ಪಾಶ್ಚಿಮಾತ್ಯ ವಿಕೃತಿಗೆ ಮರುಳಾದ ಹಿಂದೂ ಮಹಿಳೆಯರೇ, ಧರ್ಮಾಚರಿಸಿ ಮತ್ತು ತಮ್ಮ ಹೆಣ್ಣು ಮಕ್ಕಳಿಗೂ ಅದನ್ನು ಕಲಿಸಿ !

ಡಾ. ರೂಪಾಲಿ ಭಾಟಕರ

೧. ಪಾಶ್ಚಿಮಾತ್ಯ ವಿಕೃತಿಯ ಪ್ರಭಾವದಿಂದ ಕಾಲಾಂತರದಲ್ಲಿ ಹಿಂದೂ ಮಹಿಳೆಯರ ಉಡುಗೆಗಳಲ್ಲಾದ ಬದಲಾವಣೆ – ಪೋರ್ಚುಗೀಜ್‌ರ ಆಕ್ರಮಣದ ಮೊದಲು

ಗೋವಾದಲ್ಲಿ ಚಿಕ್ಕ ಹಿಂದೂ ಹುಡುಗಿಯರು ಲಂಗ-ದಾವಣಿ ಧರಿಸುತ್ತಿದ್ದರು. ಕಿಶೋರಾವಸ್ಥೆಯಲ್ಲಿ ಅವರು ಒಂಭತ್ತು ಗಜದ ಸೀರೆಯನ್ನು ಉಡಲು ಆರಂಭಿಸುತ್ತಿದ್ದರು. ಸಾಮಾನ್ಯ ವಾಗಿ ೧೯೫೦ ರ ದಶಕದಲ್ಲಿ ಮಹಿಳೆಯರ ಉಡುಪು ಬದಲಾಗತೊಡಗಿತು. ಚಿಕ್ಕ ಹುಡುಗಿಯರು ಲಂಗ-ದಾವಣಿಯ ಬದಲು ‘ಫ್ರಾಕ್’ ಧರಿಸ ತೊಡಗಿದರು. ಮದುವೆಯ ನಂತರ ಮಹಿಳೆಯರು ಅನುಕೂಲಕ್ಕೆಂದು ಒಂಭತ್ತು ಗಜದ ಬದಲು ಆರುವರೆ ಗಜದ ಸೀರೆಯನ್ನು ಉಡತೊಡಗಿದರು. ಮಹಿಳೆಯರು ಶಿಕ್ಷಣ ಪಡೆದು ನೌಕರಿ ಮಾಡತೊಡಗಿದರು. ಸುಮಾರು ೧೯೭೦ ರ ದಶಕದಲ್ಲಿ ಮಹಿಳೆಯರು ಸೀರೆಯ ಬದಲು ಪಂಜಾಬಿ ಉಡುಪು ಧರಿಸತೊಡಗಿದರು. ಇತ್ತೀಚಿಗಿನ ಕಾಲದಲ್ಲಿ ಪಾಶ್ಚಿಮಾತ್ಯ ಉಡುಪುಗಳಿಗೆ ಮರುಳಾದ ಮಹಿಳೆಯರು ಸೀರೆ ಉಡುವುದನ್ನು ಬಿಟ್ಟು ಬಿಟ್ಟಿದ್ದಾರೆ. ಅವರು ಕೇವಲ ಮದುವೆ ಅಥವಾ ಧಾರ್ಮಿಕ ಕೃತಿಗಳ ಸಮಯದಲ್ಲಿ ಸೀರೆಯನ್ನು ಉಡುತ್ತಾರೆ, ಅದು ಕೂಡ ಮನೆಯಲ್ಲಿರುವ ಹಿರಿಯರನ್ನು ಮೆಚ್ಚಿಸಲು ! ದೇವಸ್ಥಾನಕ್ಕೆ ದೇವರ ದರ್ಶನಕ್ಕೆ ಹೋಗುವಾಗಲೂ ಅವರು ಸೀರೆಯನ್ನು ಉಡುವುದಿಲ್ಲ. ‘ತಮ್ಮ ಆರೋಗ್ಯಕ್ಕಾಗಿ, ಹಾಗೆಯೇ ಆಧ್ಯಾತ್ಮಿಕ ದೃಷ್ಟಿಯಿಂದ ಸೀರೆ ಉಡುವುದು ಎಷ್ಟು ಲಾಭದಾಯಕವಾಗಿದೆ’, ಎಂದು ಅವರು ಯಾವತ್ತೂ ತಿಳಿದುಕೊಂಡಿಲ್ಲ.

