಚರಿಸುವುದರೊಂದಿಗೆ ಕುಟುಂಬದ ಸದಸ್ಯರ ಅನಾರೋಗ್ಯದಲ್ಲಿ, ಕಠಿಣ ಪ್ರಸಂಗಗಳಲ್ಲಿ ಎಲ್ಲರೂ ಪರಸ್ಪರರಿಗೆ ಬಹಳ ಸಹಾಯ ಮಾಡುತ್ತಾರೆ. ಕುಟುಂಬದ ಡಾ. ಸಂದೀಪ ಢವಳೀಕರ ಇವರು ಆಧುನಿಕ ವೈದ್ಯರಾಗಿದ್ದಾರೆ. ಕುಟುಂಬದಲ್ಲಿ ಯಾರಿಗಾದರೂ ಯಾವುದೇ ಕಾಯಿಲೆ ಬಂದರೂ ಅವರು ತಮ್ಮ ಕೆಲಸವನ್ನು ಬಿಟ್ಟು ಸಹಾಯ ಮಾಡುತ್ತಾರೆ. ಅನಾರೋಗ್ಯದ ಸಮಯದಲ್ಲಿ ಪರಸ್ಪರರ ಕಾಳಜಿ ತೆಗೆದುಕೊಳ್ಳುವುದು, ಬೇಕು-ಬೇಡಗಳನ್ನು ನೋಡುವುದು, ಹೆಣ್ಣುಮಕ್ಕಳ ಹೆರಿಗೆಯ ಸಮಯದಲ್ಲಿ ಪರಸ್ಪರರನ್ನು ಅರಿತುಕೊಂಡು ಆಧಾರ ನೀಡುವುದು, ಇಂತಹ ಕೃತಿಗಳನ್ನು ಈ ಕುಟುಂಬದ ಎಲ್ಲರೂ ಮಾಡುತ್ತಾರೆ. ಎಲ್ಲರಲ್ಲಿ ಪರಸ್ಪರರ ಬಗ್ಗೆ ಬಹಳ ಪ್ರೇಮಭಾವವಿದೆ.’

– ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