ಬೇಸಿಗೆಯಲ್ಲಿ ತೊಂದರೆಯಾಗಬಾರದೆಂದು ಮುಂದಿನ ಕಾಳಜಿ ವಹಿಸಿ !

‘ಪ್ರಸ್ತುತ ಬೇಸಿಗೆ ಪ್ರಾರಂಭವಾಗಿದೆ. ಈ ಅವಧಿಯಲ್ಲಿ ‘ದೇಹದ ಉಷ್ಣತೆ ಹೆಚ್ಚಾಗುವುದು, ಬೆವರು ಬರುವುದು, ಶಕ್ತಿ ಕಡಿಮೆಯಾಗುವುದು, ದಣಿವಾಗುವುದು’ ಮುಂತಾದ ರೀತಿಯ ತೊಂದರೆಗಳಾಗುತ್ತವೆ. ತಾಪಮಾನದಲ್ಲಿ ಹೆಚ್ಚಳವಾಗಿರುವುದರಿಂದ ಜನರು ಪ್ರಜ್ಞೆ ತಪ್ಪಿ ಬಿದ್ದು (ಉಷ್ಮಾಘಾತ ದಿಂದ) ಸಾವಿಗೀಡಾದ ಕೆಲವು ಉದಾಹರಣೆ ಗಳಿವೆ. ಬೇಸಿಗೆಯಲ್ಲಿ ಆಗುವ ವಿವಿಧ ರೋಗಗಳನ್ನು ದೂರಗೊಳಿಸಲು ಎಲ್ಲರೂ ಮುಂದಿನ ಕಾಳಜಿಯನ್ನು ತೆಗೆದುಕೊಳ್ಳುವುದು ಆವಶ್ಯಕವಾಗಿದೆ.

೧. ದಿನವಿಡಿ ಸಾಕಷ್ಟು ನೀರು ಅಥವಾ ತತ್ಸಮ ಪೇಯಗಳನ್ನು ಕುಡಿಯಬೇಕು. ಗಾಢ ಬಣ್ಣದ ಮೂತ್ರವಾಗುತ್ತಿದ್ದರೆ ‘ಹೆಚ್ಚು ನೀರು ಕುಡಿಯಬೇಕು’, ಇದನ್ನು ಗಮನದಲ್ಲಿಡಬೇಕು. ನೀರು ಕುಡಿಯಲು ಬಾಯಾರಿಕೆ ಆಗುವ ದಾರಿ ಕಾಯಬಾರದು. ಶೀತಕಪಾಟದಲ್ಲಿನ ನೀರನ್ನು ಕುಡಿಯುವುದನ್ನು ತಡೆಯಬೇಕು. ಬೆಳಗ್ಗೆ ಮನೆಯ ಹೊರಗೆ ಹೋಗುವ ಮೊದಲು ಒಂದು ಲೋಟ ನೀರನ್ನು ಕುಡಿಯಬೇಕು. ಹೊರಗೆ ಹೋಗುವಾಗ ತಮ್ಮ ಜೊತೆಯಲ್ಲಿ ನೀರಿನ ಬಾಟಲಿಯನ್ನು ಇಟ್ಟುಕೊಳ್ಳಬೇಕು.

ವೈದ್ಯೆ (ಸೌ.) ಶರ್ವರಿ ಜೋಶಿ

೨. ನೀರನ್ನು ಒಂದೇ ಸಲಕ್ಕೆ ಗಟಗಟನೆ ಬಹಳಷ್ಟು ಕುಡಿಯದೇ ನಿಧಾನವಾಗಿ ಸ್ವಲ್ಪ-ಸ್ವಲ್ಪ ಕುಡಿಯಬೇಕು. ಬಿಸಿಲಿನಿಂದ ಬಂದ ನಂತರ ತಕ್ಷಣ ನೀರು ಕುಡಿಯದೇ ೫ ರಿಂದ ೧೦ ನಿಮಿಷಗಳ ನಂತರ ಶಾಂತವಾಗಿ ಕುಳಿತುಕೊಂಡು ನೀರನ್ನು ಕುಡಿಯಬೇಕು.

