ಪಾಶ್ಚಿಮಾತ್ಯ ಪದ್ಧತಿಗೆ ಸಂಬಂಧಿಸಿದಂತೆ ಅಪ್ರತಿಮ ಸಂಶೋಧನೆ ನಡೆಸುವ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ
‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ವು ‘ಯುನಿವರ್ಸಲ್ ಔರಾ ಸ್ಕ್ಯಾನರ್ (ಯು.ಎ.ಎಸ್.)’ ಈ ಉಪಕರಣದ ಮೂಲಕ ಮಾಡಿದ ವೈಜ್ಞಾನಿಕ ಪರೀಕ್ಷಣೆ !
‘ಚೈತ್ರ ಶುಕ್ಲ ಪಕ್ಷ ಪಾಡ್ಯದಂದು, ಅಂದರೆ ಯುಗಾದಿಯಂದು ಭಾರತೀಯರ ಹೊಸ ವರ್ಷ ಪ್ರಾರಂಭವಾಗುತ್ತದೆ. ಆದರೆ, ಭಾರತದಲ್ಲಿ ಕಳೆದ ಕೆಲವು ದಶಕಗಳಿಂದ ಡಿಸೆಂಬರ್ ೩೧ ರ ರಾತ್ರಿ ೧೨ ಗಂಟೆಗೆ ಹೊಸ ವರ್ಷವನ್ನು ಸ್ವಾಗತಿಸುವ ಪದ್ಧತಿ ಆಚರಣೆಯಲ್ಲಿರುವುದು ಎಲ್ಲೆಡೆ ಕಂಡು ಬರುತ್ತದೆ. ಸಮಾಜದಲ್ಲಿ ಡಿಸೆಂಬರ್ ೩೧ ರ ರಾತ್ರಿ ಯಾವುದಾದರೂ ಹೋಟೆಲ್‌ಗೆ ಹೋಗಿ ಅಲ್ಲಿ ‘ನ್ಯೂ ಇಯರ್ ಪಾರ್ಟಿ’ ಅಂದರೆ ಹೊಸ ವರ್ಷವನ್ನು ಸ್ವಾಗತಿಸಲು ಔತಣಕೂಟವನ್ನು ಏರ್ಪಡಿಸುವ ಪ್ರಮಾಣವೂ ಹೆಚ್ಚಾಗಿದೆ. ಡಿಸೆಂಬರ್ ೩೧ ರ ರಾತ್ರಿ ‘ನ್ಯೂ ಇಯರ್ ಪಾರ್ಟಿ’ ಮೂಲಕ ಹೊಸವರ್ಷವನ್ನು ಸ್ವಾಗತಿಸುವವರ ಮೇಲೆ ಅಲ್ಲಿಯ ವಾತಾವರಣ ಆಧ್ಯಾತ್ಮಿಕ ದೃಷ್ಟಿಯಿಂದ ಯಾವ ಪರಿಣಾಮ ಬೀರುತ್ತದೆ’, ಎನ್ನುವುದನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಲು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ವತಿಯಿಂದ ಒಂದು ಪರೀಕ್ಷಣೆ ಮಾಡಲಾಯಿತು. ಈ ಪರೀಕ್ಷಣೆಗಾಗಿ ‘ಯುನಿವರ್ಸಲ್ ಔರಾ ಸ್ಕ್ಯಾನರ್ (ಯು.ಎ.ಎಸ್) ’ಉಪಕರಣವನ್ನು ಉಪಯೋಗಿಸಲಾಯಿತು. ಈ ಪರೀಕ್ಷಣೆಯ ನಿರೀಕ್ಷಣೆಗಳ ವಿವೇಚನೆ, ನಿಷ್ಕರ್ಷೆ ಮತ್ತು ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆಯನ್ನು ಮುಂದೆ ನೀಡಲಾಗಿದೆ.
