ಪರಾತ್ಪರ ಗುರು ಡಾ. ಆಠವಲೆಯವರ ಸಾಧನೆಯ ಕುರಿತು ಮಾರ್ಗದರ್ಶನ !

ಸನಾತನದ ಸತ್ಸಂಗದಲ್ಲಿ ಆನಂದದ ಅರಿವಾಗಲು ಕಾರಣ

(ಪರಾತ್ಪರ ಗುರು) ಡಾ. ಆಠವಲೆ

‘ಯಾವುದೇ ಸಂಪ್ರದಾಯದ ಸಂತರ ಮಾರ್ಗದರ್ಶನ, ದರ್ಶನ ಸಮಾರಂಭವಿದ್ದರೆ ಅದಕ್ಕಾಗಿ ಬರುವ ಭಕ್ತರು ಕೇವಲ ಆರ್ಥಿಕ, ಸಾಂಸಾರಿಕ, ಶಾರೀರಿಕ ಹಾಗೂ ಮಾನಸಿಕ ಈ ಸ್ತರಗಳ ಅಡಚಣೆಗಳನ್ನು ಮಂಡಿಸುತ್ತಾರೆ. ಆಧ್ಯಾತ್ಮಿಕ ದೃಷ್ಟಿಕೋನದಿಂದ ನೋಡಿದರೆ ಮನುಷ್ಯನ ಇವೆಲ್ಲ ತೊಂದರೆಗಳು ಅವನ ಪ್ರಾರಬ್ಧಕ್ಕನುಸಾರ ಇರುತ್ತದೆ. ಅದುದರಿಂದ ಸನಾತನದಲ್ಲಿ ಪ್ರಾರಬ್ಧವನ್ನು ಎದುರಿಸಲು ಅಥವಾ ಪ್ರಾರಬ್ಧ ತೀವ್ರವಾಗಿದ್ದರೆ ಅದನ್ನು ಸಹಿಸಲು ಯೋಗ್ಯವಾದ ಸಾಧನೆಯನ್ನು ಕಲಿಸಲಾಗುತ್ತದೆ. ಸನಾತನದ ಸಾಧಕರು ನಿಷ್ಕಾಮ ಸಾಧನೆಯನ್ನು ಮಾಡುತ್ತಾರೆ. ಸನಾತನದ ಸತ್ಸಂಗಗಳಲ್ಲಿ ಸಾಧಕರು ತಮಗೆ ಬಂದ ಕೇವಲ ಆಧ್ಯಾತ್ಮಿಕ ಸ್ತರದ ಅನುಭೂತಿಗಳನ್ನು ಹೇಳುತ್ತಾರೆ. ಅದುದರಿಂದ ಸನಾತನದ ಸತ್ಸಂಗಗಳಲ್ಲಿ ಸಾಧಕರಿಗೆ ಆನಂದವನ್ನು ಅನುಭವಿಸಲು ಆಗುತ್ತದೆ’.

–  (ಪರಾತ್ಪರ ಗುರು) ಡಾ. ಆಠವಲೆ (೨೭.೧೧.೨೦೨೧)

ಈಶ್ವರನು ಕೇವಲ ನಮ್ಮ ಕೃತ್ಯಗಳಿಗೆ ಸಾಕ್ಷಿದಾರನಾಗಿ ಇರುತ್ತಾನೆ ಹಾಗೂ ಅದರ ಫಲವನ್ನು ನಮಗೆ ನೀಡುತ್ತಾನೆ

