ಪರಾತ್ಪರ ಗುರು ಡಾ. ಆಠವಲೆಯವರ ಸಾಧನೆಯ ಕುರಿತು ಮಾರ್ಗದರ್ಶನ !

ಪರಾತ್ಪರ ಗುರು ಡಾ. ಆಠವಲೆ

‘ನನ್ನ ಗುರುಗಳೇ ಶ್ರೇಷ್ಠರಾಗಿದ್ದಾರೆ !’ ಎಂದು ಹೇಳುವುದು ಶಿಷ್ಯನ ಆತ್ಮಕೇಂದ್ರಿತ ಮತ್ತು ಅಹಂಕಾರವಾಗಿದೆ !

‘ಪ್ರತಿಯೊಬ್ಬ ಸಂತರ ಸಾಧನಾಮಾರ್ಗ ಮತ್ತು ಅವರ ಈ ಭೂಮಿಯ ಮೇಲಿನ ಕಾರ್ಯಗಳು ವಿಭಿನ್ನವಾಗಿರುತ್ತವೆ. ಜನರಿಗೆ ಅಧ್ಯಾತ್ಮ ಮತ್ತು ದೇವರ ಮೇಲಿನ ಶ್ರದ್ಧೆಯನ್ನು ಹೆಚ್ಚಿಸಲು ಕೆಲವು ಸಂತರು ಚಮತ್ಕಾರಗಳನ್ನು ಮಾಡುತ್ತಾರೆ. ಕೆಲವು ಸಂತರು ಜನರ ಪ್ರಾಪಂಚಿಕ ಸಮಸ್ಯೆಗಳನ್ನು ಪರಿಹರಿಸಿ ಅವರಿಗೆ ಸಾಧನೆಗಾಗಿ ಅನುಕೂಲ ವಾತಾವರಣವನ್ನು ಒದಗಿಸುತ್ತಾರೆ. ಆದರೆ ಕೆಲವು ಸಂತರು ಸಾಧಕರಿಂದ ಕೇವಲ ಸಾಧನೆಯನ್ನು ಮಾಡಿಸಿಕೊಳ್ಳುತ್ತಾರೆ. ಇದರರ್ಥ ಸಂತರು ಪ್ರತಿ ಹಂತದಲ್ಲೂ ಸಿಲುಕಿರುವ ಜೀವಗಳನ್ನು ಆ ಹಂತದಿಂದ ಮುಂದೆ ಕರೆದೊಯ್ಯುತ್ತಿರುತ್ತಾರೆ; ಆದರೆ ಸಂತರ ಶಿಷ್ಯರಿಗೆ ‘ನನ್ನ ಗುರುಗಳೇ ಶ್ರೇಷ್ಠರಿದ್ದಾರೆ !’ ಎಂದು ಅನಿಸುತ್ತದೆ. ಇದು ಆ ಶಿಷ್ಯರ ಆತ್ಮಕೇಂದ್ರಿತ ಮತ್ತು ಅಹಂಕಾರವಾಗಿದೆ. ಸ್ಥೂಲದಲ್ಲಿ ಸಂತರ ಕಾರ್ಯವು ಭಿನ್ನವಾಗಿದ್ದರೂ ಎಲ್ಲ ಸಂತರ ಮೂಲಕ ಕಾರ್ಯನಿರತವಾಗಿರುವ ಗುರುತತ್ತ್ವವು ಒಂದೇ ಆಗಿರುತ್ತದೆ. ಆದ್ದರಿಂದ, ಪ್ರತಿಯೊಬ್ಬ ಸಂತರು ಅವರ ಸ್ಥಾನದಲ್ಲಿ ಶ್ರೇಷ್ಠರೇ ಇರುತ್ತಾರೆ. ಅವರನ್ನು ಹೋಲಿಸಲು ಸಾಧ್ಯವಿಲ್ಲ.

– (ಪರಾತ್ಪರ ಗುರು) ಡಾ. ಆಠವಲೆ (೨೦.೧೧.೨೦೨೧)