೧. ಪರೀಕ್ಷಣೆಯ ನಿರೀಕ್ಷಣೆಗಳ ವಿವೇಚನೆ
ಈ ಪರೀಕ್ಷಣೆಯಲ್ಲಿ ಒಟ್ಟು ೧೧ ಸಾಧಕರು (೩ ಭಾರತೀಯ ಸಾಧಕರು ಮತ್ತು ೮ ವಿದೇಶಿ ಸಾಧಕರು) ಭಾಗವಹಿಸಿದ್ದರು. ಅದರಲ್ಲಿ ೮ ಸಾಧಕರಿಗೆ ತೀವ್ರ ಆಧ್ಯಾತ್ಮಿಕ ತೊಂದರೆಯಿತ್ತು. ೩ ಸಾಧಕರಿಗೆ ಆಧ್ಯಾತ್ಮಿಕ ತೊಂದರೆಗಳು ಇರಲಿಲ್ಲ. ಆಧ್ಯಾತ್ಮಿಕ ತೊಂದರೆ ಇಲ್ಲದಿರುವ ೩ ಸಾಧಕರಲ್ಲಿ ೧ ಸಾಧಕರು ಶೇ. ೬೨ ರಷ್ಟು ಆಧ್ಯಾತ್ಮಿಕ ಮಟ್ಟವನ್ನು ಹೊಂದಿದ್ದು, ಇನ್ನುಳಿದ ಇಬ್ಬರ ಆಧ್ಯಾತ್ಮಿಕ ಮಟ್ಟವು ಶೇ. ೬೦ ಕ್ಕಿಂತ ಕಡಿಮೆಯಿದೆ. ಈ ಪ್ರಯೋಗದ ಪರೀಕ್ಷಣೆಯಲ್ಲಿ ಭಾಗವಹಿಸಿದ ಸಾಧಕರು ಪಾಶ್ಚಿಮಾತ್ಯ ಸಂಸ್ಕೃತಿಗೆ ಅನುಗುಣವಾಗಿ ಕೇಶವಿನ್ಯಾಸ (ಹೇರ್ ಸ್ಟೈಲ್), ಮೇಕಪ್ ಮತ್ತು ಉಡುಪು ಧರಿಸಿಕೊಂಡು ಗೋವಾದ ಒಂದು ಪ್ರಸಿದ್ಧ ಹೊಟೆಲ್‌ನಲ್ಲಿ ಆಯೋಜಿಸಲಾಗಿದ್ದ ‘ನ್ಯೂ ಇಯರ್ ಪಾರ್ಟಿ’ಯಲ್ಲಿ ಭಾಗವಹಿಸಿದ್ದರು. ಅಲ್ಲಿ ಈ ಎಲ್ಲ ಸಾಧಕರು ೫ ಗಂಟೆಗಳ ಕಾಲ ಇದ್ದರು. ೩೧.೧೨.೨೦೧೮ ರ ರಾತ್ರಿ ಪಾರ್ಟಿಗೆ ಹೋಗುವ ಮೊದಲು, ಹಾಗೆಯೇ ೧.೧.೨೦೧೯ ರಂದು ಬೆಳಿಗ್ಗೆ ಪಾರ್ಟಿಯಿಂದ ಮರಳಿದ ಬಳಿಕ ಅವರೆಲ್ಲರನ್ನು ‘ಯು.ಎ.ಎಸ್.’ ಉಪಕರಣದ ಮೂಲಕ ನಿರೀಕ್ಷಣೆ ಮಾಡಲಾಯಿತು. ಪಾರ್ಟಿಯಿಂದ ಅವರೆಲ್ಲರ ಮೇಲೆ ಆಗಿರುವ ಪರಿಣಾಮವನ್ನು ಮುಂದೆ ನೀಡಲಾಗಿದೆ.
೧ ಅ. ನಕಾರಾತ್ಮಕ ಮತ್ತು ಸಕಾರಾತ್ಮಕ ಊರ್ಜೆಯ ಸಂದರ್ಭದ ನಿರೀಕ್ಷಣೆಗಳ ವಿಶ್ಲೇಷಣೆ – ಪರೀಕ್ಷಣೆಯಲ್ಲಿ ಭಾಗವಹಿಸಿದ ಎಲ್ಲ ಸಾಧಕರ ಮೇಲೆ ಪಾರ್ಟಿಯಿಂದ ಬಹಳಷ್ಟು ನಕಾರಾತ್ಮಕ ಪರಿಣಾಮ ಬೀರುವುದು
ಮೇಲಿನ ಕೋಷ್ಟಕದಿಂದ ಮುಂದಿನ ಅಂಶಗಳು ಗಮನಕ್ಕೆ ಬರುತ್ತವೆ.
೧. ಪಾರ್ಟಿಯಿಂದ ಮರಳಿದ ಬಳಿಕ ತೀವ್ರ ಆಧ್ಯಾತ್ಮಿಕ ತೊಂದರೆ ಇದ್ದ ಇಬ್ಬರೂ ಸಾಧಕರ ‘ಇನ್‌ಫ್ರಾರೆಡ್’ ಮತ್ತು ‘ಅಲ್ಟ್ರಾವೈಲೆಟ್’ ಈ ನಕಾರಾತ್ಮಕ ಊರ್ಜೆಯಲ್ಲಿ ಬಹಳ ಹೆಚ್ಚಳವಾಯಿತು. ಅವರಲ್ಲಿ ಸಕಾರಾತ್ಮಕ ಊರ್ಜೆ ಕಾಣಿಸಲಿಲ್ಲ.
