ಪರಾತ್ಪರ ಗುರು ಡಾ. ಆಠವಲೆಯವರ ಕೋಣೆಯ ದಕ್ಷಿಣ ಬದಿಯ ಗೋಡೆಯ ಮೇಲೆ ಹಾಗೆಯೇ ಕೋಣೆಯ ಮೇಲ್ಛಾವಣಿಯಲ್ಲಿ ಆಗಿರುವ ಕಲೆಯ ಸಂದರ್ಭದಲ್ಲಿ ಕೈಕೊಂಡ ಸಂಶೋಧನೆ !

ಸಂತರ ಕೋಣೆಯ ವಿಷಯದ ಬಗ್ಗೆ ಅದ್ವಿತೀಯ ಸಂಶೋಧನೆ ಮಾಡುವ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ

‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ವು ‘ಯುನಿವರ್ಸಲ್ ಔರಾ ಸ್ಕ್ಯಾನರ್ (ಯು.ಎ.ಎಸ್.)’ ಈ ಉಪಕರಣದ ಮೂಲಕ ಮಾಡಿದ ವೈಜ್ಞಾನಿಕ ಪರೀಕ್ಷಣೆ !

 ‘ಪರಾತ್ಪರ ಗುರು ಡಾ. ಆಠವಲೆಯವರು ಈಶ್ವರಿ ರಾಜ್ಯದ ಸ್ಥಾಪನೆಯ ಮಹೋನ್ನತ ಸಮಷ್ಟಿ ಕಾರ್ಯವನ್ನು ಮಾಡುತ್ತಿದ್ದಾರೆ. ಈ ಕಾರ್ಯದಲ್ಲಿ ಅಡಚಣೆಗಳನ್ನುಂಟು ಮಾಡಲು ದೊಡ್ಡ ಕೆಟ್ಟ ಶಕ್ತಿಗಳು ಸೂಕ್ಷ್ಮದಿಂದ ಪರಾತ್ಪರ ಗುರು ಡಾಕ್ಟರರ ಮೇಲೆ ನಿರಂತರವಾಗಿ ಆಕ್ರಮಣವನ್ನು ಮಾಡುತ್ತಿವೆ. ಕಳೆದ ೨೦ ವರ್ಷಗಳಿಂದ ನಡೆಯುತ್ತಿರುವ ಈ ‘ದೇವಾಸುರ ಯುದ್ಧ’ವು ಈಗ ಅಂತಿಮ ಘಟ್ಟವನ್ನು ತಲುಪಿದೆ. ಈ ಸೂಕ್ಷ್ಮ ಯುದ್ಧದ ಕರಿನೆರಳು ಆಗಾಗ ಪರಾತ್ಪರ ಗುರು ಡಾಕ್ಟರರ ಕೋಣೆಯಲ್ಲಿ ಮೂಡುತ್ತದೆ. ‘ಕಲಿಯುಗದ ‘ದೇವಾಸುರ ಯುದ್ಧ’ ಹೇಗೆ ನಡೆಯುತ್ತದೆ?’, ಎನ್ನುವುದು ಸಮಾಜಕ್ಕೆ ಹಾಗೂ ಮುಂದಿನ ಪೀಳಿಗೆಗೆ ತಿಳಿಯಬೇಕು ಎಂದು ಪರಾತ್ಪರ ಗುರು ಡಾಕ್ಟರರು ಅತ್ಯಂತ ಜಿಜ್ಞಾಸೆಯಿಂದ ಅಧ್ಯಯನ ನಡೆಸಿ, ಈ ಬಗ್ಗೆ ಆಯಾ ಸಮಯದಲ್ಲಿ ಛಾಯಾಚಿತ್ರಗಳನ್ನು ತೆಗೆಯುವಂತೆ ಹೇಳಿದ್ದರು.

ಪರಾತ್ಪರ ಗುರು ಡಾ. ಆಠವಲೆಯವರ ಕೋಣೆಯ ದಕ್ಷಿಣ ಕಡೆಯ ಗೋಡೆಯ ಮೇಲೆ ಹಾಗೂ ಕೋಣೆಯ ಮೇಲ್ಛಾವಣಿಗೆ ಆಗಿರುವ ಕಲೆಗಳ ಆಯ್ದ ಛಾಯಾಚಿತ್ರಗಳನ್ನು ‘ಯು.ಎ.ಎಸ್ (ಯುನಿವರ್ಸಲ್ ಔರಾ ಸ್ಕ್ಯಾನರ್)’ ಈ ಉಪಕರಣದ ಮೂಲಕ ಪರೀಕ್ಷಣೆ ಮಾಡಲಾಯಿತು. ಈ ಪರೀಕ್ಷಣೆಯ ನಿರೀಕ್ಷಣೆಗಳ ವಿವೇಚನೆ ಮತ್ತು ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆಯನ್ನು ಮುಂದೆ ನೀಡಲಾಗಿದೆ.

