ಆರಂಭದಲ್ಲಿ ಕೇವಲ ೧೦ ನಿಮಿಷಗಳಷ್ಟೇ ವ್ಯಾಯಮವನ್ನು ಮಾಡಿರಿ !

ವ್ಯಾಯಾಮ ಮಾಡಲು ಬೇಸರವೇ ? ಹಾಗಾದರೆ ಇದನ್ನು ಮಾಡಿರಿ !

‘ವ್ಯಾಯಾಮಶಾಲೆಯಲ್ಲಿ ಎಷ್ಟು ಗಂಟೆ ವ್ಯಾಯಾಮ ಮಾಡಬೇಕು ?’, ಎಂಬುದು ಸಂಪೂರ್ಣವಾಗಿ ನಿಮ್ಮ ಉದ್ದೇಶದ ಮೇಲೆ ಅವಲಂಬಿಸಿರುತ್ತದೆ. ‘ಯಾವುದಾದರೊಂದು ಸ್ಪರ್ಧೆಯಲ್ಲಿ ಗೆಲ್ಲುವುದು ಅಥವಾ ದೇಹಕ್ಕೆ ಆಕಾರ ನೀಡುವುದು’, ಇದು ಧ್ಯೇಯವಾಗಿರದಿದ್ದರೆ ವ್ಯಾಯಾಮಶಾಲೆಯಲ್ಲಿ ಗಂಟೆಗಟ್ಟಲೇ ಸಮಯ ಕಳೆಯುವ ಆವಶ್ಯಕತೆ ಇಲ್ಲ. ಸಾಮಾನ್ಯವಾಗಿ ವ್ಯಕ್ತಿಗೆ ‘ತೂಕ ಕಡಿಮೆ ಮಾಡುವುದು, ದೇಹದ ಫ್ಲೆಕ್ಸಿಬಿಲಿಟಿಯನ್ನು ಹೆಚ್ಚಿಸಿ ಕೀಲುಗಳನ್ನು ಸಡಿಲಗೊಳಿಸುವುದು, ಕಠಿಣ ಕೆಲಸಗಳನ್ನು ಮಾಡಲು ದೇಹವನ್ನು ಸಬಲಗೊಳಿಸುವುದು’, ಇಲ್ಲಿಂದ ‘ದಿನನಿತ್ಯದ ಕೃತಿಗಳಲ್ಲಿ ಉತ್ಸಾಹ ಅಥವಾ ವೇಗ ತರುವುದು, ಹಗುರತನವನ್ನು ಅನುಭವಿಸುತ್ತಾ ನಿರೋಗಿ ಜೀವನವನ್ನು ನಡೆಸುವುದು’, ಈ ಉದ್ದೇಶ ಬಹಳ ಮಹತ್ವದ್ದಾಗಿದೆ. ಈ ಉದ್ದೇಶವನ್ನು ಸಾಧಿಸಲು ‘ಪ್ರತಿದಿನ ೩೦ ರಿಂದ ೪೫ ನಿಮಿಷಗಳ ಕಾಲ ನಿಯಮಿತವಾಗಿ ವ್ಯಾಯಾಮ ಮಾಡುವುದು ಮತ್ತು ಯೋಗ್ಯ ಆಹಾರ ಸೇವಿಸುವುದು’, ಇಷ್ಟು ಸಾಕಾಗುತ್ತದೆ.

(ಭಾಗ ೧೨)

‘ಪ್ರತಿದಿನ ಕಡಿಮೆಪಕ್ಷ ೪೫ ನಿಮಿಷಗಳ ವರೆಗೆ ವ್ಯಾಯಾಮ ಮಾಡುವುದು ಆವಶ್ಯಕವಾಗಿದೆ; ಆದರೆ ಕೆಲವರಿಗೆ ವ್ಯಾಯಾಮದ ಅಭ್ಯಾಸ ಇಲ್ಲದಿರುವುದರಿಂದ ಪ್ರಾರಂಭದಲ್ಲಿಯೇ ೪೫ ನಿಮಿಷ ವ್ಯಾಯಾಮ ಮಾಡಲು ಕಠಿಣವೆನಿಸುತ್ತದೆ. ಆದ್ದರಿಂದ ಪ್ರಾರಂಭದಲ್ಲಿ ವ್ಯಾಯಾಮ ಮಾಡುವ ಅವರ ಇಚ್ಛೆ ಕಡಿಮೆಯಾಗುತ್ತದೆ.

ವ್ಯಾಯಾಮದ ಅಭ್ಯಾಸವಾಗಲು ಪ್ರಾರಂಭದಲ್ಲಿ ಕೇವಲ ೧೦ ಅಥವಾ ೧೫ ನಿಮಿಷಗಳಷ್ಟೇ ವ್ಯಾಯಾಮವನ್ನು ಮಾಡಬೇಕು. ೧೦ ನಿಮಿಷಗಳ ವ್ಯಾಯಾಮವು ಮೊದಲ ಹಂತದಲ್ಲಿ ಅತ್ಯಂತ ಪರಿಣಾಮಕಾರಿಯಾಗುತ್ತದೆ. ಆರಂಭದಲ್ಲಿ ೧೦ ನಿಮಿಷಗಳ ವ್ಯಾಯಾಮವನ್ನು ನಮ್ಮ ಶರೀರವು ಸಹಜವಾಗಿ ಸ್ವೀಕರಿಸುತ್ತದೆ. ಆದ್ದರಿಂದ ಮನಸ್ಸಿನ ಅಡೆತಡೆಗಳು ದೂರವಾಗಿ ವ್ಯಾಯಾಮದ ಅಭ್ಯಾಸಕ್ಕೆ ಚಾಲನೆ ಸಿಗುತ್ತದೆ. ಕ್ರಮೇಣ ವ್ಯಾಯಾಮದ ಅಭ್ಯಾಸವಾಗಿ ಅದು ಇಷ್ಟವಾಗತೊಡಗುತ್ತದೆ. ಆಗ ವ್ಯಾಯಾಮದ ಅವಧಿಯನ್ನು ಹೆಚ್ಚಿಸಲು ಸುಲಭವಾಗುತ್ತದೆ. ಈ ರೀತಿ ೧೦-೧೫ ನಿಮಿಷಗಳಿಂದ ಆರಂಭಿಸಿ ೪೫ ನಿಮಿಷಗಳಷ್ಟು ಧ್ಯೇಯವನ್ನು ತಲುಪುವವರೆಗೆ ಪ್ರತಿವಾರ ನಿಧಾನವಾಗಿ ಕೆಲವು ನಿಮಿಷಗಳನ್ನು ಹೆಚ್ಚಿಸಬೇಕು. ೧೦ ನಿಮಿಷಗಳ ವ್ಯಾಯಾಮದ ಆರಂಭವು ನಿಮ್ಮ ಆರೋಗ್ಯದ ಅಡಿಪಾಯವನ್ನುಭದ್ರವಾಗಿಡಲು ಸಹಾಯಕವಾಗುವುದು.’

– ಕು. ವೈದೇಹಿ ರಾಜೇಂದ್ರ ಶಿಂದೆ, ಭೌತಿಕೋಪಚಾರ (ಫಿಜಿಯೋಥೆರಪಿ) ಅಭ್ಯಾಸಕರು, ಫೋಂಡಾ, ಗೋವಾ. (೮.೯.೨೦೨೪)