೨. ಪಾರ್ಟಿಯಿಂದ ಮರಳಿ ಬಂದ ಬಳಿಕ ಆಧ್ಯಾತ್ಮಿಕ ತೊಂದರೆ ಇಲ್ಲದಿರುವ ಇಬ್ಬರೂ ಸಾಧಕರ ‘ಇನ್‌ಫ್ರಾರೆಡ್’ ಈ ನಕಾರಾತ್ಮಕ ಊರ್ಜೆಯಲ್ಲಿ ಬಹಳ ಹೆಚ್ಚಳವಾಯಿತು. ಅವರಲ್ಲಿ ‘ಅಲ್ಟ್ರಾವೈಲೆಟ್’ ಈ ನಕಾರಾತ್ಮಕ ಊರ್ಜೆ ನಿರ್ಮಾಣವಾಯಿತು ಮತ್ತು ಅವರಲ್ಲಿದ್ದ ಸಕಾರಾತ್ಮಕ ಊರ್ಜೆ ಸ್ವಲ್ಪವೂ ಇರಲಿಲ್ಲ.
೨. ನಿಷ್ಕರ್ಷ
‘ನ್ಯೂ ಇಯರ್ ಪಾರ್ಟಿ’ಯ ಪರೀಕ್ಷಣೆಗೆ ಒಳಪಟ್ಟ ಎಲ್ಲ ಸಾಧಕರ ಮೇಲೆ ಬಹಳ ನಕಾರಾತ್ಮಕ ಪರಿಣಾಮ ಬೀರಿತು.
೩. ಪರೀಕ್ಷಣೆಯ ನಿರೀಕ್ಷಣೆಗಳ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆ
೩ ಅ. ಪರೀಕ್ಷಣೆಯಲ್ಲಿ ಭಾಗವಹಿಸಿದ ಎಲ್ಲ ಸಾಧಕರ ಮೇಲೆ ಪಾರ್ಟಿಯಿಂದ ಅಧಿಕ ನಕಾರಾತ್ಮಕ ಪರಿಣಾಮವಾಗುವುದು : ‘ನ್ಯೂ ಇಯರ್ ಪಾರ್ಟಿಯ ಆಯೋಜನೆಯ ಹಿಂದೆ ಗ್ರಾಹಕರನ್ನು ಆಕರ್ಷಿಸುವುದು. ಅವರಿಗೆ ಮನೋರಂಜನೆ ನೀಡುವುದು ಮತ್ತು ಅದರಿಂದ ಅತ್ಯಧಿಕ ಹಣವನ್ನು ಗಳಿಸುವುದು’, ಇವೇ ಆಯೋಜಕರ ಉದ್ದೇಶವಾಗಿರುತ್ತದೆ. ಈ ಉದ್ದೇಶದಿಂದ ಅಲ್ಲಿ ಪಾಶ್ಚಿಮಾತ್ಯ ಪದ್ಧತಿಯ ನೃತ್ಯ, ಸಂಗೀತ, ಬೆಳಕಿನ ಸಂಯೋಜನೆ ಮುಂತಾದ ವ್ಯವಸ್ಥೆಗಳನ್ನು ಮಾಡಲಾಗಿರುತ್ತದೆ, ಅಲ್ಲದೇ ಅಲ್ಲಿ ಮಾಂಸಾಹಾರಿ ಖಾದ್ಯಗಳು ಹಾಗೂ ಮದ್ಯ ಪೂರೈಕೆಯು ಬಹಳ ಪ್ರಮಾಣದಲ್ಲಿರುತ್ತದೆ. ಈ ಪಾರ್ಟಿಗೆ ಬಂದಂತಹ ಬಹುತೇಕ ಸ್ತ್ರೀ-ಪುರುಷರು ಅಸಾತ್ತ್ವಿಕ ಉಡುಗೆತೊಡುಗೆ, ಕೇಶವಿನ್ಯಾಸ ಮತ್ತು ಮುಖಕ್ಕೆ ಮೇಕಪ್ ಮಾಡಿಕೊಂಡಿರುತ್ತಾರೆ. ಒಟ್ಟಾರೆ ಅಲ್ಲಿಯ ವಾತಾವರಣ ಬಹಳ ಅಸಾತ್ತ್ವಿಕವಾಗಿರುತ್ತದೆ. ಸಾಧಕರು ಪಾರ್ಟಿಗೆ ಹೋಗಿದ್ದ ಹೊಟೆಲ್‌ನಲ್ಲಿಯೂ ಅದೇ ರೀತಿಯಿತ್ತು. ಅಸಾತ್ತ್ವಿಕ ವಿಷಯದ ಕಡೆಗೆ ವಾತಾವರಣದಲ್ಲಿರುವ ನಕಾರಾತ್ಮಕ ಸ್ಪಂದನಗಳು ಆಕರ್ಷಿತವಾಗುವುದು