ಬಹುತೇಕ ಭಾರತದಾದ್ಯಂತ, ದೂರದ ಹಳ್ಳಿಗಳಲ್ಲಿಯೂ ಇದೇ ಪರಿಸ್ಥಿತಿ ನೋಡಲು ಸಿಗುತ್ತದೆ. ಪಾಶ್ಚಿಮಾತ್ಯ ಉಡುಪುಗಳನ್ನು ತೊಡುವ ಮಹಿಳೆಯರ ಒಲವು ಎಷ್ಟರ ಮಟ್ಟಿಗೆ ಬೆಳೆದಿದೆ ಎಂದರೆ, ಒಂದು ವೇಳೆ ಯಾರಾದರೊಬ್ಬ ಮಹಿಳೆಯು ಭಾರತೀಯ ಉಡುಪಿನಲ್ಲಿದ್ದರೆ, ‘ಹಿಂದುಳಿದವಳು’ ಅಥವಾ ‘ಹಳೆಯ ಕಾಲದವಳು’ ಎಂಬ ಭಾವನೆಯಿಂದ ಅವಳನ್ನು ನಿರ್ಲಕ್ಷಿಸಲಾಗು ತ್ತದೆ ಮತ್ತು ಅವಳನ್ನು ಕೀಳಾಗಿ ನೋಡಲಾಗುತ್ತದೆ.

೧೯೮೦ ದಶಕದ ವರೆಗೆ ರಾಷ್ಟ್ರೀಯ ದೂರದರ್ಶನವಾಹಿನಿ ‘ದೂರದರ್ಶನ’ದಲ್ಲಿ ಮಹಿಳೆಯರ ಅಧಿಕೃತ ಉಡುಪು ‘ಸೀರೆ’ಯೇ ಆಗಿರುತ್ತಿತ್ತು. ಅನಂತರ ನಿಧಾನವಾಗಿ ಅವರು ‘ಸೂಟ್‌ (ಕೋಟು)’ ಮತ್ತು ‘ಪ್ಯಾಂಟ್’ ಧರಿಸತೊಡಗಿದರು. ಈಗ ಕೇವಲ ದೀಪಾವಳಿಯಂತಹ ಹಬ್ಬಗಳಂದು ಮಾತ್ರ ಅವರು ಭಾರತೀಯ ಉಡುಪುಗಳಲ್ಲಿ ಕಾಣಿಸುತ್ತಾರೆ.

ಸದ್ಯ ‘ಮಾಲ್‌’ನಂತಹ (ದೊಡ್ಡ ವ್ಯಾಪಾರಿ ಸಂಕುಲ) ಸ್ಥಳದಲ್ಲಿ ಸ್ವಚ್ಛತಾ ನೌಕರರ ಅಥವಾ ಅಲ್ಲಿನ ಇತರ ನೌಕರರ ಸಮವಸ್ತ್ರವೂ ಭಾರತೀಯ ಪದ್ಧತಿಗನುಸಾರವಿಲ್ಲ. ಅವರಿಗೆ ‘ಶರ್ಟ್‌-ಪ್ಯಾಂಟ್’

ಈ ಸಮವಸ್ತ್ರವನ್ನು ಧರಿಸಲು ಒತ್ತಾಯಿಸಲಾಗುತ್ತದೆ. ಆಸ್ಪತ್ರೆ ಯಲ್ಲಿನ ದಾದಿಯರಿಗೂ ನೌಕರಿಯಲ್ಲಿ ತುಂಡು ಬಟ್ಟೆಗಳನ್ನು ಧರಿಸಬೇಕಾಗುತ್ತದೆ. ಈ ಸಂಸ್ಕೃತಿಯನ್ನು ಬದಲಾಯಿಸುವ ಅವಶ್ಯಕತೆ ಇದೆÉ.

೨. ಹಿಂದಿನ ಮತ್ತು ಇತ್ತೀಚೆಗಿನ ಕಾಲದಲ್ಲಿ ಪ್ರತಿಯೊಂದು ಜಾಹೀರಾತಿನಲ್ಲಿ ತಾಯಿಯ ಉಡುಪಿನಲ್ಲಿ ಆಗುತ್ತಿರುವ ಬದಲಾವಣೆ

