
‘ರಾಮಾಯಣವು ಒಂದು ಕಾಲ್ಪನಿಕ ಕಾವ್ಯವಾಗಿದೆ. ಅದು ಇತಿಹಾಸವಲ್ಲ’, ಎಂದು ಉದ್ಧಟತನದಿಂದ ಪ್ರಾಮಾಣಿಕವಾಗಿ ಸುಳ್ಳು ಬರೆಯುವವರನ್ನು ಮತ್ತು ಮಾತನಾಡುವವರನ್ನು ಖಂಡಿಸುತ್ತಾ, ಗುರುದೇವರು (ಪ.ಪೂ. ಗುರುದೇವ ಡಾ. ಕಾಟೇಸ್ವಾಮೀಜಿ ಇವರು) ಮುಂದಿನಂತೆ ಹೇಳಿದ್ದಾರೆ – ‘ನಮ್ಮ ಹಿಂದೂ ಸಾಮಾಜಿಕ ಜೀವನದ ರಾಜಕೀಯ, ಧಾರ್ಮಿಕ, ಸಾಂಸ್ಕೃತಿಕ, ಕೌಟುಂಬಿಕ, ಹೀಗೆ ಯಾವುದೇ ಕ್ಷೇತ್ರವಾಗಿರಲಿ, ಮರ್ಯಾದಾಪುರುಷೋತ್ತಮ ಶ್ರೀರಾಮನ ಎಂತಹ ಅದ್ಭುತ ಅಪೂರ್ವ ಪ್ರಭಾವವಿದೆಯೆಂದರೆ, ಸಾವಿರಾರು ಜಾತ್ಯತೀತ, ಸಮಾಜವಾದಿ ಸರಕಾರಗಳು ಬಂದರೂ ಅವನನ್ನು ಅಳಿಸುವುದು ಅಸಾಧ್ಯವಾಗಿದೆ. ಹಿಂದೂಗಳಿಗೆ ರಾಮನ ಹೊರತು ಬೇರೆ ಯಾರಿದ್ದಾರೆ ? ಎಲ್ಲೆಡೆ ರಾಮನೇ ಇದ್ದಾನೆ.
ನಮ್ಮ ಆತ್ಮವು ಆತ್ಮಾರಾಮವಾಗಿದೆ. ಹಿಂದೂ ಕುಟುಂಬದಲ್ಲಿ ಜನಿಸಿದರೆ, ಜನನ, ವಿವಾಹ ಸಮಾರಂಭ, ಯಾವುದೇ ಶುಭ ಪ್ರಸಂಗವಿರಲಿ, ಯಾವುದೇ ಉತ್ಸವವಿರಲಿ, ರಾಮಜನ್ಮ, ರಾಮವಿವಾಹ ಇಂತಹ ಹಾಡುಗಳಿರುತ್ತವೆ. ಮೃತ್ಯುವಿನ ನಂತರ ಶವಯಾತ್ರೆಯಲ್ಲಿ ‘ರಾಮ ನಾಮ ಸತ್ಯ ಹೈ’ ಇರುತ್ತದೆ. ಪರಸ್ಪರರನ್ನು ಅಭಿನಂದಿಸುವಾಗ ‘ರಾಮ ರಾಮ’ ಎಂದು ಹೇಳುತ್ತಾರೆ. ಮೃತ್ಯುವಾದರೆ ‘ರಾಮ’ ಎಂದು ಹೇಳುತ್ತಾರೆ. ಯಾರೋ ಒಬ್ಬರಲ್ಲಿ ಯಾವುದೇ ಶಕ್ತಿ ಇಲ್ಲ, ಅರ್ಥ ಇಲ್ಲ, ಈ ಅರ್ಥದಿಂದ ನಾವು, ‘ಛೇ, ಹೌದು, ಎಂದು ಹೇಳುತ್ತೇವೆ ! ಅದರಲ್ಲಿ ರಾಮನೇ ಇಲ್ಲ.’ ಉತ್ತಮ ಔಷಧಕ್ಕೆ ‘ರಾಮಬಾಣ ಔಷಧಿ’ ಅಥವಾ ‘ರಾಮಬಾಣ ಉಪಾಯ’ ಹೀಗೆ ಹೇಳುತ್ತಾರೆ. ಎಲ್ಲೆಡೆ ‘ರಾಮ ರಾಮ ರಾಮನೇ’ ಇದ್ದಾನೆ. ಅತ್ಯುತ್ತಮ ಆಡಳಿತಕ್ಕೆ ‘ರಾಮರಾಜ್ಯ’ ಎಂದು ಹೇಳುತ್ತಾರೆ. ಭಾರತದ ಮೂಲೆಮೂಲೆಗಳಲ್ಲಿ, ಹಳ್ಳಿಹಳ್ಳಿಗಳಲ್ಲಿ ರಾಮನ ದೇವಸ್ಥಾನಗಳಿವೆ. ಲಕ್ಷಾಂತರ ಜನರು ಪ್ರತಿದಿನ ರಾಮಾಯಣವನ್ನು ಓದುತ್ತಾರೆ. ಅಯೋಧ್ಯೆ, ರಾಮೇಶ್ವರ, ಪಂಚವಟಿ, ಚಿತ್ರಕೂಟ ಹೀಗೆ ಯಾತ್ರೆ ಮಾಡುತ್ತಾರೆ. ಕೋಟ್ಯಂತರ ಹಿಂದೂಗಳ ಹೆಸರುಗಳು ರಾಮಾಯಣಕ್ಕೆ ಸಂಬಂಧಿಸಿವೆ. ಹಿಂದೂ ಸಮಾಜದ ನರನಾಡಿ ಗಳಲ್ಲಿ ‘ರಾಮ’ನು ರಕ್ತದಂತೆ ನಿರಂತರ ಹರಿಯುತ್ತಿದ್ದಾನೆ. ಈಶ್ವರನ ಎಷ್ಟು ಹೆಸರುಗಳಿವೆಯೋ, ಅವುಗಳಲ್ಲಿ ಅತ್ಯಧಿಕ ಪ್ರಸಿದ್ಧವಾದ ಹೆಸರು ಎಂದರೆ ‘ರಾಮನಾಮ’ವಾಗಿದೆ. ಕಾಶಿಯ ಜೀವಗಳಿಗೆ ಮುಕ್ತಿಯನ್ನು ಪ್ರದಾನಿಸುವ ಶಿವಶಂಕರನು ಮೃತನ ಕಿವಿಯಲ್ಲಿ ರಾಮನಾಮವನ್ನು ಉಪದೇಶಿಸಿ ಅವನಿಗೆ ಮುಕ್ತಿ ನೀಡುತ್ತಾನೆ.
ಇಂತಹ ಭರತಖಂಡದ ಪ್ರತಿಯೊಂದು ಮನೆಮನೆಯಲ್ಲಿಯೂ ರಾಮಾಯಣದ ಜನ್ಮೋತ್ಸವ, ನವರಾತ್ರಿ ಆಚರಣೆಯ ಅಖಂಡ ಸಂಪ್ರದಾಯವಿದ್ದರೂ ಈ ಪಾಶ್ಚಾತ್ಯ ಪ್ರಾಚ್ಯ ವಿದ್ವಾಂಸರು, ಮಿಶನರಿಗಳು ಮತ್ತು ಅವರ ಬೂಟುಗಳನ್ನು ನೆಕ್ಕುವ ನಮ್ಮ ಆಂಗ್ಲಮಾನಸಿಕತೆಯ ಪಂಡಿತರು ಶ್ರೀರಾಮನ ಐತಿಹಾಸಿಕತೆಯ ಬಗ್ಗೆ ಸಂದೇಹಗಳ ಬಿರುಗಾಳಿ ಎಬ್ಬಿಸಬೇಕೇ ? ನಮ್ಮ ತಲೆಯನ್ನು ಎಷ್ಟು ಕೆಡಿಸಿದ್ದಾರೆ. ಈ ಭಯಂಕರ ಧರ್ಮಸಂಕಟವನ್ನು ತಂದವರು ಯಾರು ? ನಾವು ಎಚ್ಚೆತ್ತುಕೊಳ್ಳುತ್ತೇವೆಯೇ ಅಥವಾ ಇಲ್ಲವೇ ?
– ಪ.ಪೂ. ಗುರುದೇವ ಡಾ. ಕಾಟೆಸ್ವಾಮೀಜಿ (ಆಧಾರ : ಮಾಸಿಕ ‘ಘನಗರ್ಜಿತ’)