ಸ್ವಾಭಾವಿಕವಾಗಿರುತ್ತವೆ. ಪಾರ್ಟಿಯ ವಾತಾವರಣ ಎಷ್ಟು ಅಧಿಕ ರಜ-ತಮದಿಂದ ಕೂಡಿರುತ್ತದೆಯೋ, ಅಷ್ಟು ಆ ಸ್ಥಳದಲ್ಲಿ ಅಧಿಕ ಪ್ರಮಾಣದಲ್ಲಿ ನಕಾರಾತ್ಮಕ ಸ್ಪಂದನಗಳು ಆಕರ್ಷಿತಗೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ. ‘ನ್ಯೂ ಇಯರ್ ಪಾರ್ಟಿಯ ಸಮಯದಲ್ಲಿ ಮಾಡಿರುವ ಪರೀಕ್ಷಣೆಯಿಂದ ಇದರ ಪ್ರತ್ಯಕ್ಷ ಅನುಭವವಾಯಿತು. ಪಾರ್ಟಿಯ ವಾತಾವರಣ ಅತ್ಯಧಿಕ ರಜ-ತಮದಿಂದ ಕೂಡಿರುವುದರಿಂದ ಪರೀಕ್ಷಣೆಯಲ್ಲಿದ್ದ ಸಾಧಕರು ಕೇವಲ ೫ ಗಂಟೆಗಳ ಕಾಲ ಅಲ್ಲಿದ್ದರೂ, ಅವರ ಮೇಲೆ ನಕಾರಾತ್ಮಕ ಸ್ಪಂದನಗಳಿಂದ ಅಧಿಕ ಪ್ರಮಾಣದಲ್ಲಿ ಪರಿಣಾಮವಾಯಿತು. ಈ ವಿಷಯದ ವಿವರಣೆಯನ್ನು ಮುಂದೆ ನೀಡಲಾಗಿದೆ.
೩ ಅ ೧. ತೀವ್ರ ಆಧ್ಯಾತ್ಮಿಕ ತೊಂದರೆಯಿರುವ ಇಬ್ಬರು ಸಾಧಕರಲ್ಲಿದ್ದ ‘ಇನ್‌ಫ್ರಾರೆಡ್’ ಮತ್ತು ‘ಅಲ್ಟ್ರಾವೈಲೆಟ್’ ಈ ನಕಾರಾತ್ಮಕ ಊರ್ಜೆಯು ಅಧಿಕ ಪ್ರಮಾಣದಲ್ಲಿ ಹೆಚ್ಚಳವಾಗುವುದು : ವ್ಯಕ್ತಿಯ ದೇಹದ ಸುತ್ತಲಿನ ತೊಂದರೆದಾಯಕ ಶಕ್ತಿಗಳ ಆವರಣವು ‘ಇನ್‌ಫ್ರಾರೆಡ್’ ಈ ನಕಾರಾತ್ಮಕ ಊರ್ಜೆಯನ್ನು ತೋರಿಸುತ್ತದೆ. ಶರೀರದ ತೊಂದರೆದಾಯಕ ಶಕ್ತಿಯ ಸ್ಥಾನದಲ್ಲಿರುವ ತೊಂದರೆದಾಯಕ ಶಕ್ತಿಯನ್ನು ‘ಅಲ್ಟ್ರಾವೈಲೆಟ್’ ಈ ನಕಾರಾತ್ಮಕ ಊರ್ಜೆಯ ಮೂಲಕ ತೋರಿಸಲಾಗುತ್ತದೆ. ತೀವ್ರ ಆಧ್ಯಾತ್ಮಿಕ ತೊಂದರೆಯಿರುವ ಸಾಧಕರಲ್ಲಿ ಕೆಟ್ಟ ಶಕ್ತಿಗಳ ತೊಂದರೆದಾಯಕ ಶಕ್ತಿಗಳ ಸ್ಥಾನಗಳಿದ್ದವು. ಹಾಗೆಯೇ ಅವರ ಸುತ್ತಲೂ ತೊಂದರೆದಾಯಕ ಶಕ್ತಿಗಳ ಆವರಣವೂ ಇತ್ತು. ಪಾರ್ಟಿಯಿಂದ ಮರಳಿದ ಬಳಿಕ ತೀವ್ರ ಆಧ್ಯಾತ್ಮಿಕ ತೊಂದರೆಯಿರುವ ಇಬ್ಬರೂ ಸಾಧಕರಲ್ಲಿ ‘ಇನ್‌ಫ್ರಾರೆಡ್’ ಮತ್ತು ‘ಅಲ್ಟ್ರಾವೈಲೆಟ್’ ಈ ನಕಾರಾತ್ಮಕ ಊರ್ಜೆಯ ಪ್ರಮಾಣವು ಬಹಳ ಹೆಚ್ಚಾಗಿರುವುದು