೩. ಸಕ್ಕರೆ ಇರುವ ಪೇಯವನ್ನು ಕುಡಿಯಬಹುದು; ಆದರೆ ಹೆಚ್ಚು ಸಕ್ಕರೆಯಿರುವ ಪೇಯವು ಜೀರ್ಣವಾಗಲು ಕಷ್ಟವಾಗುವುದರಿಂದ ಆದಷ್ಟು ಅದನ್ನು ಕುಡಿಯಬಾರದು. ಸಾಧ್ಯವಾದರೆ ಪ್ರತಿದಿನ ಆಹಾರದಲ್ಲಿ ಮಜ್ಜಿಗೆ ಅಥವಾ ಪಾನಕಗಳನ್ನು ಸೇರಿಸಬೇಕು. ಮಡಿಕೆಯಲ್ಲಿನ ತಣ್ಣೀರಿನಿಂದ ತಯಾರಿಸಿದ ಶರಬತ್ತು ಅಥವಾ ಲಾವಂಚ, ಗುಲಾಬಿ, ಪಾರಿಜಾತ ಇತ್ಯಾದಿ ಪರಿಮಳ ದ್ರವ್ಯಗಳನ್ನು ಹಾಕಿದ ಮಡಿಕೆಯಲ್ಲಿನ ತಣ್ಣೀರನ್ನು ಕುಡಿಯಬೇಕು.

೪. ಹೊರಗಿನ ಆಹಾರ ಪದಾರ್ಥಗಳನ್ನು ಸೇವಿಸುವುದುನ್ನು ತಪ್ಪಿಸಬೇಕು. ಒಗರು, ಖಾರ, ಕಹಿ ಮತ್ತು ಹೆಚ್ಚು ಹುಳಿಯಿರುವ ರುಚಿಕರ ಪದಾರ್ಥಗಳನ್ನು ಹೆಚ್ಚು ಪ್ರಮಾಣದಲ್ಲಿ ಸೇವಿಸಬಾರದು.

೫. ಸಡಿಲವಾದ, ತಿಳಿಬಣ್ಣದ ಮತ್ತು ಹಗುರವಾಗಿರುವ (ಸಾಧ್ಯವಾದರೆ ಹತ್ತಿಯ) ಬಟ್ಟೆಗಳನ್ನು ಧರಿಸಬೇಕು.

೬. ಬಿಸಿಲಿದ್ದಾಗ ಮನೆಯಲ್ಲಿ ಅಥವಾ ನೆರಳಿನಲ್ಲಿ ಇರಬೇಕು.

೭. ಆದಷ್ಟು ಬೆಳಗ್ಗೆ ೧೦ ರಿಂದ ಮಧ್ಯಾಹ್ನ ೪ ರ ಸಮಯದಲ್ಲಿ ಮನೆಯಿಂದ ಹೊರಗೆ ಹೋಗಬಾರದು. ‘ಬಿಸಿಲಿನ ತಾಪ ತಟ್ಟಬಾರದು’, ಎಂದು ಹೊರಗೆ ಹೋಗುವಾಗ ಕಣ್ಣುಗಳಿಗೆ ‘ಗಾಗಲ್’ ಹಾಕಬೇಕು. ಛತ್ರಿ ಅಥವಾ ‘ತಲೆಯ ಮೇಲೆ ಎಲ್ಲ ಬದಿಯಲ್ಲಿ ನೆರಳು ಬರುವ ಟೊಪ್ಪಿಗೆಯನ್ನು (‘ಹ್ಯಾಟ್‌’) ಹಾಕಬೇಕು. ಟೊಪ್ಪಿಗೆ ಲಭ್ಯವಿಲ್ಲದಿದ್ದರೆ ತಲೆಗೆ ಮತ್ತು ಕಿವಿಗಳಿಗೆ ದೊಡ್ಡ ಬಿಳಿ ಕರವಸ್ತ್ರವನ್ನು ಕಟ್ಟಬೇಕು.

೮. ಕೆಲವರಿಗೆ ಅಧ್ಯಾತ್ಮಪ್ರಸಾರದ ಸೇವೆ ಅಥವಾ ಇತರ ಕಾರಣಗಳಿಂದ ಹೊರಗೆ ಹೋಗುವುದಾದರೆ ಅಥವಾ ಪ್ರವಾಸ ಮಾಡಬೇಕಾದರೆ ‘ಉಷ್ಣತೆಯ ತೊಂದರೆ ಆಗಬಾರದು’, ಎಂದು ಪುರುಷರು ಜೇಬಿನಲ್ಲಿ ಮತ್ತು ಸ್ತ್ರೀಯರು ತಮ್ಮ ಪರ್ಸಿನಲ್ಲಿ ಈರುಳ್ಳಿಯನ್ನು ಇಟ್ಟುಕೊಳ್ಳಬೇಕು. ಈರುಳ್ಳಿಯು ದೇಹದಲ್ಲಿನ ಉಷ್ಣತೆಯನ್ನು ಎಳೆದುಕೊಳ್ಳುವುದರಿಂದ ೩-೪ ದಿನಗಳ ನಂತರ ಅದು ಒಣಗುತ್ತದೆ. ಒಣಗಿದ ಈರುಳ್ಳಿಯನ್ನು ಎಸೆದು ಹೊಸ ಈರುಳ್ಳಿಯನ್ನು ಜೊತೆಯಲ್ಲಿಡಬೇಕು.

೯. ವಾತಾವರಣವು ತಂಪಾಗಿರಲು ಕೂಲರದ (ಹವಾನಿಯಂತ್ರಣ ಯಂತ್ರದ) ಸೌಲಭ್ಯವಿದ್ದರೆ, ದಿನದಲ್ಲಿ ಕೆಲವು ಗಂಟೆಗಳ ವರೆಗೆ ಅದನ್ನು ಉಪಯೋಗಿಸಬೇಕು.

೧೦. ಜಾಗರಣೆ ಮಾಡುವುದರಿಂದ ದೇಹದಲ್ಲಿ ಪಿತ್ತ ಮತ್ತು ವಾತ ಈ ದೋಷಗಳು ಹೆಚ್ಚಾಗುತ್ತವೆ. ಆದ್ದರಿಂದ ಅತೀ ಜಾಗರಣೆ ಮಾಡುವುದನ್ನು ತಪ್ಪಿಸಬೇಕು. (ಈ ಕಾಳಜಿಯನ್ನು ಎಲ್ಲ ಋತುಮಾನಗಳಲ್ಲಿ ತೆಗೆದುಕೊಳ್ಳುವುದು ಆವಶ್ಯಕವಾಗಿದೆ.)

೧೧. ಈ ದಿನಗಳಲ್ಲಿ ಬೆವರು ಹೆಚ್ಚು ಬರುತ್ತಿರುವುದರಿಂದ ಬೇಗ ದಣಿವೂ ಆಗುತ್ತದೆ. ಆದ್ದರಿಂದ ವ್ಯಾಯಾಮದ ಪ್ರಮಾಣವನ್ನು ಕಡಿಮೆ ಮಾಡಬೇಕು.

೧೨. ಒಂದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು, ಹಾಗೆಯೇ ೬೫ ವರ್ಷಗಳಿಗಿಂತ ಹೆಚ್ಚು ವಯಸ್ಸಿನ ವ್ಯಕ್ತಿಗಳಿಗೆ ಮೇಲಿನ ಅಂಶಗಳ ಆಧಾರದಲ್ಲಿ ತುಂಬಾ ಕಾಳಜಿ ವಹಿಸುವುದು ಆವಶ್ಯಕವಾಗಿದೆ.

– ವೈದ್ಯೆ (ಸೌ.) ಶರ್ವರಿ ಜೋಶಿ, ವಾಳಪಾಯಿ, ಗೋವಾ. (೨೫.೨.೨೦೨೫)