ಯು.ಎ.ಎಸ್. ಉಪಕರಣದ ಮೂಲಕ ಪರೀಕ್ಷಣೆ ಮಾಡುತ್ತಿರುವ ಶ್ರೀ. ಆಶಿಷ್ ಸಾವಂತ್

ಪರಾತ್ಪರ ಗುರು ಡಾ. ಆಠವಲೆಯವರ ಕೊಠಡಿಯ ದಕ್ಷಿಣ ಕಡೆಯ ಗೋಡೆಯ ಮೇಲೆ ೨೦೧೩ ನೇ ಇಸವಿಯಲ್ಲಿ ಮೂಡಿರುವ ಕಲೆಗಳಲ್ಲಿ ೨೦೨೧ ರಲ್ಲಿ ಆಗಿರುವ ಬದಲಾವಣೆಗಳ ತುಲನಾತ್ಮಕ ಛಾಯಾಚಿತ್ರಗಳು !

೨೦೧೩ ನೇ ಇಸವಿಯಲ್ಲಿ ದಕ್ಷಿಣದ ಕಡೆಯ ಗೋಡೆಯ ಮೇಲೆ ಮೂಡಿರುವ ಕಲೆಗಳಲ್ಲಿ ಕಾಣಿಸುವ ಕೆಟ್ಟ ಶಕ್ತಿಗಳ ಕಣ್ಣುಗಳು ಮತ್ತು ಮುಖಗಳು (ಗೋಲಾಕಾರದಲ್ಲಿ ತೋರಿಸಲಾಗಿದೆ)

೨೦೧೩ ರ ತುಲನೆಯಲ್ಲಿ ೨೦೨೧ ನೇ ಇಸವಿಯಲ್ಲಿ ದಕ್ಷಿಣದ ಕಡೆಯ ಗೋಡೆಯ ಮೇಲಿನ ಕಣ್ಣುಗಳು ಮತ್ತು ಮುಖಗಳು ಇನ್ನಷ್ಟು ಗಾಢವಾಗಿರುವುದು ಕಂಡು ಬರುತ್ತದೆ. (ಗೋಲಾಕಾರದಲ್ಲಿ ತೋರಿಸಲಾಗಿದೆ)

೧. ಪರೀಕ್ಷಣೆಯ ನಿರೀಕ್ಷಣೆಗಳ ವಿವೇಚನೆ

ಸೌ. ಮಧುರಾ ಕರ್ವೆ

ಪರಾತ್ಪರ ಗುರು ಡಾ. ಆಠವಲೆಯವರ ಕೋಣೆಯ ದಕ್ಷಿಣ ಕಡೆಯ ಗೋಡೆಯ ಮೇಲೆ ಮೂಡಿರುವ ಕಲೆ (ಟಿಪ್ಪಣಿ ೧) ಹಾಗೂ  ಕೋಣೆಯ ದಕ್ಷಿಣ ದಿಕ್ಕಿನ ಮೇಲ್ಛಾವಣಿಗೆ ಮೂಡಿರುವ ಕಲೆಗಳ (ಟಿಪ್ಪಣಿ ೨) ಛಾಯಾಚಿತ್ರಗಳನ್ನು ೨೦೨೧  ನೇ ಇಸವಿಯಲ್ಲಿ ತೆಗೆಯಲಾಯಿತು. ಈ ಕಲೆಗಳ ಛಾಯಾಚಿತ್ರಗಳನ್ನು ೨೦೧೩ ನೇ ಇಸವಿಯಲ್ಲಿಯೂ ತೆಗೆಯಲಾಗಿತ್ತು. ಈ ಛಾಯಾಚಿತ್ರಗಳನ್ನು ‘ಯು.ಎ.ಎಸ್. (ಯುನಿವರ್ಸಲ್ ಔರಾ ಸ್ಕ್ಯಾನರ್)’ ಉಪಕರಣದ ಮೂಲಕ ನಿರೀಕ್ಷಣೆ ಮಾಡಲಾಯಿತು. ಈ ಛಾಯಾಚಿತ್ರಗಳ ತುಲನಾತ್ಮಕ ಅಧ್ಯಯನದಿಂದ ಗಮನಕ್ಕೆ ಬಂದಿರುವ ಅಂಶಗಳನ್ನು ಮುಂದೆ ನೀಡಲಾಗಿದೆ.

