ಕೊರೊನಾದ ಮೂರನೇ ಅಲೆ ಬರುತ್ತದೆ ?

ಸಂಪಾದಕೀಯ

ಕಳೆದ ೧ ವರ್ಷ ಮತ್ತು ೧೦ ತಿಂಗಳುಗಳಿಂದ ಕೊರೊನಾದೊಂದಿಗೆ ಹೋರಾಡುತ್ತಿರುವಾಗ, ಜಗತ್ತಿನಾದ್ಯಂತದ ದೇಶಗಳು ಕೊರೊನಾಗೆ ಸಂಬಂಧಿಸಿದ ಪರಿಸ್ಥಿತಿಯು ಸ್ವಲ್ಪ ಹದ್ದುಬಸ್ತಿಗೆ ಬಂದಿದೆಯೇನೋ ಎನ್ನುವಷ್ಟರಲ್ಲಿ ‘ಓಮಿಕ್ರಾನ್’ (ಕೊರೊನಾದ ಒಂದು ವಿಧ)ನ ಹೊಸ ವಿಪತ್ತು ಎದುರಾಗಿದೆ. ಜಗತ್ತಿನಾದ್ಯಂತ ‘ಓಮಿಕ್ರಾನ್’ನ ಸೋಂಕಿತ ಸಾವಿರಾರು ರೋಗಿಗಳು ಸಿಗುತ್ತಿದ್ದು ಅವರಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತದೆ. ತಜ್ಞರ ಪ್ರಕಾರ, ‘ಓಮಿಕ್ರಾನ್’ನ ಸೋಂಕಿನಿಂದ ಸಾವಿನ ಸಾಧ್ಯತೆಯಿಲ್ಲ. ಹೀಗಿದ್ದರೂ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ, ಇದು ನಿರ್ಲಕ್ಷಿಸಲು ಸಾಧ್ಯವಿಲ್ಲ. ‘ನೆದರಲ್ಯಾಂಡ್’ ಸರಕಾರವು ‘ಓಮಿಕ್ರಾನ’ನ ಸಂಕಟದಿಂದಾಗಿ ‘ಲಾಕ್‌ಡೌನ್’ ಹೇರಲು ನಿರ್ಧರಿಸಿದೆ. ಕೊರೊನಾದ ಸೋಂಕನ್ನು ತಡೆಗಟ್ಟಲು ಲಸಿಕೆ ಲಭ್ಯವಾದ ನಂತರ, ಜಗತ್ತಿನಾದ್ಯಂತದ ಅನೇಕರು ೨ ಡೋಸ್ ಲಸಿಕೆಯನ್ನು ತೆಗೆದುಕೊಂಡರು. ಕಾಲಾನಂತರದಲ್ಲಿ, ಪರಿಣಾಮವು ಕೆಲವೇ ದಿನಗಳವರೆಗೆ ಇರುವುದರಿಂದ ‘ಬೂಸ್ಟರ್ ಡೋಸ್’ (ಲಸಿಕೆಯ ಮೂರನೇ ಡೋಸ್) ತೆಗೆದುಕೊಳ್ಳುವ ಅನಿವಾರ್ಯತೆ ಬಂದಿತು. ಈ ‘ಬೂಸ್ಟರ್ ಡೋಸ್’ ತೆಗೆದುಕೊಂಡ ಕೆಲವರು ‘ಓಮಿಕ್ರಾನ್’ ಸೋಂಕಿಗೆ ಒಳಗಾಗಿರುವುದು ಕಂಡುಬಂದಿದೆ. ‘ಆಕ್ಸ್ಫರ್ಡ್-ಆಸ್ಟಾçಜೆನೆಕಾ’ದ ಕೊರೊನಾ ವಿರೋಧಿ ಲಸಿಕೆ (ಕೋವಿಶೀಲ್ಡ್) ಕುರಿತು ‘ಲಾಂಸೆಟ ಜರ್ನಲ್’ನಲ್ಲಿ ಪ್ರಕಟವಾದ ವರದಿಯು ಮುಂದಿನಂತೆ ಹೇಳುತ್ತದೆ: ‘ಲಸಿಕೆ ತೆಗೆದುಕೊಂಡ ನಂತರ ಅದರ ಪರಿಣಾಮ ೩ ತಿಂಗಳಲ್ಲೇ ಕಡಿಮೆಯಾಗತೊಡಗುತ್ತದೆ. ಈ ಅವಧಿಯಲ್ಲಿ ಆಸ್ಪತ್ರೆಗೆ ದಾಖಲಾಗುವುದು ಮತ್ತು ಸಾವಿನ ಸಾಧ್ಯತೆಗಳು ಎರಡನೇ ಡೋಸ್ ತೆಗೆದುಕೊಂಡ ನಂತರ ಎರಡು ವಾರಗಳ ತುಲನೆಯಲ್ಲಿ ಎರಡು ಪಟ್ಟು ಹೆಚ್ಚಾಗುತ್ತದೆ. ಎರಡನೇ ಡೋಸ್ ತೆಗೆದುಕೊಂಡ ೪ ತಿಂಗಳ ನಂತರ ಈ ಅಪಾಯವು ಮೂರು ಪಟ್ಟು ಹೆಚ್ಚಾಗುತ್ತದೆ.’ ಇದರಿಂದ ಲಸಿಕೆ ತೆಗೆದುಕೊಂಡ ಹಾಗೂ ತೆಗೆದುಕೊಳ್ಳದಿರುವವರು ಒಂದೇ ಹಂತದಲ್ಲಿ ಬರುವ ಆತಂಕ ವ್ಯಕ್ತವಾಗುತ್ತಿದೆ.

