ವ್ಯಾಯಾಮ ಮಾಡುವಾಗ ನೀರು ಕುಡಿಯಬೇಕೋ ಬೇಡವೋ ? ಎಷ್ಟು ನೀರು ಕುಡಿಯಬೇಕು ?

ಜಗತ್ತಿನ ಆಧುನಿಕರಣದೊಂದಿಗೆ ಸಂಭವಿಸಿದ ದೈಹಿಕ ಸಮಸ್ಯೆಗಳಿಗೆ ‘ವ್ಯಾಯಾಮ’ವು ಒಂದು ಪರಿಣಾಮಕಾರಿ ಉಪಾಯವಾಗಿದೆ. ಇತ್ತೀಚೆಗೆ ಈ ಬಗ್ಗೆ ಬಹಳ ಚರ್ಚೆಯಾಗುತ್ತಿದೆ ಮತ್ತು ಆ ಬಗ್ಗೆ ಜಾಗರೂಕತೆ ಮೂಡಿದ್ದರೂ, ವ್ಯಾಯಾಮ ಮಾಡುವ ಪ್ರಮಾಣ ಮಾತ್ರ ಕಡಿಮೆ ಇರುವುದು ಕಂಡುಬರುತ್ತದೆ ಇನ್ನೂ ಅನೇಕರಿಗೆ ಮನಸ್ಸಿನಲ್ಲಿ ವ್ಯಾಯಾಮ ವಿಷಯದ ಬಗ್ಗೆ ಕೆಲವು ಸಂದೇಹಗಳಿರುವುದು ಕಂಡು ಬರುತ್ತದೆ. ಸದ್ಯ ಆಗುತ್ತಿರುವ ಅನೇಕ ದೈಹಿಕ ಸಮಸ್ಯೆಗಳಿಗೆ ಉದಾ. ಬೆನ್ನುಮೂಳೆಯ ಕಾಯಿಲೆ, ಮಧುಮೇಹ, ಸ್ಥೂಲಕಾಯಗಳಿಗೆ ಉಪಾಯವೆಂದು ಔಷಧೋಪಚಾರ, ಪಥ್ಯ,  ಪವಾಸ, ಹೀಗೆ ಅನೇಕ ಮಾರ್ಗಗಳನ್ನು ಆಯ್ಕೆ ಮಾಡುತ್ತಾರೆ. ಈ ಅಂಕಣದಿಂದ ನಾವು ವ್ಯಾಯಾಮ ಮಾಡುವ ಆವಶ್ಯಕತೆ, ಮಹತ್ವವನ್ನು ತಿಳಿದುಕೊಳ್ಳಲಿದ್ದೇವೆ, ಹಾಗೆಯೇ ವ್ಯಾಯಾಮದ ಸಂದೇಹ ನಿವಾರಣೆ ಮಾಡಲಿದ್ದೇವೆ.

(ಭಾಗ ೧೩)

‘ನೀರು ದೇಹದ ಮುಖ್ಯ ಘಟಕಗಳಲ್ಲಿ ಒಂದಾಗಿರುವುದರಿಂದ ಅದು ದೇಹದಲ್ಲಿನ ಅನೇಕ ಪ್ರಕ್ರಿಯೆಗಳ ಮೇಲೆ ಪ್ರಭಾವ ಬೀರುತ್ತದೆ, ಉದಾ. ದೇಹದ ಉಷ್ಣತೆಯನ್ನು ನಿಯಂತ್ರಿಸುವುದು, ದೇಹಕ್ಕೆ ಲವಣವನ್ನು ಪೂರೈಸುವುದು ಇತ್ಯಾದಿ; ಆದರೆ ನೀರು ಯೋಗ್ಯ ಸಮಯದಲ್ಲಿ ಮತ್ತು ಯೋಗ್ಯ ಪ್ರಮಾಣದಲ್ಲಿ ಕುಡಿದರೆ ಅದರಿಂದ ನಿಜವಾದ ಅರ್ಥದಲ್ಲಿ ಲಾಭವಾಗುತ್ತದೆ. ‘ಬಾಯಾರಿಕೆಯಾದರೆ ಅದು ನೀಗುವ ತನಕ ನೀರು ಕುಡಿಯುವುದು’, ಇದು ಸರ್ವಸಾಮಾನ್ಯವಾಗಿ ಯೋಗ್ಯವಾಗಿದ್ದರೂ, ಕೆಲವೊಮ್ಮೆ ಅದು ನಿಷಿದ್ಧವಾಗಿರುತ್ತದೆ, ಉದಾ. ಊಟ ಮಾಡುವಾಗ / ಊಟದ ನಂತರ ತಕ್ಷಣ ಬಹಳಷ್ಟು ನೀರು ಕುಡಿಯುವುದು. ವ್ಯಾಯಾಮವನ್ನು ಮಾಡುವಾಗಲೂ ನೀರು ಕುಡಿಯುವ ಬಗ್ಗೆ ಕಾಳಜಿ ವಹಿಸುವುದು ಆವಶ್ಯಕವಾಗಿದೆ. ವ್ಯಾಯಾಮವನ್ನು ಮಾಡುವಾಗ ಉಂಟಾಗುವ ಉಷ್ಣತೆ ಮತ್ತು ಬೆವರಿನಿಂದ ದೇಹವು ಬೇಗ ದಣಿಯುತ್ತದೆ. ಬೆವರಿನ ಮೂಲಕ ದೇಹದಲ್ಲಿನ ದ್ರವ್ಯಗಳು ಮತ್ತು ಮುಖ್ಯವಾದ ಲವಣವೂ ದೇಹದ ಹೊರಗೆ ಬೀಳುತ್ತಿರುವುದರಿಂದ ಅವುಗಳನ್ನು ಪುನಃ ಮೂಲ ಸ್ಥಿತಿಯಲ್ಲಿ ತರುವುದು ಆವಶ್ಯಕವಾಗಿರುತ್ತದೆ.

ವ್ಯಾಯಾಮವನ್ನು ಮಾಡುವಾಗ ಬಾಯಾರಿಕೆಯಾದರೆ ‘೧-೨ ಗುಟುಕು ನೀರು ಕುಡಿಯುವುದು’, ಇದೊಂದು ಉತ್ತಮ ಆಯ್ಕೆಯಾಗಿದೆ. ಇದರಿಂದ ದೇಹದ ಕಾರ್ಯಕ್ಷಮತೆ ಕಡಿಮೆಯಾಗದೇ ವ್ಯಾಯಾಮದ ಲಾಭವನ್ನು ಯೋಗ್ಯ ರೀತಿಯಲ್ಲಿ ಅನುಭವಿಸಬಹುದು; ಆದರೆ ವ್ಯಾಯಾಮವನ್ನು ಮಾಡುವಾಗ ಬಾಯಾರಿಕೆ ಆಗಿದೆಯೆಂದು ಅದು ನೀಗುವ ತನಕ ನೀರು ಕುಡಿಯುವುದನ್ನು ತಪ್ಪಿಸಬೇಕು.’

– ಕು. ವೈದೇಹಿ ರಾಜೇಂದ್ರ ಶಿಂದೆ, ಭೌತಿಕೋಪಚಾರ (ಫಿಜಿಯೋಥೆರಪಿ) ಅಧ್ಯಯನಕಾರರು, ಫೋಂಡಾ, ಗೋವಾ. (೧೬.೯.೨೦೨೪)