ಕಂಡು ಬಂದಿತು. ಇದರ ಕಾರಣವೆಂದರೆ, ಪಾರ್ಟಿಯ ಅತ್ಯಧಿಕ ರಜ-ತಮಯುಕ್ತ ವಾತಾವರಣದಲ್ಲಿ ಕೆಲವು ಗಂಟೆಗಳ ಕಾಲ ಸಮಯ ಕಳೆದಿರುವುದರಿಂದ ಅವರ ಸುತ್ತಲೂ ಇದ್ದ ತೊಂದರೆದಾಯಕ ಶಕ್ತಿಗಳ ಸ್ಥಾನಗಳು ಜಾಗೃತಗೊಂಡವು. ಸಾಧಕರಿಗೆ ತೊಂದರೆ ನೀಡುವ ಕೆಟ್ಟ ಶಕ್ತಿಗಳಿಗೆ ಅಲ್ಲಿಯ ಅತ್ಯಂತ ರಜ-ತಮಯುಕ್ತ ವಾತಾವರಣ ಪೂರಕವಾಗಿರುವುದರಿಂದ ಅವುಗಳಿಗೆ ಅಲ್ಲಿದ್ದ ತೊಂದರೆದಾಯಕ ಸ್ಪಂದನಗಳನ್ನು ದೊಡ್ಡ ಪ್ರಮಾಣದಲ್ಲಿ ಗ್ರಹಿಸಿಕೊಂಡು, ಅವುಗಳನ್ನು ಪ್ರಕ್ಷೇಪಿಸಲು ಸಹಜ ಸಾಧ್ಯವಾಯಿತು.
೩ ಅ ೨. ಆಧ್ಯಾತ್ಮಿಕ ತೊಂದರೆ ಇಲ್ಲದಿರುವ ಇಬ್ಬರೂ ಸಾಧಕರಲ್ಲಿ ‘ಇನ್‌ಫ್ರಾರೆಡ್’ ಈ ನಕಾರಾತ್ಮಕ ಊರ್ಜೆಯಲ್ಲಿ ಬಹಳ ಹೆಚ್ಚಳವಾಗುವುದು, ಅವರಲ್ಲಿ ‘ಅಲ್ಟ್ರಾವೈಲೆಟ್’ ಈ ನಕಾರಾತ್ಮಕ ಊರ್ಜೆಯ ನಿರ್ಮಾಣವಾಗುವುದು ಮತ್ತು ಅವರಲ್ಲಿರುವ ಸಕಾರಾತ್ಮಕ ಊರ್ಜೆ ಇಲ್ಲವಾಗುವುದು : ಈ ಇಬ್ಬರೂ ಸಾಧಕರ ದೇಹದ ಸುತ್ತಲೂ ತೊಂದರೆದಾಯಕ ಶಕ್ತಿಗಳ ಆವರಣ ಸ್ವಲ್ಪ ಪ್ರಮಾಣದಲ್ಲಿತ್ತು. ಇದರಿಂದ ಪ್ರಾರಂಭದಲ್ಲಿ ಅವರಲ್ಲಿ ಅಲ್ಪ ಪ್ರಮಾಣದಲ್ಲಿ ‘ಇನ್‌ಫ್ರಾರೆಡ್’ ಈ ನಕಾರಾತ್ಮಕ ಊರ್ಜೆ ಕಂಡು ಬಂದಿತು. ಆದರೆ ಅವರಲ್ಲಿ ‘ಅಲ್ಟ್ರಾವೈಲೆಟ್’ ಈ ನಕಾರಾತ್ಮಕ ಊರ್ಜೆ ಸ್ವಲ್ಪವೂ ಇರಲಿಲ್ಲ. ಅವರಲ್ಲಿ ಸಕಾರಾತ್ಮಕ ಊರ್ಜೆ ಇತ್ತು. ಪಾರ್ಟಿಯ ರಜ-ತಮಪ್ರಧಾನ ವಾತಾವರಣದ ಪರಿಣಾಮದಿಂದ ಇಬ್ಬರೂ ಸಾಧಕರ ದೇಹದ ಸುತ್ತಲೂ ತೊಂದರೆದಾಯಕ ಶಕ್ತಿಗಳ ಆವರಣ ಹೆಚ್ಚಾಯಿತು. ಇದರಿಂದ ಅವರಲ್ಲಿರುವ ‘ಇನ್‌ಫ್ರಾರೆಡ್’ ಈ ನಕಾರಾತ್ಮಕ ಊರ್ಜೆಯಲ್ಲಿ ಬಹಳ ಹೆಚ್ಚಳವಾಗಿರುವುದು ಪರೀಕ್ಷಣೆಯಿಂದ ಕಂಡು ಬಂದಿತು. ಈ ಆವರಣವನ್ನು ಎದುರಿಸಲು ಅವರಲ್ಲಿರುವ ಸಕಾರಾತ್ಮಕ ಊರ್ಜೆ ಉಪಯೋಗಿಸಲ್ಪಟ್ಟ ಕಾರಣದಿಂದ ಅದು ಸಂಪೂರ್ಣ ನಷ್ಟವಾಯಿತು. ಒಟ್ಟಾರೆ ಅವರ ಸಾಧನೆ ವ್ಯಯವಾಯಿತು. ಪಾರ್ಟಿಯ ರಜ-ತಮದಿಂದ ಕೂಡಿದ ವಾತಾವರಣದಿಂದ ಅಲ್ಲಿ ಕ್ರೋಢೀಕೃತಗೊಂಡ ಕೆಟ್ಟ ಶಕ್ತಿಗಳಿಂದ ವಾತಾವರಣದಲ್ಲಿ ಬಹಳ ಪ್ರಮಾಣದಲ್ಲಿ ನಕಾರಾತ್ಮಕ ಸ್ಪಂದನಗಳು ವೇಗವಾಗಿ ಪ್ರಕ್ಷೇಪಣೆಗೊಂಡಿದ್ದರಿಂದ ಅಲ್ಲಿಯ ವಾತಾವರಣ ಬಹಳ ಕಲುಷಿತಗೊಂಡಿತು. ಇದರ ಪರಿಣಾಮವಾಗಿ ಇಬ್ಬರೂ ಸಾಧಕರಲ್ಲಿ ‘ಅಲ್ಟ್ರಾವೈಲೆಟ್’ ಈ ನಕಾರಾತ್ಮಕ ಊರ್ಜೆಯು ಕಂಡು ಬಂದಿತು.
೩ ಆ. ಪರೀಕ್ಷಣೆಯಲ್ಲಿ ಪಾಲ್ಗೊಂಡ ಕೆಲವು ಸಾಧಕರು ಭಾರತೀಯರಾಗಿದ್ದರು, ಇನ್ನು ಕೆಲವರು ವಿದೇಶಿಯರಾಗಿದ್ದರು; ಆದರೆ ಅವರ ಮೇಲಾಗಿರುವ ನಕಾರಾತ್ಮಕ ಸ್ಪಂದನಗಳ ಪರಿಣಾಮ ಮಾತ್ರ ಒಂದೇ ರೀತಿಯಾಗಿತ್ತು.
೩ ಇ. ಸಾಧಕರ ಮೇಲಿನ ನಕಾರಾತ್ಮಕ ಸ್ಪಂದನಗಳ ಪರಿಣಾಮ ೪೮ ಗಂಟೆ, ಅಂದರೆ ೨ ದಿನಗಳ ವರೆಗೆ ಇರುವುದು : ಪರೀಕ್ಷಣೆಯಲ್ಲಿ ಪಾಲ್ಗೊಂಡ ಸಾಧಕರ ಮೇಲಾಗಿದ್ದ ನಕಾರಾತ್ಮಕ ಸ್ಪಂದನಗಳ ಪರಿಣಾಮ ದೂರವಾಗಲು ಒಟ್ಟು ೪೮ ಗಂಟೆಗಳು ತಗುಲಿದವು. ಇದರಿಂದ ಕಂಡು ಬರುವುದೇನೆಂದರೆ, ಅನೇಕ ವರ್ಷಗಳಿಂದ ಸಾಧನೆಯನ್ನು ಮಾಡುತ್ತಿದ್ದ ಸಾಧಕರ ಮೇಲೆ ಅವರು ಕೆಲವೇ ಕೆಲವು ಗಂಟೆಗಳ ಕಾಲ ರಜ-ತಮ ಪ್ರಧಾನ ವಾತಾವರಣದಲ್ಲಿ ಹೋದ ಮಾತ್ರಕ್ಕೆ ಇಷ್ಟು ದುಷ್ಪರಿಣಾಮ ಬೀರುತ್ತಿದ್ದರೆ, ಸಾಧನೆಯನ್ನು ಮಾಡದೇ ಇರುವವರ ಮೇಲೆ ಅದು ಎಷ್ಟು ಅಧಿಕ ಪ್ರಮಾಣದಲ್ಲಿ ಬೀರಬಹುದು ಎನ್ನುವ ಕಲ್ಪನೆಯನ್ನೂ ಮಾಡಲು ಸಾಧ್ಯವಿಲ್ಲ.
ಒಟ್ಟಾರೆ ಹೇಳುವುದೇನೆಂದರೆ, ಡಿಸೆಂಬರ್ ೩೧ ರ ರಾತ್ರಿ ಹೊಸ ವರ್ಷವನ್ನು ಸ್ವಾಗತಿಸಲು ಆಯೋಜಿಸಲಾಗುವ ‘ನ್ಯೂ ಇಯರ್ ಪಾರ್ಟಿ’ಗೆ ಹೋಗುವುದು ಬಹಳ ಹಾನಿಕರವಾಗಿದೆ, ಎನ್ನುವುದು ಈ ವೈಜ್ಞಾನಿಕ ಪರೀಕ್ಷಣೆಯಿಂದ ಗಮನಕ್ಕೆ ಬರುತ್ತದೆ’.