ಒಟ್ಟಾರೆಯಾಗಿ ಪರಿಸ್ಥಿತಿ ನೋಡುತ್ತಾ, ಇಡೀ ಜಗತ್ತು ಮತ್ತೊಮ್ಮೆ ಕೊರೊನಾ ಸಾಂಕ್ರಾಮಿಕದ ದೊಡ್ಡ ಅಲೆಯ ಅಂಚಿನಲ್ಲಿದೆ, ಎಂಬ ಸಾಧ್ಯತೆಗಳು ನಿರ್ಮಾಣವಾಗಿದೆ. ಸಾಂಕ್ರಾಮಿಕದಿಂದ ಎಲ್ಲಾ ವ್ಯವಸ್ಥೆಗಳು ಕುಸಿಯಲು ಹೇಗೆ ಕಾರಣವಾಗುತ್ತವೆ ? ಇದರ ಕಹಿಯನ್ನು ಜಗತ್ತಿನ ಬಹುತೇಕ ಎಲ್ಲ ದೇಶಗಳೂ ಅನುಭವಿಸಿದವು. ಈ ಮಹಾಭಯಂಕರ ಸ್ಥಿತಿ ಎಳೆದುಕೊಳ್ಳಬಾರದೆಂದು ಪ್ರತಿಯೊಂದು ದೇಶವೂ ತನ್ನ ಕೈಲಾದಷ್ಟು ಪ್ರಯತ್ನಿಸುತ್ತಿದ್ದರೂ, ಬಿಕ್ಕಟ್ಟಿನ ತೀವ್ರತೆ ಹೆಚ್ಚಾಗಿರುತ್ತದೆ, ಎಂಬುದನ್ನು ಗಮನಿಸಬೇಕು. ಪ್ರಸ್ತುತ ಕಾಲವು ಜಗತ್ತಿನಾದ್ಯಂತದ ಭವಿಷ್ಯಕಾರರ ಭವಿಷ್ಯವಾಣಿಯಂತೆ ಆಪತ್ಕಾಲದ ಸಮಯವಾಗಿದೆ. ಈ ಆಪತ್ಕಾಲದ ಬಗ್ಗೆ ಹೇಳಿದ ಭವಿಷ್ಯ ಪ್ರಸ್ತುತ ಪರಿಸ್ಥಿತಿಯಲ್ಲಿ ಕಾರ್ಯರೂಪಕ್ಕೆ ಬರುವಂತಿದೆ. ಆದ್ದರಿಂದ ಕೊರೊನಾ ಅಥವಾ ಈಗಿನ ‘ಓಮಿಕ್ರಾನ್’ನ ಬಿಕ್ಕಟ್ಟು ಮಾನವನ ಪ್ರಯತ್ನಗಳನ್ನು ಮೀರಿದೆ ಎಂಬುದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು. ಆದ್ದರಿಂದ, ಮಾನವ ಪ್ರಯತ್ನಗಳಿಗೆ ಮಿತಿ ಇದ್ದು ಮತ್ತು ಅಂತಹ ಸಂಕಟಗಳಿಂದ ಹೊರಬರುವ ಏಕೈಕ ಮಾರ್ಗವೆಂದರೆ ಸಾಧನೆ ಮಾಡುವುದಾಗಿದೆ. ಭಾರತವು ಆಧ್ಯಾತ್ಮಿಕ ಸಾಧನೆಗಳ ಉಗಮವಾಗಿದೆ. ಆದ್ದರಿಂದ, ಭಾರತದಲ್ಲಿ, ಸರಕಾರವು ನಾಗರಿಕರಿಗೆ ವಿಪತ್ತಿನಿಂದ ಪಾರಾಗಲು ಹಾಗೂ ಚೇತರಿಸಿಕೊಳ್ಳಲು ಸಾಧನೆ ಕಲಿಸಬೇಕು. ಕೊರೊನಾದ ಮೊದಲ ಮತ್ತು ಎರಡನೇ ಅಲೆಯ ಅನುಭವದಿಂದ ಕಲಿಯಲು ಸರಕಾರದ ಮಟ್ಟದಲ್ಲಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು, ಇದರಿಂದ ಸ್ವಲ್ಪ ಪ್ರಮಾಣದ ಸಂಭಾವ್ಯ ಮೂರನೇ ಅಲೆಯನ್ನು ತಪ್ಪಿಸಬಹುದು. ‘ಕಾಲಾಯ ತಸ್ಮೈ ನಮಃ : |’ (ಕಾಲ ಶಕ್ತಿಶಾಲಿಯಾದ್ದರಿಂದ ಅದಕ್ಕೆ ವಂದನೆಗಳು) ಎಂದು ಅರಿವನ್ನು ಇಟ್ಟುಕೊಂಡು ಭಾರತ ಸರಕಾರವು ಕಾಲಾನುಸಾರ ಅಗತ್ಯವಿರುವ ಸಾಧನೆಯನ್ನು ಕಲಿಸಬೇಕು, ಅದೇ ರೀತಿ ಯೋಗ್ಯ ಕ್ರಮ ಕೈಗೊಂಡು ಹೊಸ ಬಿಕ್ಕಟ್ಟನ್ನು ಎದುರಿಸಲು ಸಿದ್ಧರಾಗಬೇಕು !