೧ ಅ. ಪರಾತ್ಪರ ಗುರು ಡಾ. ಆಠವಲೆಯವರ ಕೋಣೆಯ ದಕ್ಷಿಣ ಕಡೆಯ ಗೋಡೆಯ ಮೇಲೆ, ಹಾಗೂ ಕೋಣೆಯ ಮೇಲ್ಛಾವಣಿಯಲ್ಲಿ ಆಗಿರುವ ಕಲೆಗಳ ಛಾಯಾಚಿತ್ರದಿಂದ ಬಹಳಷ್ಟು ಪ್ರಮಾಣದಲ್ಲಿ ತೊಂದರೆದಾಯಕ ಸ್ಪಂದನಗಳು ಪ್ರಕ್ಷೇಪಿತವಾಗುವುದು : ಈ ಛಾಯಾಚಿತ್ರಗಳಲ್ಲಿ ಸಕಾರಾತ್ಮಕ ಊರ್ಜೆ ಸ್ವಲ್ಪವೂ ಇರಲಿಲ್ಲ. ಅವುಗಳಲ್ಲಿ ಬಹಳಷ್ಟು ಪ್ರಮಾಣದಲ್ಲಿ ನಕಾರಾತ್ಮಕ ಊರ್ಜೆಯಿತ್ತು. ಇದು ಮುಂದೆ ನೀಡಿರುವ ಕೋಷ್ಟಕದಿಂದ ಗಮನಕ್ಕೆ ಬರುತ್ತದೆ.

ಮೇಲಿನ ಕೋಷ್ಟಕದಿಂದ ಮುಂದಿನ ಅಂಶಗಳು ಗಮನಕ್ಕೆ ಬರುತ್ತವೆ.

೧. ದಕ್ಷಿಣ ದಿಕ್ಕಿನ ಕಡೆಯ ಗೋಡೆಯ ಮೇಲೆ ಆಗಿರುವ ಕಲೆಗಳು  ೨೦೧೩ ನೇ ಇಸವಿಯಲ್ಲಿ  ತೆಗೆದ ಛಾಯಾಚಿತ್ರಗಳ ತುಲನೆಯಲ್ಲಿ ೨೦೨೧ ರಲ್ಲಿ ತೆಗೆದ ಛಾಯಾಚಿತ್ರಗಳಲ್ಲಿ ಅಧಿಕ ಪ್ರಮಾಣದಲ್ಲಿ ನಕಾರಾತ್ಮಕ ಊರ್ಜೆಯಿರುವುದು ಕಂಡು ಬಂದಿತು.

೨. ೨೦೧೩ ನೇ ಇಸವಿಯಲ್ಲಿ ತೆಗೆದ ಕೋಣೆಯ ಮೇಲ್ಛಾವಣಿಯಲ್ಲಿ ಆಗಿರುವ ಕಲೆಗಳ ಛಾಯಾಚಿತ್ರಗಳ ತುಲನೆಯಲ್ಲಿ ೨೦೨೧ ರಲ್ಲಿ ತೆಗೆದ ಛಾಯಾಚಿತ್ರಗಳಲ್ಲಿ ಅಲ್ಪ ಪ್ರಮಾಣದಲ್ಲಿ ನಕಾರಾತ್ಮಕ ಊರ್ಜೆಯಿರುವುದು ಕಂಡು ಬಂದಿತು.