– ಸೌ. ಮಧುರಾ ಧನಂಜಯ ಕರ್ವೆ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ (೫.೧.೨೦೧೯)
ಭಾರತೀಯರೆ, ಪಾಶ್ಚಿಮಾತ್ಯ ಸಂಸ್ಕೃತಿಯಂತೆ ೧ ಜನವರಿಯಂದಲ್ಲ, ಯುಗಾದಿಯಂದೇ ಹೊಸ ವರ್ಷಾರಂಭವನ್ನು ಆಚರಿಸಿರಿ !‘ಹಿಂದೂಗಳ ವರ್ಷಾರಂಭದ ದಿನ ಅಂದರೆ ವರ್ಷ-ಪಾಡ್ಯ, ಅರ್ಥಾತ್ ಯುಗಾದಿ. ‘ಯುಗಾದಿಯ ದಿನದಂದು ಸೂರ್ಯೋದಯದ ಬಳಿಕ ತಕ್ಷಣವೇ ಬ್ರಹ್ಮಧ್ವಜದ ಪೂಜೆಯನ್ನು ಮಾಡಿ ಬ್ರಹ್ಮಧ್ವಜವನ್ನು ಏರಿಸಬೇಕು’, ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ. ಬ್ರಹ್ಮದೇವರು ಸೃಷ್ಟಿಯನ್ನು ನಿರ್ಮಿಸಿದರು, ಅಂದರೆ ಸತ್ಯಯುಗಕ್ಕೆ ಪ್ರಾರಂಭವಾಯಿತು. ಅದು ಇದೇ ದಿನವಾಗಿರುವುದರಿಂದ, ಈ ದಿನವನ್ನು ವರ್ಷಾರಂಭವೆಂದು ಆಚರಿಸಲಾಗುತ್ತದೆ. ೧ ಜನವರಿಯಂದಲ್ಲ. ಆದುದರಿಂದ ಯುಗಾದಿಯೇ ನಿಜವಾದ ವರ್ಷಾರಂಭದ ದಿನವಾಗಿದೆ. ಯುಗಾದಿಗೆ ಪ್ರಾರಂಭವಾಗುವ ಹೊಸ ವರ್ಷದ ಕಾಲಚಕ್ರವು ವಿಶ್ವದ ಉತ್ಪತ್ತಿ ಕಾಲಕ್ಕೆ ಸಂಬಂಧಿಸಿರುವುದರಿಂದ ಸೃಷ್ಟಿಯ ನವಚೇತನದಿಂದ ಭರಿತವಾಗಿರುತ್ತದೆ. ಇದರ ಬದಲು ಡಿಸೆಂಬರ್ ೩೧ ರ ರಾತ್ರಿ ೧೨ ಗಂಟೆಗೆ ಪ್ರಾರಂಭವಾಗುವ ಹೊಸ ವರ್ಷದ ಕಾಲಚಕ್ರವು ವಿಶ್ವದ ಲಯಕಾಲದೊಂದಿಗೆ ಸಂಬಂಧಿಸಿರುತ್ತದೆ. ಯುಗಾದಿಗೆ ಪ್ರಾರಂಭವಾಗುವ ಹೊಸ ವರ್ಷದ ತುಲನೆಯನ್ನು ಸೂರ್ಯೋದಯಕ್ಕೆ ಉದಯಿಸುವ ತೇಜೋಮಯ ದಿನದೊಂದಿಗೆ ಮಾಡಬಹುದು. ಡಿಸೆಂಬರ್ ೩೧ ರ ರಾತ್ರಿ ೧೨ ಗಂಟೆಗೆ ಪ್ರಾರಂಭವಾಗುವ ಹೊಸವರ್ಷದ ತುಲನೆಯನ್ನು ಸೂರ್ಯಾಸ್ತ ನಂತರ ಪ್ರಾರಂಭವಾಗುವ ತಮೋಗುಣಿ ರಾತ್ರಿಯೊಂದಿಗೆ ಮಾಡಬಹುದು. ನಿಸರ್ಗನಿಯಮವನ್ನು ಅನುಸರಿಸಿ ಮಾಡಿರುವ ವಿಷಯಗಳು ಮಾನವನಿಗೆ ಪೂರಕವಾಗಿರುತ್ತದೆ. ಇದರ ವಿರುದ್ಧ ಮಾಡುವ ವಿಷಯಗಳು ಮಾನವನಿಗೆ ಹಾನಿಕರವಾಗಿರುತ್ತವೆ. ಆದುದರಿಂದ ಪಾಶ್ಚಿಮಾತ್ಯ ಸಂಸ್ಕೃತಿಗನುಸಾರ ಜನವರಿ ೧ ರಂದಲ್ಲ, ಯುಗಾದಿಗೆ ಹೊಸ ವರ್ಷಾರಂಭವನ್ನು ಆಚರಿಸುವುದರಲ್ಲಿಯೇ ನಮ್ಮೆಲ್ಲರ ನಿಜವಾದ ಹಿತವಿದೆ’. (ಆಧಾರ : ಸನಾತನ ನಿರ್ಮಿತ ಗ್ರಂಥ ‘ಹಬ್ಬಗಳನ್ನು ಆಚರಿಸುವ ಯೋಗ್ಯ ಪದ್ಧತಿ ಮತ್ತು ಶಾಸ್ತ್ರ) |