ಪ್ರಸಾರಮಾಧ್ಯಮವು ಸಮಾಜದ ಮನಸ್ಸಿನ ಮೇಲೆ ಪ್ರಭಾವ ಬೀರುವ ಮತ್ತೊಂದು ಮಾಧ್ಯಮವಾಗಿದೆ. ನಾನು ಚಿಕ್ಕವಳಿದ್ದಾಗ,  ೧೯೭೦ ಮತ್ತು ೧೯೮೦ ರ ದಶಕದಲ್ಲಿ ಚಲನಚಿತ್ರ ಅಥವಾ ದೂರಚಿತ್ರವಾಣಿಗಳ ಕಾರ್ಯಕ್ರಮಗಳಲ್ಲಿ ತಾಯಿಯ ಪಾತ್ರವನ್ನು ನಿರ್ವಹಿಸುವ ಮಹಿಳೆಯು ಯಾವಾಗಲೂ ಸೀರೆಯಲ್ಲಿರುವುದು ನನಗೆ ನೆನಪಾಗುತ್ತದೆ. ಮಂಗಳಸೂತ್ರ, ಕಿವಿಯೊಲೆಗಳು, ಬಳೆ ಗಳು ಮತ್ತು ದೊಡ್ಡದಾಗಿ ಕಾಣುವ ಕುಂಕುಮ, ಕೂದಲುಗಳ ಸುಂದರವಾದ ತುರುಬು ಹೀಗೆ ಅವಳ ಉಡುಗೆ ಇರುತ್ತಿತ್ತು. ಅವಳು ಮನಸ್ಸು ಮೆಚ್ಚುವಂತಹ ಓರ್ವ ನಿಜವಾದ ಭಾರತೀಯ ಮಹಿಳೆಯಾಗಿರುತ್ತಿದ್ದಳು; ಆದರೆ ಸದ್ಯದ ಪ್ರತಿಯೊಂದು ಜಾಹೀರಾತಿನಲ್ಲಿ ತಾಯಿಯನ್ನು ಪಾಶ್ಚಿಮಾತ್ಯ ಉಡುಪುಗಳಲ್ಲಿ, ಕೂದಲುಗಳನ್ನು ಸ್ವಚ್ಛಂದವಾಗಿ ಬಿಟ್ಟಿರುವ, ಆಭರಣಗಳಿಲ್ಲದ ಮತ್ತು ಕುಂಕುಮ ಇಲ್ಲದಂತೆ ತೋರಿಸಲಾಗುತ್ತದೆ. ಸನಾತನ ಹಿಂದೂ ಧರ್ಮವು ಧರ್ಮಾಚರಣೆಯ ಕೆಲವು ನಿಯಮಗಳನ್ನು ಹಾಕಿಕೊಟ್ಟಿದೆ, ಅವು ಯೋಗ್ಯ ಮತ್ತು ಶಾಸ್ತ್ರಕ್ಕನುಸಾರ ಇವೆ, ಉದಾ. ಬಿಚ್ಚುಗೂದಲು ವಾತಾವರಣದಲ್ಲಿನ ಕೆಟ್ಟ (ನಕಾರಾತ್ಮಕ) ಶಕ್ತಿಗಳನ್ನು ಆಕರ್ಷಿಸುತ್ತವೆ. ಆದುದರಿಂದ ತಲೆಯ ಮೇಲೆ ಸ್ನಾನ ಮಾಡುವಾಗ ಅಥವಾ ಪತಿಯೊಂದಿಗೆ ಕೋಣೆಯಲ್ಲಿರುವಾಗ ಬಿಟ್ಟು ಇತರ ಸಮಯದಲ್ಲಿ ಮಹಿಳೆಯು ಕೂದಲುಗಳನ್ನು ಮುಕ್ತವಾಗಿ ಬಿಡಬಾರದು; ಆದರೆ ಪ್ರಸಾರಮಾಧ್ಯಮಗಳು ತಮ್ಮ ಪಾಶ್ಚಿಮಾತ್ಯ ವಾಣಿಜ್ಯ ಪಾಲುದಾರರಿಂದ ಪ್ರಭಾವಿತರಾದುದರಿಂದ ಅವರು ಹಿಂದೂ ವೀಕ್ಷಕರನ್ನು ಅವನತಿಯತ್ತ ಕರೆದೊಯ್ಯುತ್ತಿದ್ದಾರೆ.

೩. ಹಿಂದಿ ಚಲನಚಿತ್ರೋದ್ಯಮದ ನಟಿಯರ ಉಡುಪುಗಳನ್ನು ಯುವತಿಯರು ಆದರ್ಶವೆಂದು ನೋಡುತ್ತಾರೆ. ‘ಬಾಲಿವುಡ್‌ (ಹಿಂದಿ ಚಲನಚಿತ್ರೋದ್ಯಮ)’ ಇದು ಸಹ ಈ ಮಹಿಳೆಯರ ಉಡುಪುಗಳ ಮೇಲೆ ಪರಿಣಾಮ ಬೀರುವ ಒಂದು ಪ್ರಭಾವಿ ಮಾಧ್ಯಮವಾಗಿದೆ.