 ೨. ಪರೀಕ್ಷಣೆಯ ನಿರೀಕ್ಷಣೆಗಳ ಅಧ್ಯಾತ್ಮ ಶಾಸ್ತ್ರೀಯ ವಿಶ್ಲೇಷಣೆ

೨ ಅ. ದಕ್ಷಿಣ ದಿಕ್ಕಿನ ಬದಿಯ ಗೋಡೆಯ ಮೇಲಿನ ಕಲೆಗಳ ೨೦೧೩ ನೇ ಇಸವಿಯಲ್ಲಿ ತೆಗೆದ ಛಾಯಾಚಿತ್ರಗಳ ತುಲನೆಯಲ್ಲಿ ೨೦೨೧ ರಲ್ಲಿ ತೆಗೆದ ಛಾಯಾಚಿತ್ರಗಳಲ್ಲಿ ಅಧಿಕ ಪ್ರಮಾಣದಲ್ಲಿ ನಕಾರಾತ್ಮಕ ಊರ್ಜೆಯಿರುವುದು : ‘ಹಿಂದೂ ರಾಷ್ಟ್ರ ಸ್ಥಾಪನೆಯಾಗಲು ಪರಾತ್ಪರ ಗುರು ಡಾ. ಆಠವಲೆಯವರು ಜೀವಂತವಿರುವುದು ಅತ್ಯಂತ ಆವಶ್ಯಕವಾಗಿದೆ’, ಎಂದು ಅಧ್ಯಾತ್ಮದ ತಜ್ಞರು ಹೇಳಿದ್ದಾರೆ. ಪರಾತ್ಪರ ಗುರು ಡಾ. ಆಠವಲೆಯವರು ಈ ಸೂಕ್ಷ್ಮ ಯುದ್ಧದ ಕೇಂದ್ರಬಿಂದುವಾಗಿದ್ದಾರೆ. ಈ ಸೂಕ್ಷ್ಮದ ಯುದ್ಧದ ಕರಿನೆರಳು ಆಯಾ ಸಮಯಕ್ಕೆ ಪರಾತ್ಪರ ಗುರು ಡಾಕ್ಟರರ ಕೋಣೆಯಲ್ಲಿ ಮೂಡಿದೆ. ಅವರ ಕೋಣೆಯ ದಿಕ್ಷಿಣ ದಿಕ್ಕಿನ ಬದಿಯ ಗೋಡೆಯ ಮೇಲೆ ಆಗಿರುವ ಕಲೆಯು ಸಾಮಾನ್ಯವಾದುದಲ್ಲ, ಅದು ದೊಡ್ಡ ಕೆಟ್ಟ ಶಕ್ತಿಗಳು ದಕ್ಷಿಣ ದಿಕ್ಕಿನಿಂದ ಪರಾತ್ಪರ ಗುರು ಡಾಕ್ಟರರ ಮೇಲೆ ಆಕ್ರಮಣ ಮಾಡಿರುವ ತೊಂದರೆದಾಯಕ ಶಕ್ತಿಗಳ ಆಘಾತದಿಂದ ನಿರ್ಮಾಣವಾಗಿದೆ. ೨೦೧೩  ನೇ ಇಸವಿಯ ತುಲನೆಯಲ್ಲಿ ೨೦೨೧ ರಲ್ಲಿ ಗೋಡೆಯ ಮೇಲಿನ ಕಲೆ ಅಧಿಕ ಸುಸ್ಪಷ್ಟವಾಗಿ ಕಂಡು ಬರುತ್ತವೆ. (ಪುಟ ೮ ರಲ್ಲಿನ ಛಾಯಾಚಿತ್ರಗಳನ್ನು ನೋಡಬಹುದು) ಗೋಡೆಯ ಮೇಲಿನ ಕಲೆಗಳ ಎರಡೂ ಛಾಯಾಚಿತ್ರಗಳಲ್ಲಿ ‘ಇನ್‌ಫ್ರಾರೆಡ್’ ಮತ್ತು ‘ಅಲ್ಟ್ರಾ ವೈಲೆಟ್’ ಈ ಎರಡೂ ಪ್ರಕಾರಗಳ ನಕಾರಾತ್ಮಕ ಊರ್ಜೆ ಬಹಳ ಪ್ರಮಾಣದಲ್ಲಿ ಕಂಡು ಬಂದಿತು. ೨೦೧೩ ನೇ ಇಸವಿಯಲ್ಲಿ ತೆಗೆದ ಛಾಯಾಚಿತ್ರಗಳ ತುಲನೆಯಲ್ಲಿ ೨೦೨೧ ರಲ್ಲಿ ತೆಗೆದ (ಅದೇ ಕಲೆಗಳ) ಛಾಯಾಚಿತ್ರಗಳಲ್ಲಿ ಅಧಿಕ ಪ್ರಮಾಣದಲ್ಲಿ ನಕಾರಾತ್ಮಕ ಊರ್ಜೆಯಿರುವುದು ಪರೀಕ್ಷಣೆಯಿಂದ ಕಂಡು ಬಂದಿತು. ಇದರ ಕಾರಣವೇನೆಂದರೆ ೨೦೨೧ ನೇ ಇಸವಿಯಲ್ಲಿ ಸೂಕ್ಷ್ಮದ ಯುದ್ಧ ಅಂತಿಮ ಹಂತಕ್ಕೆ ತಲುಪಿದ್ದು ಕೆಟ್ಟ ಶಕ್ತಿಗಳ ಶಕ್ತಿಯು ಮೊದಲಿನ ತುಲನೆಯಲ್ಲಿ ಬಹಳ ಕಡಿಮೆಯಾಗಿರುವುದರಿಂದ ಅವುಗಳು ಈಗ ಸಗುಣ ಸ್ತರದಲ್ಲಿ ರೋಷದಿಂದ ಹೋರಾಡುತ್ತಿವೆ. ಈಗ ಈ ಸೂಕ್ಷ್ಮ ಯುದ್ಧದ ಸ್ತರ ನಿರ್ಗುಣದಿಂದ ಸಗುಣದೆಡೆಗೆ ಹೋಗುತ್ತಿದೆ. ಸೂಕ್ಷ್ಮ ಯುದ್ಧದ ಸ್ತರ ನಿರ್ಗುಣದಿಂದ ಸಗುಣದೆಡೆಗೆ ಹೋಗುವುದೆಂದರೆ ಸ್ಥೂಲದ ಆಪತ್ಕಾಲ ಪ್ರಾರಂಭವಾಗಿರುವುದರ ದ್ಯೋತಕವಾಗಿದೆ.