* ಆಧ್ಯಾತ್ಮಿಕ ತೊಂದರೆ : ಇದರರ್ಥ ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳಿರುವುದು. ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳು ಶೇ. ೫೦ ರಷ್ಟು ಅಥವಾ ಅದಕ್ಕಿಂತ ಹೆಚ್ಚು ಪ್ರಮಾಣದಲ್ಲಿರುವುದು ಎಂದರೆ ತೀವ್ರ ತೊಂದರೆ, ನಕಾರಾತ್ಮಕ ಸ್ಪಂದನಗಳು ಶೇ. ೩೦ ರಿಂದ ಶೇ ೪೯ ರಷ್ಟು ಇರುವುದು ಎಂದರೆ ಮಧ್ಯಮ ತೊಂದರೆ, ಶೇ. ೩೦ ಕ್ಕಿಂತ ಕಡಿಮೆಯಿರುವುದು ಅಂದರೆ ಮಂದ ಆಧ್ಯಾತ್ಮಿಕ ತೊಂದರೆ ಇರುವುದಾಗಿದೆ. ಆಧ್ಯಾತ್ಮಿಕ ತೊಂದರೆಯು ಪ್ರಾರಬ್ಧ, ಪೂರ್ವಜರ ತೊಂದರೆ ಇತ್ಯಾದಿ ಆಧ್ಯಾತ್ಮಿಕ ಸ್ತರದ ಕಾರಣಗಳಿಂದ ಆಗುತ್ತದೆ. ಆಧ್ಯಾತ್ಮಿಕ ತೊಂದರೆಗಳನ್ನು ಸಂತರು ಅಥವಾ ಸೂಕ್ಷ್ಮ ಸ್ಪಂದನಗಳನ್ನು ಅರಿಯುವ ಸಾಧಕರು ಕಂಡು ಹಿಡಿಯಬಲ್ಲರು. * ಕೆಟ್ಟ ಶಕ್ತಿ: ವಾತಾವರಣದಲ್ಲಿ ಉತ್ತಮ ಹಾಗೂ ಕೆಟ್ಟ ಎರಡೂ ಶಕ್ತಿಗಳು ಕಾರ್ಯನಿರತವಾಗಿರುತ್ತವೆ. ಒಳ್ಳೆಯ ಶಕ್ತಿ ಒಳ್ಳೆಯ ಕಾರ್ಯಕ್ಕಾಗಿ ಮಾನವನಿಗೆ ಸಹಾಯ ಮಾಡುತ್ತವೆ ಹಾಗೂ ಕೆಟ್ಟ ಶಕ್ತಿಗಳು ಅವನಿಗೆ ತೊಂದರೆ ಕೊಡುತ್ತವೆ. ಹಿಂದಿನ ಕಾಲದಲ್ಲಿ ಋಷಿಮುನಿಗಳ ಯಜ್ಞಗಳಲ್ಲಿ ರಾಕ್ಷಸರು ವಿಘ್ನಗಳನ್ನು ತಂದಿರುವ ಅನೇಕ ಕಥೆಗಳು ವೇದ -ಪುರಾಣಗಳಲ್ಲಿ ಇರುತ್ತವೆ. ‘ಅಥರ್ವವೇದದಲ್ಲಿ ಅನೇಕ ಕಡೆಗಳಲ್ಲಿ ಕೆಟ್ಟ ಶಕ್ತಿ. ಉದಾ. ಅಸುರರು, ರಾಕ್ಷಸರು, ಪಿಶಾಚಿ ಇವರ ಪ್ರತಿಬಂಧದ ಮಂತ್ರಗಳನ್ನು ಹೇಳಲಾಗಿದೆ. ಕೆಟ್ಟ ಶಕ್ತಿಗಳ ತೊಂದರೆಯ ನಿವಾರಣೆಗಾಗಿ ವಿವಿಧ ಆಧ್ಯಾತ್ಮಿಕ ಉಪಾಯಗಳನ್ನು ವೇದ ಮತ್ತು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ. |