೪. ಮಂಗಲಸೂತ್ರದ ಅರ್ಥ ಮತ್ತು ಆಧ್ಯಾತ್ಮಿಕ ಮಹತ್ವವನ್ನು ತಿಳಿದುಕೊಳ್ಳದೇ ವಿಧವೆಯರು ಅದನ್ನು ಧರಿಸುವುದು

ಕೊರಳಲ್ಲಿ ‘ಮಂಗಳಸೂತ್ರ’ ಧರಿಸುವ ಬಗ್ಗೆಯೂ ಇತ್ತೀಚಿನ ಹಿಂದೂ ಮಹಿಳೆಯರಲ್ಲಿ ವಿಕೃತ ಮನಸ್ಥಿತಿ ಇದೆ. ವಾಸ್ತವದಲ್ಲಿ ‘ಮಂಗಳ’ ಇದರ ಅರ್ಥ ‘ಮಂಗಲಮಯ’ ಅಥವಾ ‘ಶುಭ’ ಹೀಗಿದ್ದು ‘ಸೂತ್ರ’ದ ಅರ್ಥ ‘ದಾರ’ ಎಂದಾಗಿದೆ. ಇದರ ಅರ್ಥವೇ ‘ಮಂಗಳಸೂತ್ರ’ವು ಎರಡು ಆತ್ಮಗಳನ್ನು ಜೋಡಿಸುವ ಒಂದು ದಾರ ಮತ್ತು ಆಭರಣವಾಗಿದೆ. ಮಂಗಳಸೂತ್ರದಲ್ಲಿನ ಕಪ್ಪು ಮಣಿ ಗಳ ಎರಡು ಮಾಲೆ ಇದು ವಿವಾಹಬದ್ಧ ಎರಡು ಜೀವಗಳ ಪ್ರತೀಕವಾಗಿದೆ ಮತ್ತು ಅವುಗಳನ್ನು ಜೋಡಿಸುವ ಚಿನ್ನದ ‘ಮುಹೂರ್ತಮಣಿ’ ಅಥವಾ ಎರಡು ಬಟ್ಟಲುಗಳು ಸಾಂಸಾರಿಕ ಜೀವನದ ಪ್ರತೀಕವಾಗಿವೆ. ವಿವಾಹಿತ ಮಹಿಳೆ (ಮುತ್ತೈದೆ)ಯು ಪ್ರಕಟ ಶಕ್ತಿಯ ರೂಪವಾಗಿದ್ದು ಅವಳ ಮೇಲೆ ನಕಾರಾತ್ಮಕ (ಕೆಟ್ಟ) ಶಕ್ತಿಗಳ ಆಕ್ರಮಣಗಳಾಗುವ ಅಪಾಯವಿರುತ್ತದೆ. ಮಂಗಳಸೂತ್ರದಲ್ಲಿನ ಕಪ್ಪು ಮಣಿಗಳು ನಕಾರಾತ್ಮಕ ಶಕ್ತಿಯನ್ನು ಸೆಳೆದು ಕೆಟ್ಟ ಶಕ್ತಿಗಳ ಆಕ್ರಮಣಗಳಿಂದ ಅವಳನ್ನು ರಕ್ಷಿಸುತ್ತವೆ.