೨ ಆ. ೨೦೧೩ ನೇ ಇಸವಿಯಲ್ಲಿ ತೆಗೆದ ಕೋಣೆಯ ಮೇಲ್ಛಾವಣಿಯ ಕಲೆಗಳ ಛಾಯಾಚಿತ್ರಗಳ ತುಲನೆಯಲ್ಲಿ ೨೦೨೧ ರಲ್ಲಿ ತೆಗೆದ ಛಾಯಾಚಿತ್ರಗಳಲ್ಲಿ ಅಲ್ಪ ಪ್ರಮಾಣದಲ್ಲಿ ನಕಾರಾತ್ಮಕ ಊರ್ಜೆಯಿರುವುದು : ದೇವಾಸುರ ಹೋರಾಟದ ವೈಶಿಷ್ಟ್ಯವೆಂದರೆ ಧರ್ಮದ ಪಕ್ಷದಲ್ಲಿ ಹೋರಾಡುವವರಿಗೆ ಈಶ್ವರನ ಕೃಪೆ ಮತ್ತು ಸಹಾಯ ತನ್ನಿಂತಾನೇ ಲಭಿಸುತ್ತದೆ. ಯಾವ ಸಮಯದಲ್ಲಿ ಕೆಟ್ಟ ಶಕ್ತಿ ರೋಷದಿಂದ ಪರಾತ್ಪರ ಗುರು ಡಾಕ್ಟರರ ಮೇಲೆ ಆಕ್ರಮಣ ಮಾಡುತ್ತದೆಯೋ, ಆ ಸಮಯದಲ್ಲಿ ಈಶ್ವರನು ವಿವಿಧ ಮಾಧ್ಯಮಗಳಿಂದ ಪರಾತ್ಪರ ಗುರು ಡಾಕ್ಟರರನ್ನು ಚಮತ್ಕಾರದಂತೆ ರಕ್ಷಿಸಿದ್ದಾನೆ. ಉದಾ. ಮಹರ್ಷಿಗಳ ಆಜ್ಞೆಯಂತೆ ಸನಾತನದ ಆಶ್ರಮದಲ್ಲಿ ಕೈಗೊಳ್ಳಲಾಗಿರುವ ಯಜ್ಞಯಾಗಗಳಿರಬಹುದು, ಕೆಲವು ಸಂತರು ತಿಳಿಸಿರುವ ನಾಮಜಪಾದಿ ಉಪಾಯಗಳಿರಬಹುದು, ಅಥವಾ ಪರಾತ್ಪರ ಗುರು ಡಾಕ್ಟರರ ಚೈತನ್ಯಮಯ ಕೋಣೆಯಿರಬಹುದು, ಈ ಎಲ್ಲ ಮಾಧ್ಯಮಗಳಿಂದ ಈಶ್ವರನು ಪ್ರತಿಯೊಂದು ಸಲವೂ ಪರಾತ್ಪರ ಗುರು ಡಾಕ್ಟರರನ್ನು ರಕ್ಷಿಸಿದ್ದಾನೆ. ೨೦೧೩ ನೇ ಇಸವಿಯಲ್ಲಿ ತೆಗೆದ ಪರಾತ್ಪರ ಗುರು ಡಾಕ್ಟರರ ಕೋಣೆಯ ದಕ್ಷಿಣ ಭಾಗದ ಮೇಲ್ಛಾವಣಿಗೆ ಆಗಿರುವ ಕಲೆಗಳ ಛಾಯಾಚಿತ್ರಗಳ ತುಲನೆಯಲ್ಲಿ ೨೦೨೧ ರಲ್ಲಿ ತೆಗೆದ ಛಾಯಾಚಿತ್ರಗಳ ಕಲೆಗಳು ಅಲ್ಪ ಮತ್ತು ಅಸ್ಪಷ್ಟವಾಗಿರುವುದು ಕಂಡು ಬರುತ್ತದೆ. ಇದರ ಕಾರಣವೆಂದರೆ, ಪರಾತ್ಪರ ಗುರು ಡಾಕ್ಟರರ ಮೇಲೆ ಕೆಟ್ಟ ಶಕ್ತಿಗಳು ಮಾಡಿರುವ ಆಕ್ರಮಣಗಳಿಗೆ ಪ್ರತ್ಯುತ್ತರ ನೀಡಲು ಪರಾತ್ಪರ ಗುರು ಡಾಕ್ಟರರ ಚೈತನ್ಯಮಯ ಕೋಣೆಯ ಈಶ್ವರಿ ಚೈತನ್ಯವು ಆಯಾ ಸಮಯದಲ್ಲಿ ಕಾರ್ಯನಿರತವಾಗಿರುವುದರಿಂದ ಕೆಟ್ಟ ಶಕ್ತಿಗಳ ಆಕ್ರಮಣದಿಂದ ನಿರ್ಮಾಣವಾಗಿರುವ ಕಲೆಗಳ ಪ್ರಮಾಣವೂ ನಿಧಾನವಾಗಿ ಕಡಿಮೆಯಾಗಿದೆ.