‘ದೇವರು ನಾವು ಮಾಡಿದ ಕರ್ಮದ ಫಲವನ್ನು ನೀಡುತ್ತಾನೆ’, ಎಂಬ ಉಕ್ತಿಯು ಪ್ರಚಲಿತವಿದೆ. ವಾಸ್ತವದಲ್ಲಿ ಈಶ್ವರನು ನಾವು ಮಾಡುತ್ತಿರುವ ಕೃತ್ಯಗಳಿಗೆ ಕೇವಲ ಸಾಕ್ಷಿದಾರನಾಗಿದ್ದಾನೆ. ನಾವು ಕರ್ಮ ಮಾಡುತ್ತೇವೆ ಅದೇ ಸಮಯದಲ್ಲಿ ಅದರ ಒಳ್ಳೆಯ ಅಥವಾ ಕೆಟ್ಟ ಪರಿಣಾಮ ನಮ್ಮ ಮೇಲಾಗುತ್ತದೆ. ಇಂತಹ ಪರಿಣಾಮಗಳನ್ನು ‘ಕರ್ಮದ ಫಲ’ವೆಂದು ನಾವು ಭೋಗಿಸಬೇಕಾಗುತ್ತದೆ’.

– (ಪರಾತ್ಪರ ಗುರು) ಡಾ. ಆಠವಲೆ (೧೨.೯.೨೦೨೧)

ಉಪಾಧಿಯಂತೆ ಶಾಶ್ವತವಾಗಿ ಪದವಿಗಳನ್ನು ನೀಡುವ ಈಗಿನ ಶಿಕ್ಷಣವ್ಯವಸ್ಥೆ ಹಾಗೂ ಸಾಧಕರ ವರ್ತಮಾನ ಸ್ಥಿತಿಗನುಸಾರ ಪದವಿಯನ್ನು ಘೋಷಿಸುವ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ !

‘ಈಗಿನ ಶೈಕ್ಷಣಿಕ ಪದ್ಧತಿಗನುಸಾರ ನ್ಯಾಯವಾದಿ, ವೈದ್ಯ, ಅಭಿಯಂತ ಆಗುವುದಕ್ಕಾಗಿ ಯಾರಾದರೂ ಅಧ್ಯಯನವನ್ನು ಪೂರ್ಣಗೊಳಿಸಿದರೆ ಅವರಿಗೆ ವಿಶ್ವವಿದ್ಯಾಲಯದಿಂದ ಆ ರೀತಿಯ ಪ್ರಮಾಣಪತ್ರವನ್ನು ನೀಡಲಾಗುತ್ತದೆ. ಮುಂದೆ ಆ ಪದವೀಧರನು ಅವನ ಶಿಕ್ಷಣಕ್ಕನುಸಾರ ಕಾರ್ಯ ಮಾಡದಿದ್ದರೆ ಆ ವಿಶ್ವವಿದ್ಯಾಲಯವು ಅವನ ಪದವಿಯನ್ನು ಹಿಂದೆ ಪಡೆಯುವುದಿಲ್ಲ. ಅವರಲ್ಲಿ ಆ ಪದವಿಯು ಯಾವುದಾದರೊಂದು ಉಪಾಧಿಯಂತೆ ಜೀವಮಾನವಿಡಿ ಇರುತ್ತದೆ. ತದ್ವಿರುದ್ಧ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದಿಂದ ಆಧ್ಯಾತ್ಮಿಕ ಮಟ್ಟಕ್ಕನುಸಾರ ಪದವಿ ನೀಡಲಾಗುತ್ತದೆ. ಏನಾದರೂ ಕಾರಣದಿಂದ ಆಧ್ಯಾತ್ಮಿಕ ಮಟ್ಟವು ಕಡಿಮೆಯಾದರೆ ವಿಶ್ವವಿದ್ಯಾಲಯವು ಹಾಗೆ ಘೋಷಿಸುತ್ತದೆ ಹಾಗೂ ಅವನಿಗೆ ಪುನಃ ಆ ಪದವಿಗಾಗಿ ಸಾಧನೆಯನ್ನು ಮಾಡಲು ಹೇಳುತ್ತದೆ’.

– (ಪರಾತ್ಪರ ಗುರು) ಡಾ. ಆಠವಲೆ (೮.೧೧.೨೦೨೧)