ಪತಿಯ ನಿಧನದ ನಂತರ ವಿಧವೆಯು ತನ್ನ ಜೀವನವನ್ನು ದೇವರ ಅನುಸಂಧಾನದಲ್ಲಿ ಕಳೆಯಬೇಕಾಗಿರುತ್ತದೆ; ಆದುದರಿಂದಲೇ ಅವಳಿಗೆ ಶ್ರೀಮತಿ ಎನ್ನುತ್ತಾರೆ; ಅಂದರೆ ‘ಶ್ರೀ’ ಎಂದರೆ ದೇವರು ಮತ್ತು ‘ಮತಿ’ ಎಂದರೆ ಮನಸ್ಸು’ ಎಂದರ್ಥ. ಪತಿಯ ನಿಧನದ ನಂತರ ಅವಳ ಪ್ರಯತ್ನ ದೇವರೊಂದಿಗೆ ಏಕರೂಪವಾಗುವ ಕಡೆಗೆ ಇರಬೇಕು. ಪತಿಯ ನಿಧನದ ನಂತರ ವಿಧವೆಯು ಅಪ್ರಕಟ ಶಕ್ತಿಯ ರೂಪವಾಗುವುದರಿಂದ ಅವಳ ಮೇಲೆ ಕೆಟ್ಟ ಶಕ್ತಿಗಳ ಆಕ್ರಮಣಗಳಾಗುವ ಸಾಧ್ಯತೆ ಕಡಿಮೆ ಇರುತ್ತದೆ. ಹಾಗಾಗಿ ಅವಳು ಮಂಗಳಸೂತ್ರವನ್ನು ಧರಿಸಬಾರದು. ಪತಿಯ ನಿಧನದ ನಂತರವೂ ವಿಧವೆಯು ಮಂಗಳಸೂತ್ರ ತೆಗೆಯದಿದ್ದರೆ, ‘ಇನ್ನೂ ನಾನು ಅವಳ ಪತಿಯಾಗಿದ್ದೇನೆ’, ಎಂದೆನಿಸಿ ಅವಳ ಪತಿಯ ಆತ್ಮವು ಪುನಃ ಅವಳತ್ತ ಬರಲು ಪ್ರಯತ್ನಿಸುತ್ತದೆ. ಅವನಿಗೆ ಮುಕ್ತಿ ಸಿಗುವುದೇ ಇಲ್ಲ. ಈ ಶಾಸ್ತ್ರ ಅವರಿಗೆ ತಿಳಿದಿಲ್ಲ. ‘ಪತಿ ಜೀವಂತವಿರುವಾಗ ಮಂಗಳಸೂತ್ರ ಧರಿಸುತ್ತಿದ್ದರು ಮತ್ತು ಈಗ ಏಕೆ ಬೇಡ. ಎಂಬ ವಾದವನ್ನು ಕೆಲವು ಸ್ತ್ರೀ-ಸ್ವಾತಂತ್ರ್ಯವಾದಿಗಳು ಮಂಡಿಸುತ್ತಾರೆ.  ಏನೇ ಆಗಿರಲಿ, ವಿಧವೆಯು ಮಂಗಳಸೂತ್ರ ಧರಿಸುವುದು, ಆಧ್ಯಾತ್ಮಿಕ ದೃಷ್ಟಿಯಲ್ಲಿ ಅಯೋಗ್ಯವೇ ಆಗಿದೆ.

೫. ನವವಿವಾಹಿತೆಯರು ನೆಪಕ್ಕಷ್ಟೆ ಧರಿಸುವ ಮಂಗಳಸೂತ್ರ

ಇತ್ತೀಚೆಗೆ ನವವಿವಾಹಿತೆÉಯರು ಮಂಗಳಸೂತ್ರವನ್ನೇ ಧರಿಸುವುದಿಲ್ಲ. ‘ಪಾಶ್ಚಿಮಾತ್ಯ ಉಡುಪುಗಳ ಮೇಲೆ ಚೆನ್ನಾಗಿ ಕಾಣಿಸುವುದಿಲ್ಲ, ಜನರು ತಮ್ಮನ್ನು ‘ಹಳೆಯ ಅಥವಾ ಹಳೆಯ ಕಾಲದವರು ಎನ್ನುತ್ತಾರೆ’, ಎಂಬ ಭಯದಿಂದ ಮಂಗಳಸೂತ್ರ ವನ್ನು ಧರಿಸುವುದಿಲ್ಲ. ಕೆಲವು ಮಹಿಳೆಯರು ನೆಪಕ್ಕಷ್ಟೇ ಹೊಸ ವಿನ್ಯಾಸದ ಮಂಗಳಸೂತ್ರವನ್ನು ಧರಿಸುತ್ತಾರೆ. ಆ ಮಂಗಳಸೂತ್ರವೆಂದರೆ ಚಿಕ್ಕ ಆಕಾರದ ಮತ್ತು ಕಡಿಮೆ ಸಂಖ್ಯೆಯ ಕರಿಮಣಿಗಳಿರುವ ತೆಳುವಾದ ಚಿನ್ನದ ಸರಪಳಿ ! ಅದೇ ರೀತಿ ಸಾಂಪ್ರದಾಯಿಕ ಮಂಗಳಸೂತ್ರಗಳಂತೆ ಕಾಣುವ ನಕಲಿ ಮಂಗಳಸೂತ್ರಗಳೂ ಲಭ್ಯ ಇವೆ; ಆದರೆ ಇದರಲ್ಲಿ ಸಾಂಪ್ರದಾಯಿಕ ಕರಿಮಣಿಗಳ ಬದಲಿಗೆ ಒಂದರ ನಂತರ ಒಂದು ಅಥವಾ ಸತತ ಚಿನ್ನದ ಮಣಿಗಳಿರುತ್ತವೆ, ಆದರೆ ಬಟ್ಟಲುಗಳ ಬದಲಿಗೆ ಚಿನ್ನದ ಪದಕವಿರುತ್ತದೆ. ಸಾಂಪ್ರದಾಯಿಕ ಮಂಗಳಸೂತ್ರದಂತೆ ಕಾಣಿಸಬಾರದೆಂದು ಕೆಲವು ಮಂಗಳಸೂತ್ರಗಳನ್ನು ಚಿನ್ನದ ಸರಪಳಿಯಿಂದ ಮಾಡಿರುತ್ತಾರೆ. ಕೆಲವು ಶ್ರೀಮಂತ ಸ್ತ್ರೀಯರು ೬ ಎಳೆಗಳ ಮಂಗಳಸೂತ್ರವನ್ನು ಧರಿಸುತ್ತಾರೆ. ಇದು ಆಧ್ಯಾತ್ಮಿಕ ವಾಗಿ ಅಯೋಗ್ಯವಾಗಿದೆ. ‘ಮಂಗಳಸೂತ್ರದಲ್ಲಿನ ಕರಿಮಣಿಗಳ ೨ ಎಳೆಗಳು ಈ ವಿವಾಹಬದ್ಧವಾದ ಎರಡು ಜೀವಗಳ ಪ್ರತೀಕ ವಾಗಿದೆ’, ೬ ಎಳೆಗಳ ಮಂಗಳಸೂತ್ರದ ಅರ್ಥ ‘ಆ ಮಹಿಳೆ ೫ ಪುರುಷರೊಂದಿಗೆ ಮದುವೆಯಾದಳು’, ಎಂದಾಗುವುದಲ್ಲವೇ ?