೩. ಪರಾತ್ಪರ ಗುರು ಡಾ. ಆಠವಲೆಯವರು ಮಾಡಿದ ಆಧ್ಯಾತ್ಮಿಕ ಸಂಶೋಧನೆ ಮುಂದಿನ ಅನೇಕ ಪೀಳಿಗೆಗಳಿಗೆ ಅತ್ಯಂತ ಮಾರ್ಗದರ್ಶಕವಾಗಿರುವುದು

ಸ್ವಲ್ಪದರಲ್ಲಿ ಈ ಸಂಶೋಧನೆಯಿಂದ ‘ಪರಾತ್ಪರ ಗುರು ಡಾ. ಆಠವಲೆಯವರ ಮೇಲೆ ಸೂಕ್ಷ್ಮದ ಕೆಟ್ಟ ಶಕ್ತಿಗಳ ಆಕ್ರಮಣದಿಂದಾಗುವ ಪರಿಣಾಮವು ಸ್ಥೂಲದಿಂದ ಅವರ ಕೋಣೆಯ ಗೋಡೆಯಂತಹ ನಿರ್ಜೀವ ವಸ್ತುಗಳ ಮೇಲೆ ಯಾವ ರೀತಿ ಪ್ರತಿಬಿಂಬಿತಗೊಳ್ಳುತ್ತದೆ, ಹಾಗೆಯೇ ಸೂಕ್ಷ್ಮದ ಯುದ್ಧದ ಸ್ತರ ಯಾವ ರೀತಿ ಬದಲಾಗುತ್ತದೆ, ಅದಕ್ಕನುಸಾರ ಅದರ ಬದಲಾವಣೆ ಗೋಡೆಯ ಮೇಲೆ ಸ್ಥೂಲದಿಂದ ಯಾವ ರೀತಿ ಪ್ರತಿಬಿಂಬಿತಗೊಳ್ಳುತ್ತದೆ’, ಎನ್ನುವುದು ಗಮನಕ್ಕೆ ಬರುತ್ತದೆ. ಪರಾತ್ಪರ ಗುರು ಡಾಕ್ಟರರು ಸೂಕ್ಷ್ಮದಲ್ಲಿ ನಡೆಯುವ ಘಟನೆಗಳ ಆಳವಾದ ಅಧ್ಯಯನ ಮಾಡಲು ಸಾಧ್ಯವಾಗಬೇಕೆಂದು ಆ ಘಟನೆಗಳ ಛಾಯಚಿತ್ರಗಳನ್ನು ತೆಗೆಯುವುದು, ಅವುಗಳ ಧ್ವನಿಚಿತ್ರೀಕರಣ ಮಾಡುವುದು, ಅಲ್ಲದೇ ಆ ಘಟನೆಗಳ ಸೂಕ್ಷ್ಮ ಪರೀಕ್ಷಣೆಯನ್ನು ಮಾಡುವುದು ಮತ್ತು ವೈಜ್ಞಾನಿಕ ಉಪಕರಣಗಳ ಮೂಲಕ ಸಂಶೋಧನೆ ಮಾಡುವುದು ಇಂತಹ ವಿವಿಧ ಪ್ರಕಾರಗಳ ಸೇವೆಗಳನ್ನು ಸಾಧಕರಿಗೆ ಕಲಿಸಿ ಸಾಧಕರನ್ನು ರೂಪಿಸಿದ್ದಾರೆ. ಪರಾತ್ಪರ ಗುರು ಡಾ. ಆಠವಲೆಯವರು ಕಳೆದ ೩೦ ವರ್ಷಗಳಿಂದ ಮಾಡುತ್ತಿರುವ ಈ ವಿವಿಧ ಪ್ರಕಾರಗಳ ಆಧ್ಯಾತ್ಮಿಕ ಸಂಶೋಧನೆಗಳು ಮುಂದಿನ ಅನೇಕ ಪೀಳಿಗೆಯವರಿಗೆ ಅತ್ಯಂತ ಮಾರ್ಗದರ್ಶನವಾಗಿರಲಿದೆ. ಇದಕ್ಕಾಗಿ ಪರಾತ್ಪರ ಗುರು ಡಾಕ್ಟರರ ಚರಣಗಳಿಗೆ ಎಷ್ಟು ಕೃತಜ್ಞತೆಯನ್ನು ಅರ್ಪಿಸಿದರೂ ಅದು ಕಡಿಮೆಯೇ ಆಗಿದೆ’. (೧೯.೫.೨೦೨೧)

– ಸೌ. ಮಧುರಾ ಧನಂಜಯ ಕರ್ವೆ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ.