೬. ಧರ್ಮಶಿಕ್ಷಣದ ಅಭಾವದಿಂದ ಆಧುನಿಕ ಹಿಂದೂ ವಿವಾಹಿತ ಮಹಿಳೆಯರು ಕುಂಕುಮವನ್ನು ಹಚ್ಚಿಕೊಳ್ಳದಿರುವುದು ಮತ್ತು ಹಿಂದೂ ವಿಧವೆಯರು ಹಣೆಗೆ ಕುಂಕುಮ ಅಥವಾ ಟಿಕಲಿಯನ್ನು ಹಚ್ಚಿಕೊಳ್ಳುವುದು

ಹಣೆಯ ಮೇಲೆ ಕುಂಕುಮವನ್ನು ಹಚ್ಚಿಕೊಳ್ಳುವ ವಿಷಯ ದಲ್ಲಿಯೂ ಇದೇ ಚಿತ್ರಣ ಕಂಡು ಬರುತ್ತದೆ. ವಿವಾಹಿತ ಮಹಿಳೆ ಯರು ತಮ್ಮ ಹಣೆಯ ಮೇಲೆ ಕುಂಕುಮವನ್ನು ಹಚ್ಚುವುದರಿಂದ ಆ ಸ್ಥಳದಲ್ಲಿರುವ ಆಜ್ಞಾಚಕ್ರವು ಜಾಗೃತವಾಗುತ್ತದೆ. ನಂತರದ ದ್ರವ ಸ್ವರೂಪದ ಕುಂಕುಮ, ಅಂದರೆ ‘ಗಂಧ’ವನ್ನು ಬಳಸ ತೊಡಗಿದರು. ಅನಂತರದ್ದು ಟಿಕಲಿಗಳ ಕಾಲ ! ಮಹಿಳೆಯರು ತಮ್ಮ ಬಟ್ಟೆಗಳ ಬಣ್ಣಗಳಿಗನುಸಾರ ವಿವಿಧ ಬಣ್ಣಗಳ (ಮತ್ತು ವಿವಿಧ ಆಕಾರದ) ಟಿಕಲಿಗಳನ್ನು ಹಚ್ಚತೊಡಗಿದರು. ಈಗ ಮಾತ್ರ ಹಣೆಗೆ ಏನೂ ಹಚ್ಚಿಕೊಳ್ಳುವುದಿಲ್ಲ. ಎಂತಹ ವಿರೋಧಾಭಾಸವಿದೆ ನೋಡಿ ! ವಿಧವೆಯರು ತಮ್ಮ ಹಣೆಯ ಮೇಲೆ ಕುಂಕುಮ ಅಥವಾ ಟಿಕಲಿಯನ್ನು ಹಚ್ಚಿ ಕೊಳ್ಳುತ್ತಾರೆ, ಮತ್ತು ವಿವಾಹಿತ ಮಹಿಳೆಯರು ತಮ್ಮ ಹಣೆಯ ಮೇಲೆ ಏನೂ ಹಚ್ಚಿಕೊಳ್ಳುವುದಿಲ್ಲ.

ಸ್ತ್ರೀ-ಸ್ವಾತಂತ್ರ್ಯದಡಿಯಲ್ಲಿ ವಿಧವೆಯರಿಗೆ, ‘ಧರ್ಮಶಾಸ್ತ್ರ ಕ್ಕನುಸಾರ ನಡೆದುಕೊಳ್ಳುವ ಆವಶ್ಯಕತೆ ಇಲ್ಲ. ನನಗೆ ನನ್ನ ಇಚ್ಛೆಗನುಸಾರ ವರ್ತಿಸುವ ಅಧಿಕಾರವಿದೆ’, ಎಂದೆನಿಸುತ್ತದೆ. ಆದುದರಿಂದ ಅವಳು ನಿಸ್ಸಂಕೋಚವಾಗಿ ತನ್ನ ಹಣೆಗೆ ಕುಂಕುಮ ವನ್ನು ಹಚ್ಚಿಕೊಳ್ಳುತ್ತಾಳೆ ಮತ್ತು ವಿವಾಹಿತ ಮಹಿಳೆಯರು ತಾವು ಆಧುನಿಕರೆಂದು ತೋರಿಸಲು ಹಣೆಗೆ ಕುಂಕುಮವನ್ನು ಹಚ್ಚಿಕೊಳ್ಳುವುದಿಲ್ಲ.

೭. ಕಿರುತೆರೆ ನಟಿಯರನ್ನು ಆದರ್ಶವಾಗಿಟ್ಟುಕೊಂಡು ಮಹಿಳೆಯರು ತಮ್ಮ ಕೂದಲುಗಳನ್ನು ಬಿಡುವುದು

ಇತ್ತೀಚೆಗಿನ ಮಹಿಳೆಯರ ಇನ್ನೊಂದು ವಿಕೃತ ನಡುವಳಿಕೆ ಎಂದರೆ ಕೂದಲುಗಳನ್ನು ಬಿಡುವುದು ! ಇಂದಿನ ಮಹಿಳೆಯರು ತಮ್ಮ ಕೂದಲುಗಳನ್ನು ನೇರಗೊಳಿಸಲು ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡುತ್ತಾರೆ. ಕೂದಲುಗಳು ಸೊಂಟದವರೆಗೆ ಉದ್ದವಿದ್ದರೂ ಅವುಗಳನ್ನು ಸಡಿಲವಾಗಿ ಬಿಡಲಾಗುತ್ತದೆ. ಇದರ ಮುಖ್ಯ ಕಾರಣವೆಂದರೆ ಕಿರುತೆರೆಯ ಹೆಚ್ಚಿನ ನಟಿಯರು ಕೂದಲುಗಳನ್ನು ಸಡಿಲವಾಗಿ ಬಿಟ್ಟಿರುವುದನ್ನು ತೋರಿಸಲಾಗು ತ್ತದೆ. ಈ ನಟಿಯರು ಯುವತಿಯರಿಗೆ ಆದರ್ಶವಾಗಿರುವುದರಿಂದ ಅವರೂ ಆ ನಟಿಯರನ್ನು ಅನುಕರಿಸಲು ಪ್ರಯತ್ನಿಸುತ್ತಾರೆ.

೮. ಹಿಂದೂ ಧರ್ಮವು ಮಹಿಳೆಯರಿಗೆ ನೀಡಿದ ಉನ್ನತ ಸ್ಥಾನಕ್ಕಾಗಿ ಮಹಿಳೆಯರು ದೇವರಿಗೆ ಕೃತಜ್ಞರಾಗಿರಬೇಕು !