ವಿ-ಅಂಚೆ : [email protected]

ಟಿಪ್ಪಣಿ ೧ – ಪರಾತ್ಪರ ಗುರು ಡಾ. ಆಠವಲೆಯವರ ಕೋಣೆಯ ದಕ್ಷಿಣ ಕಡೆಯ ಮೇಲ್ಛಾವಣಿಯಲ್ಲಿ ಆಗಿರುವ ಕಲೆಗಳಲ್ಲಿ ವಿವಿಧ ರೀತಿಯ ಮುಖಗಳು ಕಾಣಿಸುತ್ತವೆ. ೨೦೧೩ ನೇ ಇಸವಿಯಲ್ಲಿ ತೆಗೆದ ಛಾಯಾಚಿತ್ರದ ತುಲನೆಯಲ್ಲಿ ೨೦೨೧ ರಲ್ಲಿ ತೆಗೆದ ಛಾಯಾಚಿತ್ರದಲ್ಲಿ ಗೋಡೆಯ ಮೇಲಿನ ಕಲೆ ಅಧಿಕ ಸುಸ್ಪಷ್ಟವಾಗಿ ಕಾಣಿಸುತ್ತದೆ.

ಟಿಪ್ಪಣಿ ೨ – ಪರಾತ್ಪರ ಗುರು ಡಾ. ಆಠವಲೆಯವರ ಕೋಣೆಯ ದಕ್ಷಿಣದ ಬದಿಯ ಮೇಲ್ಛಾವಣಿಯಲ್ಲಿ ಆಗಿರುವ ಕಲೆಗಳ ೨೦೧೩ ನೇ ಇಸವಿಯಲ್ಲಿ ತೆಗೆದ ಛಾಯಾಚಿತ್ರಗಳ ತುಲನೆಯಲ್ಲಿ ೨೦೨೧  ನೇ ಇಸವಿಯಲ್ಲಿ ತೆಗೆದ ಛಾಯಾಚಿತ್ರಗಳಲ್ಲಿ ಕಲೆಗಳ ಪ್ರಮಾಣ ಅಲ್ಪ ಮತ್ತು ಅಸ್ಪಷ್ಟವಾಗಿದೆ.

ವಾಚಕರಿಗೆ ವಿನಂತಿ : ‘ಮುದ್ರಣದ ತಾಂತ್ರಿಕ ಅಡಚಣೆಯಿಂದಾಗಿ ಇಲ್ಲಿ ಪ್ರಕಟಿಸಿದ ಛಾಯಾಚಿತ್ರಗಳು ಇದ್ದ ಹಾಗೆ ಮುದ್ರಣವಾಗುವ ಸಾಧ್ಯತೆ ಇಲ್ಲ. ಹಾಗಾಗಿ ಛಾಯಾಚಿತ್ರದ ಕೆಟ್ಟ ಶಕ್ತಿಗಳ ಕಣ್ಣು ಮತ್ತು ಮುಖ ಸ್ಪಷ್ಟವಾಗಿ ಕಾಣಿಸಬೇಕು ಮತ್ತು ವಿಷಯ ತಿಳಿಯಬೇಕೆಂದು ಛಾಯಾಚಿತ್ರವನ್ನು ಗಣಕಯಂತ್ರದ ಸಹಾಯದಿಂದ ಇನ್ನಷ್ಟು ಎದ್ದು ಕಾಣುವಂತೆ ಮಾಡಲಾಗಿದೆ. ಮೂಲ ಛಾಯಾಚಿತ್ರವನ್ನು ನೋಡಲು ಸನಾತನ ಪ್ರಭಾತದ ಜಾಲತಾಣದ ಲಿಂಕ್‌ಗೆ bit.ly/3EtYi0W ಭೇಟಿ ನೀಡಬೇಕೆಂದು ವಿನಂತಿ. (ಲಿಂಕ್‌ನ ಕೆಲವು ಅಕ್ಷರಗಳು ಕ್ಯಾಪಿಟಲ್ ಇವೆ)

* ಕೆಟ್ಟ ಶಕ್ತಿ: ವಾತಾವರಣದಲ್ಲಿ ಉತ್ತಮ ಹಾಗೂ ಕೆಟ್ಟ ಎರಡೂ ಶಕ್ತಿಗಳು ಕಾರ್ಯನಿರತವಾಗಿರುತ್ತವೆ. ಒಳ್ಳೆಯ ಶಕ್ತಿ ಒಳ್ಳೆಯ ಕಾರ್ಯಕ್ಕಾಗಿ ಮಾನವನಿಗೆ ಸಹಾಯ ಮಾಡುತ್ತವೆ ಹಾಗೂ ಕೆಟ್ಟ ಶಕ್ತಿಗಳು ಅವನಿಗೆ ತೊಂದರೆ ಕೊಡುತ್ತವೆ. ಹಿಂದಿನ ಕಾಲದಲ್ಲಿ ಋಷಿಮುನಿಗಳ ಯಜ್ಞಗಳಲ್ಲಿ ರಾಕ್ಷಸರು ವಿಘ್ನಗಳನ್ನು ತಂದಿರುವ ಅನೇಕ ಕಥೆಗಳು ವೇದ -ಪುರಾಣಗಳಲ್ಲಿ ಇರುತ್ತವೆ. ‘ಅಥರ್ವವೇದದಲ್ಲಿ ಅನೇಕ ಕಡೆಗಳಲ್ಲಿ ಕೆಟ್ಟ ಶಕ್ತಿ. ಉದಾ. ಅಸುರರು, ರಾಕ್ಷಸರು, ಪಿಶಾಚಿ ಇವರ ಪ್ರತಿಬಂಧದ ಮಂತ್ರಗಳನ್ನು ಹೇಳಲಾಗಿದೆ. ಕೆಟ್ಟ ಶಕ್ತಿಗಳ ತೊಂದರೆಯ ನಿವಾರಣೆಗಾಗಿ ವಿವಿಧ ಆಧ್ಯಾತ್ಮಿಕ ಉಪಾಯಗಳನ್ನು ವೇದ ಮತ್ತು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ.

* ಸೂಕ್ಷ್ಮ : ಪ್ರತ್ಯಕ್ಷ ಕಾಣುವ ಅವಯವಗಳಾದ ಮೂಗು, ಕಿವಿ, ಕಣ್ಣುಗಳು, ನಾಲಿಗೆ ಮತ್ತು ಚರ್ಮ ಇವು ಪಂಚಜ್ಞಾನೇಂದ್ರಿಯಗಳಾಗಿವೆ. ಈ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಆಚೆಗಿನ ಎಂದರೆ ಸೂಕ್ಷ್ಮ. ಸಾಧನೆಯಲ್ಲಿ ಪ್ರಗತಿ ಮಾಡಿಕೊಂಡ ಕೆಲವು ವ್ಯಕ್ತಿಗಳಿಗೆ ಈ ಸೂಕ್ಷ್ಮ ಸಂವೇದನೆಯ ಅರಿವಾಗುತ್ತದೆ. ಈ ಸೂಕ್ಷ್ಮ ಜ್ಞಾನದ ಬಗ್ಗೆ ವಿವಿಧ ಧರ್ಮಗ್ರಂಥಗಳಲ್ಲಿ ಉಲ್ಲೇಖವಿದೆ.

* ಆಧ್ಯಾತ್ಮಿಕ ತೊಂದರೆ : ಇದರರ್ಥ ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳಿರುವುದು. ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳು ಶೇ. ೫೦ ರಷ್ಟು ಅಥವಾ ಅದಕ್ಕಿಂತ ಹೆಚ್ಚು ಪ್ರಮಾಣದಲ್ಲಿರುವುದು ಎಂದರೆ ತೀವ್ರ ತೊಂದರೆ, ನಕಾರಾತ್ಮಕ ಸ್ಪಂದನಗಳು ಶೇ. ೩೦ ರಿಂದ ಶೇ ೪೯ ರಷ್ಟು ಇರುವುದು ಎಂದರೆ ಮಧ್ಯಮ ತೊಂದರೆ, ಶೇ. ೩೦ ಕ್ಕಿಂತ ಕಡಿಮೆಯಿರುವುದು ಅಂದರೆ ಮಂದ ಆಧ್ಯಾತ್ಮಿಕ ತೊಂದರೆ ಇರುವುದಾಗಿದೆ. ಆಧ್ಯಾತ್ಮಿಕ ತೊಂದರೆಯು ಪ್ರಾರಬ್ಧ, ಪೂರ್ವಜರ ತೊಂದರೆ ಇತ್ಯಾದಿ ಆಧ್ಯಾತ್ಮಿಕ ಸ್ತರದ ಕಾರಣಗಳಿಂದ ಆಗುತ್ತದೆ. ಆಧ್ಯಾತ್ಮಿಕ ತೊಂದರೆಗಳನ್ನು ಸಂತರು ಅಥವಾ ಸೂಕ್ಷ್ಮ ಸ್ಪಂದನಗಳನ್ನು ಅರಿಯುವ ಸಾಧಕರು ಕಂಡು ಹಿಡಿಯಬಲ್ಲರು.