ಸನಾತನ ಹಿಂದೂ ಧರ್ಮವು ಮಹಿಳೆಯರಿಗೆ ಯಾವಾಗಲೂ ಉನ್ನತ ಸ್ಥಾನವನ್ನು ನೀಡಿದೆ. ಅವಳಿಗೆ ಸಮಾಜದಲ್ಲಿ ತಾಯಿಯಾಗಿ, ಸಹೋದರಿಯಾಗಿ ಮತ್ತು ಪತ್ನಿಯಾಗಿ ಗೌರವದ ಸ್ಥಾನವನ್ನು ನೀಡಲಾಗಿದೆ. ಆದುದರಿಂದ ಈ ಕ್ರಿಯೆಗಳ ಆಧ್ಯಾತ್ಮಿಕ ಪರಿಣಾಮಗಳ ಬಗ್ಗೆ ಏನೂ ಗೊತ್ತಿಲ್ಲದ ಸ್ತ್ರೀವಾದಿಗಳಿಗೆ ಇಂದಿನ ಮಹಿಳೆಯರು ಮರುಳಾಊಬಾರದು.. ನನ್ನ ಸೀಮಿತ ಜ್ಞಾನದ ಪ್ರಕಾರ ಜಗತ್ತಿನ ಯಾವುದೇ ಧರ್ಮ/ ಪಂಥಗಳು ಮಹಿಳೆಯರನ್ನು ಇಷ್ಟು ಗೌರವಿಸುವುದಿಲ್ಲ; ಆದರೆ ಮಹಿಳಾ-ಸ್ವಾತಂತ್ರ್ಯವಾದಿಗಳು ಹಿಂದೂ ಧರ್ಮದ ತೇಜೋವಧೆಗಾಗಿ ಅದನ್ನು ವಿರೋಧಿಸುತ್ತಾರೆ. ವಾಸ್ತವದಲ್ಲಿ ಹಿಂದೂ ಧರ್ಮವು ಮಹಿಳೆಯನ್ನು ಶಕ್ತಿ ಅಥವಾ ದೇವಿಯ ಸ್ವರೂಪದಲ್ಲಿರಿಸಿದೆ, ಮತ್ತು ರಾಮಕೃಷ್ಣ ಪರಮಹಂಸರಂತಹ ಸಂತರೂ ಅವಳನ್ನು ಪೂಜಿಸಿದ್ದಾರೆ. ‘ಬ್ರಹ್ಮ, ವಿಷ್ಣು ಮತ್ತು ಮಹೇಶ ಈ ತ್ರಿದೇವರ ಜನ್ಮ ಸಹ ಜಗನ್ಮಾತೆ ಭಗವತಿಯಿಂದ ಆಗಿದೆ’, ಎಂದು ಹಿಂದೂ ಧರ್ಮಗ್ರಂಥಗಳಲ್ಲಿ ಉಲ್ಲೇಖವಿದೆ. ಆದುದರಿಂದ ಹಿಂದೂ ಸ್ತ್ರೀಯರು ಧರ್ಮಾಚರಣೆಯನ್ನು ವಿರೋಧಿಸದೇ ಆ ಬಗ್ಗೆ ಚಿಂತನೆ ಮಾಡುವ ಆವಶ್ಯಕತೆಯಿದೆ. ತಮ್ಮ ಆಧ್ಯಾತ್ಮಿಕ ಉನ್ನತಿಗಾಗಿ ಧಮಾಚರಣೆಯ ಈ ನಿಯಮ ಪೂರಕವಾಗಿದೆ. ಹಿಂದೂ ಧರ್ಮವು ಈ ನಿಯಮವನ್ನು ಹಾಕಿಕೊಟ್ಟಿದ್ದಕ್ಕಾಗಿ ಸನಾತನ ಹಿಂದೂ ಧರ್ಮ ಮತ್ತು ದೇವರ ವಿಷಯದಲ್ಲಿ ಪ್ರತಿಯೊಬ್ಬ ಮಹಿಳೆಯು ಕೃತಜ್ಞಳಾಗಿರಬೇಕು.

ನಾನು ಎಲ್ಲ ಹಿಂದೂ ಮಹಿಳೆಯರಿಗೆ ಕರೆ ನೀಡುವುದೆನೆಂದರೆ, ಮಹಿಳಾ-ಮುಕ್ತಿವಾದಿಗಳ ಭ್ರಮೆಗೆ ಒಳಗಾಗದೇ ಭಾರತೀಯ ಉಡುಪುಗಳ ಕಡೆಗೆ ಗಮನ ಹರಿಸಬೇಕು ಮತ್ತು ತಮ್ಮ ಹೆಣ್ಣುಮಕ್ಕಳಿಗೂ ಆ ರೀತಿ ಮಾಡಲು ಕಲಿಸಬೇಕು. ಹೀಗೆ ಮಾಡಿದರೆ, ಮಾತ್ರ ಹಿಂದೂ ರಾಷ್ಟ್ರ ಮತ್ತು ಭಾರತಮಾತೆಯ ಗತವೈಭವನ್ನು ಮರುಸ್ಥಾಪಿಸಲು ಸಾಧ್ಯವಾಗುತ್ತದೆ.’

– ಡಾ. ರೂಪಾಲಿ ಭಾಟಕರ, ಫೋಂಡಾ, ಗೋವಾ.